Search
  • Follow NativePlanet
Share
» »ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್ ಏನೂ ಇಲ್ವಾ? ಹಾಗಾದ್ರೆ ಇಲ್ಲಿದೆ ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್

ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್ ಏನೂ ಇಲ್ವಾ? ಹಾಗಾದ್ರೆ ಇಲ್ಲಿದೆ ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್

ನಾಳೆ ಫ್ರೆಂಡ್‌ಶಿಪ್‌ ಡೇ . ಸ್ನೇಹಿತರಿಗಾಗಿ ಇರುವಂತಹ ಒಂದು ದಿನ. ಅದೂ ಕೂಡಾ ಭಾನುವಾರ. ಎಲ್ಲರಿಗೂ ರಜಾ ಇರುತ್ತದೆ. ಸ್ನೇಹಿತರೆಲ್ಲಾ ಸೇರಿ ಏನಾದರೊಂದು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಈ ಫ್ರೆಂಡ್‌ಶಿಪ್ ಡೇ ಗೆ ನೀವೇನು ಪ್ಲ್ಯಾನ್ ಮಾಡಿದ್ದೀರಿ? ಒಂದು ವೇಳೆ ಇನ್ನೂ ಪ್ಲ್ಯಾನ್ ಮಾಡಿಲ್ಲವೆಂದಾದಲ್ಲಿ ಈಗಲೇ ಪ್ಲ್ಯಾನ್ ಮಾಡಿ.

ಯಾವುದೇ ಟ್ರಿಪ್, ಟೂರ್‌ಗೆ ಹೋಗಬೇಕಾದರೆ ಪ್ಲ್ಯಾನಿಂಗ್ ಮಾಡಲೇ ಬೇಕು. ಅದಕ್ಕೆ ಸಾಕಷ್ಟು ಸಮಯ ಕೂಡಾ ಬೇಕು. ಆದರೆ ನಾಳೆನೇ ಫ್ರೆಂಡ್‌ಶಿಪ್‌ ಡೇ ಇಷ್ಟೊಂದು ಕಡಿಮೆ ಸಮಯದಲ್ಲಿ ಪ್ಲ್ಯಾನ್ ಮಾಡೋದು ಸ್ವಲ್ಪ ಕಷ್ಟಾನೇ ಸರಿ. ಹೀಗಿರುವಾಗ ನಿಮ್ಮ ಫ್ರೆಂಡ್‌ಶಿಪ್ ಡೇ ನೆನಪಿನಲ್ಲಿರುವಂತೆ ಮಜಾವಾಗಿ ಸ್ನೇಹಿತರ ಜೊತೆ ಕಾಲ ಕಳೆಯಬೇಕೆಂದರೆ ಲಾಂಗ್‌ ಡ್ರೈವ್ ಹೋಗಿ.

ಲಾಂಗ್‌ ಡ್ರೈವ್

ಲಾಂಗ್‌ ಡ್ರೈವ್

ಸ್ನೇಹಿತರೆಲ್ಲಾ ಸೇರಿ ಬೈಕ್‌ ಮೇಲೆ ಲಾಂಗ್‌ ಡ್ರೈವ್ ಹೋಗೋದರಲ್ಲಿ ಒಂದು ರೀತಿಯ ಮಜಾ ಇರುತ್ತದೆ. ಅದೂ ಕೂಡಾ ಬೆಳ್ಳಂಬೆಳಗ್ಗೆ ರೈಡ್ ಹೋಗಬೇಕು. ಎಲ್ಲಾದರೂ ದೂರದ ಊರಿಗೆ ರೋಡ್‌ ಟ್ರಿಪ್ ಹೋಗಿ. ಇದು ನಿಮ್ಮ ಸ್ನೇಹವನ್ನು ಇನ್ನಷ್ಟು ಬಲಿಷ್ಠಗೊಳಿಸುವುದಲ್ಲದೆ ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯಲು ಸಿಗುತ್ತದೆ.

ಚೆನ್ನೈ-ಮುನ್ನಾರ್

ಚೆನ್ನೈ-ಮುನ್ನಾರ್

ಮುನ್ನಾರ್‌ ಕೇರಳದ ಹಿಲ್‌ಸ್ಟೇಶನ್‌. ಮುನ್ನಾರ್‌ನ ಹಸಿರಿನ ಚಹಾ ತೋಟಗಳ ನಡುವೆ ಬೈಕ್‌ನಲ್ಲಿ ಓಡಾಡುವುದು ನಿಜಕ್ಕೂ ಒಂದು ವಿಭಿನ್ನ ಅನುಭವವಾಗಿದೆ. ಚೆನ್ನೈನಿಂದ ಬೈಕ್‌ನಲ್ಲಿ ಸ್ನೇಹಿತರ ಜೊತೆ ಈ ಹಿಲ್‌ ಸ್ಟೇಶನ್‌ನಲ್ಲಿ ಕಾಲ ಕಳೆಯಿರಿ.

ಬೆಂಗಳೂರಿನ ನಂದಿ ಹಿಲ್ಸ್‌

ಬೆಂಗಳೂರಿನ ನಂದಿ ಹಿಲ್ಸ್‌

ಬೆಂಗಳೂರಿನ ನಂದಿ ಹಿಲ್ಸ್‌ಬೆಂಗಳೂರಿನಲ್ಲಿರೋರಿಗೆ ಸಮೀಪದಲ್ಲೇ ಬೈಕ್‌ ಟ್ರಿಪ್ ಮಾಡಬೇಕೆಂದಿರುವವರಿಗೆ ನಂದಿ ಹಿಲ್ಸ್‌ ಬೆಸ್ಟ್‌ ತಾಣವಾಗಿದೆ. ಬೆಳಗಿನ ಜಾವ ತನ್ನ ಫ್ರೆಂಡ್ಸ್‌ ಗ್ಯಾಂಗ್‌ ಜೊತೆ ನಂದಿ ಹಿಲ್ಸ್‌ಗೆ ಹೋಗಿ. ಇದು ಅಷ್ಟೇನೂ ದೂರಾನೂ ಇಲ್ಲ, ಜೊತೆಗೆ ನಿಮಗೆ ಆಯಾಸಾನೂ ಆಗೋದಿಲ್ಲ .

ದೆಹಲಿಯಿಂದ ಆಗ್ರಾ

ದೆಹಲಿಯಿಂದ ಆಗ್ರಾ

ನೀವು ದೆಹಲಿಯಿಂದ ಆಗ್ರಾಕ್ಕೆ ರೋಡ್‌ ಟ್ರಿಪ್ ಮಾಡೋದಾದ್ರೆ ಯಮುನಾ ಎಕ್ಸ್‌ಪ್ರೆಸ್‌ ರಸ್ತೆಯಾಗಿ ಹೋಗಿ. ಇದು ಉತ್ತಮ ರಸ್ತೆಯನ್ನು ಹೊಂದಿದ್ದು, ದೆಹಲಿಯಿಂದ ಆಗ್ರಾಕ್ಕಿರುವ ೧೬೫ ಕಿ.ಮಿ ನ್ನು ನೀವು ಬರೀ ೨ ಗಂಟೆಯಲ್ಲಿ ಕ್ರಮಿಸಬಹುದು. ಬೆಳಗ್ಗಿನ ಜಾವ ಹೋದರೆ ದೆಹಲಿಯ ಮಂಜಿನ ವಾತಾವರಣವನ್ನೂ ಎಂಜಾಯ್ ಮಾಡಬಹುದು ಹಾಗೆಯೇ ಆಗ್ರಾದಲ್ಲಿನ ತಾಜ್ ಮಹಲ್‌ನ್ನೂ ಕಾಣಬಹುದು.

 ಮುಂಬೈ-ಪುಣೆ

ಮುಂಬೈ-ಪುಣೆ

ಮುಂಬೈ-ಪುಣೆ ಹೈವೆಯಲ್ಲಿ ನೀವು ನಿಮ್ಮ ಸ್ನೇಹಿತರ ಜೊತೆ ಲಾಂಗ್ ಡ್ರೈವ್ ಹೋಗಬಹುದು. ಈ ಹೈವೇಯಲ್ಲಿ ನೀವು ೯೪ ಕಿ.ಮೀ ದೂರವನ್ನು ೨ ಗಂಟೆಯಲ್ಲಿ ಕ್ರಮಿಸಬಹುದು. ಪುಣೆ-ಲೋನಾವಲ್‌ ಮಧ್ಯದಲ್ಲಿ ಕೆಲವು ಒಳ್ಳೆ ಡಾಬಾಗಳೂ ಸಿಗುತ್ತವೆ. ಡಾಬಾದಲ್ಲಿನ ಆಹಾರದ ರುಚಿಯನ್ನೂ ಸವಿಯಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+