Search
  • Follow NativePlanet
Share
» »ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ

ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ

ನೀವು ಸಾಕಷ್ಟು ಜಲಪಾತಗಳನ್ನು ನೋಡಿರಬಹುದು. ಆದರೆ ಹೈದರಾಬಾದ್‌ನ ಅದಿಲಾಬಾದ್‌ನಲ್ಲೊಂದು ವಿಶೇಷ ಜಲಪಾತವಿದೆ. ಅದರ ವಿಶೇಷತೆ ಏನೆಂದರೆ ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತವಂತೆ.

ಎಲ್ಲಿದೆ ಈ ಜಲಪಾತ?

ಎಲ್ಲಿದೆ ಈ ಜಲಪಾತ?

PC: youtube
ನೀವು ಸಾಕಷ್ಟು ಜಲಪಾತಗಳನ್ನು ನೋಡಿರಬಹುದು. ಆದರೆ ಹೈದರಾಬಾದ್‌ನ ಅದಿಲಾಬಾದ್‌ನಲ್ಲೊಂದು ವಿಶೇಷ ಜಲಪಾತವಿದೆ. ಅದರ ವಿಶೇಷತೆ ಏನೆಂದರೆ ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತವಂತೆ.

ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?

ಶಕುಂತಲಾ

ಶಕುಂತಲಾ

PC: Ppavan1

ಜನಪ್ರಿಯ ಕಥೆ ಹಾಗೂ ಸ್ಥಳೀಯ ನಂಬಿಕೆ ಪ್ರಕಾರ ಈ ಕುಂತಾಳ ಜಲಪಾತ ಎನ್ನುವ ಹೆಸರು ದುಶ್ಶಾಸನನ ಪತ್ನಿ ಶಕುಂತಲಾದಿಂದ ಬಂದಿದೆ. ಇಲ್ಲಿನ ಸುತ್ತಮುತ್ತಲಿನ ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತಿತ್ತು. ಶಕುಂತಲಾ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರು ಎನ್ನುವುದನ್ನು ಸ್ಥಳೀಯರು ಸಹ ಹೇಳುತ್ತಾರೆ.

 ವಾರಾಂತ್ಯ ತಾಣ

ವಾರಾಂತ್ಯ ತಾಣ

PC: youtube
ಇದೊಂದು ಪ್ರಸಿದ್ಧ ಒಂದು ದಿನದ ಪ್ರವಾಸಕ್ಕೆ ಹಾಗೂ ಹೈದರಾಬಾದ್ ನಗರದಿಂದ ಉತ್ತಮ ವಾರಾಂತ್ಯದ ಸ್ಥಳವಾಗಿದೆ. ಜಲಪಾತಗಳ ಪ್ರವೇಶ ದ್ವಾರದ ವರೆಗೆ ರಸ್ತೆ ಇದೆ. ಪ್ರವೇಶದ್ವಾರದಿಂದ 10-15 ನಿಮಿಷಗಳ ನಡಿಗೆ ಮೂಲಕ ಈ ಜಲಪಾತದ ಕೆಳಕ್ಕೆ ತಲುಪಬಹುದು.

ಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕುಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕು

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC: youtube
ಮಳೆಗಾಲ ಮತ್ತು ಮಾನ್ಸೂನ್ ನಂತರದ ದಿನಗಳಲ್ಲಿ ಕುಂತಾಲ ಫಾಲ್ಸ್‌ಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ. ಚೂಪಾದ ಕಲ್ಲುಗಳು ಮತ್ತು ತಿರುವುಗಳ ಕಾರಣ ನೀರಿನ ಹರಿವು ಅಧಿಕವಾಗಿದ್ದಾಗ ಕೆಳಭಾಗದಲ್ಲಿ ನೀರಿನಲ್ಲಿ ಬರುವುದು ಅಪಾಯಕಾರಿ.

ನೀರಿನ ಹರಿವು

ನೀರಿನ ಹರಿವು

PC: youtube

ಈ ಜಲಪಾತದ ಹರಿವು ಕದಮ್ ಜಲಾಶಯದಿಂದ ಬರುವ ನೀರಿನ ಬಿಡುಗಡೆಯ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಬಿಡುಗಡೆಯ ಅನಿಶ್ಚಿತತೆಯು ವಿಶೇಷವಾಗಿ ಮಳೆಗಾಲದಲ್ಲಿ ಕುಂತಲಾ ಜಲಪಾತವನ್ನು ಸ್ವಲ್ಪ ಅಪಾಯಕಾರಿ ಸ್ಥಳವಾಗಿ ಮಾಡುತ್ತದೆ.

ಭೇಟಿ ಸೂಕ್ತವಲ್ಲ

ಭೇಟಿ ಸೂಕ್ತವಲ್ಲ

PC: youtube

ಜನವರಿಯ ನಂತರ ನಿಮಗೆ ಹೆಚ್ಚು ನೀರು ಸಿಗುವುದಿಲ್ಲ, ಆದ್ದರಿಂದ ಜನವರಿ ಮತ್ತು ಜುಲೈ ನಡುವೆ ಕುಂತಲಾ ಜಲಪಾತಕ್ಕೆ ಭೇಟಿ ನೀಡುವುದನ್ನು ತಪ್ಪಿಸಿ.

ಬಿಜಾಪುರದಲ್ಲಿರುವ ಇಷ್ಟೆಲ್ಲಾ ಫೇಮಸ್ ತಾಣಗಳನ್ನು ನೀವು ನೋಡಿದ್ದೀರಾ?ಬಿಜಾಪುರದಲ್ಲಿರುವ ಇಷ್ಟೆಲ್ಲಾ ಫೇಮಸ್ ತಾಣಗಳನ್ನು ನೀವು ನೋಡಿದ್ದೀರಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಹತ್ತಿರದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ - ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ . ಇದು ಜಲಪಾತದಿಂದ 310 ಕಿ.ಮೀ ದೂರದಲ್ಲಿದೆ.
ಹತ್ತಿರದ ರೈಲು ನಿಲ್ದಾಣವೆಂದರೆ ಅದಿಲಾಬಾದ್ ರೈಲು ನಿಲ್ದಾಣ. ಇದು 58 ಕಿ.ಮೀ ದೂರದಲ್ಲಿದೆ. ಹತ್ತಿರದ ಬಸ್ ನಿಲ್ದಾಣವೆಂದರೆ ನೆರೆಕೊಂಡೊ ಬಸ್ ನಿಲ್ದಾಣ. ಇದು ಜಲಪಾತದಿಂದ 12 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X