Search
  • Follow NativePlanet
Share
» »ನಂದಿ ಬೆಟ್ಟಗಳು - ಇತಿಹಾಸ ಮತ್ತು ಪ್ರಕೃತಿಯ ಸಮ್ಮಿಲನ.

ನಂದಿ ಬೆಟ್ಟಗಳು - ಇತಿಹಾಸ ಮತ್ತು ಪ್ರಕೃತಿಯ ಸಮ್ಮಿಲನ.

ನಂದಿ ಬೆಟ್ಟಗಳು ಬೆಂಗಳೂರಿನಿಂದ ಕೇವಲ 60 ಕಿ.ಮೀ ಅಂತರದಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು 4851 ಅಡಿ ಎತ್ತರದಲ್ಲಿದೆ. ಈ ಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವುದರಿಂದ ಸುಲಭವಾಗಿ ಪ್ರಯಾಣ ಮಾಡಬಹುದಾಗಿದ್ದು, ಹೆಸರಾಂತ ಪ್ರವಾಸಿ ಆಕರ್ಷಣೆಯಾಗಿದೆ.

nandihills-scenicviewpoints-1

ಇತಿಹಾಸದೊಂದಿಗಿನ ಬಲವಾದ ಸಂಪರ್ಕವನ್ನು ಹೊಂದಿದೆ - ನಂದಿ ಬೆಟ್ಟದಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ನಂದಿ ಬೆಟ್ಟಗಳು ಆಸಕ್ತಿದಾಯಕವಾದ ಇತಿಹಾಸವನ್ನು ಹೊಂದಿದೆ. ಇದರ ಹಿಂದಿನ ರಹಸ್ಯವು ಅದರ ಮೂಲವನ್ನು ಸುತ್ತುವರೆದಿದೆ. ಬೆಟ್ಟಗಳು ಮಲಗಿರುವ ನಂದಿಯ ಆಕಾರವನ್ನು ಹೊಂದಿರುವುದರಿಂದ ಈ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ. ಚೋಳರ ಕಾಲದಲ್ಲಿ ಆನಂದ ಗಿರಿ ಎಂಬ ಹೆಸರಿನಲ್ಲಿ ಬೆಟ್ಟಗಳು ಅಸ್ತಿತ್ವದಲ್ಲಿದ್ದವು ಎಂದೂ ಹೇಳಲಾಗುತ್ತದೆ. ಚೋಳರ ಕಾಲದ ವಿಶಿಷ್ಟವಾದ ದೇವಾಲಯದ ವಾಸ್ತುಶಿಲ್ಪವು ಈ ಬೆಟ್ಟಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಬೆಟ್ಟಗಳು ಭಾರತದ ಆರಂಭಿಕ ಸ್ವಾತಂತ್ರ್ಯ ಹೋರಾಟದ ಭಾಗವಾಗಿದೆ, ಏಕೆಂದರೆ ಟಿಪ್ಪು ಸುಲ್ತಾನ್ ಇಲ್ಲಿ ನಂದಿದುರ್ಗ ಎಂಬ ಕೋಟೆಯನ್ನು ನಿರ್ಮಿಸಿದನು, ಇದನ್ನು ಅಜೇಯ ಕೋಟೆ ಎಂದು ಪರಿಗಣಿಸಲಾಗಿದೆ. ನಂತರ ಇದು 1791 ರಲ್ಲಿ ಬ್ರಿಟಿಷರ ವಶವಾಯಿತು.

ನಂದಿ ಬೆಟ್ಟಕ್ಕೆ ಭೇಟಿ ನೀಡುವುದು ಒಂದು ಅವಿಸ್ಮರಣೀಯವಾದ ಅನುಭವವಾಗಿದೆ. ಇಲ್ಲಿರುವ ಟಿಪ್ಪು ಡ್ರಾಪ್ ನಲ್ಲಿ ಚಕ್ರವರ್ತಿ ಯು ಶಿಕ್ಷೆಗೊಳಗಾದ ಕೈದಿಗಳನ್ನು ಮರಣದಂಡನೆಗೆ ಒಳಪಡಿಸಿದನು ಎನ್ನಲಾಗುತ್ತದೆ ಅಲ್ಲದೆ ಇದು ಅವನ ರಹಸ್ಯ ತಪ್ಪಿಸಿಕೊಳ್ಳುವ ಮಾರ್ಗ ಮತ್ತು ಈ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅವನ ಬೇಸಿಗೆ ಅರಮನೆಯು ಗತ ಕಾಲದ ಇತಿಹಾಸದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ . ಗವಿ ವೀರಭದ್ರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ಸುಂದರ ದೇವಾಲಯಗಳನ್ನೂ ಇಲ್ಲಿ ಕಾಣಬಹುದಾಗಿದೆ. ಅಮೃತ ಸರೋವರ ನೀರಿನ ಟ್ಯಾಂಕ್ ಮತ್ತು ಉದ್ಯಾನಗಳು ಜನಪ್ರಿಯ ಪಿಕ್ನಿಕ್ ತಾಣಗಳಾಗಿವೆ. ಪ್ಯಾರಾಗ್ಲೈಡಿಂಗ್ ಮತ್ತು ಸೈಕ್ಲಿಂಗ್ ನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳ ಬಹುದಾದ ಇಲ್ಲಿಯ ಇತರ ಚಟುವಟಿಕೆಗಳು.

16-lepakshi-2

ನಂದಿ ಬೆಟ್ಟವನ್ನು ತಲುಪುವುದು ಹೇಗೆ?

ನಂದಿ ಬೆಟ್ಟಗಳನ್ನು ರಸ್ತೆಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು, ರೈಲು ಮಾರ್ಗಗಳು ಮತ್ತು ವಿಮಾನ ಮಾರ್ಗಗಳು ಈ ಸ್ಥಳಕ್ಕೆ ಸರಿಯಾದ ಸಂಪರ್ಕವನ್ನು ಹೊಂದಿಲ್ಲ.

ನಂದಿ ಬೆಟ್ಟಗಳಿಗೆ ಭೇಟಿ ನೀಡಲು ಉತ್ತಮ ಸಮಯ

ಮಾನ್ಸೂನ್‌ಗಳು ಹೆಚ್ಚು ಅನುಕೂಲಕರವಾಗಿಲ್ಲದಿದ್ದರೂ ನಂದಿ ಬೆಟ್ಟದ ಸೌಂದರ್ಯವನ್ನು ವರ್ಷದ ಯಾವುದೇ ಸಮಯದಲ್ಲಿ ಅನ್ವೇಷಿಸಬಹುದು.

FAQs
ನಂದಿ ಬೆಟ್ಟವನ್ನು ತಲುಪುವುದು ಹೇಗೆ?

ನಂದಿ ಬೆಟ್ಟಗಳನ್ನು ರಸ್ತೆಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು, ರೈಲು ಮಾರ್ಗಗಳು ಮತ್ತು ವಿಮಾನ ಮಾರ್ಗಗಳು ಈ ಸ್ಥಳಕ್ಕೆ ಸರಿಯಾದ ಸಂಪರ್ಕವನ್ನು ಹೊಂದಿಲ್ಲ.

NativePlanet Travel

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+