Search
  • Follow NativePlanet
Share
» »ಚಿಂತೆ ಬಿಡಿ, ಬನ್ನಿ, ನೀರಿನಲ್ಲಿ ಹಾರಿ! ಇದು ಸಾವೋ ಜಾವೋ

ಚಿಂತೆ ಬಿಡಿ, ಬನ್ನಿ, ನೀರಿನಲ್ಲಿ ಹಾರಿ! ಇದು ಸಾವೋ ಜಾವೋ

By Vijay

ಹೌದು, ಇದೊಂದು ವಿಶಿಷ್ಟ ರೀತಿಯ ಉತ್ಸವ. ಈ ಉತ್ಸವದ ಪ್ರಮುಖ ಆಚರಣೆಯೆಂದರೆ ಪುರುಷರು ಬಾವಿ, ಕೆರೆ, ನದಿಗಳಲ್ಲಿ ಹಾರಿ ಖುಷಿಪಡುವುದು ಹಾಗೂ ಅದರಲ್ಲಿ ಎಸೆಯಲಾದ ಉಡುಗೊರೆಗಳನ್ನು ಹುಡುಕಿ ತೆಗೆಯುವುದು. ಈ ಉತ್ಸವಕ್ಕೆ ಹಿನ್ನಿಲೆಯೊಂದಿದೆ. ಅದರಂತೆ ಹಿಂದೆ ಜಿಸಸ್ ಜನ್ಮಿಸುವ ವಿಷಯ ತಿಳಿದಾಗ ಗಾಡ್ ಫಾದರ್ ಆದ ಜಾನ್ ದಿ ಬಾಪ್ಟಿಸ್ಟ್ ಅತ್ಯಂತ ಸಂತಸಪಟ್ಟರು.

ನಿಮಗಿಷ್ಟವಾಗಬಹುದಾದ : ಗೋವಾದಲ್ಲಿ ನೋಡಲೇಬೇಕಾದ ಕಡಲ ತೀರಗಳು

ನಂತರ ಜೀಸಸ್ ಅವರ ದೀಕ್ಷಾಸ್ನಾನದ ಸಮಾರಂಭವನ್ನು ನೆರವೇರಿಸಲು ಜೋರ್ಡಾನ್ ನದಿಗೆ ತೆರಳಿದರು. ಹೀಗಾಗಿ ಬಾವಿಯನ್ನು ಎಲಿಜಬೆತ್ತಿನ ಗರ್ಭವೆಂದು ಅದರಲ್ಲಿ ಜಿಗಿದು ಸಂತೋಷದಿಂದ ಕುಣಿದು ಕುಪ್ಪಳಿಸುವುದು ಕ್ರಿಸ್ತನ ಭೂಮಿಗೆ ಬಂದುದರ ಕುರಿತು ಸಂತಸ ವ್ಯಕ್ತಪಡಿಸುವ ಸಂಕೇತವೆಂದು ನಂಬಲಾಗಿದೆ.

ಚಿಂತೆ ಬಿಡಿ, ಬನ್ನಿ, ನೀರಿನಲ್ಲಿ ಹಾರಿ! ಇದು ಸಾವೋ ಜಾವೋ

ಚಿತ್ರಕೃಪೆ: goatourism

ಹೀಗಾಗಿ ಈ ಒಂದು ಉತ್ಸವ ಜನರಲ್ಲಿ ಅದರಲ್ಲೂ ವಿಶೇಷವಾಗಿ ಎಲ್ಲ ವರ್ಗದ, ವಯಸ್ಸಿನ ಪುರುಷರಲ್ಲಿ ಸಾಕಷ್ಟು ಜನಪ್ರೀಯವಾಗಿದೆ. ಅಂದಹಾಗೆ ಭಾರತದಲ್ಲಿ ಈ ಉತ್ಸವವನ್ನು ಗೋವಾದಲ್ಲಿ ಬಲು ಸಡಗರ ಅಬ್ಬರಗಳಿಂದ ಆಚರಿಸಲಾಗುತ್ತದೆ. ಇದನ್ನು ಜನಪ್ರೀಯವಾಗಿ "ದಿ ಫೀಸ್ಟ್ ಆಫ್ ಜಾನ್ ದಿ ಬಾಪ್ಟಿಸ್ಟ್" ಎಂದು ಕರೆಯಲಾಗುತ್ತದೆ. ಸಿಡಿ ಮದ್ದುಗಳ ಪ್ರದರ್ಶನವೂ ಇರುತ್ತದೆ.

ಚಿಂತೆ ಬಿಡಿ, ಬನ್ನಿ, ನೀರಿನಲ್ಲಿ ಹಾರಿ! ಇದು ಸಾವೋ ಜಾವೋ

ಚಿತ್ರಕೃಪೆ: goatourism

ಇನ್ನೋಂದು ರೀತಿಯಲ್ಲಿ ಇದು ಮಳೆಗಾಲದ ಆಗಮನವನ್ನು ಸಂತಸದಿಂದ ಸ್ವಾಗತಿಸುವ ಸಂಕೇತವಾಗಿಯೂ ಆಚರಿಸಲಾಗುತ್ತದೆ ಹಾಗೂ ಸಂತ ಜಾನ್ ದಿ ಬಾಪ್ಟಿಸ್ಟ್ ಅವರಿಗೆ ಈ ಉತ್ಸವವು ಮುಡಿಪಾಗಿದೆ. ಈ ಸಂದರ್ಭದಲ್ಲಿ ಫೇಣಿ ಕುಡಿದು ಎಲ್ಲ ಪುರುಷರು ಹಾಯಾಗಿ ನೀರಿನಲ್ಲಿ ಜಿಗಿದು ಕುಣಿದು ಕುಪ್ಪಳಿಸುತ್ತಾರೆ.

ಗೋವಾದಲ್ಲಿರುವ ವಿಶಿಷ್ಟ ಹಿಂದು ದೇವಾಲಯಗಳು

ಅಷ್ಟೆ ಅಲ್ಲ, ನೀರಿನಾಳದಲ್ಲಿ ಈಜುತ್ತ ಜನರು ಎಸೆದಿರುವ ವಿವಿಧ ಉಡುಗೊರೆಗಳನ್ನು ಹೊರತೆಗೆಯುತ್ತಾರೆ. ಗೋವಾಗ ಬಾರ್ಡೇಜ್ ಎಂಬ ಗ್ರಾಮದಲ್ಲಿ ಈ ದಿನದಂದು ಬಣ್ಣ ಬಣ್ಣಗಲಿಂದ ಸಿಂಗರಿಸಲಾದ ದೋಣಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಈ ಉತ್ಸವವು ಪ್ರತಿ ವರ್ಷ ಜೂನ್ 24 ರಂದು ಗೋವಾದಲ್ಲಿ ನಡೆಯುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+