Search
  • Follow NativePlanet
Share
» »ಮಸ್ಸೂರಿಯಲ್ಲಿರುವ ಈ ಸ್ಥಳಗಳಿಗೆ ಹೋಗಲು ಇಂದಿಗೂ ಯಾರೂ ಧೈರ್ಯ ಮಾಡುವುದಿಲ್ಲ!

ಮಸ್ಸೂರಿಯಲ್ಲಿರುವ ಈ ಸ್ಥಳಗಳಿಗೆ ಹೋಗಲು ಇಂದಿಗೂ ಯಾರೂ ಧೈರ್ಯ ಮಾಡುವುದಿಲ್ಲ!

ನೀವು ದೆವ್ವ, ಪಿಶಾಚಿ, ಭೂತ ಮತ್ತು ಮಾಟಗಾತಿಯ ಕುರಿತಾದ ಅನೇಕ ಕಥೆಗಳನ್ನು ಕೇಳಿರಬೇಕು. ಆ ಎಲ್ಲಾ ಕಥೆಗಳನ್ನು ಕೇಳಿದಾಗ ಕೆಲವರಿಗೆ ಒಂದು ಕ್ಷಣವಾದರೂ ಖಂಡಿತ ಭಯವಾಗುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ಸ್ಥಳಗಳ ಕಥೆ ಕೇಳಿದರೆ ನಿಮಗೆ ರಾತ್ರಿ ಮಲಗಲು ಸಹ ಆಗುವುದಿಲ್ಲ. ಅಂದಹಾಗೆ ನಿಮಗೆಲ್ಲಾ ಮಸ್ಸೂರಿ ಹೆಸರು ಕೇಳಿದೊಡನೆ ಹಚ್ಚ ಹಸಿರಿನ ಬೆಟ್ಟಗಳು, ಸುಂದರವಾದ ಸರೋವರಗಳು, ಧುಮ್ಮಿಕ್ಕುವ ಜಲಪಾತಗಳು, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು, ಪ್ರಾಚೀನ ವಾಸ್ತುಶಿಲ್ಪ, ಲೇಖಕರು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳ ಮನೆಗಳು ಇವೆಲ್ಲವೂ ನೆನಪಾಗಬಹುದು.

ಬೇಸಿಗೆಯಲ್ಲಿ ರಜಾದಿನಗಳನ್ನು ಕಳೆಯಲು ಜನಪ್ರಿಯವಾಗಿರುವ ಈ ಗಿರಿಧಾಮವು ಚಳಿಗಾಲದಲ್ಲಿ ಹಿಮಪಾತವನ್ನು ವೀಕ್ಷಿಸಲು ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಆದರೆ ಮಸ್ಸೂರಿಯ ಕೆಲವು ಸ್ಥಳಗಳಲ್ಲಿ ದೆವ್ವಗಳು ವಾಸಿಸುತ್ತವೆ ಎನ್ನಲಾಗಿದೆ. ಬಹುಶಃ ಈ ಸ್ಥಳಗಳ ಬಗ್ಗೆ ನೀವು ಹಿಂದೆಂದೂ ಕೇಳಿರಲಿಲ್ಲ ಅನಿಸುತ್ತದೆ. ಇಂದಿನವರೆಗೂ ನೀವು ಮಸ್ಸೂರಿಯ ಸುಂದರವಾದ ಸ್ಥಳಗಳನ್ನು ಮಾತ್ರ ನೋಡಿರುತ್ತೀರಿ. ಆದರೆ ಮಸ್ಸೂರಿಯಲ್ಲಿ ಕೆಲವು ಭಯಾನಕ ಸ್ಥಳಗಳೂ ಇವೆಯಂತೆ. ಈಗ ಮಸ್ಸೂರಿಯ ಯಾವ ಯಾವ ಸ್ಥಳಗಳಲ್ಲಿ ದೆವ್ವಗಳು ವಾಸಿಸುತ್ತವೆ ನೋಡೋಣ ಬನ್ನಿ. ಈ ಸ್ಥಳಗಳ ಬಗ್ಗೆ ಕೊಟ್ಟಿರುವ ಮಾಹಿತಿಯ ನಿಖರತೆ ಅಥವಾ ವಿಶ್ವಾಸಾರ್ಹತೆ ಖಾತ್ರಿಯಾಗಿಲ್ಲ. ಆದರೆ ಕೇವಲ ಮಾಹಿತಿಗಾಗಿ ಇದನ್ನು ಕೊಡಲಾಗಿದೆ.

ಪರಿ ಟಿಬ್ಬಾ

ಪರಿ ಟಿಬ್ಬಾ

ಪರಿ ಟಿಬ್ಬಾ ಅಥವಾ ಯಕ್ಷಯಕ್ಷಿಣಿಯರ ಬೆಟ್ಟವು ಮಸ್ಸೂರಿಯಲ್ಲಿರುವ ದೆವ್ವದ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ರಸ್ಕಿನ್ ಬಾಂಡ್‌ನ ಅನೇಕ ಪುಸ್ತಕಗಳಲ್ಲಿಯೂ ಕಂಡುಬರುತ್ತದೆ. ಪ್ರಸಿದ್ಧ ವುಡ್‌ಸ್ಟಾಕ್ ಶಾಲೆಗೆ ಸಮೀಪದಲ್ಲಿರುವ ಈ ಬೆಟ್ಟವು ಸಿಡಿಲಿನ ಹೊಡೆತಗಳು ಮತ್ತು ಅಧಿಸಾಮಾನ್ಯ (ಪ್ಯಾರನಾರ್ಮಲ್‌‌ ) ಚಟುವಟಿಕೆಗಳಂತಹ ಕೆಲವು ವಿಚಿತ್ರ ಕಾರಣಗಳಿಗಾಗಿ ಸಾಕಷ್ಟು ಪ್ರಸಿದ್ಧವಾಗಿದೆ. ಈ ಮಲೆನಾಡಿನ ಕಾಡಿನಲ್ಲಿ ಇಬ್ಬರು ಪ್ರೇಮಿಗಳು ಸಾವನ್ನಪ್ಪಿದ ಕಥೆಯನ್ನು ಸ್ಥಳೀಯ ಜನರು ವಿವರಿಸುತ್ತಾರೆ. ಈಗ ಅವರ ಆತ್ಮಗಳು ಇಲ್ಲಿನ ಕಾಡುಗಳಲ್ಲಿ ಅಲೆದಾಡುತ್ತಿವೆಯಂತೆ. ಸೂರ್ಯಾಸ್ತದ ನಂತರ ಕಾಡಿನೊಳಗೆ ಹೋಗುವುದು ಅಷ್ಟು ಸೂಕ್ತವಲ್ಲ ಎನ್ನಲಾಗಿದೆ.

ಲಂಬಿ ದೇಹರ್ ಮೈನ್ಸ್

ಲಂಬಿ ದೇಹರ್ ಮೈನ್ಸ್

ಇದು ಕೂಡ ಮಸ್ಸೂರಿಯಲ್ಲಿರುವ ಒಂದು ಸ್ಥಳವಾಗಿದೆ. ನಿಗೂಢ ಸಂದರ್ಭಗಳಲ್ಲಿ ಅನೇಕ ಜನರು ಇಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿ ಅನೇಕ ಕೊಲೆಗಳು ನಡೆದಿವೆ, ವಿಚಿತ್ರ ಅಪಘಾತಗಳೂ ಸಂಭವಿಸಿವೆ. ಇಲ್ಲಿ ಏನನ್ನು ನೋಡುತ್ತಿದ್ದೇವೆ ಎಂಬುದೇ ತಿಳಿಯುವುದಿಲ್ಲ. ಇದು ಮಸ್ಸೂರಿಯಲ್ಲಿ ಬಹಳ ವಿಚಿತ್ರವಾದ ಸ್ಥಳವಾಗಿದ್ದು, ಹಿಂದೆ ಅನೇಕ ಭಯಾನಕ ಸಂಗತಿಗಳು ನಡೆದಿರುವುದು ಕಂಡುಬಂದಿವೆ. ನಕಾರಾತ್ಮಕ ಶಕ್ತಿಗಳಿಂದ ಕೂಡಿರುವ ಈ ಹಾಂಟೆಡ್ ಸ್ಥಳಕ್ಕೆ ಭೇಟಿ ನೀಡಲು ಸ್ಥಳೀಯ ಜನರು ಸಹ ಇಷ್ಟಪಡುವುದಿಲ್ಲ. ಈ ಸ್ಥಳದಲ್ಲಿ ಜನರು ಅಳುವುದು, ಕೂಗುವುದು ಮತ್ತು ಕಣ್ಣಿಗೆ ಕಾಣದ ಅನೇಕ ದೃಶ್ಯಗಳನ್ನು ನೋಡಿದ್ದಾರಂತೆ.

ಸಿಸ್ಟರ್ಸ್ ಬಜಾರ್ ಬಳಿಯಿದೆ ದೆವ್ವದ ಮನೆ

ಸಿಸ್ಟರ್ಸ್ ಬಜಾರ್ ಬಳಿಯಿದೆ ದೆವ್ವದ ಮನೆ

ಸಿಸ್ಟರ್ಸ್ ಬಜಾರ್ ಬಳಿಯ ಲಾಂಡೂರ್‌ನಲ್ಲಿ ಖಾಲಿ ಮನೆ ಇದೆ. ಇದು ಯಾವುದೇ ದೆವ್ವದ ಸ್ಥಳಕ್ಕಿಂತ ಕಡಿಮೆಯೇನಿಲ್ಲ. ಸ್ಥಳೀಯರ ಪ್ರಕಾರ ಇದು ದೆವ್ವದ ಮನೆ. ಇದು ಈಗ ಮನೆಯಾಗಿ ಉಳಿದಿಲ್ಲ. ಆದರೆ ಈ ಮನೆಯು ಹಚ್ಚ ಹಸಿರಿನ ಕಾಡುಗಳೊಳಗೆ ಇದೆ. ಮಸ್ಸೂರಿಯಲ್ಲಿರುವ ದೆವ್ವದ ಜಾಗಗಳ ಪಟ್ಟಿಗೆ ಈ ಸ್ಥಳ ಸೇರಿದ್ದರೂ ದೆವ್ವಗಳಿಗೆ ಹೆದರದವರು ಈ ಮನೆಯನ್ನು ಹುಡುಕಿಕೊಂಡು ದಟ್ಟ ಕಾಡಿಗೆ ಬರುತ್ತಾರೆ.

ಮಸ್ಸೂರಿಗೆ ತಲುಪುವುದು ಹೇಗೆ?

ಮಸ್ಸೂರಿಗೆ ತಲುಪುವುದು ಹೇಗೆ?

ರಸ್ತೆ: ಹಲವಾರು ರಾಜ್ಯ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಮಸ್ಸೂರಿಗೆ ಹತ್ತಿರದ ಸ್ಥಳಗಳಾದ ದೆಹಲಿ, ಡೆಹ್ರಾಡೂನ್ ಮತ್ತು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಇತರ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಮಸ್ಸೂರಿಗೆ ಬಸ್ಸುಗಳು ನಿರಂತರವಾಗಿ ಮತ್ತು ಪ್ರತಿದಿನ ಲಭ್ಯವಿರುತ್ತವೆ. ಆದ್ದರಿಂದ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಸ್ ಅನ್ನು ಆಯ್ಕೆ ಮಾಡಬಹುದು.

ರೈಲು: ಡೆಹ್ರಾಡೂನ್ ರೈಲು ನಿಲ್ದಾಣವು ಸರಿಸುಮಾರು 36 ಕಿಮೀ ದೂರದಲ್ಲಿದೆ. ಇದು ಮಸ್ಸೂರಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ದೆಹಲಿ, ಕೋಲ್ಕತ್ತಾ, ಜಮ್ಮು ಮತ್ತು ಅಮೃತಸರ ಸೇರಿದಂತೆ ದೂರದ ನಗರಗಳಿಂದ ಡೆಹ್ರಾಡೂನ್ ನಗರಕ್ಕೆ ಹಲವಾರು ರೈಲುಗಳು ಸೇವೆ ಸಲ್ಲಿಸುತ್ತವೆ. ರೈಲಿನಲ್ಲಿ ಡೆಹ್ರಾಡೂನ್ ತಲುಪಿದ ನಂತರ ಪ್ರವಾಸಿಗರು ಮಸ್ಸೂರಿಗೆ ಸ್ಥಳೀಯ ಟ್ಯಾಕ್ಸಿಗಳು ಅಥವಾ ಬಸ್ಸುಗಳನ್ನು ಹತ್ತಬಹುದು.

ವಿಮಾನ: ಮಸ್ಸೂರಿಯು ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಸುಮಾರು 59 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಡೆಹ್ರಾಡೂನ್ ವಿಮಾನ ನಿಲ್ದಾಣದ ಮೂಲಕ ಮಸ್ಸೂರಿಯನ್ನು ತಲುಪಬಹುದು. ಮಸ್ಸೂರಿಯಲ್ಲಿ ಗಮ್ಯಸ್ಥಾನಗಳನ್ನು ತಲುಪಲು ವಿಮಾನ ನಿಲ್ದಾಣದಿಂದ ಬಸ್ಸುಗಳು ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಮಸ್ಸೂರಿಗೆ ಭೇಟಿ ನೀಡಲು ಸೂಕ್ತ ಸಮಯ

ಮಸ್ಸೂರಿಗೆ ಭೇಟಿ ನೀಡಲು ಸೂಕ್ತ ಸಮಯ

ಮಸ್ಸೂರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಬೇಸಿಗೆಯ ತಿಂಗಳು. ಏಪ್ರಿಲ್ ನಿಂದ ಜುಲೈ ಮಧ್ಯದವರೆಗೆ ಹವಾಮಾನವು ಚೆನ್ನಾಗಿರುತ್ತದೆ. ಮಸ್ಸೂರಿಗೆ ಭೇಟಿ ನೀಡಲು ಮತ್ತೊಂದು ಉತ್ತಮ ಸಮಯವೆಂದರೆ ಸೆಪ್ಟೆಂಬರ್‌ನಿಂದ ನವೆಂಬರ್ ಮಧ್ಯದವರೆಗೆ. ಈ ಸಮಯದಲ್ಲಿ ಮಂಜಿನಿಂದ ಆವೃತವಾದ ಹಿಮಾಲಯದ ನೋಟವನ್ನು ನೋಡಬಹುದು. ಹಿಮಪಾತವನ್ನು ನೋಡಬೇಕೆಂದರೆ ಡಿಸೆಂಬರ್‌ನಿಂದ ಫೆಬ್ರವರಿ ಅತ್ಯುತ್ತಮ ಸಮಯ. ಆದರೆ ಜುಲೈ 15 ರಿಂದ ಸೆಪ್ಟೆಂಬರ್ 15 ರವರೆಗೆ ಅಂದರೆ ಮಾನ್ಸೂನ್ ಸಮಯದಲ್ಲಿ ಮಸ್ಸೂರಿಗೆ ಭೇಟಿ ನೀಡುವುದನ್ನು ತಪ್ಪಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+