ಬೇಸಿಗೆ ಮುಗಿದು ಮಳೆಗಾಲ ಶುರುವಾಗಿದೆ. ಮಕ್ಕಳಿಗೂ ಶಾಲೆ ಆರಂಭವಾಗಿದೆ. ಒಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದರೆ, ಮತ್ತೊಂದೆಡೆ ಮಳೆಗಾಲದ ಪ್ರವಾಸಕ್ಕೆ ವಾರಂತ್ಯವನ್ನು ಎದುರು ನೋಡುತ್ತಿದ್ದಾರೆ ಪ್ರವಾಸಿ ಪ್ರಿಯರು. ಕೆಲವು ಸ್ಥಳಗಳಿಗೆ ಕುಟುಂಬದ ಜೊತೆ ಹೋದರೇನೇ ಚೆನ್ನ. ಕುಟುಂಬವೆಂದ ಮೇಲೆ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಸಹ ಇರುತ್ತಾರೆ. ಆದರೆ ಮಕ್ಕಳನ್ನು ಮಳೆಗಾಲದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೊದಲು, ನಾವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ಮಳೆಗಾಲದ ಪ್ರಯಾಣದ ಸಮಯದಲ್ಲಿ ಸಣ್ಣ ಮಕ್ಕಳು ಸಹ ತುಂತುರು ಮಳೆಯ ಅಡಿಯಲ್ಲಿ ಸಾಕಷ್ಟು ಮೋಜು ಮತ್ತು ಮಸ್ತಿ ಮಾಡಲು ಬಯಸುತ್ತಾರೆ. ಇಂತಹ ಸಮಯದಲ್ಲಿ ನಿಮ್ಮ ಮಕ್ಕಳೊಂದಿಗೆ ಅಥವಾ ಕುಟುಂಬದೊಂದಿಗೆ ಕೆಲವು ಉತ್ತಮ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಪ್ರಯಾಣವನ್ನು ಸ್ಮರಣೀಯವಾಗಿಸಲು ನೀವು ಬಯಸಿದರೆ ಖಂಡಿತವಾಗಿಯೂ ಈ ವಿಷಯಗಳನ್ನು ನೆನಪಿನಲ್ಲಿಡಿ.
ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿ
ನೀವು ಮಳೆಗಾಲದಲ್ಲಿ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡುತ್ತಿದ್ದರೆ ಮೊದಲು ಟಿಕೆಟ್‌ಗಳನ್ನು ಬುಕ್ ಮಾಡಿ. ನೀವು ರೈಲಿನಲ್ಲಿ ಹೋಗುವುದಾದರೆ ನಿಮ್ಮ ರೌಂಡ್ ಟ್ರಿಪ್ ಟಿಕೆಟ್ ಅನ್ನು ಮುಂಚಿತವಾಗಿ ಬುಕ್ ಮಾಡಿ. ಇದರ ಹೊರತಾಗಿ, ನೀವು ಭೇಟಿ ನೀಡುವ ಸ್ಥಳದಲ್ಲಿ ಉಳಿಯಲು ಮುಂಚಿತವಾಗಿ ಹೋಟೆಲ್ ಅನ್ನು ಬುಕ್ ಮಾಡಿ, ಇದರಿಂದ ಗಮ್ಯಸ್ಥಾನವನ್ನು ತಲುಪಿದ ನಂತರ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಅನೇಕ ಜನರು ತಮ್ಮ ಕಾರಿನಲ್ಲಿ ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡುತ್ತಾರೆ. ಒಂದು ವೇಳೆ ನೀವು ಕಾರಿನಲ್ಲಿ ಪ್ರಯಾಣಿಸಲು ರೆಡಿ ಮಾಡಿಕೊಂಡರೆ ಟ್ರಂಕ್‌ನಲ್ಲಿ ಅಗತ್ಯವಾದ ಟೂಲ್ ಬಾಕ್ಸ್ ಅನ್ನು ಇರಿಸಿ.

ಸರಿಯಾದ ಸ್ಥಳವನ್ನು ಆಯ್ಕೆ ಮಾಡಿ
ನೀವು ಮಳೆಗಾದಲ್ಲಿ ಮಕ್ಕಳೊಂದಿಗೆ ಪ್ರವಾಸ ಹೊರಟಾಗ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಏಕೆಂದರೆ ನೀವು ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶಗಳಿಗೆ ಹೋಗಲು ಯೋಜಿಸುತ್ತಿದ್ದರೆ, ನಿಮ್ಮ ಆಯ್ಕೆಯು ನಿಜಕ್ಕೂ ತಪ್ಪು. ಏಕೆಂದರೆ ಮಳೆಗಾಲದ ಸಮಯದಲ್ಲಿ ಭೂಕುಸಿತದ ಅಪಾಯವು ತುಂಬಾ ಹೆಚ್ಚು. ಇಂತಹ ಸಮಯದಲ್ಲಿ ನೀವು ಬೆಟ್ಟದ ಸ್ಥಳವನ್ನು ಆಯ್ಕೆ ಮಾಡುವ ಬದಲು, ಸಮತಟ್ಟಾದ ಸ್ಥಳವನ್ನು ಆರಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಮಳೆಗಾಲದ ಸಮಯದಲ್ಲಿ ಭೇಟಿ ನೀಡಲು ಚಿಕ್ಕಮಗಳೂರು, ಆಗುಂಬೆ, ಗೋಕರ್ಣ, ಜೋಗ್ ಫಾಲ್ಸ್, ನಂದಿ ಹಿಲ್ಸ್, ಸಕಲೇಶಪುರ, ಕಬಿನಿ, ಮೈಸೂರು, ದಾಂಡೇಲಿ, ಹಂಪಿ, ಹೊನ್ನೆಮರಡು, ಭೀಮೇಶ್ವರಿ ಹೀಗೆ ಅತ್ಯುತ್ತಮ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಸ್ಥಳಗಳಲ್ಲಿ ಸಹ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆಯಿದ್ದರೆ, ನೀವು ಬೇರೆ ಸ್ಥಳಕ್ಕೆ ಭೇಟಿ ನೀಡಲು ಯೋಜಿಸಬಹುದು.
ವಾಟರ್‌ಪ್ರೂಫ್ ಬಳಸಿ
ಮಾನ್ಸೂನ್ ಸಮಯದಲ್ಲಿ ಮಳೆಯಿಂದಾಗಿ ಯಾವುದೇ ಸಾಮಾನುಗಳಿಗೆ ಹಾನಿಯಾಗದಂತೆ ನಿಮ್ಮ ಸಾಮಾನುಗಳನ್ನು ವಾಟರ್‌ಪ್ರೂಫ್ ಟ್ರಾವೆಲ್ ಬ್ಯಾಗ್‌ನಲ್ಲಿ ಕೊಂಡೊಯ್ಯಿರಿ. ಇದನ್ನು ಬಳಸುವುದರಿಂದ ಬಟ್ಟೆಯಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಯಾವ ವಸ್ತುಗಳು ಹಾಳಾಗುವುದಿಲ್ಲ. ವಾಟರ್‌ಪ್ರೂಫ್ ಟ್ರಾವೆಲ್ ಬ್ಯಾಗ್ ಹೊರತಾಗಿ, ನೀವು ರೈನ್ ಕೋಟ್ ಅನ್ನು ಸಹ ಒಯ್ಯಬಹುದು.

ಯಾವ ಬಟ್ಟೆ ಸೂಕ್ತ?
ಮಾನ್ಸೂನ್ ಸಮಯದಲ್ಲಿ ನೀವು ಮಕ್ಕಳೊಂದಿಗೆ ಹೊರಗೆ ಹೋಗುತ್ತಿದ್ದರೆ, ನೀವು ಮಳೆಗಾಲದ ಪ್ರಕಾರ ಬಟ್ಟೆಗಳನ್ನು ಪ್ಯಾಕ್ ಮಾಡಬೇಕು. ನಿಮಗಾಗಿ ಮತ್ತು ಮಕ್ಕಳಿಗೆ ಬೇಗನೆ ಒಣಗುವ ಬಟ್ಟೆಗಳನ್ನು ಪ್ಯಾಕ್ ಮಾಡಿ. ಮಾನ್ಸೂನ್ ಸಮಯದಲ್ಲಿ ಯಾರಾದರೂ ಪ್ರವಾಸಕ್ಕೆ ಹೋಗುತ್ತಿದ್ದರೆ, ಅವರು ಸಿಂಥೆಟಿಕ್ ಬಟ್ಟೆಗಳನ್ನು ಪ್ಯಾಕ್ ಮಾಡಬೇಕು ಎಂದು ಹಲವರು ನಂಬುತ್ತಾರೆ, ಏಕೆಂದರೆ ಸಿಂಥೆಟಿಕ್ ಬಟ್ಟೆಗಳು ಇತರ ಬಟ್ಟೆಗಳಿಗಿಂತ ವೇಗವಾಗಿ ಒಣಗುತ್ತವೆ. ಮಾನ್ಸೂನ್ ನಲ್ಲಿ ದಪ್ಪ ಮತ್ತು ಹತ್ತಿ ಬಟ್ಟೆಗಳು ಬೇಗ ಒಣಗುವುದಿಲ್ಲ. ಇದಲ್ಲದೆ, ನೀವು ಕೆಲವು ತೆಳುವಾದ ಬಟ್ಟೆಗಳನ್ನು ಸಹ ಪ್ಯಾಕ್ ಮಾಡಬಹುದು.

ಈ ಸಲಹೆಗಳನ್ನು ಸಹ ಅನುಸರಿಸಿ...
*ಯಾವುದೇ ಸ್ಥಳಕ್ಕೆ ಹೋಗುವ ಮೊದಲು, ಹವಾಮಾನ ಮಾಹಿತಿಯನ್ನು ತಿಳಿದುಕೊಂಡು ಮುಂದುವರೆಯುವುದು ಸೂಕ್ತ.
*ನೀವು ಮಕ್ಕಳೊಂದಿಗೆ ಮಾನ್ಸೂನ್ ಪ್ರವಾಸಕ್ಕೆ ಹೋಗುತ್ತಿದ್ದರೆ, ಇತರ ವಸ್ತುಗಳ ಜೊತೆಗೆ ಕೆಲವು ಆರೋಗ್ಯಕರ ರೆಡಿ ಆಹಾರವನ್ನು ಪ್ಯಾಕ್ ಮಾಡಲು ಮರೆಯಬೇಡಿ.
*ಇದಲ್ಲದೇ ನೆಗಡಿ, ಕೆಮ್ಮು ಮೊದಲಾದ ಕಾಯಿಲೆಗಳಿಗೆ ಕೆಲವು ಔಷಧಗಳನ್ನು ಪ್ಯಾಕ್ ಮಾಡಲು ಮರೆಯದಿರಿ.
*ನೀವು ಸ್ಥಳೀಯ ಸಂಸ್ಥೆಗಳ ಮೊಬೈಲ್ ಸಂಖ್ಯೆಯನ್ನು ಸಹ ಹೊಂದಿರಬೇಕು.


Click it and Unblock the Notifications

















