Search
  • Follow NativePlanet
Share
» »ರಾಮನಾಥಸ್ವಾಮಿ ದೇವಾಲಯದ ಬಗೆಗಿನ ಕುತೂಹಲಕಾರಿ ಸಂಗತಿಗಳು

ರಾಮನಾಥಸ್ವಾಮಿ ದೇವಾಲಯದ ಬಗೆಗಿನ ಕುತೂಹಲಕಾರಿ ಸಂಗತಿಗಳು

ಮಹಾಕಾವ್ಯ ರಾಮಾಯಣದಲ್ಲಿ 'ರಾಮೇಶ್ವರ'ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಇಲ್ಲಿನ ಪ್ರಸಿದ್ಧ ಪಂಬನ್ ಸೇತುವೆ ಭಾರತದ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿದೆ. ರಾಮೇಶ್ವರಂ ಬಂಗಾಳಕೊಲ್ಲಿಯ ಮೂಲಕ ಶ್ರೀಲಂಕಾವನ್ನು ತಲುಪಲು ಭಾರತದಿಂದ ಹತ್ತಿರದ ಸ್ಥಳವಾಗಿದೆ. ಭಾರತ ಮತ್ತು ಶ್ರೀಲಂಕಾ ಗಡಿಯಲ್ಲಿ ಸ್ಥಳೀಯ ಮೀನುಗಾರರನ್ನು ಮತ್ತು ನಿರಾಶ್ರಿತರನ್ನು ಸೆರೆಹಿಡಿಯುವುದರಿಂದ ಇದು ಯಾವಾಗಲೂ ಸುದ್ದಿಯಲ್ಲಿರುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ರಾಮನಾಥಸ್ವಾಮಿ ದೇವಾಲಯದಿಂದಾಗಿಯೂ ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ. ರಾಮನಾಥಸ್ವಾಮಿ ದೇವಾಲಯ ಎಂದೂ ಕರೆಯಲ್ಪಡುವ ರಾಮೇಶ್ವರಂ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್‌'ನಿಂದ ಫೆಬ್ರವರಿ. ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭಕ್ತರು ಬೆಳಿಗ್ಗೆ 5.00 ರಿಂದ ಮಧ್ಯಾಹ್ನ ಮತ್ತು ಸಂಜೆ 6.00 ರಿಂದ ರಾತ್ರಿ 8.45 ರವರೆಗೆ ಭೇಟಿ ನೀಡಬಹುದು. ಇದು ಸೋಮವಾರದಿಂದ ಭಾನುವಾರದವರೆಗೆ ಭಕ್ತರಿಗೆ ತೆರೆದಿರುತ್ತದೆ.

photo-91-160701-11-1661018723.jpg -Properties

ರಾಮೇಶ್ವರಂಗೆ ಸಂಬಂಧಿಸಿದ ದಂತಕಥೆಗಳು

ರಾಮೇಶ್ವರಂ ಹಿಂದೂಗಳ ಪವಿತ್ರ ಸ್ಥಳವಾಗಿದೆ. ಪುರಾಣಗಳ ಪ್ರಕಾರ, ಋಷಿಗಳ ಸಲಹೆಯಂತೆ, ರಾಮನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಬ್ರಹ್ಮಹತ್ಯೆಯ ಪಾಪವನ್ನು ಪರಿಹರಿಸಲು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದನು. ರಾಮೇಶ್ವರಂ ಎರಡು ಶಿವಲಿಂಗಗಳನ್ನು ಹೊಂದಿರುವ ಸ್ಥಳವಾಗಿದೆ. ಅದರಲ್ಲಿ ಒಂದನ್ನು ರಾಮನಾಥಸ್ವಾಮಿ ದೇವಾಲಯದ ಒಳಗೆ ಇರಿಸಲಾಗಿದೆ. ಇದು ಮುಖ್ಯ ದೇವತೆ. ರಾಮೇಶ್ವರಂನಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಧನುಷ್ಕೋಡಿ ಇದೆ. ದಂತಕಥೆಗಳ ಪ್ರಕಾರ, ರಾಮ ಮತ್ತು ವಾನರ ಸೇನೆಯು ರಾಮಸೇತುವನ್ನು ನಿರ್ಮಿಸಿದರು. ರಾವಣನ ಸೆರೆಯಿಂದ ಸೀತೆಯನ್ನು ರಕ್ಷಿಸಲು ಇದನ್ನು ನಿರ್ಮಿಸಲಾಗಿದೆ.

ಇಲ್ಲಿ ಎರಡು ಲಿಂಗಗಳಿವೆ

ರಾಮನು ವಿಷ್ಣುವಿನ ಅವತಾರವಾಗಿದ್ದು, ಶಿವನನ್ನು ತನ್ನ ಗುರು ಎಂದು ಪರಿಗಣಿಸಿದನು. ರಾಮನು ಬ್ರಾಹ್ಮಣನಾಗಿದ್ದ ರಾವಣನನ್ನು ಕೊಂದಿದ್ದರಿಂದ ತನ್ನ ಪಾಪಗಳಿಗಾಗಿ ಪಶ್ಚಾತ್ತಾಪ ಪಡುವ ಸಲುವಾಗಿ, ಅವನು ಒಂದು ಲಿಂಗವನ್ನು ಸ್ಥಾಪಿಸಿದನು. ಇದನ್ನು ದೇವಾಲಯದ ಒಳಗೆ ಸ್ಥಾಪಿಸಲಾಗಿದೆ. ಹಿಂದೂ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಇದು ಒಂದಾಗಿದೆ. ಅನೇಕರಿಗೆ ತಿಳಿದಿಲ್ಲ, ಆದರೆ ರಾಮನಾಥಸ್ವಾಮಿ ದೇವಾಲಯದಲ್ಲಿ ಎರಡು ಲಿಂಗಗಳಿವೆ. ವಿಶ್ವಲಿಂಗಂ ಮತ್ತು ರಾಮಲಿಂಗಂ. ರಾಮಲಿಂಗ ಅನ್ನು ಸೀತಾ ದೇವಿಯು ನಿರ್ಮಿಸಿದಳು, ಆದರೆ ವಿಶ್ವಲಿಂಗವನ್ನು ಕೈಲಾಸದಿಂದ ಹನುಮಂತನು ಇಲ್ಲಿಗೆ ತಂದನು. ಇದು ಪುರಾಣಗಳ ಪ್ರಕಾರ ಶಿವನ ನೆಲೆಯಾಗಿದೆ.

photo-91-160701-11-1661018723.jpg -Properties

ಚಾರ್ ಧಾಮ್‌'ನಲ್ಲಿ ಇದೂ ಒಂದು

ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾ ಕೇಂದ್ರಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕೇದಾರನಾಥ ಮತ್ತು ಬದರಿನಾಥ್, ಗಂಗೋತ್ರಿ ಮತ್ತು ಯಮನೋತ್ರಿ, ದ್ವಾರಕಾ, ಪುರಿ ಮತ್ತು ರಾಮೇಶ್ವರಂ. ಈ ದೇವಾಲಯಗಳು ಹಿಂದೂಗಳ ಅತ್ಯಂತ ಪವಿತ್ರ ಚಾರ್ ಧಾಮ್‌'ಗಳಲ್ಲಿ ಒಂದಾಗಿದೆ.

ಅನೇಕ ಪವಿತ್ರ ದೇವಾಲಯಗಳ ವಾಸಸ್ಥಾನ

ರಾಮನಾಥಸ್ವಾಮಿ ದೇವಾಲಯವು ಶಿವಲಿಂಗಗಳ ವಾಸಸ್ಥಾನ ಮಾತ್ರವಲ್ಲದೆ, ಇತರ ಅನೇಕ ದೇವತೆಗಳ ವಾಸಸ್ಥಾನವಾಗಿದೆ. ರಾಮನಾಥಸ್ವಾಮಿ ದೇವಾಲಯವು ಕಪ್ಪು ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ವಿಮಾನ ಎಂದೂ ಕರೆಯಲ್ಪಡುವ ಮೇಲ್ಛಾವಣಿಯ ಗೋಪುರವು ಚಿನ್ನದ ಲೇಪನವನ್ನು ಹೊಂದಿದೆ ಎಂದು ಹೇಳಲಾಗಿದೆ. ದೇವಾಲಯದಲ್ಲಿರುವ ಇತರ ದೇವಾಲಯಗಳಲ್ಲಿ ಸೇತುಮಾಧವ, ವಿಶಾಲಾಕ್ಷಿ, ಮಹಾಗಣಪತಿ, ಸಂತಾನಗಣಪತಿ, ನಟರಾಜ, ಪರ್ವತವರ್ಧಿನಿ, ಆಂಜನೇಯ, ರಾಮನಾಥಸ್ವಾಮಿ, ಸುಬ್ರಹ್ಮಣ್ಯ ಮತ್ತು ಮಹಾಲಕ್ಷ್ಮಿ ಸೇರಿವೆ.

ವಿಶ್ವದ ಅತಿ ಉದ್ದದ ಕಾರಿಡಾರ್

ವಿಶ್ವದ ಅತಿ ಉದ್ದದ ಕಾರಿಡಾರ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮನಾಥಸ್ವಾಮಿ ದೇವಾಲಯವು ಅತ್ಯಂತ ಸುಂದರವಾಗಿದೆ. ಕಾರಿಡಾರ್ ಉತ್ತರ ಮತ್ತು ದಕ್ಷಿಣದಲ್ಲಿ 640 ಅಡಿ, ಪಶ್ಚಿಮ ಮತ್ತು ಪೂರ್ವದಲ್ಲಿ 400 ಅಡಿ ಮತ್ತು 6.9 ಮೀಟರ್ ಎತ್ತರವನ್ನು ಹೊಂದಿದೆ. ಇದು ಉತ್ತರ ಮತ್ತು ದಕ್ಷಿಣದಲ್ಲಿ 352 ಅಡಿ ಮತ್ತು ಪೂರ್ವ ಮತ್ತು ಪಶ್ಚಿಮದಲ್ಲಿ 224 ಅಡಿಗಳನ್ನು ವಿಸ್ತರಿಸುವ ಒಳ ಕಾರಿಡಾರ್‌'ಗಳನ್ನು ಹೊಂದಿದೆ. ಕಾರಿಡಾರ್‌'ಗಳ ಅಗಲವು ಬದಲಾಗಬಹುದು. 1212 ಕಂಬಗಳು ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿವೆ. ಛಾವಣಿಗಳು ವರ್ಣರಂಜಿತ ಭಿತ್ತಿಚಿತ್ರಗಳನ್ನು ಹೊಂದಿವೆ. ಕಾರಿಡಾರ್‌'ಗಳ ಒಟ್ಟು ಉದ್ದವು 3850 ಅಡಿಗಳವರೆಗೆ ಸುತ್ತುತ್ತದೆ.

-136056373201-1661018740.jpg -Properties

ರಾಮೇಶ್ವರಂನಲ್ಲಿರುವ 22 ಬಾವಿಗಳ ಮಹತ್ವವೇನು?

ರಾಮನಾಥಸ್ವಾಮಿ ದೇವಾಲಯದ ಸಂಕೀರ್ಣವು 22 ತೀರ್ಥಗಳನ್ನು ಹೊಂದಿದೆ. ಅಂದರೆ ರಾಮೇಶ್ವರಂನಲ್ಲಿರುವ 22 ಬಾವಿಗಳು ಮತ್ತು ತೊಟ್ಟಿಗಳು ರಾಮನ ಬತ್ತಳಿಕೆಯಲ್ಲಿರುವ 22 ಬಾಣಗಳನ್ನು ಪ್ರತಿನಿಧಿಸುತ್ತವೆ. ಭಕ್ತರು ದೇವಾಲಯವನ್ನು ತಲುಪಿದಾಗ, ಅವರು ಸಮುದ್ರದಲ್ಲಿ ಸ್ನಾನ ಮಾಡಬೇಕು, ನಂತರ ಅವರು ದೇವರ ಮುಂದೆ ಕಾಣಿಸಿಕೊಳ್ಳುವ ಮೊದಲು 22 ಬಾವಿಗಳ ನೀರಿನಲ್ಲಿ ಸ್ನಾನ ಮಾಡಬೇಕು.

12 ಜ್ಯೋತಿರ್ಲಿಂಗಗಳಿವೆ

ಹಿಂದೂ ಪುರಾಣಗಳ ಪ್ರಕಾರ, ಈ ಭೂಮಿಯ ಮೇಲೆ ನೈಸರ್ಗಿಕವಾಗಿ ಕಾಣಿಸಿಕೊಂಡ 12 ಜ್ಯೋತಿರ್ಲಿಂಗಗಳಿವೆ. ಆ 12 ರಲ್ಲಿ, ಒಂದು ಜ್ಯೋತಿರ್ಲಿಂಗವು ರಾಮನಾಥಸ್ವಾಮಿ ದೇವಾಲಯದ ಸಂಕೀರ್ಣದಲ್ಲಿದೆ. ಜನಪ್ರಿಯ ನಂಬಿಕೆಗಳ ಪ್ರಕಾರ, ಎಲ್ಲಾ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಮಾಡುವ ವ್ಯಕ್ತಿಯು ಸ್ವರ್ಗವನ್ನು ತಲುಪುತ್ತಾನೆ ಅಥವಾ ಮೋಕ್ಷವನ್ನು ಪಡೆಯುತ್ತಾನೆ. ಇದರರ್ಥ ಅವನು ಶಿವನಿಂದ ಆಶೀರ್ವಾದವನ್ನು ಪಡೆಯುತ್ತಾನೆ.

-151271345401-1661018749.jpg -Properties

ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಕೆಲವು ಸಲಹೆಗಳು

*ಪ್ರವಾಸಿಗರು ಬಟ್ಟೆಗಳನ್ನು ಈ ರೀತಿ ಧರಿಸಬೇಕೆಂದು ನಿರೀಕ್ಷಿಸಲಾಗಿದೆ. ಅಂದರೆ ಪುರುಷರು ಕುರ್ತಾ ಮತ್ತು ಧೋತಿ ಅಥವಾ ಪೈಜಾಮವನ್ನು ಧರಿಸಬಹುದು. ಹಾಗೆಯೇ ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಬೇಕು.

*ದೇವಸ್ಥಾನದ ಪೂಜೆ ಮತ್ತು ಆಚರಣೆಗಳಿಗೆ ಹಾಜರಾಗಲು ಯಾವುದೇ ಮುಂಗಡ ಬುಕಿಂಗ್ ಲಭ್ಯವಿಲ್ಲ. ನೀವು ದೇವಸ್ಥಾನವನ್ನು ತಲುಪಿದ ನಂತರ ನೀವು ಕೌಂಟರ್‌ಗಳಿಂದ ಟಿಕೆಟ್‌'ಗಳನ್ನು ಖರೀದಿಸಬೇಕು.

* ರಾಮೇಶ್ವರಂ ಜನನಿಬಿಡ ಸ್ಥಳವಾಗಿರುವುದರಿಂದ ನಿಮ್ಮ ವಸ್ತುಗಳನ್ನು ನೀವೆ ನೋಡಿಕೊಳ್ಳಿ.

ರಾಮೇಶ್ವರಂ ದೇವಸ್ಥಾನವನ್ನು ತಲುಪುವುದು ಹೇಗೆ?

ರಾಮೇಶ್ವರಂ ದೇವಾಲಯವು ರಾಮೇಶ್ವರಂ ನಗರದಲ್ಲಿ ಕೇಂದ್ರದಲ್ಲಿದೆ. ಹಾಗಾಗಿ ಬಹುತೇಕ ಎಲ್ಲಾ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಇಲ್ಲಿಗೆ ಪ್ರವೇಶಿಸಬಹುದು. ನಗರದೊಳಗೆ ಆಟೋಗಳು ಹೆಚ್ಚು ಲಭ್ಯವಿದೆ. ಆಟೋದಲ್ಲಿ ದೇವಸ್ಥಾನಕ್ಕೆ ಸುಲಭವಾಗಿ ಪ್ರಯಾಣಿಸಬಹುದು. ಅವರು ಶುಲ್ಕವನ್ನು ಮೀಟರ್‌'ನಿಂದ ಲೆಕ್ಕ ಹಾಕುತ್ತಾರೆಯೇ ಎಂದು ಪರಿಶೀಲಿಸುವುದು ನಿಮ್ಮ ಜವಬ್ದಾರಿ.

ನೀವು ಆರಾಮವಾಗಿ ಪ್ರಯಾಣಿಸಲು ಬಯಸಿದರೆ, ಕಾಯುವುದನ್ನು ತಪ್ಪಿಸಲು ಕ್ಯಾಬ್ ಅಥವಾ ಕಾರನ್ನು ಬಾಡಿಗೆಗೆ ಪಡೆಯಬಹುದು. ಜನರ ಸಂಖ್ಯೆಗೆ ಅನುಗುಣವಾಗಿ ನೀವು ಕಾರನ್ನು ಆಯ್ಕೆ ಮಾಡಬಹುದು. ಅರ್ಧ ದಿನ ಅಥವಾ ಪೂರ್ಣ ದಿನಕ್ಕೆ ಕ್ಯಾಬ್ ಅನ್ನು ಬುಕ್ ಮಾಡಿದರೆ ಒಳಿತು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+