Search
  • Follow NativePlanet
Share
» » ವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸ

ವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸ

ಸೆಂಟಿನೇಲಿಸ್ ದ್ವೀಪದ ಬಗ್ಗೆ ಕೇಳಿದ್ದೀರಾ? ಬುತೇಕರಿಗೆ ಇದರ ಬಗ್ಗೆ ತಿಳಿದಿರಲಿಕ್ಕಿಲ್ಲ. ಆಕಾಶದಿಂದ ಇದು ಅದ್ಭುತ ಕಡಲತೀರಗಳು ಮತ್ತು ದಟ್ಟ ಕಾಡುಗಳಿಂದ ಕೂಡಿದ ಒಂದು ಸುಂದರವಾದ ದ್ವೀಪದಂತೆ ಕಾಣುತ್ತದೆ. ಆದರೆ ಪ್ರವಾಸಿಗರು ಅಥವಾ ಮೀನುಗಾರರು ಅಲ್ಲಿನ ನಿವಾಸಿಗಳ ಭಯದಿಂದಾಗಿ ಆ ಸ್ಥಳಕ್ಕೆ ಕಾಲಿಡುವುದಿಲ್ಲ. ಕಾರಣ ಅಲ್ಲಿ ಹೋದವರು ಮತ್ತೆ ಜೀವಂತವಾಗಿ ಹಿಂದಿರುಗುತ್ತಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ.

ವಿಚಿತ್ರ ಜನಾಂಗದ ಜನರನ್ನು ಇಲ್ಲಿ ಕಾಣಬಹುದು

ವಿಚಿತ್ರ ಜನಾಂಗದ ಜನರನ್ನು ಇಲ್ಲಿ ಕಾಣಬಹುದು

ಆಧುನಿಕ ನಾಗರೀಕತೆಯನ್ನು ತಿರಸ್ಕರಿಸಿದ ಮತ್ತು ಹೊರಗಿನ ಪ್ರಪಂಚದೊಂದಿಗೆ ಶೂನ್ಯ ಸಂಪರ್ಕವನ್ನು ಹೊಂದಲು ಆದ್ಯತೆ ನೀಡುವ ನಿಗೂಢ ಬುಡಕಟ್ಟಿನ ಜನರು ಇಲ್ಲಿದ್ದಾರೆ. ನಾರ್ತ್ ಸೆಂಟಿನಲ್ ಐಲ್ಯಾಂಡ್‌ ಬಹಳ ಅಪಾಯಕಾರಿಯಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಪ್ರಾಣವನ್ನು ಉಳಿಸಿಕೊಂಡರೆ ಸಾಕೆನಿಸಿಬಿಡುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಪ್ರಾಣಭಯವಿದೆ.

ವಿಮಾನಕ್ಕೆ ಕಲ್ಲು ಬಿಸಾಡುತ್ತಾರೆ

ವಿಮಾನಕ್ಕೆ ಕಲ್ಲು ಬಿಸಾಡುತ್ತಾರೆ

ಇಲ್ಲಿನ ಜನರು ಎಷ್ಟು ಅಪಾಯಕಾರಿಗಳೆಂದರೆ ಯಾವತ್ತಾದರೂ ಹೊರಗಿನವರೊಂದಿಗೆ ಸಂವಹನ ನಡೆಸಿದರೆ ಅದು ಜಗಳದಲ್ಲೇ ಅಂತ್ಯವಾಗುತ್ತದೆ. 2006 ರಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಈ ಬುಡಕಟ್ಟು ಜನಾಂಗದವರು ಕೊಂದಿದ್ದಾರೆ. ಇಲ್ಲಿ ಸಮೀಪದಿಂದ ಹಾರಾಡುವ ವಿಮಾನಗಳಿಗೆ ಬೆಂಕಿಯ ಬಾಣಗಳನ್ನು ಬಿಡುತ್ತಾರೆ ಅಷ್ಟೇ ಅಲ್ಲದೆ ಕಲ್ಲುಗಳನ್ನು ಬಿಸಾಡುತ್ತಾರೆ.

ಉತ್ತರ ಸೆಂಟಿನಲ್ ದ್ವೀಪ

ಉತ್ತರ ಸೆಂಟಿನಲ್ ದ್ವೀಪ

PC: NASA

ಸೆಂಟಿನೇಲಿಸ್ ಬುಡಕಟ್ಟು ಜನಾಂಗದವರು, ಜಾವೆಲಿನ್‌ಗಳನ್ನು ಬಂಗಾಳ ಕೊಲ್ಲಿಯಲ್ಲಿರುವ ಉತ್ತರ ಸೆಂಟಿನಲ್ ದ್ವೀಪದ ತೀರದಲ್ಲಿ ಸಂಗ್ರಹಿಸುತ್ತಾರೆ. 2004ರ ಸುನಾಮಿಯ ಸಂದರ್ಭದಲ್ಲಿ ಸೆಟೆನೆಲೀಸ್ ಬುಡಕಟ್ಟು ಜನಾಂಗದವರು ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ನ ಮೇಲೆ ಬಾಣವನ್ನು ಬಿಟ್ಟಿದ್ದರು.

ಇಲ್ಲಿನ ಜನರ ಭಾಷೆ ತಿಳಿದಿಲ್ಲ

ಇಲ್ಲಿನ ಜನರ ಭಾಷೆ ತಿಳಿದಿಲ್ಲ

ಬಂಗಾಳ ಕೊಲ್ಲಿಯಲ್ಲಿ ನೆಲೆಗೊಂಡಿದೆ, ನಾರ್ತ್ ಸೆಂಟಿನಲ್ ದ್ವೀಪವು ಭಾರತಕ್ಕೆ ಸೇರಿದ್ದರೂ ಬೆಳಕಿಗೆ ಬರಬೇಕಾದರೆ ಅಂದಾಜು 60,000 ವರ್ಷಗಳೇ ಬೇಕಾಯಿತು. ಆಧುನಿಕ ನಾಗರೀಕತೆಯಿಂದ ದೂರ ಉಳಿದಿರುವ ಸೆಂಟಿನೀಲೀ ಜನರ ಭಾಷೆ, ಅವರ ಆಚರಣೆಗಳು ಮತ್ತು ದ್ವೀಪಗಳ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ.

ನಗ್ನರಾಗಿ ತಿರುಗುತ್ತಿದ್ದಾರೆ

ನಗ್ನರಾಗಿ ತಿರುಗುತ್ತಿದ್ದಾರೆ

ಹೊರಗಿನವರು ಆ ಜನಾಂಗದೊಂದಿಗೆ ಸಂಭಾಷಿಸುವುದು ಅಪಾಯವೇ ಸರಿ. ಸುನಾಮಿಯು ಈ ಜನಾಂಗದ ಮೇಲೆ, ದ್ವೀಪದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದು ಹೇಳುವುದು ಕಷ್ಟ ಸಾಧ್ಯ. ಆಧುನಿಕತೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜನರು ಪಿಜ್ಜಾ ಬರ್ಗರ್ ತಿನ್ನುತ್ತಿದ್ದರೆ ಸೆಂಟೆನೇಲಿಸ್‌ ಜನರು ಇನ್ನೂ ಬಟ್ಟೆ ಇಲ್ಲದೆ ನಗ್ನರಾಗಿ ವಾಸಿಸುತ್ತಿದ್ದು, ಸಮುದ್ರದ ಜಲಚರಗಳನ್ನು ಭೇಟಿಯಾಡುತ್ತಿದ್ದಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+