Search
  • Follow NativePlanet
Share
» »ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !

ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !

ನೌಕುಚಿಯತಾಲ್ ಎನ್ನುವುದು ಉತ್ತರಾ ಖಂಡ ರಾಜ್ಯದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ತನ್ನಲ್ಲಿರುವ ಕೆರೆಗೆ ಖ್ಯಾತಿ ಪಡೆದಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಪ್ರವಾಸಿ ತಾಣವು ಸಮುದ್ರ ಮಟ್ಟದಿಂದ 1219 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.

ಪಕ್ಷಿ ವೀಕ್ಷಣೆ

ಪಕ್ಷಿ ವೀಕ್ಷಣೆ

PC: Pratima m

ಈ ಕೆರೆಯ ಸೌಂದರ್ಯ ಮತ್ತು ಇಲ್ಲಿ ಕೈಗೊಳ್ಳಲಾಗುವ ಸಾಹಸ ಚಟುವಟಿಕೆಗಳು ನೌಕುಚಿಯತಾಲ್‍ನ್ನು ಒಂದು ಸೂಕ್ತ ರಜಾ ದಿನಗಳನ್ನು ಕಳೆಯುವ ತಾಣವನ್ನಾಗಿ ಮಾಡಿವೆ. ಈ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪಕ್ಷಿಗಳು ಮತ್ತು ಚಿಟ್ಟೆಗಳು ಕಂಡು ಬರುತ್ತವೆ. ಹಾಗಾಗಿ ಪಕ್ಷಿ ವೀಕ್ಷಣೆಯು ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಚಟುವಟಿಕೆಯಾಗಿದೆ.

ಸಾಹಸ ಚಟುವಟಿಕೆಗಳು

ಸಾಹಸ ಚಟುವಟಿಕೆಗಳು

PC: Dr Satendra

ಪ್ರವಾಸಿಗರು ಇಲ್ಲಿ ದೋಣಿ ಯಾನ, ಕೆರೆಯ ಅಕ್ಕ ಪಕ್ಕ ಪ್ಯಾರಾಗ್ಲೈಡಿಂಗ್ ಮಾಡಬಹುದು. ಈಜು ಮತ್ತು ಮೀನು ಹಿಡಿಯುವುದು ಇತ್ಯಾದಿ ಚಟುವಟಿಕೆಗಳನ್ನು ಈ ಹಳ್ಳಿಯಲ್ಲಿ ಕೈಗೊಳ್ಳಬಹುದು. ಇದೆಲ್ಲದರ ಹೊರತಾಗಿ ಈ ಹಳ್ಳಿಯಲ್ಲಿ ಮೌಂಟೇನ್ ಬೈಕಿಂಗ್ ಚಟುವಟಿಕೆಯನ್ನೂ ಕೈಗೊಳ್ಳಬಹುದು. ಈ ಚಟುವಟಿಕೆಯು ನೌಕುಚಿಯತಾಲ್‍ನ ಜನ ಓಡಾಡದ ಸ್ಥಳಗಳ ಪರಿಚಯವನ್ನು ಪ್ರವಾಸಿಗರಿಗೆ ನೀಡುತ್ತದೆ. ಈ ಕಾರಣದಿಂದಾಗಿಯು ಸಹ ಈ ಹಳ್ಳಿಯು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಒಂಬತ್ತು ಮೂಲೆಗಳಿರುವ ಕೆರೆ

ಒಂಬತ್ತು ಮೂಲೆಗಳಿರುವ ಕೆರೆ

PC: Shadabferoz

ನೌಕುಚಿಯತಾಲ್ ಕೆರೆಯನ್ನು "ಒಂಬತ್ತು ಮೂಲೆಗಳಿರುವ ಕೆರೆ" ಎಂದು ಸಹ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ, ಈ ಕೆರೆಯ ಒಂಬತ್ತು ಮೂಲೆಗಳನ್ನು ಯಾರು ನೋಡುತ್ತಾರೋ, ಅವರು "ನಿರ್ವಾಣ"ವನ್ನು ಪಡೆಯುತ್ತಾರಂತೆ. ನಿರ್ವಾಣ ಎಂದರೆ ಮೋಕ್ಷ ಎಂಬರ್ಥವಾಗುತ್ತದೆ. ಭೂಮಿಯ ಅಂತರಾಳದಲ್ಲಿ ಹರಿಯುವ ಝರಿಯು ಈ ಕೆರೆಯಲ್ಲಿನ ನೀರಿನ ಮಟ್ಟವನ್ನು ವರ್ಷಪೂರ್ತಿ ಒಂದೆ ಮಟ್ಟದಲ್ಲಿ ಕಾಪಾಡಿಕೊಂಡು ಬರುತ್ತದೆ.

ಭೀಮ್‌ ತಾಲ್

ಭೀಮ್‌ ತಾಲ್

PC: Shadabferoz

ಇಲ್ಲಿನ ಮತ್ತೊಂದು ಪ್ರಸಿದ್ಧ ಪ್ರದೇಶವಾದ ಭೀಮ್‌ ತಾಲ್ ಇಲ್ಲಿಂದ 4 ಕಿ.ಮೀ ದೂರದಲ್ಲಿದ್ದು, ಕೆರೆಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಸಾತ್ ತಾಲ್ ಎಂಬುದು ಸಹ ಇಲ್ಲಿನ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಇದು ಅಂತರ್ ಸಂಪರ್ಕವನ್ನು ಹೊಂದಿರುವ ಏಳು ಕೆರೆಗಳನ್ನು ಹೊಂದಿರುವ ಸ್ಥಳವಾಗಿದೆ. ಇದು ನೌಕುಚಿಯತಾಲ್‍ನಿಂದ 6 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಮಳೆಗಾಲದ ನಂತರದ ದಿನಗಳಲ್ಲಿ ಈ ಹಳ್ಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಡುತ್ತಿರುತ್ತಾರೆ. ಈ ಅವಧಿಯು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಅವಧಿ ಎಂದು ಪರಿಗಣಿಸಲಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Shadabferoz

ಈ ಕೆರೆಯ ಹಳ್ಳಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಪಂತನಗರ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಕಠ್‍ಗೋಡಂ ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಇದರ ಜೊತೆಗೆ ನೌಕುಚಿಯತಾಲ್‍ಗೆ ನೈನಿತಾಲ್‍ನಿಂದ ಹಲವಾರು ಬಸ್ಸುಗಳು ಬಂದು ಹೋಗುತ್ತಿರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more