ಶಿವಮೊಗ್ಗದ ಮತ್ತೂರು ಎಂಬ ಊರಿನಲ್ಲಿ ಜನರು ಕೇವಲ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಇಲ್ಲಿನ ಜನರ ದಿನನಿತ್ಯದ ಭಾಷೆಯಾಗಿದೆ. ಪ್ರತಿಯೊಬ್ಬರು ಸಂಸ್ಕೃತದಲ್ಲಿ ವ್ಯವಹರಿಸುತ್ತಾರೆ.

ಮತ್ತೂರು ಹಾಗೂ ಹೊಸಹಳ್ಳಿ
ಮತ್ತೂರಿನಲ್ಲಿ ರಾಮನ ಮಂದಿರವಿದೆ, ಶಿವಾಲಯವಿದೆ ಹಾಗೂ ಲಕ್ಷ್ಮೀ ಕೇಶವ ದೇವಾಲಯವಿದೆ. ಮಟ್ಟೂರು ಹಾಗೂ ಹೊಸಹಳ್ಳಿ ಎನ್ನುವ ಊರು ಸಂಸ್ಕೃತವನ್ನು ಸ್ಥಳೀಯ ಭಾಷೆಯನ್ನಾಗಿ ಮಾಡಿಕೊಂಡಿದ್ದಾರೆ. ಶಿವಮೊಗ್ಗದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಸುಮಾರು 5 ಸಾವಿರ ಮನೆಗಳಿಗೆ ಸಂಸ್ಕೃತವೇ ಮುಖ್ಯ ಭಾಷೆಯಾಗಿದೆ.

ವೈದಿಕ ಜೀವನಶೈಲಿ
ಮತ್ತೂರಿನ ಜನರು ವೈದಿಕ ಜೀವನಶೈಲಿಯನ್ನು ಪಾಲಿಸುತ್ತಿದ್ದಾರೆ. ಮಂತ್ರ ಪಠಿಸುವುದು, ಬರೆಯುವುದು, ಓದುವುದು, ಮಾತನಾಡುವುದು ಎಲ್ಲವೂ ಸಂಸ್ಕೃತದಲ್ಲೇ.

ಸಂಸ್ಕೃತ ಹಳ್ಳಿ
PC: Bala Subs
1981ರಲ್ಲಿ ಈ ಊರಿನಲ್ಲಿ 10 ದಿನಗಳ ಸಂಸ್ಕೃತ ವರ್ಕ್‌ಶಾಪ್ ನಡೆದಿತ್ತು ಅದರಲ್ಲಿ ಈ ಹಳ್ಳಿಯ ಬಹುತೇಕರು ಪಾಲ್ಗೊಂಡಿದ್ದರು. ಉಡುಪಿಯ ಪೇಜಾವರ ಶ್ರೀ ಗಳು ಪಾಲ್ಗೊಂಡಿದ್ದರು. ಪ್ರತಿಯೊಬ್ಬರು ಸಂಸ್ಕೃತ ಮಾತನಾಡುತ್ತಿದ್ದಾರೆ, ಪ್ರತಿ ಮನೆಯವರು ಸಂಸ್ಕೃತ ಮಾತನಾಡುತ್ತಿದ್ದಾರೆ ಇದೊಂದು ಸಂಸ್ಕೃತ ಹಳ್ಳಿ ಎಂದರು ಅಂದಿನಿಂದ ಇಲ್ಲಿನ ಜನರ ಮುಖ್ಯ ಭಾಷೆ ಸಂಸ್ಕೃತವಾಗಿದೆ.

ಗುರುಕುಲ ಪಾಠಶಾಲೆ
ಇಡೀಮತ್ತೂರು ಒಂದು ಅಗ್ರಹಾರದಂತೆ ರೂಪಿತವಾಗಿದೆ. ಇಲ್ಲಿ ದೇವಾಲಯ ಹಾಗೂ ಹಳ್ಳಿಯ ಪಾಠಶಾಲೆ ಇದೆ. ವೇದಗಳನ್ನು ಪಾಠಶಾಲೆಯಲ್ಲಿ ಪಠಿಸಲಾಗುತ್ತದೆ. ಈ ಪಾಠಶಾಲೆಯ ವಿದ್ಯಾರ್ಥಿಗಳು ಹಳೆಯ ಸಂಸ್ಕೃತದ ಎಲೆಗಳನ್ನು ಸಂಗ್ರಹಿಸಿ, ಕಂಪ್ಯೂಟರ್‌ನಲ್ಲಿ ಸ್ಕ್ರೀಪ್ಟ್‌ನ್ನು ದೊಡ್ಡದಾಗಿ ಮಾಡಿ ಅದರಲ್ಲಿ ಅಳಿಸಿಹೋಗಿರುವ ಅಕ್ಷರಗಳನ್ನು ತಿದ್ದುತ್ತಾರೆ.

ಸಂಸ್ಕೃತದಲ್ಲೇ ಜಗಳ
ಈ ಊರಲ್ಲಿ ತರಕಾರಿ ಮಾರುವವನಿಗೂ ಸಂಸ್ಕೃತ ಅರ್ಥವಾಗುತ್ತದೆ. ಊರಿನ ಜನರಂತೂ ಸರಾಗವಾಗಿ ಸಂಸ್ಕೃತ ಮಾತನಾಡುತ್ತಾರೆ. ಬೈಕ್‌ನಲ್ಲಿ ಓಡಾಡುವ ಯುವಕರು ಮೊಬೈಲ್‌ನಲ್ಲಿ ಸಂಸ್ಖೃತದಲ್ಲಿ ಮಾತನಾಡುವುದನ್ನು ಇಲ್ಲಿ ಕಾಣ ಬಹುದು. ಹಾಗೆಯೇ ಆಟ ಆಡುವ ಮಕ್ಕಳು ಸಂಸ್ಕೃತದಲ್ಲೇ ಜಗಳವಾಡುವುದನ್ನು ಕಾಣಬಹುದು.


Click it and Unblock the Notifications

















