Search
  • Follow NativePlanet
Share
» »ಐಶ್ವರ್ಯವನ್ನು ನೀಡುವ 8 ಮುಖದ ಶಿವಲಿಂಗದ ದೇವಾಲಯವಿದು...

ಐಶ್ವರ್ಯವನ್ನು ನೀಡುವ 8 ಮುಖದ ಶಿವಲಿಂಗದ ದೇವಾಲಯವಿದು...

ಅಶ್ಚರ್ಯವನ್ನು ಉಂಟು ಮಾಡುವ 8 ಮುಖದ ಶಿವಲಿಂಗವು ಐಶ್ವರ್ಯವನ್ನು ನೀಡುತ್ತದೆಯಂತೆ. ನಮ್ಮ ದೇಶದಲ್ಲಿ ಅನೇಕ ಶಿವಾಲಯಗಳು ಇರುವುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಒಂದೊಂದು ದೇವಾಲಯವು ಅದರದೇ ಆದ ಮಹತ್ವವನ್ನು ಹೊಂದಿದೆ. ಉತ್ತರದಿಂ

By Sowmyabhai

ಅಶ್ಚರ್ಯವನ್ನು ಉಂಟು ಮಾಡುವ 8 ಮುಖದ ಶಿವಲಿಂಗವು ಐಶ್ವರ್ಯವನ್ನು ನೀಡುತ್ತದೆಯಂತೆ. ನಮ್ಮ ದೇಶದಲ್ಲಿ ಅನೇಕ ಶಿವಾಲಯಗಳು ಇರುವುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಒಂದೊಂದು ದೇವಾಲಯವು ಅದರದೇ ಆದ ಮಹತ್ವವನ್ನು ಹೊಂದಿದೆ. ಉತ್ತರದಿಂದ ದಕ್ಷಿಣದವರೆವಿಗೂ ಅದ್ಭುತವಾದ ಹಾಗು ಮಹಿಮಾನ್ವಿತವಾದ ಶಿವಾಲಯಗಳನ್ನು ನಾವು ಕಾಣಬಹುದು.

ನಮ್ಮ ದೇಶದಲ್ಲಿ ಅನೇಕ ಶಿವಲಿಂಗಗಳಿವೆ. ಸಾಮಾನ್ಯವಾಗಿ ಶಿವನು ಲಿಂಗ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಆದರೆ ಇಲ್ಲಿ ನೆಲೆಸಿರುವ ಶಿವನು ಮಾತ್ರ 8 ಮುಖಗಳನ್ನು ಹೊಂದಿದ್ದು, ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಹಾಗಾದರೆ ಐಶ್ವರ್ಯವನ್ನು ಉಂಟು ಮಾಡುವ ಆ ಶಿವನ ದೇವಾಲಯ ಎಲ್ಲಿದೆ? ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳೋಣ.

1.ಎಲ್ಲಿದೆ?

1.ಎಲ್ಲಿದೆ?

ಈ ಮಹಿಮಾನ್ವಿತವಾದ ದೇವಾಲಯವು ಮಧ್ಯ ಪ್ರದೇಶದಲ್ಲಿನ ಮಂಡ್ಸಾರ್ ಪಟ್ಟಣದಲ್ಲಿ ಸಿನ್ಮಾ ನದಿ ತೀರದಲ್ಲಿ ಪಶುಪತಿನಾಥ ದೇವಾಲಯವಿದೆ. ದೇಶದಲ್ಲಿಯೇ ಸಿನ್ಮಾ ನದಿ ತೀರದಲ್ಲಿ ನೆಲೆಸಿರುವ ಪಶುಪತಿನಾಥ ದೇವಾಲಯವು ಎಷ್ಟೊ ವಿಶೇಷತೆಗಳನ್ನು ಹೊಂದಿದ್ದಾನೆ.

2.8 ಮುಖ ಹೊಂದಿರುವ ಶಿವಲಿಂಗ

2.8 ಮುಖ ಹೊಂದಿರುವ ಶಿವಲಿಂಗ

ಪ್ರಪಂಚದಲ್ಲಿ ಬೇರೆಲ್ಲೂ ಕಾಣದೇ ಇರುವ ಹಾಗೆ 7 ಮುಖ (ಅಷ್ಟಮುಖ) ಶಿವಲಿಂಗವನ್ನು ಈ ಪಶುಪತಿನಾಥ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ಸ್ವಾಮಿಯನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಪೂಜೆಗಳನ್ನು ಮಾಡುತ್ತಾರೆ.

3.ಐಶ್ವರ್ಯ

3.ಐಶ್ವರ್ಯ

ಈ ಅಷ್ಟಮುಖ ಶಿವಲಿಂಗವನ್ನು ದರ್ಶನ ಮಾಡಿದರೆ ಐಶ್ಚರ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಈ ಸ್ವಾಮಿಯನ್ನು ಸೋಮವಾರದಂದು ಅತ್ಯಂತ ವಿಜೃಂಬಣೆಯಿಂದ ಆರಾಧನೆ ಮಾಡುತ್ತಾರೆ. ಆ ಸಮಯದಲ್ಲಿ ಅಪಾರ ಭಕ್ತ ಜನ ಸಾಗರ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

4.ವಿಶೇಷ

4.ವಿಶೇಷ

ದೇಶದಲ್ಲಿನ ವಿಶಿಷ್ಟತೆಯನ್ನು ಹೊಂದಿರುವ ಪಶುಪತಿನಾಥ ದೇವಾಲಯವು ಅತ್ಯಂತ ಅದ್ಭುತವಾಗಿಯೂ ಕೂಡ ಇದೆ. ಈ ಸ್ವಾಮಿ ನೆಲೆಸಿರುವ ಪಟ್ಟಣದ ಬಗ್ಗೆ ಅನೇಕ ಉಲ್ಲೇಖಗಳನ್ನು ಕೂಡ ಕಾಣಬಹುದಾಗಿದೆ. ನಿಮಗೆ ಗೊತ್ತ ಈ ಅಷ್ಟ ಮುಖವನ್ನು ಹೊಂದಿರುವ ಶಿವಲಿಂಗವು ಸ್ವಯಂ ಭೂ ಮೂರ್ತಿಯಾಗಿದ್ದಾನೆ.

5.ಅಷ್ಟಮುಖ ಶಿವಲಿಂಗ

5.ಅಷ್ಟಮುಖ ಶಿವಲಿಂಗ

ಈ ಪಶುಪತಿನಾಥ ದೇವಾಲಯದಲ್ಲಿರುವ ಶಿವಲಿಂಗವು ಸ್ವಯಂ ಭೂವಾಗಿ ನೆಲೆಸಿದ್ದಾನೆ. ಇಲ್ಲಿನ ಶಿವಲಿಂಗವು 3.6 ಮೀಟರ್ (15 ಅಡಿ) ಎತ್ತರದಲ್ಲಿದ್ದಾನೆ. 4 ದಿಕ್ಕಿಗೂ ಒಟ್ಟು 8 ಮುಖಗಳು ಇವೆ. ಈ ಶಿವಲಿಂಗವು ಅತ್ಯಂತ ಭಾರವಾಗಿದ್ದಾನೆ. ದೇವಾಲಯದ ಗೋಪುರದ ಮೇಲೆ 100 ಕೆ.ಜಿಯ ಕಳಶವನ್ನು ಪ್ರತಿಷ್ಟಾಪಿಸಿದ್ದಾರೆ.

6.ಇತರ ದೇವಾಲಯಗಳು

6.ಇತರ ದೇವಾಲಯಗಳು

ಇನ್ನು ಈ ದೇವಾಲಯದ ಪ್ರಾಂಗಣದಲ್ಲಿ ಗಣೇಶ, ಪಾರ್ವತಿ, ಕಾರ್ತೀಕೇಯ, ಗಂಗ, ವಿಷ್ಣು, ಲಕ್ಷ್ಮೀ, ಆದಿ ಶಂಕರಾಚಾರ್ಯರ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದಾರೆ. ಪರಮಶಿವನು ಅಷ್ಟಮುಖ ನಾಥ ಸ್ವಾಮಿಯಾಗಿ ನೆಲೆಸಿರುವ ಈ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ.

7.ಅಷ್ಟಮುಖ

7.ಅಷ್ಟಮುಖ

ಎಂಟು ಮುಖಗಳು ಪ್ರಾದೇಶಿಕ ಶೈವ ಧರ್ಮ ಶಾಸ್ತ್ರದಲ್ಲಿ ಶಿವನ ವಿವಿಧ ಅಂಶಗಳನ್ನು ಪ್ರತಿನಿಧಿಸುತ್ತವೆ. ಭವ, ಪಶುಪತಿ, ಮಹಾದೇವ, ಇಸಾನಾ, ರುದ್ರ, ಶರ್ವಾ, ಉಗ್ರ ಮತ್ತು ಅಸನಿ. ಇದನ್ನು ಕೆಲವೊಮ್ಮೆ ಅಷ್ಟಮುಖಾ ಅಥವಾ ಅಷ್ಟಮೂರ್ತಿ ಎಂದು ಕೂಡ ಕರೆಯುತ್ತಾರೆ.

8.ಮಹಿಮಾನ್ವಿತವಾದ ದೇವಾಲಯ

8.ಮಹಿಮಾನ್ವಿತವಾದ ದೇವಾಲಯ

ಈ ದೇವಾಲಯದ ಶಿಲ್ಪ ಶಾಸನಗಳ ಆಧಾರದ ಪ್ರಕಾರ 5 ನೇ ಅಥವಾ 6 ನೇ ಶತಮಾನದಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಕೆಲವರು ಈ ಸ್ಥಳವನ್ನು ದಶಾಪುರ ಎಂದು ಕೂಡ ಉಲ್ಲೇಖಿಸುತ್ತಾರೆ. ಇದು ಇಂಡೋರ್‍ನಿಂದ ಸುಮಾರು 340 ಕಿ.ಮೀ, ಶಮಲಾಜಿ ಪುರಾತನವಾದ ಸ್ಥಳಗಳ ಪೂರ್ವಕ್ಕೆ ಸುಮಾರು 220 ಕಿ.ಮೀ ದೂರದಲ್ಲಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+