Search
  • Follow NativePlanet
Share
» »Butterfly Park: ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿಯೂ ಸುಂದರವಾದ ಚಿಟ್ಟೆ ಪಾರ್ಕ್‌ಗಳಿವೆ…ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಹೋಗಿ

Butterfly Park: ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿಯೂ ಸುಂದರವಾದ ಚಿಟ್ಟೆ ಪಾರ್ಕ್‌ಗಳಿವೆ…ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಹೋಗಿ

ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡಿದಾಕ್ಷಣ ಯಾರಿಗೆ ಪ್ರೀತಿಯಾಗುವುದಿಲ್ಲ ಹೇಳಿ...ಪ್ರತಿ ಸಾರಿ ಚಿಟ್ಟೆಗಳನ್ನು ನೋಡಿದಾಗ ನಮಗೆ ನಮ್ಮ ಬಾಲ್ಯ ನೆನಪಾಗುತ್ತದೆ. ಹಳ್ಳಿಗಳಲ್ಲಿ , ಆಟದ ಮೈದಾನಗಳಲ್ಲಿ, ಹೂ ತೋಟ, ಉದ್ಯಾನವನಗಳು..ಹೀಗೆ ಅನೇಕ ಕಡೆ ಕಾಣಸಿಗುವ ಕಲರ್‌ ಫುಲ್‌ ಚಿಟ್ಟೆಗಳನ್ನು ಹಿಡಿಯುವುದೆಂದರೆ ಮಕ್ಕಳಿಗೆ ಬಲು ಪ್ರೀತಿ. ಈ ಚಿಟ್ಟೆಗಳಲ್ಲೂ ಅನೇಕ ವಿಧಗಳಿವೆ. ಮತ್ತೆ ಕೆಲವು ಚಿಟ್ಟೆಗಳನ್ನು ಕೆಲವು ಪ್ರದೇಶಗಳಲ್ಲಿ ಮಾತ್ರ ನೋಡಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ನಗರಗಳು ಬೆಳವಣಿಯಾಗುತ್ತಿದ್ದಂತೆ ಸುತ್ತಮುತ್ತಲಿನ ಪ್ರಾಣಿಗಳು ಮತ್ತು ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಚಿಟ್ಟೆಗಳು ಈಗ ವಿರಳವಾಗಿ ಕಂಡುಬರುತ್ತವೆ. ಅಯ್ಯೋ ಬಣ್ಣ ಬಣ್ಣದ ಚಿಟ್ಟೆಗಳು ಎಲ್ಲಿ ಕಾಣೆಯಾದವು ಎಂದು ನಿಮಗೀಗ ಚಿಂತೆಯಾಗುತ್ತಿದ್ದರೆ ಯೋಚಿಸಬೇಡಿ...ಚಿಟ್ಟೆಗಳಿಗಾಗಿಯೇ ಕೆಲವು ಸ್ಥಳಗಳಿದ್ದು, ಅಲ್ಲಿ ನೀವು ಚಿಟ್ಟೆಗಳನ್ನು ನೋಡಬಹುದು. ಭಾರತದಲ್ಲಿ ಕೆಲವು ಸುಂದರವಾದ ಸ್ಥಳಗಳನ್ನು ಆಯ್ದು ಅಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಲಾಗಿದೆ. ರಜಾದಿನಗಳಲ್ಲಿ ಮಕ್ಕಳೊಂದಿಗೆ ಈ ಅದ್ಭುತ ಚಿಟ್ಟೆ ಪಾರ್ಕ್‌ಗಳಿಗೆ ಭೇಟಿ ನೀಡಬಹುದು.

ಬನ್ನೇರುಘಟ್ಟ ಬಟರ್‌ಫ್ಲೈ ಪಾರ್ಕ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಲ್ಲಿದೆ. ಈ ರಾಷ್ಟ್ರೀಯ ಉದ್ಯಾನವನವು ಸರಿಸುಮಾರು 260.51 ಚದರ ಕಿ.ಮೀ. ಇದೆ. ಇದು ಪ್ರಾಣಿಗಳ ನೈಸರ್ಗಿಕ ಆವಾಸಸ್ಥಾನವೂ ಹೌದು. ಸ್ನೇಕ್ ಪಾರ್ಕ್, ಚಿಟ್ಟೆ ಪಾರ್ಕ್ ಮತ್ತು ಮೃಗಾಲಯವನ್ನು ನಾವಿಲ್ಲಿ ಕಾಣಬಹುದು. ಇಲ್ಲಿಂದ ಪ್ರಾಣಿಗಳನ್ನು ದತ್ತು ಕೂಡ ಪಡೆಯಬಹುದು. ಇದು ಭಾರತದ ಮೊದಲ ಚಿಟ್ಟೆ ಪಾರ್ಕ್ ಆಗಿದ್ದು, ಚಿಟ್ಟೆ ಪಾರ್ಕ್ ಸುಮಾರು 7.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಸುಮಾರು 48 ಜಾತಿಯ ಚಿಟ್ಟೆಗಳನ್ನು ಕಾಣಬಹುದು. ಈ ರಾಷ್ಟ್ರೀಯ ಉದ್ಯಾನವನ್ನು ಮಂಗಳವಾರ ಕ್ಲೋಸ್‌ ಮಾಡಲಾಗುತ್ತದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರವು (ZAK) ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (DBT) ಜೊತೆಗೆ ವಿಶೇಷ ಮಾಸ್ಟರ್ ಪ್ಲಾನ್ ಅಡಿಯಲ್ಲಿ 2003 ರಲ್ಲಿ ಜಂಟಿಯಾಗಿ ಈ ಬಟರ್‌ಫ್ಲೈ ಪಾರ್ಕ್ ಯೋಜನೆಯನ್ನು ಪ್ರಾರಂಭಿಸಿತು. 2003 ರಲ್ಲಿ ಪ್ರಾರಂಭವಾದ ನಿರ್ಮಾಣ ಕಾರ್ಯವು 2007 ರಲ್ಲಿ ಪೂರ್ಣಗೊಂಡಿತು. ಆ ನಂತರ ಸಾರ್ವಜನಿಕರಿಗೆ ಭೇಟಿ ನೀಡಲು ತೆರೆಯಲಾಯಿತು. ಇದು ಇಡೀ ದೇಶದಲ್ಲಿಯೇ ವಿಶಿಷ್ಟವಾದ ಯೋಜನೆಯಾಗಿದೆ ಮತ್ತು ರಾಷ್ಟ್ರದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಶಿಮ್ಲಾದ ಬಟರ್‌ಫ್ಲೈ ಪಾರ್ಕ್

ಬೆಂಗಳೂರು ನಂತರ, ಶಿಮ್ಲಾದ ಚಿಟ್ಟೆ ಉದ್ಯಾನವನವು 2008 ರಲ್ಲಿ ಭಾರತದಲ್ಲಿ ತೆರೆಯಲಾದ ಎರಡನೇ ಚಿಟ್ಟೆ ಉದ್ಯಾನವಾಗಿದೆ. ಈ ಚಿಟ್ಟೆ ಉದ್ಯಾನದಲ್ಲಿ ಸುಮಾರು 300 ವಿವಿಧ ಜಾತಿಯ ಚಿಟ್ಟೆಗಳು ವಾಸಿಸುತ್ತವೆ. ಉದ್ಯಾನವನವು 4.2 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ಈ ಉದ್ಯಾನವನವನ್ನು 2008 ರಲ್ಲಿ ನಿರ್ಮಿಸಲಾಯಿತು. ಇದನ್ನು ಪರ್ವತ ಪ್ರದೇಶದಲ್ಲಿ ನಿರ್ಮಿಸಲಾಗಿದೆ, ಇದರಿಂದಾಗಿ ಈ ಉದ್ಯಾನವನವು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಇದರ ಸೊಬಗನ್ನು ನೋಡಲು ದೂರದೂರುಗಳಿಂದ ಜನರು ಇಲ್ಲಿಗೆ ಬರುತ್ತಾರೆ.

ಥಾಣೆಯಲ್ಲಿದೆ ಬಟರ್‌ಫ್ಲೈ ಪಾರ್ಕ್

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಚಿಟ್ಟೆ ಪಾರ್ಕ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಓವ್ಲೇಕರ್ ವಾಡಿ ಚಿಟ್ಟೆ ಉದ್ಯಾನ ಎಂದೂ ಕರೆಯಲ್ಪಡುವ ಇದು ಮಾನವ ನಿರ್ಮಿತ ಚಿಟ್ಟೆ ಉದ್ಯಾನವಾಗಿದೆ. ಇಲ್ಲಿ ನೀವು ವಿವಿಧ ಜಾತಿಯ ಚಿಟ್ಟೆಗಳನ್ನು ನೋಡಬಹುದು. ಈ ಸ್ಥಳವು ಮಕ್ಕಳಿಗೂ ಒಳ್ಳೆಯದು. ಬಟರ್‌ಫ್ಲೈ ಪಾರ್ಕ್ ಶೈಕ್ಷಣಿಕ ಮತ್ತು ಮೋಜಿನ ತಾಣವಾಗಿದೆ. ಥಾಣೆಯ ಬಟರ್‌ಫ್ಲೈ ಪಾರ್ಕ್‌ನಲ್ಲಿ 132 ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳು ಕಂಡುಬರುತ್ತವೆ. ಈ ಸ್ಥಳಕ್ಕೆ ಮಕ್ಕಳನ್ನು ವಾಕ್ ಮಾಡಲು ಕರೆದೊಯ್ಯಬಹುದು. ಚಿಟ್ಟೆಗಳಿಂದ ತುಂಬಿದ ಸೊಂಪಾದ ಉದ್ಯಾನದಲ್ಲಿ ವಾಕಿಂಗ್‌ ಮಾಡುತ್ತಾ ಪ್ರಕೃತಿಯನ್ನು ಅನ್ವೇಷಿಸಬಹುದು. ಮಾಹಿತಿ ಫಲಕಗಳನ್ನು ಓದುವ ಮೂಲಕ ವಿವಿಧ ರೀತಿಯ ಚಿಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶಗಳಿವೆ. ನೀವು ಅದರ ಚಿತ್ರಗಳನ್ನು ಸಹ ತೆಗೆದುಕೊಳ್ಳಬಹುದು! ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊರಾಂಗಣದಲ್ಲಿ ಸಮಯ ಕಳೆಯಲು ಇದು ಉತ್ತಮ ಸ್ಥಳವಾಗಿದೆ.

ಚಂಡೀಗಢ ಬೊಟಾನಿಕಲ್ ಗಾರ್ಡನ್‌ನ ಬಟರ್‌ಫ್ಲೈ ಪಾರ್ಕ್

ಚಂಡೀಗಢದ ಬಟರ್‌ಫ್ಲೈ ಪಾರ್ಕ್ ಚಂಡೀಗಢದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜ್‌ನ ಮುಖ್ಯ ದ್ವಾರದ ಮುಂದೆ ಚಂಡೀಗಢದ ಸೆಕ್ಟರ್ 26 ರಲ್ಲಿದೆ. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಈ ಉದ್ಯಾನವನವು ಸುಮಾರು 7 ಎಕರೆ ಪ್ರದೇಶದಲ್ಲಿದೆ. ಬಣ್ಣಬಣ್ಣದ ಚಿಟ್ಟೆಗಳನ್ನು ನೋಡಲು ಜನರು ಇಲ್ಲಿಗೆ ಬರುತ್ತಾರೆ. ಬಟರ್‌ಫ್ಲೈ ಪಾರ್ಕ್‌ನಲ್ಲಿ ಲಂಟಾನಾ, ಡೇಲಿಯಾ, ಮಾರಿಗೋಲ್ಡ್, ಗಜಾನಿಯನ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳಿವೆ. ಉದ್ಯಾನದಲ್ಲಿ ಕಾಮನ್ ಗ್ರಾಸ್ ಯೆಲ್ಲೋ, ಅಪೆಫ್ಲೈ, ಬ್ಲೂ ಮಾರ್ಮನ್, ಚಾಕೊಲೇಟ್ ಪ್ಯಾನ್ಸಿ ಮತ್ತು ಕಮಾಂಡರ್, ಕಾಮನ್ ಬ್ಲೂ ಬಾಟಲ್ ಮತ್ತು ಆಂಗಲ್ಡ್ ಕ್ಯಾಸ್ಟರ್ ಇತ್ಯಾದಿ ಚಿಟ್ಟೆಗಳ ಜಾತಿಗಳನ್ನು ನೋಡಬಹುದಾಗಿದೆ. ಸುಂದರವಾದ ಮತ್ತು ವರ್ಣರಂಜಿತ ಚಿಟ್ಟೆಗಳನ್ನು ನೋಡಲು ಮಾರ್ಚ್ ನಿಂದ ಅಕ್ಟೋಬರ್ ತಿಂಗಳು ಉತ್ತಮವಾಗಿದೆ. ಏಕೆಂದರೆ ಚಳಿಗಾಲದಲ್ಲಿ ಕೆಲವು ಜಾತಿಯ ಚಿಟ್ಟೆಗಳು ಹಾರಿ ಹೋಗುತ್ತವೆ. ಇಲ್ಲಿ ಸುಮಾರು 35 ಜಾತಿಯ ಚಿಟ್ಟೆಗಳಿವೆ. ನೀವು ಚಿಟ್ಟೆಗಳನ್ನು ಇಷ್ಟಪಡುತ್ತಿದ್ದರೆ ಖಂಡಿತವಾಗಿಯೂ ಒಮ್ಮೆ ಇಲ್ಲಿಗೆ ಬರಲು ಯೋಜಿಸಿ.

ಅಸೋಲಾ ಭಾಟಿ ವನ್ಯಜೀವಿ ಅಭಯಾರಣ್ಯದ ಚಿಟ್ಟೆ ಪಾರ್ಕ್

ದೆಹಲಿಯಲ್ಲಿರುವ ಈ ಚಿಟ್ಟೆ ಉದ್ಯಾನವನವು ಅಸೋಲಾ ಭಟ್ಟಿ ವನ್ಯಜೀವಿ ಮೀಸಲು ಪ್ರದೇಶದಲ್ಲಿದೆ, ಇದನ್ನು ಸಂರಕ್ಷಣಾ ಶಿಕ್ಷಣ ಕೇಂದ್ರ (CEC) ನಿರ್ವಹಿಸುತ್ತದೆ. ಇದು ತುಘಲಕಾಬಾದ್ ಕೋಟೆಯ ಪರಿಧಿಯ ಸಮೀಪದಲ್ಲಿದೆ. ಸುಮಾರು 250 ಮರ ಜಾತಿಗಳು, 200 ಪಕ್ಷಿ ಪ್ರಭೇದಗಳು, 10 ಪ್ರಾಣಿ ಪ್ರಭೇದಗಳು, 10 ಸರೀಸೃಪ ಪ್ರಭೇದಗಳು ಮತ್ತು 8 ಉಭಯಚರ ಜಾತಿಗಳ ಜೊತೆಗೆ, ಈ ಉದ್ಯಾನವನವು 90 ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳಿಗೆ ನೆಲೆಯಾಗಿದೆ. ದೆಹಲಿಯ ಜನನಿಬಿಡ ನಗರದಲ್ಲಿ ನೀವು ಚಿಟ್ಟೆಗಳನ್ನು ನೋಡಲು ಬಯಸಿದರೆ, ಅಸೋಲಾ ಭಾಟಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿ. ಇಲ್ಲಿ ನೀವು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೋಗಬಹುದು ಮತ್ತು ಚಿಟ್ಟೆಗಳ ನಡುವೆ ನಿಮ್ಮ ರಜಾದಿನಗಳನ್ನು ಆನಂದಿಸಬಹುದು. ಈ ಉದ್ಯಾನವನದಲ್ಲಿ ಅನೇಕ ಜಾತಿಯ ಚಿಟ್ಟೆಗಳನ್ನು ಕಾಣಬಹುದು.

More News

Read more about: butterfly parks bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+