ಹಿಲ್ ಸ್ಟೇಶನ್‌ಗೆ ಹೋಗೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎತ್ತರದ ಬೆಟ್ಟ ಗುಡ್ಡಗಳು, ಶಿಖರಗಳನ್ನು ಹತ್ತುತ್ತ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಪ್ರಕೃತಿ ಸೌಂದರ್ಯದ ನಡುವೆ ಕಾಲ ಕಳೆಯುವುದೆಂದರೆ ಎಷ್ಟು ಸೊಗಸಾಗಿರುತ್ತದೆ ಅಲ್ಲವೇ?
ಈ ವಿಷ್ಯದಲ್ಲಿ ಭಾರತೀಯರು ಅದೃಷ್ಟವಂತರು ಅಂತಾನೇ ಹೇಳಬಹುದು. ಇಲ್ಲಿ ಪ್ರತಿಯೊಂದು ಕಾಲದಲ್ಲೂ ಆನಂದವನ್ನು ಪಡೆಯಬಹುದು. ಭಾರತವೂ ಸಂಪೂರ್ಣವಾಗಿ ಪ್ರಾಕೃತಿಕ ಖಜಾನೆಯಿಂದ ತುಂಬಿದೆ.
ನಾವು ಇಂದು ನಿಮಗೆ ಇಂತಹ ಮಾಹಿತಿಯನ್ನು ಕೊಡಲಿದ್ದೇವೆ ಅದನ್ನು ಕೇಳಿದ ನಂತರ ಏನನ್ನೂ ಯೋಚಿಸದೆ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ಸುತ್ತಾಡಲು ಹೊರಟಿಬಿಡುತ್ತೀರಾ.

ಪ್ರವಾಸಿಗರಿಗೆ ದೊಡ್ಡ ಗಿಫ್ಟ್
PC: Sukigreen
ಈ ಸೀಸನ್‌ನಲ್ಲಿ ನೀವು ಯಾವುದಾದರೂ ಹಿಲ್ ಸ್ಟೇಶನ್‌ಗೆ ಹೋಗುವ ಪ್ಲ್ಯಾನ್ ಮಾಡಿಲ್ಲವೆಂದಾದರೆ ಈ ಮಾಹಿತಿ ನಿಮಗಾಗಿ. ನೀವು ಕಡಿಮೆ ಕರ್ಚಿನಲ್ಲಿ ತಮಿಳುನಾಡಿನ ಎರಡು ದೊಡ್ಡ ಹಿಲ್ ಸ್ಟೇಶನ್‌ಗಳಾದ ಕುನೂರ್ ಹಾಗೂ ಊಟಿಯ ಆನಂದವನ್ನು ಪಡೆಯಬಹುದು. ನೀಲಗಿರಿ ಮೌಂಟನ್ ರೈಲ್ವೆ ಈಗ ಕಡಿಮೆ ಬೆಲೆಯಲ್ಲಿ ಊಟಿ, ಕುನೂರ್‌ನ ಆಫರ್ ನೀಡಿದೆ.
ಈ ಮೌಂಟನ್ ರೈಲ್ವೆಯು ಊಟಿ ಹಾಗೂ ಕುನೂರ್‌ನ್ನು ಜೋಡಿಸುವ ಕೆಲಸ ಮಾಡುತ್ತಿದೆ. ಪಶ್ವಿಮ ಬಂಗಾಳದ ಡಾರ್ಜಿಲಿಂಗ್ ನ ಹಿಮಾಲಯ ರೈಲ್ವೆಯಂತೆಯೇ ನೀಲಗಿರಿ ಮೌಂಟೆನ್ ರೈಲ್ವೆಯನ್ನು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಪಟ್ಟಿಯಲ್ಲಿ ಶಾಮೀಲು ಮಾಡಿದೆ.

ಒಂದು ಪ್ರಾಚೀನ ರೈಲ್ವೆ ಮಾರ್ಗ
ನೀಲಗಿರಿ ಮೌಂಟೆನ್ ರೈಲ್ವೆಯು ದಕ್ಷಿಣ ಭಾರತ ರಾಜ್ಯದ ತಮಿಳುನಾಡಿನ ಏಕೈಕ ಸಣ್ಣ ಲೈನ್ ರೈಲ್ವೆ ಟ್ರಾಕ್ ಆಗಿದೆ. ಇದನ್ನು 1891ರಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲೇ ನಡೆಸಲು ಆರಂಭಿಸಲಾಗಿತ್ತು. ಇದನ್ನು ನಿರ್ಮಿಸುವ ಪ್ರಸ್ತಾವನೆಯನ್ನು 1854ರಲ್ಲಿ ಇಡಲಾಗಿತ್ತು. ಪರ್ವತ ಪ್ರದೇಶಗಳಿಂದ ಹಾದು ಹೋಗುವ ಈ ಟ್ರೈನ್ ಹಾಗೂ ಟ್ರ್ಯಾಕ್‌ನ್ನು ಪೂರ್ಣ ರೀತಿಯಲ್ಲಿ ವ್ಯವಸ್ಥಿತಗೊಳಿಸಲು 18 ವರ್ಷಗಳೇ ಬೇಕಾಯಿತು. 1908ರಲ್ಲಿ ಇದು ಪೂರ್ಣ ರೀತಿಯಲ್ಲಿ ತಯಾರಾಗಿತ್ತು.

ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಿ
PC: Shijan Kaakkara
ದಕ್ಷಿಣ ಭಾರತದ ಎರಡು ಸುಂದರ ಹಿಲ್‌ಸ್ಟೇಶನ್‌ಗಳನ್ನು ಕಡಿಮೆ ಖರ್ಚಿನಲ್ಲಿ ಸುತ್ತಾಡಿಸುವ ಜವಬ್ದಾರಿಯನ್ನು ಐಆರ್‌ಸಿಟಿಸಿ ನಡೆಸುತ್ತಿದೆ. 4,400 ರೂಪಾಯಿಯಲ್ಲಿ ನೀವು ಈ ಪ್ರಸಿದ್ಧ ಹಿಲ್‌ಸ್ಟೇಶನ್‌ನ ಆನಂದವನ್ನು ಪಡೆಯಬಹುದು. ಭಾರತೀಯ ಪ್ರವಾಸೋಧ್ಯಮವನ್ನು ಉತ್ತಮಗೊಳಿಸಲು ಐಆರ್‌ಸಿಟಿಸಿ ಈರೀತಿಯ ಸ್ಕೀಮ್‌ನ್ನು ಜಾರಿಗೆ ತರುತ್ತಾ ಇರುತ್ತದೆ.

ಊಟ ಉಪಚಾರ
ಐಆರ್‌ಸಿಟಿಸಿ ಕೇವಲ ಕಡಿಮೆ ಖರ್ಚಿನಲ್ಲಿ ಹಿಲ್‌ಸ್ಟೇಶನ್‌ಗಳನ್ನು ಸುತ್ತಾಡಿಸುವುದು ಮಾತ್ರವಲ್ಲ, ಒಂದು ಸಂಪೂರ್ಣ ಪ್ಯಾಕೇಜ್‌ನ್ನೇ ನೀಡುತ್ತಿದೆ. ಅದರಲ್ಲಿ ಉಳಿಯಲು ಹೋಟೆಲ್ ಹಾಗೂ ಬೆಳಗಿನ ಉಪಹಾರ ಕೂಡಾ ಸೇರಿದೆ. ನೀಲಗಿರಿ ಮೌಂಟೆನ್ ಟ್ರೈನ್ ಪ್ರತಿ ಶನಿವಾರ ಮೆಟ್ಟುಪಲ್ಯಾಮ್‌ನಿಂದ ಹೊರಡುತ್ತದೆ.
ಮೂವರು ಶೇರಿಂಗ್‌ಗೆ 4 ಸಾವಿರ 400 ರೂ.
ಎರಡು ಶೇರಿಂಗ್‌ಗೆ 5 ಸಾವಿರ500 ರೂ.
ಸಿಂಗಲ್ ಶೇರಿಂಗ್‌ಗೆ 9 ಸಾವಿರ 700 ರೂ. ನೀಡಬೇಕು.
ಒಂದು ವೇಳೆ ನೀವು ಗುಂಪಿನಲ್ಲಿ ಹೋಗುವುದಾದರೆ ಪ್ರತಿಯೊಬ್ಬ ವ್ಯಕ್ತಿಗೆ ಇನ್ನೂ ಕಡಿಮೆ ಖರ್ಚು ಬೀಳುತ್ತದೆ.

ಊಟಿ-ಕುನೂರ್
PC: T. R. Shankar Raman
ಊಟಿಯ ಪ್ರಾಕೃತಿಕ ಸೌಂದರ್ಯದ ಆನಂದ ಪಡೆಯಲು ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಬೇಸಿಗೆಯಲ್ಲಂತೂ ಈ ಸ್ಥಳವು ಪ್ರವಾಸಿಗರಿಂದ ತುಂಬಿರುತ್ತದೆ. ಬೆಟ್ಟಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ನೀವು ನೀಲಗಿರಿ ಬೆಟ್ಟಗಳ ಇತರ ಆಕರ್ಷಣೆಗಳನ್ನೂ ನೋಡಬಹುದು. ಕುನೂರ್ ಹಿಲ್ ಸ್ಟೇಶನ್‌ಗಳನ್ನೂ ನೋಡಬಹುದು. ಇವೆಲ್ಲವೂ ಒಂದೇ ಪ್ಯಾಕೇಜ್‌ನಲ್ಲಿ ಬರುತ್ತದೆ.


Click it and Unblock the Notifications

















