ನಮ್ಮ ದೇಶದಲ್ಲಿ ಹಲವಾರು ಆದಿಶಕ್ತಿಯ ದೇವಾಲಯಗಳಿವೆ. ಆ ದೇವಾಲಗಳಲ್ಲಿ ಮುಖ್ಯವಾದುದು ಎಂದರೆ ಅವು ಅಷ್ಟಾದಶ ಶಕ್ತಿಪೀಠಗಳಾಗಿವೆ. ಒಂದೊಂದು ತೀರ್ಥಕ್ಷೇತ್ರವು ಅದರದೇ ಆದ ಮಹತ್ವವನ್ನು ಪಡೆದುಕೊಂಡು ಪ್ರಸಿದ್ಧಿ ಗಳಿಸಿದೆ. ಅದರಲ್ಲಿ ಮಾನಸ ದೇವಿ ದೇವಾಲಯವು ಕೂಡ ಒಂದಾಗಿದೆ. ಈ ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಮಾನಸ ದೇವಿಯು ನೆಲೆಸಿದ್ದು ಅತ್ಯಂತ ಮಹಿಮಾನ್ವಿತವಾದ ಶಕ್ತಿ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ.
ಈ ದೇವಾಲಯವನ್ನು ಪಂಚ ತೀರ್ಥ ಅಥವಾ ಐದು ತೀರ್ಥಗಳಲ್ಲಿ ಒಂದಾಗಿದೆ. ಈ ಶಕ್ತಿಯನ್ನು ಆರಾಧಿಸಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಹಾಗಾದರೆ ಆ ದೇವಾಲಯದ ಸ್ಥಳ ಪುರಾಣವೇನು? ಆ ತಾಯಿಯ ಶಕ್ತಿ ಏನು? ಆಕೆ ಎಲ್ಲಿ ನೆಲೆಸಿದ್ದಾಳೆ? ಎಂಬ ಹಲವಾರು ಪ್ರಶ್ನೆಗೆ ಉತ್ತರವಾಗಿ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೊಣ.

ಮಾನಸ ದೇವಿ ದೇವಾಲಯ
ಈ ಮಾನಸ ದೇವಿಯ ದೇವಾಲಯವು ಭಾರತ ದೇಶದ ಉತ್ತರಾಖಂಡ ರಾಜ್ಯದ ಪವಿತ್ರವಾದ ನಗರ ಹರಿದ್ವಾರದಲ್ಲಿದೆ. ಇದು ಹಿಂದೂ ದೇವಾಲಯವಾಗಿದ್ದು, ಮಾನಸ ದೇವಿಗೆ ಅರ್ಪಿತವಾಗಿದೆ. ಈ ದೇವಾಲಯವು ಹಿಮಾಲಯದ ದಕ್ಷಿಣ ಪರ್ವತ ಶ್ರೇಣಿಯಲ್ಲಿರುವ ಸಿವಾಲಿಕ್ ಬೆಟ್ಟಗಳ ಮೇಲೆ ಬಿಲ್ವಾ ಪರ್ವತದ ಮೇಲೆ ಇದೆ. ವಿಶೇಷವಾಗಿ ಈ ತೀರ್ಥಕ್ಷೇತ್ರವನ್ನು ಬಿಲ್ವಾ ತೀರ್ಥ ಎಂದೇ ಕರೆಯುಲಾಗುತ್ತದೆ.

ಮಾನಸ ದೇವಿ ದೇವಾಲಯ
ಆಶ್ಚರ್ಯ ಏನಪ್ಪ ಎಂದರೆ ಒಂದು ಕಾಲದಲ್ಲಿ ಆದಿವಾಸಿಗಳು ಪೂಜೆ ಮಾಡುತ್ತಿದ್ದ ಈ ತಾಯಿಯನ್ನು ಸಾವಿರಾರು ವರ್ಷಗಳ ನಂತರ ಹಿಂದೂ ಧರ್ಮದಲ್ಲಿ ಪೂಜೆಗಳನ್ನು ಮಾಡಲು ಪ್ರಾರಂಭ ಮಾಡಿದರು. ಹಾಲಹಲವನ್ನು ಸೇವಿಸಿದ ಪರಮೇಶ್ವರನಿಗೆ ವಿಷದ ಪ್ರಭಾವದಿಂದ ಮಾನಸ ದೇವಿಯು ರಕ್ಷಿಸಿದಳು. ಆಗ ಪರಮಶಿವನು ಆಕೆಯನ್ನು ಮೆಚ್ಚಿ ತನ್ನ ಮಗಳಾಗಿ ಸ್ವೀಕಾರ ಮಾಡಿದನು ಎಂಬ ಕಥೆಯು ಪ್ರಚಾರದಲ್ಲಿದೆ.

ಮಾನಸ ದೇವಿ ದೇವಾಲಯ
ಈಕೆಯು ಕೂಡ ಪಾರ್ವತಿಯ ಒಂದು ಅಂಶವಾಗಿದ್ದು, ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಗರ್ಭಗುಡಿಯಲ್ಲಿ ಕಂಗೊಳಿಸುತ್ತಿರುವ ಮಾನಸ ದೇವಿಯ ಹಿಂದೆ ಅಲಂಕಾರಿಕವಾಗಿ ಕಂಗೊಳಿಸುತ್ತಿರುವ ನಾಗ ಸರ್ಪಗಳನ್ನು ಕಾಣಬಹುದಾಗಿದೆ. ಅಲ್ಲಿನ ನಾಗ ಸರ್ಪಗಳು ವಾಸುಕಿಯ ಸಹೋದರಿಯರಾಗಿ ಪರಿಗಣಿಸಲಾಗುತ್ತದೆ.

ಮಾನಸ ದೇವಿ ದೇವಾಲಯ
ಈ ದೇವಾಲಯದ ವಿಶೇಷತೆ ಏನು ಎಂದರೆ ಈ ಮಾನಸ ದೇವಿಯು ಭಕ್ತರ ಇಚ್ಛೆಗಳನ್ನು ತ್ವರಿತವಾಗಿ ನೆರವೇರಿಸುತ್ತಾಳೆ. ಹಾಗಾಗಿಯೇ ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಈ ತಾಯಿ ನೆಲೆಸಿರುವ ಸ್ಥಳದಲ್ಲಿ ಒಂದು ಪವಿತ್ರವಾದ ಮರವಿದೆ. ಆ ಮರದ ಬಳಿ ನಿಂತು ತಮ್ಮ ಕೋರಿಕೆಗಳನ್ನು ಕೋರಿಕೊಂಡು ದಾರ ಕಟ್ಟಿದರೆ ತ್ವರಿತವಾಗಿ ಇಷ್ಟಾರ್ಥಗಳು ನೆರವೆರುತ್ತದೆ ಎಂದು ನಂಬಲಾಗಿದೆ.

ಮಾನಸ ದೇವಿ ದೇವಾಲಯ
ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿದ ನಂತರ ಮತ್ತೆ ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ದಾರಗಳನ್ನು ಬಿಚ್ಚುತ್ತಾರೆ. ತಾಯಿಗೆ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಲು ತೆಂಗಿನಕಾಯಿಗಳು, ಹಣ್ಣುಗಳು, ಹೂಮಾಲೆಗಳು ಮತ್ತು ಧೂಪದೀಪಗಳನ್ನು ಮಾನಸ ದೇವಿಗೆ ತೆಗೆದುಕೊಂಡು ಹೋಗುತ್ತಾರೆ.

ಮಾನಸ ದೇವಿ ದೇವಾಲಯ
ಆರಾಧನೆಗೆ ಯೋಗ್ಯವಾಗಿರುವ ಸ್ಥಳ ಇದಾಗಿದ್ದು, ಹರಿದ್ವಾರದಲ್ಲಿನ ಮೂರು ಪೀಠಗಳಲ್ಲಿ ಇದು ಕೂಡ ಒಂದಾಗಿದೆ. ಇತರ ಎರಡು ಪೀಠಗಳು ಎಂದರೆ ಒಂದು ಚಂಡಿ ದೇವಿ ದೇವಾಲಯ ಮತ್ತೊಂದು ಮಾಯಾ ದೇವಿ ದೇವಾಲಯವಾಗಿದೆ.

ಮಾನಸ ದೇವಿ ದೇವಾಲಯ
ಮಾನಸ ದೇವಿ ದೇವಾಲಯವು ಪ್ರಾಚೀನವಾದ ದೇವಾಲಯಗಳಲ್ಲಿ ಒಂದಾಗಿದೆ. ಹರಿದ್ವಾರಕ್ಕೆ ತೆರಳುವ ಯಾತ್ರಿಕರು ತಪ್ಪದೇ ಈ ತಾಯಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ. ಈ ಪವಿತ್ರವಾದ ದೇವಾಲಯವು ಆನೇಕ ಶತಮಾನಗಳಿಂದ ಹರಿದ್ವಾರದಲ್ಲಿ ಪವಿತ್ರವಾದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ.

ಮಾನಸ ದೇವಿ ದೇವಾಲಯ
ಈ ದೇವಾಲಯದಿಂದ ಗಂಗಾನದಿ ಹಾಗು ಹರಿದ್ವಾರವನ್ನು ಕಾಣಬಹುದಾಗಿದೆ. ಈ ತೀರ್ಥಕ್ಷೇತ್ರಕ್ಕೆ ತೆರಳಬೇಕಾದರೆ ಮಟ್ಟಿಲುಗಳ ಮಾರ್ಗದಿಂದ ತೆರಳಬೇಕಾಗಿರುತ್ತದೆ. ಮಂದಿರಕ್ಕೆ ತಲುಪಲು "ರೋಪ್-ವೇ" ಮಾರ್ಗವು ಕೂಡ ಇದೆ. ಈ ಸೇವೆಯನ್ನು "ಮಾನಸ ದೇವಿ ಉದನ್ ಕಟೋಲ" ಎಂದು ಕೂಡ ಕರೆಯುತ್ತಾರೆ. ಯಾತ್ರಿಕರಿಗೆ ಈ ಸ್ಥಳದಲ್ಲಿಯೇ ಚಂಡಿ ದೇವಿ ದೇವಾಲಯವು ಕೂಡ ಇದೆ.

ಮಾನಸ ದೇವಿ ದೇವಾಲಯ
ಈ ರೋಪ್-ವೇಯು ಸುಮಾರು 540 ಮೀಟರ್(1,770ಫೀüಟ್) ಮತ್ತು ಎತ್ತರ 178 ಮೀಟರ್(584 ಫೀಟ್) ಇದೆ. ಸಾಧಾರಣಾ ದಿನಗಳಲ್ಲಿ ಈ ದೇವಾಲಯವನ್ನು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ಮಾನಸ ದೇವಿಯ ದರ್ಶನವನ್ನು ಪಡೆಯಬಹುದು.

ಮಾನಸ ದೇವಿ ದೇವಾಲಯ
ಪಾರ್ವತಿ ದೇವಿ ರೂಪವಾದ "ಮಾನಸ" ಮತ್ತು "ಚಂಡಿ" ಇಬ್ಬರು ದೇವತೆಗಳು ಲೀನವಾಗಿ ನೆಲೆಸಿದ್ದಾರೆ ಎಂದು ಅಲ್ಲಿನ ಪ್ರಜೆಗಳು ನಂಬುತ್ತಾರೆ. ಹಾಗಾಗಿಯೇ ಮಾನಸ ದೇವಿ ದೇವಾಲಯವು ನೀಲ ಪರ್ವತದ ಎದುರಿಗೆ ಬಿಲ್ವ ಪರ್ವತದ ಮೇಲೆ ನೆಲೆಸಿದ್ದಾಳೆ.

ಹೇಗೆ ತಲುಪಬೇಕು?
ಮಾನಸ ದೇವಿ ದೇವಾಲಯವನ್ನು 2 ವಿಧಗಳಲ್ಲಿ ತಲುಪಬಹುದಾಗಿದೆ. ಕಾಲ್ನಡಿಗೆಯಿಂದ ಅಥವಾ ಕೇಬಲ್ ಕಾರ್‍ನ ಮೂಲಕ. ಹರಿದ್ವಾರದ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿ, ದೆಹಲಿಯಿಂದ 215 ಕಿ.ಮೀ, ಡೆಹ್ರಾಡೂನ್‍ನಿಂದ 50 ಕಿ.ಮೀ, ಡೆಹ್ರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ 45 ಕಿ,ಮೀ, ರಿಷಿಕೇಶ್‍ದಿಂದ 30 ಕಿ.ಮೀ, ಮಸ್ಸೂರಿನಿಂದ 85 ಕಿ.ಮೀ ದೂರದಲ್ಲಿದೆ. ನೀವು ಸುಲಭವಾಗಿ ರಿಕ್ಷಾದ ಮೂಲಕ ದೇವಾಲಯಕ್ಕೆ ತೆರಳಬಹುದಾಗಿದೆ.


Click it and Unblock the Notifications
















