Search
  • Follow NativePlanet
Share
» »ಸಹ್ಯಾದ್ರಿ ಬೆಟ್ಟದಲ್ಲಿರುವ ಪಂಚಗಣಿಯ ಸೌಂದರ್ಯ ಕಣ್ತುಂಬಿಕೊಳ್ಳಿ

ಸಹ್ಯಾದ್ರಿ ಬೆಟ್ಟದಲ್ಲಿರುವ ಪಂಚಗಣಿಯ ಸೌಂದರ್ಯ ಕಣ್ತುಂಬಿಕೊಳ್ಳಿ

ಮಹಾರಾಷ್ಟ್ರದಲ್ಲಿ ಟ್ರಕ್ಕಿಂಗ್‌ ಕೈಗೊಳ್ಳುವಂತಹ ಅನೇಕ ತಾಣಗಳಿವೆ. ಅವುಗಳಲ್ಲಿ ಪಂಚಗಣಿಯೂ ಒಂದು. ಪಂಚಗಣಿ ಸಹ್ಯಾದ್ರಿ ಬೆಟ್ಟದ ಮಧ್ಯದಲ್ಲಿನ ಸುಂದರವಾದ ಗಿರಿಧಾಮವಾಗಿದ್ದು, ಸಾವಿರಾರು ಪ್ರವಾಸಿಗರು ವರ್ಷಾದ್ಯಂತ ಇಲ್ಲಿಗೆ ಭೇಟಿ ನೀಡುತ್ತಾರೆ.

 ಪಂಚಗಣಿ

ಪಂಚಗಣಿ

PC:Akhilesh Dasgupta

ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಪಂಚಗಣಿ ಬರುತ್ತದೆ. ಇಂದಿಗೂ ಸಹ ಬ್ರಿಟಿಷ್ ಯುಗದ ವಾಸ್ತುಶಿಲ್ಪವು ಮನೆಗಳಲ್ಲಿ ಕಂಡುಬರುತ್ತದೆ. ವಾಸ್ತವವಾಗಿ, ಬ್ರಿಟಿಷರು ಇಲ್ಲಿ ರಜಾದಿನಗಳನ್ನು ಕಳೆಯಲು ಬಳಸುತ್ತಿದ್ದರು. ಅಲ್ಲದೆ ಅತ್ಯುತ್ತಮ ಗಿರಿಧಾಮವಾಗಿರುವುದರಿಂದ ಇದರ ಸೌಂದರ್ಯವನ್ನು ನೋಡಬಹುದಾಗಿದೆ.

 ಸಿಡ್ನಿಪಾಯಿಂಟ್

ಸಿಡ್ನಿಪಾಯಿಂಟ್

PC:Akhilesh Dasgupta

ಇಲ್ಲಿನ ಸ್ಥಳೀಯರಲ್ಲಿ ಪಂಚಗಣಿ ಬಹಳ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿನ ಸಿಡ್ನಿಪಾಯಿಂಟ್ ಪ್ರವಾಸಿಗರಿಗೆ ಇಷ್ಟವಾದಂತಹ ಸ್ಥಳವಾಗಿದೆ. ಅಲ್ಲಿ ಕುಳಿತುಕೊಂಡು ನೀವು ಡೋಮ್ ಡ್ಯಾಮ್‌ನ್ನು ನೋಡಬಹುದು. ಇದರಿಂದಾಗಿ ಇಲ್ಲಿನ ಸೌಂದರ್ಯ ಇನ್ನಷ್ಟು ಹೆಚ್ಚಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: bbalaji

ಪಂಚಗಣಿಗೆ ಹೋಗಬೇಕಾದರೆ ಚಳಿಗಾಲದಲ್ಲಿ ಇಲ್ಲವೇ ಬೇಸಿಗೆಗಾಲದ ಆರಂಭದಲ್ಲಿ ಹೋಗಬೇಕು. ಹಾಗಾಗಿ ನೀವು ಡಿಸೆಂಬರ್‌ನಿಂದ ಮೇ ಒಳಗೆ ಅಲ್ಲಿಗೆ ಹೋದಲ್ಲಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು. ಡಿಸೆಂಬರ್‌ನಿಂದ ಫೆಬ್ರವರಿ ವರಗೆ ಇಲ್ಲಿ ಬಹಳ ಚಳಿ ಇರುತ್ತದೆ. ನಿಮಗೆ ಚಳಿಯ ವಾತಾವರಣವನ್ನು ಎಂಜಾಯ್ ಮಾಡಬೇಕೆಂದಿದ್ದರೆ ನೀವು ಡಿಸೆಂಬರ್‌ನಿಂದ ಫೆಬ್ರವರಿ ಒಳಗೆ ಹೋಗಿ.

ದರ್ಶನಕ್ಕೆ ತೆರೆದಿದೆ ಶಬರಿಮಲೆ ; ಪಾರ್ಕಿಂಗ್ ಎಲ್ಲಿ, ಶೌಚಾಲಯ ಎಲ್ಲಿ, ಹೊಸ ರೂಲ್ಸ್‌ ಏನು?<br /> ದರ್ಶನಕ್ಕೆ ತೆರೆದಿದೆ ಶಬರಿಮಲೆ ; ಪಾರ್ಕಿಂಗ್ ಎಲ್ಲಿ, ಶೌಚಾಲಯ ಎಲ್ಲಿ, ಹೊಸ ರೂಲ್ಸ್‌ ಏನು?

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

PC: JakilDedhia

ಒಂದು ವೇಳೆ ನೀವು ಪಂಚಗಣಿಯಗೆ ವಿಮಾನದ ಮೂಲಕ ತಲುಪಬೇಕೆಂದಿದ್ದರೆ ಪುಣೆ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ಟ್ಯಾಕ್ಸಿ ಮೂಲಕ ನೀವು ಪಂಚಗಣಿ ತಲುಪಬಹುದು.

ರಸ್ತೆ ಮೂಲಕ ಹೋಗುವುದಾದರೆ

ರಸ್ತೆ ಮೂಲಕ ಹೋಗುವುದಾದರೆ

PC: Ekabhishek

ಪಂಚಗಣಿ ಹೋಗುವುದಾದರೆ ಪುಣೆ, ಮುಂಬೈ, ಮಹಾಬಲೇಶ್ವರ, ಸತಾರದಿಂದ ಸ್ಟೇಟ್ ಬಸ್‌ಗಳು ಚಲಿಸುತ್ತದೆ. ಇಲ್ಲಿಗೆ ನಿಮ್ಮ ಕಾರ್ ಮೂಲಕವೂ ಪ್ರಯಾಣಿಸಬಹುದು.

ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?<br /> ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?

ರೈಲು ನಿಲ್ದಾಣ

ರೈಲು ನಿಲ್ದಾಣ

PC:Alex Antony

ಪಂಚ್‌ಗಣಿಯ ಸಮೀಪದ ರೈಲು ನಿಲ್ದಾಣವೆಂದರೆ ಸತಾರ ರೈಲು ನಿಲ್ದಾಣ. ಆದರೆ ಜನರು ಪುಣೆ ರೈಲು ನಿಲ್ದಾಣದಿಂದ ಪಂಚಗಣಿ ತಲುಪಲು ಇಷ್ಟಪಡುತ್ತಾರೆ. ಪಂಚಗಣಿಯಲ್ಲಿ ತಂಗಲು ಅನೇಕ ಕಡಿಮೆ ಬಜೆಟ್‌ನ ರೆಸ್ಟೋರೆಂಟ್‌ಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X