Search
  • Follow NativePlanet
Share
» »ದೇಹದ ಆಯಾಸವನ್ನೆಲ್ಲಾ ದೂರ ಮಾಡೋ ಮಸಾಜ್ ತಾಣಗಳು

ದೇಹದ ಆಯಾಸವನ್ನೆಲ್ಲಾ ದೂರ ಮಾಡೋ ಮಸಾಜ್ ತಾಣಗಳು

ಪ್ರಸ್ತುತ ಜೀವನ ಶೈಲಿ, ಕೆಲಸದ ಒತ್ತಡದಿಂದಾಗಿ ದೇಹವು ದಣಿದು , ಮೈ ಕೈ ನೋವು ಕಾಣಿಸಿಕೊಳ್ಳುವುದು ಸಹಜ. ಆಗ ಶರೀರಕ್ಕೆ ರಿಲಾಕ್ಸ್‌ ಬೇಕು ಅನಿಸೋದು ಸಹಜ. ಆಗ ಯಾರಾದರೂ ದೇಹಕ್ಕೆ ಮಸಾಜ್ ಮಾಡಿದ್ರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಂತ ಅನಿಸೋದು ಸಾಮಾನ್ಯ.

ಎಣ್ಣೆ ಮಸಾಜ್

ಎಣ್ಣೆ ಮಸಾಜ್

PC: kallerna

ದೇಹಕ್ಕೆ ತೈಲ ಮಸಾಜ್ ಮಾಡಿದ್ರೆ ರಕ್ತದ ಹರಿವು ಸರಿಯಾಗಿ ಆಗುತ್ತದೆ. ಮೈ ಗೆ ಆರಾಮ ಅನಿಸುತ್ತದೆ. ವಿಶ್ರಾಂತಿ ಸಿಕ್ಕಿದಂತಾಗುತ್ತದೆ. ನೀವು ಗೋವಾದಲ್ಲೆಲ್ಲಾ ಬೀಚ್‌ ಬದಿಯಲ್ಲಿ ಮಸಾಜ್ ಪಾರ್ಲರ್‌ಗಳಿವೆ ಅನ್ನೋದನ್ನು ಕೇಳಿರುವಿರಿ. ಇಂದು ನಾವು ನಿಮಗೆ ನಮ್ಮ ಪಕ್ಕದ ರಾಜ್ಯವಾದ ಕೇರಳದಲ್ಲಿನ ಮಸಾಜ್ ಸೆಂಟರ್ ಬಗ್ಗೆ ತಿಳಿಸಲಿದ್ದೇವೆ.

ಆಯುರ್ವೇದಿಕ್ ಮಸಾಜ್

ಆಯುರ್ವೇದಿಕ್ ಮಸಾಜ್

PC: Tara Angkor Hotel

ಕೇರಳವು ಮಸಾಜ್ ಸೆಂಟರ್‌ಗಳಿಗೆ ಫೇಮಸ್ ಆಗಿದೆ. ಅದರಲ್ಲೂ ಬಾಡಿ ಮಸಾಜ್‌ಗೆ ಫೇಮಸ್ ಆಗಿದೆ. ಆಯುರ್ವೇದಿಕ್ ಮಸಾಜ್‌ ಇಲ್ಲಿ ಸಿಗುತ್ತದೆ. ನಿಮಗೆ ಬಾಡಿ ನೋವು ಇದ್ದರೆ ಇಲ್ಲಿ ನೈಸರ್ಗಿಕ ಆಯುರ್ವೇದಿಕ್ ಮಸಾಜ್ ಮಾಡಿದರೆ ಮೈ ಕೈ ನೋವು ಗುಣವಾಗುತ್ತದೆ. ಹಾಗಾಗಿ ಬಹಳಷ್ಟು ಮಂದಿ ಇಲ್ಲಿ ಮಸಾಜ್ ಮಾಡಿಸಲು ಆಗಮಿಸುತ್ತಾರೆ. ನೀವು ಒಂದು ವೇಳೆ ಕೇರಳಕ್ಕೆ ಪ್ರವಾಸ ಹೋದರೆ ಅಲ್ಲಿ ಬಾಡಿ ಮಸಾಜ್ ಮಾಡೋದನ್ನು ಮಾತ್ರ ಮರೆಯಬೇಡಿ.

ಮಲಯಾಳಂ ಮಸಾಜ್ ಕೇಂದ್ರ

ಮಲಯಾಳಂ ಮಸಾಜ್ ಕೇಂದ್ರ

PC:kallerna

ಕೇರಳದಲ್ಲಿ ಅನೇಕ ಮಸಾಜ್ ಕೇಂದ್ರಗಳಿವೆ. ಅವುಗಳಲ್ಲಿ ಪ್ರಸಿದ್ಧವಾಗಿರುವ ಮಸಾಜ್ ಕೇಂದ್ರಗಳಿರುವುದು ಕೊಲ್ಲಂ ಮತ್ತು ಕೊವಲಂನಲ್ಲಿ. ಇವುಗಳು ಪ್ರವಾಸಿ ತಾಣಗಳೂ ಆಗಿವೆ. ನಿಮ್ಮ ದೇಹದ ಆಯಾಸವೆಲ್ಲಾ ನಿವಾರಣೆಯಾಗಬೇಕಾದರೆ ನೀವು ಇಲ್ಲಿಗೆ ಭೇಟಿ ನೀಡಿ.

ಬೆಂಗಳೂರಿನಿಂದ-ಕೊಲ್ಲಂ

ಬೆಂಗಳೂರಿನಿಂದ-ಕೊಲ್ಲಂ

ಬೆಂಗಳೂರಿನಿಂದ ಕೊಲ್ಲಂಗಿರುವ ದೂರ 470 ಕಿಮೀ. ಬೆಂಗಳೂರಿನಿಂದ ಕೊಲ್ಲಂಗೆ 8 ನೇರ ರೈಲುಗಳಿವೆ. ಕೊಚ್ಚುವೆಲ್ಲಿ ಎಕ್ಸ್‌ಪ್ರೆಸ್ (16315), ಕನ್ಯಾಕುಮಾರಿ ಎಕ್ಸ್‌ಪ್ರೆಸ್ (16526), ಕೊಚುವೆಲ್ಲಿ ಎಕ್ಸ್‌ಪ್ರೆಸ್ (12777), ಕೊಚುವೆಲ್ಲಿ ಗ್ರೆ (12257), ಕೋಚುವೆಲಿ ಎಕ್ಸ್‌ಪ್ರೆಸ್ (16561) ರೈಲುಗಳು ಬೆಂಗಳೂರಿನಿಂದ ಕೊಲ್ಲಂಗೆ ಚಲಿಸುತ್ತವೆ. ಬೆಂಗಳೂರಿನಿಂದ ಕೊಲ್ಲಂಗೆ ರೈಲಿನಲ್ಲಿ13 ಗಂಟೆ12ನಿಮಿಷ ಸಮಯ ತೆಗೆದುಕೊಳ್ಳುತ್ತದೆ.

ಕಾರವಾರದಿಂದ-ಕೊಲ್ಲಂ

ಕಾರವಾರದಿಂದ-ಕೊಲ್ಲಂ

PC: Marc Shandro

ಕಾರವಾರದಿಂದ ಕೊಲ್ಲಂಗೆ ಒಟ್ಟು 14 ಡೈರೆಕ್ಟ್ ರೈಲುಗಳಿವೆ. ಕಾರವಾರದಿಂದ ಕೊಲ್ಲಂಗೆ 832 ಕಿ.ಮೀ ದೂರವಿದೆ. ಕೊಲ್ಲಂ ತಲುಪಲು ರೈಲಿನಲ್ಲಿ 15ಗಂಟೆ 36 ನಿಮಿಷ ಸಮಯ ಬೇಕಾಗುತ್ತದೆ. ನೇತ್ರಾವತಿ ಎಕ್ಸ್‌ಪ್ರೆಸ್, ಹಾಪಾ ಎಕ್ಸ್‌ಪ್ರೆಸ್, ಕೊಚ್ಚುವೆಲಿ ಎಕ್ಸ್‌ಪ್ರೆಸ್ ಹಾಗೂ ಇನ್ನಿತರ ರೈಲು ನೇರವಾಗಿ ಕಾರವಾರದಿಂದ ಕೊಲ್ಲಂಗೆ ಚಲಿಸುತ್ತದೆ.

ಮಡಿಕೇರಿ-ಕೊಲ್ಲಂ

ಮಡಿಕೇರಿ-ಕೊಲ್ಲಂ

ಮಡಿಕೇರಿಯಿಂದ ಕೊಲ್ಲಂಗೆ 490.5 ಕಿ.ಮೀ ದೂರವಿದೆ. ಮಡಿಕೇರಿಯಿಂದ ರೈಲು ಮೂಲಕ ಕೊಲ್ಲಂ ತಲುಪಲು 12 ಗಂಟೆ 24ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಇಲ್ಲಿಂದ ರೈಲು, ಬಸ್ಸು, ಕಾರ್ ಮೂಲಕವೂ ಕೊಲ್ಲಂ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+