Search
  • Follow NativePlanet
Share
» »ಸ್ವರ್ಗಕ್ಕಿಂತ ಕಮ್ಮಿ ಇಲ್ಲ ಕುದುರೆಮುಖ

ಸ್ವರ್ಗಕ್ಕಿಂತ ಕಮ್ಮಿ ಇಲ್ಲ ಕುದುರೆಮುಖ

ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡಗಳು, ನದಿಗಳು ಇವುಗಳ ಸೌಂದರ್ಯವನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಇವೆಲ್ಲ ಪ್ರಕೃತಿ ಸಹಜವಾದದ್ದು. ಪ್ರಕೃತಿ ಸೌಂದರ್ಯದ ವಿಷ್ಯಕ್ಕೆ ಬಂದಾಗ ಭಾರತವನ್ನು ಮರೆಯುವಂತಿಲ್ಲ. ಇಂತಹ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಸ್ಥಳಗಳಲ್ಲಿ ಕರ್ನಾಟಕದ ಕುದುರೆಮುಖ ಕೂಡಾ ಒಂದು.

ಬೆಟ್ಟ ಗುಡ್ಡಗಳನ್ನು ಹೊಂದಿದ್ದು ಟ್ರೆಕ್ಕಿಂಗ್‍ಗೆ ಹೆಸರುವಾಸಿಯಾಗಿರುವ ಕುದುರೆಮುಖ ಚಿಕ್ಕಮಗಳೂರಿನಲ್ಲಿದೆ. ಈ ಬೇಸಿಗೆಯಲ್ಲಿ ಕುದುರೆಮುಖದ ಯಾವ್ಯಾವ ಸ್ಥಳಗಳನ್ನು ಭೇಟಿ ನೀಡಬಹುದು ಎನ್ನುವುದನ್ನು ನೋಡೋಣ.

ಕುದುರೆಮುಖ ಪೀಕ್ ಟ್ರೆಕ್

ಕುದುರೆಮುಖ ಪೀಕ್ ಟ್ರೆಕ್

PC-Ramesh Desai

ಕುದುರೆಮುಖದ ಮುಖ್ಯ ಆಕರ್ಷಣೀಯ ತಾಣವೆಂದರೆ ಕುದುರೆಮುಖ ಬೆಟ್ಟ. ಇದು ದೂರದೂರದ ಚಾರಣ ಪ್ರೀಯರನ್ನು ತನ್ನತ್ತ ಸೆಳೆಯುತ್ತದೆ. ಸಮುದ್ರ ಮಟ್ಟದಿಂದ 1894 ಮೀಟರ್ ಎತ್ತರದಲ್ಲಿದೆ. ಇದು ಪ್ರಕೃತಿ ಪ್ರೇಮಿಗಳ ಸ್ವರ್ಗ ಎಂದೇ ಹೇಳಬಹುದು. ಈ ಬೆಟ್ಟದ ಮೇಲೆ ಹತ್ತಿ ಆಕಾಶ ಹಾಗೂ ಮೋಡಗಳನ್ನು ನೋಡುವುದರ ಮಜಾನೇ ಬೇರೆ. ಇಲ್ಲಿಗೆ ಹೋಗುವ ಟ್ರಕ್ಕಿಂಗ್ ಮಾರ್ಗ ಕೂಡಾ ರೋಮಾಂಚನಾಕಾರಿಯಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ

ಕುದುರೆಮುಖ ರಾಷ್ಟ್ರೀಯ ಉದ್ಯಾನ

PC: Karunakar Rayker

ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ ಇರುವ ರಾಷ್ಟ್ರೀಯ ಉದ್ಯಾನವನವು ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಪ್ರಸಿದ್ಧಿ ಹೊಂದಿದೆ. 600ಕಿ.ಮಿ ಸೃಳದಲ್ಲಿ ರುವ ಈ ರಾಷ್ಟ್ರೀಯ ಉದ್ಯಾನವು ರಾಜ್ಯದಲ್ಲಿರುವ ಸಂರಕ್ಷಿತ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದು. ಇದನ್ನು 1987ರಲ್ಲಿ ನ್ಯಾಷನಲ್ ಪಾರ್ಕ ಎಂದು ಘೋಷಿಸಲಾಗಿದೆ. ವಿವಿಧ ಗಿಡಮೂಲಿಕೆಗಳು, ಪ್ರಾಣಿಗಳು ಇಲ್ಲಿವೆ. ಈ ಸ್ಥಳವು ಪ್ರಕೃತಿ ಪ್ರೇಮಿಗಳನ್ನು ಹೊರತುಪಡಿಸಿ ಸಾಹಸ ಪ್ರೀಯರಿಗೂ ಬಹಳ ಇಷ್ಟವಾಗುವಂತಹ ಸ್ಥಳವಾಗಿದೆ. ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಹನುಮಾನ್ ಗುಂಡಿ ಫಾಲ್ಸ್

ಹನುಮಾನ್ ಗುಂಡಿ ಫಾಲ್ಸ್

PC- Jesjose

ಬೆಟ್ಟ, ಗುಟ್ಟಗಳು, ಪರ್ವತಗಳನ್ನು ಹೊರತುಪಡಿಸಿ ನೀವು ಕುದುರೆಮುಖದಲ್ಲಿ ಹನುಮನ್ ಗುಂಡಿ ಫಾಲ್ಸ್‍ನ್ನು ಕೂಡಾ ನೋಡಬಹುದು. ಈ ಫಾಲ್ಸ್‍ನ ಎತ್ತರವು 3268 ಫೀಟ್ ಇದೆ. ಇಲ್ಲಿ ನೀರು 22 ಮೀಟರ್ ಎತ್ತರದಿಂದ ಬೀಳುತ್ತದೆ. ಮಂಗಳೂರಿನಿಂದ ಇಲ್ಲಿಗೆ ಸುಮಾರು 79 ಕಿ.ಮೀ ದೂರವಿದೆ. ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಉತ್ತಮ ತಾಣವಾಗಿದೆ.

ಕಳಸ

ಕಳಸ

PC- Wind4wings

ಚಿಕ್ಕಮಗಳೂರಿನಲ್ಲಿರುವ ಕಳಸ ಒಂದು ಪ್ರಮುಖ ಪ್ರೇಕ್ಷಣಿಯ ತಾಣವಾಗಿದೆ. ಇಲ್ಲಿ ಅನೇಕ ಮಂದಿರಗಳಿವೆ. ಈ ನಗರವು ಭದ್ರಾ ನದಿ ತೀರದಲ್ಲಿದೆ. ಈ ನಗರದ ಇರುವಿಕೆಯ ಹಿಂದೆ ಒಂದು ಪೌರಾಣಿಕ ಕಾರಣವೂ ಇದೆ ಎನ್ನಲಾಗುತ್ತದೆ. ಸ್ಥಳವು ಪ್ರಾಕೃತಿಕ ಹಾಗೂ ಆಧ್ಯಾತ್ಮಿಕ ರೂಪದಲ್ಲಿ ಮ ಹತ್ವಪೂರ್ಣವಾಗಿದೆ. ಇಲ್ಲಿನ ಹೆಚ್ಚಿನ ಜನರು ರೈತರು. ಇವರ ಬೆಳೆಗಳೆಲ್ಲಾ ಇಲ್ಲಿನ ಭದ್ರಾ ನದಿಯನ್ನೇ ಅವಲಂಭಿಸಿದೆ.

ಇಲ್ಲಿನ ಮಣ್ಣಿನಲ್ಲಿ ಕಾಫಿ ಹಾಗೂ ಇನ್ನಿತರ ವೈದ್ಯಕೀಯ ಗಿಡಮೂಲಿಕೆಗಳು ಬೆಳೆಯುತ್ತವೆ. ಇಲ್ಲಿ ಒಂದು ದೇವಿ ಭಗವತಿಯ ಮಂದಿರವಿದೆ. ಹಾಗೆಯೇ ವರಾಹ ಮಂದಿರವೂ ಇದೆ. ಇದನ್ನು ಹೊರತುಪಡಿಸಿ ಕಳಸ ಶ್ರೀ ಕಾಲೇಶ್ವರ ಮಂದಿರವೂ ಫೇಮಸ್ ಆಗಿದೆ.

ಹೊರನಾಡು

ಹೊರನಾಡು

PC- Kgpramod2

ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊರನಾಡು ಕೂಡಾ ಒಂದು. ಇದು ಅನ್ನಪೂಣೇಶ್ವರಿ ದೇವಿಯ ಮಂದಿರವಾಗಿದ್ದು, ಹೊರನಾಡು ಅನ್ನಪೂಣೇಶ್ವರಿ ಎಂದೇ ಬಹಳ ಪ್ರಸಿದ್ಧಿ ಹೊಂದಿದೆ. ಇಲ್ಲಿ ದೇವಿಯ ಚಿನ್ನದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅನ್ನಪೂರ್ಣೇಶ್ವರಿಯ ಪೂಜೆ ಮಾಡಿದ್ದಲ್ಲಿ ಭಕ್ತರಿಗೆ ಅನ್ನಕ್ಕೆ ಯಾವತ್ತೂ ಕಡಿಮೆಯಾಗೋದಿಲ್ಲ ಎನ್ನಲಾಗುತ್ತದೆ.

More News

Read more about: india travel summer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+