Search
  • Follow NativePlanet
Share
» »ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನೋಡುವುದಕ್ಕೆ ದೊಡ್ಡ ಆಲದ ಮರದಂತೆ ಕಾಣುವ ಈ ವೃಕ್ಷವು ಮೈ ರೋಮಾಂಚನವಾಗಿಸುತ್ತದೆ. ಅರಣ್ಯದಲ್ಲಿ ಅದರಲ್ಲೂ ಮಾನವರೇ ಇಲ್ಲದೇ ಇರುವ ಆ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧಗಳು, ಧ್ವನಿಗಳು ಇಲ್ಲದ ನಿಶ್ಯಬ್ಧವಾದ ಪ್ರದೇಶದಲ್ಲಿ ಈ ವೃಕ್ಷವಿದೆ. ಅನೇಕ ಮ

ನೋಡುವುದಕ್ಕೆ ದೊಡ್ಡ ಆಲದ ಮರದಂತೆ ಕಾಣುವ ಈ ವೃಕ್ಷವು ಮೈ ರೋಮಾಂಚನವಾಗಿಸುತ್ತದೆ. ಅರಣ್ಯದಲ್ಲಿ ಅದರಲ್ಲೂ ಮಾನವರೇ ಇಲ್ಲದೇ ಇರುವ ಆ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧಗಳು, ಧ್ವನಿಗಳು ಇಲ್ಲದ ನಿಶ್ಯಬ್ಧವಾದ ಪ್ರದೇಶದಲ್ಲಿ ಈ ವೃಕ್ಷವಿದೆ. ಅನೇಕ ಮಂದಿ ಜನರು ಈ ವೃಕ್ಷದ ಸಮೀಪದಲ್ಲಿ ಬರಲು ಹೆದರುತ್ತಿರುತ್ತಾರೆ. ಆ ವೃಕ್ಷದ ಸಮೀಪವಿರಲಿ, ಆ ಸ್ಥಳದ ಮಾರ್ಗದ ಮೂಲಕವೂ ಯಾರೂ ಕೂಡ ಹೋಗುವುದಿಲ್ಲ.

ಒಂದು ವೇಳೆ ಏನಾದರೂ ಆ ಸ್ಥಳದ ಸಮೀಪ ತೆರಳಿದರೆ, ಆ ವೃಕ್ಷವನ್ನು ಮುಟ್ಟಿಕೊಳ್ಳುವ ಸಾಹಸವನ್ನು ಮಾಡುತ್ತಾರೆ. ಅನೇಕ ಮಂದಿ ಈ ಮರ ನಿಜವಾದುದು ಅಲ್ಲವೆಂದು, ಕೃತಕವಾಗಿ ಪ್ರಾಣಿಗಳನ್ನು ಕೆತ್ತನೆ ಮಾಡಿರುವುದು ಎಂದು ಹೇಳುತ್ತಾರೆ. ಆದರೆ ಸ್ಥಳೀಯರು ಮಾತ್ರ ಈ ಮರವು ನೈಸರ್ಗಿಕವಾದುದು ಬೇಕಾದರೆ ಪರೀಕ್ಷೆ ಮಾಡಬಹುದು ಎಂದು ಸವಾಲನ್ನು ಎಸೆಯುತ್ತಾರೆ. ಇದು ನಿಜವೋ ಸುಳ್ಳೋ ತಿಳಿಯದು, ಆದರೆ ಇದರ ಬಗ್ಗೆ ಕೆಲವು ಖಾಸಗಿ ವಾಹಿನಿಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮರವು ತೆಲಂಗಾಣ ರಾಜ್ಯದ ನಲ್ಲಮಲ ಅರಣ್ಯ ಪ್ರದೇಶದಲ್ಲಿದೆ.

ನಾವು ಇದುವರೆವಿಗೂ ಮಿಸ್ಟರಿ ಪ್ರದೇಶಗಳ ಬಗ್ಗೆ, ಮಿಸ್ಟರಿ ದೇವಾಲಯಗಳ ಬಗ್ಗೆ ಕೇಳಿದ್ದೇವೆ. ಆದರೆ ಮಿಸ್ಟರಿ ಮರದ ಬಗ್ಗೆ ನಾವು ಎಂದಿಗೂ ಕೇಳಿಲ್ಲ, ಏಕೆಂದರೆ ಇದಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ದಾಖಲೆಗಳು ಇಲ್ಲದೇ ಇರುವ ಕಾರಣವೇ ಆಗಿದೆ. ಇಷ್ಟಕ್ಕು ಈ ಮರ ಎಲ್ಲಿದೆ? ಅಷ್ಟು ಭಯಗೊಳ್ಳುವ ರೀತಿಯಲ್ಲಿ ಆ ಮರವಿದೆಯೇ? ಮುಟ್ಟುವುದಕ್ಕೆ ಜನರು ಏಕೆ ಭಯಭೀತರಾಗುತ್ತಿದ್ದಾರೆ? ಇಂತಹ ಪ್ರಶ್ನೆಗಳಿಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಈ ಮಿಸ್ಟರಿ ಮರವು ತೆಲಂಗಾಣ ರಾಜ್ಯದಲ್ಲಿನ ನಲ್ಗೊಂಡ ಜಿಲ್ಲೆಯ ದಟ್ಟವಾದ ಅರಣ್ಯ ಪ್ರದೇಶದಲ್ಲಿದೆ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಇದು ಅರಣ್ಯ ಮಧ್ಯೆಯಲ್ಲಿರುವ ಹಾಗು ಯಾವುದೇ ಜನಸಂಚಾರವಿಲ್ಲದೇ ಇರುವ ಪ್ರದೇಶದಲ್ಲಿ ಈ ಮಿಸ್ಟರಿ ವೃಕ್ಷವಿದೆ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಈ ಮರದ ಮೇಲೆ ಹಲವಾರು ಕ್ರೂರ ಮೃಗಗಳ ದೃಶ್ಯಗಳನ್ನು ಕಾಣಬಹುದಾಗಿದೆ. ಆ ಮೃಗಗಳು ನಿಜವಾಗಲೂ ಇವೆ ಎಂಬ ಹಾಗೆಯೇ ಭಾಸವಾಗುತ್ತದೆ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಇಲ್ಲಿನ ಮಿಸ್ಟರಿ ವೃಕ್ಷದ ಮೇಲೆ ವಿವಿಧ ರೀತಿಯ ಅರಣ್ಯದ ಪ್ರಾಣಿಗಳು, ಪಕ್ಷಿಗಳು, ಸರ್ಪಗಳನ್ನು ಕಾಣಬಹುದು.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಮರದ ಒಂದು ಕೊಂಬೆಯ ಮೇಲೆ ಚೇಳು ಹೋಗುತ್ತಿರುವ ದೃಶ್ಯ..

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ವೃಕ್ಷದ ಒಂದು ಕೊಂಬೆಯನ್ನು ಅಂಟಿಕೊಂಡಿರುವ ಏಡಿ....

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ವೃಕ್ಷದ ಕೊಂಬೆಗಳ ಮಧ್ಯೆ ಅಡಗಿಕೊಂಡಿರುವ ಕೋತಿಯ ದೃಶ್ಯ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಈ ವೃಕ್ಷದ ಮೇಲೆ ಇರುವ ದೃಶ್ಯವು ಮೊಸಳೆಯೋ ಅಥವಾ ಖಡ್ಗ ಮೃಗವು ನೀವೇ ತಿಳಿದುಕೊಳ್ಳಿ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಮರದ ಕೊಂಬೆಯನ್ನು ಹಿಡಿದುಕೊಂಡು ನೇತಾಡುತ್ತಿರುವ ಗೂಬೆ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಇದು ಯಾವ ಜಂತು ಎಂಬುದು ನೀವೇ ಊಹಿಸಿರಿ.

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ವೃಕ್ಷದ ಮೇಲೆ ಪಕ್ಷಿಗಳು ತಮ್ಮ ಅವಾಸ ಸ್ಥಾನವನ್ನಾಗಿ ಮಾಡಿಕೊಂಡಿರುತ್ತದೆ. ಆದರೆ ಮೊಸಳೆಗಳು ಕೂಡ ನೇತಾಡುತ್ತವೆಯೇ?

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!

ಮರವನ್ನು ತನ್ನ ದೇಹದಿಂದ ಸುತ್ತಿಕೊಂಡಿರುವ ಅನಕೊಂಡ. ಮುಟ್ಟಿದರೆ ಎಲ್ಲಿ ತಿಂದು ಹಾಕುತ್ತದೆಯೋ ಎಂಬ ಭಯ ಅವರಿಸುವುದು ಸಹಜ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+