Search
  • Follow NativePlanet
Share
» » ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಇದೊಂದು ವಿಶೇಷ ದೇವಾಲಯವಾಗಿದೆ. ನೀವು ಬೇಕಾದಷ್ಟು ಗುಹಾದೇವಾಲಯವನ್ನು ನೋಡಿರುವಿರಿ. ಆದರೆ ಗುಹೆಯೊಳಗೆ ನೀರಿನ ಕಣಿವೆಯಲ್ಲಿ ನಡೆದುಕೊಂಡು ಹೋಗುವಂತಹ ಕ್ಷೇತ್ರಕ್ಕೆ ಯಾವತ್ತಾದರೂ ಹೋಗಿದ್ದೀರಾ? ಈ ಬಗ್ಗೆ ಗೊತ್ತಾ? ನಾವಿಂದು ಅಂತಹದ್ದೇ ಒಂದು ದೇವಾಲಯವದ ಬಗ್ಗೆ ತಿಳಿಸಲಿದ್ದೇವೆ. ಇಂತಹದ್ದೊಂದು ದೇವಾಲಯವನ್ನು ನಿವು ಬೇರೆಲ್ಲೂ ನೋಡಿರಲಿಕ್ಕಿಲ್ಲ ಅನ್ನಿಸುತ್ತದೆ.

ನರಸಿಂಹಸ್ವಾಮಿ ದೇವಾಲಯ

ನರಸಿಂಹಸ್ವಾಮಿ ದೇವಾಲಯ

PC: Jaideep Rao

ಬೀದರ್‌ನಲ್ಲಿರುವ ನರಸಿಂಹಸ್ವಾಮಿ ದೇವಾಲಯವು ನಿಜಕ್ಕೂ ಒಂದು ವಿಶೇಷ ಹಾಗೂ ಕುತೂಹಲಕಾರಿ ದೇವಸ್ಥಾನವಾಗಿದೆ. ಇಲ್ಲಿ ನೀರಿನೊಳಗೆ ಒಂದು ಕಿ.ಮೀ ದೂರ ಸಾಗಬೇಕು. ಆ ನೀರು ಎದೆ ಮಟ್ಟಕ್ಕೆ ಇರುತ್ತದೆ. ಪುಟ್ಟ ಮಕ್ಕಳಿಗಂತೂ ಇಲ್ಲಿ ನಡೆಯುವುದು ಅಸಾಧ್ಯ. ಹಾಗಾಗಿ ಮಕ್ಕಳನ್ನು ಹೆಗಲಮೇಲೆ ಹೊತ್ತು ಕೊಂಡು ಹೋಗಬೇಕು.

ಗುಹಾ ದೇವಾಲಯ

ಗುಹಾ ದೇವಾಲಯ

ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಇದೊಂದು ಪವಿತ್ರ ಧಾರ್ಮಿಕ ತಾಣದ ಜೊತೆಗೆ ರೋಮಾಂಚಕತೆಯನ್ನುಂಟು ಮಾಡುವ ಸ್ಥಳವೂ ಆಗಿದೆ. ಗುಹಾ ದೇವಾಲಯವಾಗಿದ್ದು ಗುಹೆಯೊಳಗೆ ನೀರಿನಲ್ಲಿ ನಡೆದುಕೊಂಡು ಹೋಗಬೇಕು.

ಉಗ್ರ ನರಸಿಂಹ

ಉಗ್ರ ನರಸಿಂಹ

ಈ ದೇವಾಲಯದಲ್ಲಿರುವುದು ಉಗ್ರನರಸಿಂಹ. ಇದನ್ನು ಝರಣೀ ನರಸಿಂಹ ಕ್ಷೇತ್ರ ಎಂದೇ ಕರೆಯುತ್ತಾರೆ. ನರಸಿಂಹ ಜಯಂತಿಯಂದು 9 ದಿನಗಳ ಕಾಲ ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತದೆ.

ಝರಣೀ ನರಸಿಂಹ ಕ್ಷೇತ್ರ

ಝರಣೀ ನರಸಿಂಹ ಕ್ಷೇತ್ರ

ಶಿವ ಹಾಗೂ ನರಸಿಂಹ ಇಬ್ಬರೂ ಇಲ್ಲಿದ್ದಾರೆ. ಈ ಗುಹೆಯಲ್ಲಿ ಹರಿಯುವ ನೀರು ಎಲ್ಲಿಂದ ಬರುತ್ತೆ ಎನ್ನುವುದು ಯಾರಿಗೂ ಗೊತ್ತಿಲ್ಲವಂತೆ. ಒಟ್ಟಾರೆ ಎದೆ ಮಟ್ಟದ ನೀರಿನಲ್ಲಿ ನಡೆಯುವುದು ಕುತೂಹಲಕಾರಿಯೂ, ಸಾಹಸಮಯವೂ ಆಗಿದೆ. ಭಕ್ತರಿಗಂತೂ ಈ ನೀರಿನಲ್ಲಿ ನಡೆಯುವುದು ಮಜಾ ನೀಡುತ್ತದೆ.

 ಜರಾಸುರ ಸಂಹಾರ

ಜರಾಸುರ ಸಂಹಾರ

ನರಸಿಂಹನು ಶಿವನ ಭಕ್ತನಾದ ಜರಾಸುರನನ್ನು ವಧಿಸುವಾಗ ಆತನ ಕೊನೆಯ ಇಚ್ಛೆಯಂತೆ ಈ ಗುಹೆಯಲ್ಲಿ ನೆಲೆಸಿದನು. ಜರಾಸುರನು ನೀರಾಗಿ ನರಸಿಂಹನ ಪಾದದ ಬಳಿ ಹರಿಯಲಾರಂಭಿಸಿದನು. ಹಾಗಾಗಿ ಈ ಕ್ಷೇತ್ರವನ್ನು ಝರಣೀ ನರಸಿಂಹ ಕ್ಷೇತ್ರ ಎನ್ನಲಾಗುತ್ತದೆ. ಗುಹೆಯ ಕೊನೆಯಲ್ಲಿ ಒಂದು ಕಲ್ಲಿನ ಗೋಡೆಯ ಮೇಲೆ ನರಸಿಂಹದ ಕೆತ್ತಿದ ಚಿತ್ರವಿದೆ.

ಚರ್ಮವ್ಯಾದಿ ಗುಣವಾಗುತ್ತದೆ

ಚರ್ಮವ್ಯಾದಿ ಗುಣವಾಗುತ್ತದೆ

ಅಂದಿನಿಂದ ಇಲ್ಲಿ ನೀರು ಹರಿಯುತ್ತಲೇ ಇದೆ. ಇಲ್ಲಿನ ನೀರು ಯಾವತ್ತೂ ಭತ್ತಿಲ್ಲ. ಈ ನೀರಿನಲ್ಲಿ ಸಲ್ಫರ್ ಇದೆ. ಇದು ಚರ್ಮದ ಸಮಸ್ಯೆಗಳನ್ನು ಹೊಂದಿರುವ ಜನರನ್ನು ಗುಣಪಡಿಸುವುದು ಎಂದು ಹೇಳಲಾಗುತ್ತದೆ.. ಸಂತಾನ ಪ್ರಾಪ್ತಿಗಾಗಿ ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+