Search
  • Follow NativePlanet
Share
» »ಬೆಂಗ್ಳೂರಿನ ಈ ಸ್ಥಳದಲ್ಲಿ ಲವರ್‌ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದೀರಾ ?

ಬೆಂಗ್ಳೂರಿನ ಈ ಸ್ಥಳದಲ್ಲಿ ಲವರ್‌ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದೀರಾ ?

ಯಾವುದೇ ಪಾರ್ಕ್ ಇರಲಿ ಅಲ್ಲಿ ನಿಮಗೆ ಕಾಣೋದು ಕೈ ಕೈ ಹಿಡಿದು ಕೂತಿರುವ, ಓಡಾಡುವ ಕಪಲ್‌ಗಳು. ಇದು ಬರೀ ಕಪಲ್‌ಗಳಿಗಾಗಿಯೇ ನಿರ್ಮಿಸಿರುವ ಪಾರ್ಕ್ ಏನೋ ಎನ್ನುವ ಸಂದೇಹ ಬರೋದರಲ್ಲಿ ಯಾವುದೇ ಸಂಶಯವಿಲ್ಲ. ನಿಮಗೆ ನಿಮ್ಮ ಗರ್ಲ್ ಫ್ರೆಂಡ್‌ ಜೊತೆ ಡೇಟಿಂಗ್ ಹೋಗಬೇಕಾದರೆ ಯಾವ ಸ್ಥಳಕ್ಕೆ ಹೋಗುತ್ತೀರಿ? ಬೆಂಗಳೂರಿನಲ್ಲಿ ಯಾವುದೆಲ್ಲಾ ಡೇಟಿಂಗ್ ಸ್ಪಾಟ್‌ಗಳಿವೆ ಅನ್ನೋದರ ಪಟ್ಟಿ ಇಲ್ಲಿದೆ.

ಕಾಲೇಜ್ ಟ್ರಿಪ್ ಹೋಗೋದಾದ್ರೆ ಈ ಸ್ಥಳಗಳಿಗೆಲ್ಲಾ ಹೋಗಬಹುದು

ಬೆಂಗಳೂರು ಪ್ಯಾಲೆಸ್

ಬೆಂಗಳೂರು ಪ್ಯಾಲೆಸ್

PC:Nikkul

ಬೆಂಗಳೂರು ಅರಮನೆಯು ಬರೀ ಭವ್ಯತೆ ಮತ್ತು ಸೊಬಗುಗಳ ಒಂದು ಸಂಕೇತವಾಗಿಲ್ಲ, ಬದಲಾಗಿ ಪ್ರೇಮ ಮತ್ತು ಪ್ರಣಯದ ಸಂಕೇತ ಕೂಡ. ಇಲ್ಲಿ ನೀವು ಗಾರ್ಡನ್‌ನ್ನು ನಡೆದುಕೊಂಡು ಸುತ್ತಾಡಬಹುದು. ಇಲ್ಲವಾದಲ್ಲಿ ಕುದುರೆ ಗಾಡಿ ಏರಿ ಸುತ್ತಾಡಬಹುದು ಇದು ಹಳೆಕಾಲದ ರಾಜ, ರಾಣಿಯ ಅನುಭವವನ್ನು ನಿಮಗೆ ನೀಡುತ್ತದೆ. ಇದು ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ತೆರೆದಿರುತ್ತದೆ.

ಸಕಲೇಶ್‌ಪುರ

ಸಕಲೇಶ್‌ಪುರ

PC: WestCoastMusketeer

ನಿಮಗೆ ಸ್ವಲ್ಪ ನಾಟಕೀಯ ಹಾಗೂ ಕುತೂಹಕಕಾರಿ ಅನುಭವವಾಗಬೇಕೆಂದಿದ್ದರೆ ಸಕಲೇಶ್‌ಪುರ ಬೆಸ್ಟ್ ಆಯ್ಕೆಯಾಗಿದೆ. ಇಲ್ಲಿ ನೀವು ಕಾವೇರಿ ನದಿಯ ದಡದಲ್ಲಿ ಕ್ಯಾಂಪ್ ಹೂಡಬಹುದು. ನೀವು ನಿಮ್ಮ ಪಾರ್ಟನರ್ ಜೊತೆ ಬೋಟಿಂಗ್ ಮಾಡಬಹುದು. ಬೆಂಗಳೂರಿನಿಂದ ಸುಮಾರು 221 ಕಿ.ಮೀ ದೂರದಲ್ಲಿದೆ.

ಲಾಲ್‌ಬಾಗ್

ಲಾಲ್‌ಬಾಗ್

PC: wikipedia

ಇಲ್ಲಿನ ಗ್ಲಾಸ್ ಹೌಸ್‌ನಲ್ಲಿ ಪ್ರತಿವರ್ಷ ಹೂವಿನ ಶೋವನ್ನು ಆಯೋಜಿಸಲಾಗುತ್ತದೆ. ಬೆಂಗಳೂರಿನ ಬೊಟಾನಿಕಲ್ ಗಾರ್ಡನ್ ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ಜನಜಂಗುಳಿಯಿಂದ ಕೂಡಿರುತ್ತದೆ. ಈ ಸ್ಥಳವು ನೀವು ನಿಮ್ಮ ಪಾರ್ಟನರ್ ಜೊತೆ ತಿರುಗಾಡಲು ಸೂಕ್ತವಾಗಿದೆ.

ಉಲ್‌ಸೂರ್ ಕೆರೆ

ಉಲ್‌ಸೂರ್ ಕೆರೆ

PC: youtube

ಬರ್ತ್‌ಡೇ ಸೆಲೆಬ್ರೆಟ್ ಮಾಡೋಕೆ ಉಲ್‌ಸೂರ್‌ ಕೆರೆ ಬೆಸ್ಟ್ ಆಗಿದೆ. ಕಪಲ್‌ಗಳು ಈ ಕೆರೆಯಲ್ಲಿ ಬೋಟಿಂಗ್ ಮಾಬಹುದು. ಕಪಲ್‌ಗೆ ಪ್ರೈವೆಸಿ ಸಿಗುತ್ತದೆ.

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್

ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಲ್ಲಿ ಕಬ್ಬನ್ ಪಾರ್ಕ್ ಕೂಡಾ ಒಂದು. ಕಪಲ್‌ಗಳೂ ಭೇಟಿ ನೀಡಲು ಉತ್ತಮ ತಾಣವಾಗಿದೆ. ಹೆಚ್ಚಿನ ಕಪಲ್‌ಗಳು ಈ ಕಬ್ಬನ್ ಪಾರ್ಕ್‌ನಲ್ಲಿ ಸುತ್ತಾಡುತ್ತಾರೆ.

 ನಂದಿ ಹಿಲ್ಸ್

ನಂದಿ ಹಿಲ್ಸ್

PC: Bharathkumarsy

ಇದು ಬೇಸಿಗೆಯಲ್ಲಿ ತಿರುಗಾಡಲು ಸುಂದರ ತಾಣವಾಗಿದೆ, ಬೆಂಗಳೂರಿನ ರೊಮ್ಯಾಂಟಿಕ್ ಸ್ಥಳಗಳ ಪಟ್ಟಿಯಲ್ಲಿ ನಂದಿಹಿಲ್ಸ್ ಕೂಡಾ ಒಂದು. ಬೈಕ್‌ನಲ್ಲಿ ಕಪಲ್‌ಗಳು ಬಂದು ನಂದಿಹಿಲ್ಸ್‌ನಲ್ಲಿ ಕಾಲಕಳೆಯುತ್ತಾರೆ. ಫೋಟೋ ಶೂಟ್‌ಗೂ ನಂದಿಹಿಲ್ಸ್ ಉತ್ತಮ ಸ್ಥಳವಾಗಿದೆ.

Read more about: bangalore palace
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more