Search
  • Follow NativePlanet
Share
» »ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...

ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...

ಗಾಡ್ಸ್‌ ಓವ್ನ್ ಕಂಟ್ರಿ ಎಂದೇ ಕರೆಯಲಾಗುವ ಕೇರಳ ರಜಾದಿನಗಳನ್ನು ಕಳೆಯಲು , ಫ್ಯಾಮಿಲಿ ಜೊತೆ ಟೂರ್ ಹೋಗಲು ಉತ್ತಮವಾದ ಸ್ಥಳವಾಗಿದೆ. ಪ್ರವಾಸಿ ತಾಣವೂ ಆಗಿದೆ. ಇಲ್ಲಿ ಎಳನೀರು, ಬ್ಯಾಕ್‌ವಾಟರ್, ಆನೆಗಳು, ಸಮೃದ್ಧ ಸಂಸ್ಕೃತಿಯನ್ನು ನೋಡಬೇಕಾದರೆ ಕೇರಳಕ್ಕೆ ಹೋಗಬೇಕು. ಕೇರಳವು ಕಲೆ-ಸಂಸ್ಕೃತಿ, ಧರ್ಮ-ದರ್ಶನಕ್ಕೂ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ದಕ್ಷಿಣ ಭಾರತದ ಸಂಸ್ಕೃತಿ ಬಗ್ಗೆ ತಿಳಿಯಬೇಕಾದರೆ ಕೇರಳದ ಪ್ರವಾಸವನ್ನು ಕೈಗೊಳ್ಳಲೇ ಬೇಕು. ಇಂದು ನಾವು ಕೇರಳದ ಪ್ರಸಿದ್ಧ ಮಂದಿರ ಗುರುವಾಯೂರ್‌ ಬಗ್ಗೆ ಹೇಳ ಹೊರಟಿದ್ದೇವೆ. ಈ ಮಂದಿರವು ತನ್ನ ವಿಶೇಷತೆಗಳಿಂದ ಹೆಚ್ಚು ಪ್ರಸಿದ್ಧವಾಗಿದೆ.

ಗುರುವಾಯೂರ್ ಮಂದಿರ

ಗುರುವಾಯೂರ್ ಮಂದಿರ

PC- G. Udhaya Sankar

ಗುರುವಾಯೂರ್‌ ಮಂದಿರವು ಕೃಷ್ಣನ ಮಂದಿರವಾಗಿದ್ದು ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಈ ಮಂದಿರದ ಇತಿಹಾಸವು ಹಲವು ವರ್ಷ ಹಳೆಯದು. ಇದು ಕೇರಳದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಕೃಷ್ಣನ ದರ್ಶನ ಪಡೆಯಲು ವಿಶ್ವದಾದ್ಯಂತ ಭಕ್ತರು ಆಗಮಿಸುತ್ತಾರೆ, ಇಲ್ಲಿ ಕೃಷ್ಣನನ್ನು ಗುರುವಾಯೂರಪ್ಪ ಹೆಸರಿನಿಂದ ಪೂಜಿಸಲಾಗುತ್ತದೆ. ಇದು ಕೃಷ್ಣನ ಬಾಲರೂಪವಾಗಿದೆ.

ಹಿಂದೂಗಳಿಗೆ ಮಾತ್ರ ಪ್ರವೇಶ

ಹಿಂದೂಗಳಿಗೆ ಮಾತ್ರ ಪ್ರವೇಶ

PC:Saminathan Suresh

ಈ ದೇವಸ್ಥಾನದಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ. ಹಿಂದೂಗಳಲ್ಲದವರು ಇಲ್ಲಿ ಪ್ರವೇಶಿಸುವಂತಿಲ್ಲ. ಕೃಷ್ಣನ ಬೆಲೆ ಭಕ್ತಿ ಇರುವ ಹಿಂದೂ ಭಕ್ತರಿಗಷ್ಟೇ ಪ್ರವೇಶ. ಈ ಮಂದಿರವು ಕೃಷ್ಣನ ಬಗೆಗಿನ ಸಾಕಷ್ಟು ವಿಷ್ಯವನ್ನು ತಿಳಿಸುತ್ತದೆ. ಇಲ್ಲಿ ಆಯೋಜಿಸಲಾಗುವ ಶಾಸ್ತ್ರೀಯ ನೃತ್ಯ, ಕೃಷ್ಣಾನಾಟ್ಯ ಇಲ್ಲಿ ಬಹಳ ಪ್ರಸಿದ್ಧವಾಗಿದೆ.

ಪಾತಾಳ ಶಿಲೆ

ಪಾತಾಳ ಶಿಲೆ

PC: Vinayaraj

ಹಿಂದೂ ಪುರಾಣದ ಪ್ರಕಾರ ಪಾತಾಳ ಶಿಲೆಯು ಪವಿತ್ರವಾದುದು. ಆದರೆ ಆ ಶಿಲೆಯಿಂದ ತಯಾರಿಸಲಾದ ಒಂದೇ ಒಂದು ವಿಗ್ರಹ ಈ ಭೂಮಂಡಲದಲ್ಲಿದೆ. ಅದನ್ನು ಪೂಜಿಸಿದರೆ ಮದುವೆಗೆ ಸಂಬಂಧಿಸಿದ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನುವುವು ಭಕ್ತರ ನಂಬಿಕೆ, ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಯಾವ ದೇವಸ್ಥಾನದಲ್ಲೂ ನಡೆಯದಷ್ಟು ವಿವಾಹಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ.

ಎಲಿಫೇಂಟ್ ಪಾರ್ಕ್

ಎಲಿಫೇಂಟ್ ಪಾರ್ಕ್

ಗುರುವಾಯೂರು ದೇವಸ್ಥಾನದ ದರ್ಶನದ ನಂತರ ನೀವು ಸುತ್ತಲಿನ ಕೆಲವು ಪ್ರದೇಶಗಳನ್ನು ಭೇಟಿ ನೀಡಬಹುದು. ಗುರುವಾಯೂರಿನಿಂದ ಸುಮಾರು 4 ಕಿ,ಮೀ ದೂರದಲ್ಲಿ ಆನೆಕೊಟ್ಟ ಎನ್ನುವ ಸ್ಥಳವಿದೆ. ಈ ಸ್ಥಳವು ಆನೆಯ ಪಾರ್ಕ್ ಆಗಿದೆ. ಇಲ್ಲಿ ಸುಮಾರು 10 ಎಕರೆ ಸ್ಥಳವನ್ನು ಆನೆಗಳಿಗಾಗಿಯೇ ಸೀಮಿತವಾಗಿಟ್ಟಿದ್ದಾರೆ. ಇಲ್ಲಿ ಸುಮಾರು 50೦ ರಿಂದ 80 ಆನೆಗಳಿವೆ. ಗುರುವಾಯೂರು ದೇವಸ್ಥಾನಕ್ಕೆ ಸಂಬಂಧಿಸಿದ ಆನೆಗಳೂ ಇರುವುದು ಇಲ್ಲೆ. ಈ ಸ್ಥಳವು ಮರ ಗಿಡಗಳಿಂದ ಕೂಡಿದ್ದು ಆನೆಗಳಿಗೆ ಆರಾಮಾದಾಯಕವಾಗಿದೆ. ಇಲ್ಲಿ ಪ್ರೇಕ್ಷಕರು ಆನೆಯನ್ನು ನೋಡಲು ಬರುತ್ತಾರೆ.

ಬ್ಯಾಕ್ ವಾಟರ್

ಬ್ಯಾಕ್ ವಾಟರ್

PC: Hans A. Rosbach

ಗುರುವಾಯೂರು ದೇವಸ್ಥಾನವನ್ನು ಭೇಟಿ ನೀಡಿದ ನಂತರ ನೀವು ಬ್ಯಾಕ್‌ವಾಟರ್‌ ಆನಂದವನ್ನು ಸವಿಯಬಹುದು. ಬ್ಯಾಕ್‌ವಾಟರ್ ಇಲ್ಲಿನ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಇಲ್ಲಿ ನೀರಿನಲ್ಲಿ ಸುತ್ತಾಡಲು ವಿವಿಧ ಬೋಟ್‌ನ ವ್ಯವಸ್ಥೆಯೂ ಇದೆ. ಹಾಗೇಯೇ ಹೌಸ್‌ಬೋಟ್ ವ್ಯವಸ್ಥೆ ಕೂಡಾ ಇಲ್ಲಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC- RanjithSiji

ಗುರುವಾಯೂರಿಗೆ ಹೋಗಬೇಕಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೊಚ್ಚಿ ವಿಮಾನ ನಿಲ್ದಾಣ. ರೈಲಿನಲ್ಲಿ ಹೋಗೋದಾದರೆ ಗುರುವಾಯೂರ್ ರೈಲ್ವೆ ಸ್ಟೇಶನ್‌ ಮೂಲಕ ಹೋಗಬಹುದು. ಇನ್ನೂ ಬಸ್ ಮೂಲಕ ಬರುವುದಾದರೆ ದೇಶದ ದೊಡ್ಡ ದೊಡ್ಡ ನಗರಗಳಿಂದ ಇಲ್ಲಿಗೆ ಬಸ್ ಇದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+