Search
  • Follow NativePlanet
Share
» »ನಲ್ಲಮಲಾ ಕಾಡಿನಲ್ಲಿರುವ ಮಲ್ಲೆಲಾ ತೀರ್ಥದಲ್ಲಿ ಸ್ನಾನ ಮಾಡಿದ್ದೀರಾ?

ನಲ್ಲಮಲಾ ಕಾಡಿನಲ್ಲಿರುವ ಮಲ್ಲೆಲಾ ತೀರ್ಥದಲ್ಲಿ ಸ್ನಾನ ಮಾಡಿದ್ದೀರಾ?

ಮಲ್ಲೆಲಾ ತೀರ್ಥವು ಭಾರತದ ತೆಲಂಗಾಣದ ನಲ್ಲಮಲಾ ಅರಣ್ಯದಲ್ಲಿರುವ ಒಂದು ಜಲಪಾತವಾಗಿದೆ. ಈ ಕಾಡಿನ ಮೂಲಕ ಕೃಷ್ಣ ನದಿ ಹರಿಯುತ್ತದೆ. ಇದು ಶ್ರೀಶೈಲಂನಿಂದ 58 ಕಿ.ಮೀ ಮತ್ತು ಹೈದರಾಬಾದ್‌ನಿಂದ 185 ಕಿ.ಮೀ ದೂರದಲ್ಲಿದೆ.

ನಲ್ಲಮಲಾ ಕಾಡಿನಲ್ಲಿದೆ

ನಲ್ಲಮಲಾ ಕಾಡಿನಲ್ಲಿದೆ

PC: Ylnr123

ಮಲ್ಲೆಲಾ ತೀರ್ಥವು ನಲ್ಲಮಲಾ ದಟ್ಟ ಕಾಡಿನ ಮಧ್ಯದಲ್ಲಿದೆ. ಜಲಪಾತವನ್ನು ಪ್ರವೇಶಿಸಲು ಸ್ವಲ್ಪ ನಡೆಯಬೇಕು. ಅತ್ಯುತ್ತಮ ಹರಿಯುವಿಕೆಯು ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳವರೆಗೆ ಇರುತ್ತದೆ. ಇದು ದಟ್ಟ ಕಾಡಿನ ಮೂಲಕ ಹರಿಯುತ್ತದೆ ಮತ್ತು ನಂತರ ಕೃಷ್ಣ ನದಿಗೆ ಈ ಸ್ಥಳವು ಅಚಾಂಪೆಟ್‌ಗೆ ಹತ್ತಿರದಲ್ಲಿದೆ.

ಋಷಿಮುನಿಗಳು ತಪಸ್ಸು ಮಾಡಿದ್ದರು

ಋಷಿಮುನಿಗಳು ತಪಸ್ಸು ಮಾಡಿದ್ದರು

PC: Deependra Singh Tomar

ಈ ಸ್ಥಳದಲ್ಲಿ ಸಾಕಷ್ಟು ಋಷಿಮುನಿಗಳು ಶಿವನ ಕುರಿತಾಗಿ ತಪಸ್ಸು ಮಾಡಿದ್ದರು. ಶಿವನು ದರ್ಶನವನ್ನು ನೀಡಿದ್ದಾನೆ ಎನ್ನಲಾಗುತ್ತದೆ. ಇಲ್ಲಿ ಬೇಸಿಗೆಕಾಲದಲ್ಲಿ ಹುಲಿಗಳು ನೀರು ಕುಡಿಯಲು ಬರುತ್ತವೆ ಎನ್ನಲಾಗುತ್ತದೆ.

150 ಫೀಟ್ ಎತ್ತರ

150 ಫೀಟ್ ಎತ್ತರ

PC: Leelasistla

ತೆಲಂಗಾಣದಲ್ಲಿ ನೀವು ನೋಡಲೇಬೇಕಾದ ಅದ್ಭುತ ಸ್ಥಳವೆಂದರೆ ಮಲ್ಲೆಲಾ ತೀರ್ಥಂ. ಈ ಜಲಪಾತವು ಪ್ರಕೃತಿಯ ನಿಜವಾದ ಕೊಡುಗೆಯಾಗಿದೆ. ಕಣಿವೆಯಲ್ಲಿರುವ ಈ ಸುಂದರವಾದ ಸ್ಥಳವು ನಲ್ಲಮಲಾ ಅರಣ್ಯ ಶ್ರೇಣಿಯಲ್ಲಿದೆ.ಈ ಜಲಪಾತವು ಸುಮಾರು 150 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತಿದೆ.

ಸಾಹಸಮಯ ತಾಣ

ಸಾಹಸಮಯ ತಾಣ

PC:Leelasistla

ಮಲ್ಲೆಲಾ ತೀರ್ಥವು ಹೈದರಾಬಾದ್‌ನಿಂದ ಸುಮಾರು 190 ಕಿಲೋಮೀಟರ್ ದೂರದಲ್ಲಿದೆ. ಇದು ಶ್ರೀಶೈಲಂಗೆ ಹೋಗುವ ದಾರಿಯಲ್ಲಿದೆ. ಸಾಹಸ ಪ್ರಿಯರಿಗೆ ನದಿ ದಾಟುವಿಕೆ, ಟ್ರೆಕಿಂಗ್, ಸ್ಲೈಡಿಂಗ್ ಮತ್ತು ಕ್ಯಾಂಪ್ ಫೈರ್‌ಗಳಿಗೆ ಉತ್ತಮ ಸ್ಥಳವಾಗಿದೆ.

ಶ್ರೀಶೈಲಂ

ಶ್ರೀಶೈಲಂ

PC:Chintohere

ಇಲ್ಲಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀಶೈಲಂ ಕೂಡಾ ಒಂದು. ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರ ಪ್ರದೇಶದ ಶ್ರೀ ಶೈಲದಲ್ಲಿದೆ. ಇದು ಕರ್ನೂಲು ಜಿಲ್ಲೆಯ ನಲ್ಲಮಲ ಅಥವಾ ದ್ರೋಣಾಚಲ ಬೆಟ್ಟಗಳ ಸಾಲಿನಲ್ಲಿದೆ. ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನವು ಶಿವ ಮತ್ತು ಪಾರ್ವತಿಗೆ ಸಮರ್ಪಿತವಾಗಿದೆ. ಇದು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಪ್ರಕೃತಿ ಪ್ರೇಮಿಗಳ ಜೊತೆಗೆ ಧಾರ್ಮಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: SDATTAREDDY

ಮಾರ್ಚ್ ನಿಂದ ಜೂನ್ ವರೆಗೆ ಶುಷ್ಕ ಋತುಇರುತ್ತದೆ. ಉಳಿದ ತಿಂಗಳುಗಳು ಮಳೆಯ ತಿಂಗಳಾಗಿದ್ದು, ಮಣ್ಣಿನ ರಸ್ತೆಯ ಮೇಲೆ ನಡೆಯಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಬೇಸಿಗೆಗಾಲ ಹಾಗೂ ಮಳೆಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತವಲ್ಲ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Leelasistla

ಹೈದರಾಬಾದ್‌ನಿಂದ ಶ್ರೀಶೈಲಂಗೆ ಪ್ರತಿ 30 ನಿಮಿಷಕ್ಕೆ ಬಸ್ಸುಗಳಿಗೆ. ಹೈದರಾಬಾದ್‌ನಿಂದ ಶ್ರೀಶೈಲಂಗೆ ಪ್ರಯಾಣಿಸುವಾಗ ಪ್ರವಾಸಿಗರು ಮಣ್ಣೂರು ಅರಣ್ಯ ಚೆಕ್‌ಪೋಸ್ಟ್‌ ಹೆದ್ದಾರಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ ವಾಟ್ವರ್ಲಪಲ್ಲಿ ಎಂಬ ಸಣ್ಣ ಹಳ್ಳಿ ಸಿಗುತ್ತದೆ. ಈ ಹಳ್ಳಿಯಿಂದ ಕೇಲವ 8 ಕಿ.ಮೀ.ದೂರದಲ್ಲಿದೆ ಮಲ್ಲೆಲಾ ತೀರ್ಥ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+