Search
  • Follow NativePlanet
Share
» »ಬೆಂಗಳೂರಿನಲ್ಲಿದ್ದು ಕೊಮ್ಮಗಟ್ಟಾ ಸರೋವರ ನೋಡ್ಲಿಲ್ವಾ?

ಬೆಂಗಳೂರಿನಲ್ಲಿದ್ದು ಕೊಮ್ಮಗಟ್ಟಾ ಸರೋವರ ನೋಡ್ಲಿಲ್ವಾ?

ಬೆಂಗಳೂರು ಹೆಚ್ಚು ಜನಜಂಗುಳಿಯಿಂದ ಕೂಡಿರುವ ನಗರವಾಗಿದ್ದರೂ ಭಾರತದಲ್ಲಿ ವಾಸಿಸಲು ಉತ್ತಮ ಸ್ಥಳವಾಗಿದೆ. ವಿ.ವಿ. ಪುರಂನಲ್ಲಿರುವ ಫುಡ್ ಸ್ಟ್ರೀಟ್‌ನಲ್ಲಿ ತಿನ್ನುವುದು, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್, ಎಮ್‌ಜಿ ರೋಡ್‌ನಲ್ಲಿ ಪಾರ್ಟಿ ಮಾಡುವುದು, ಮಾಲ್‌ಗಳಲ್ಲಿ ಸಿನೆಮಾ ನೋಡುವುದು ಅಥವಾ ಲಾಲ್‌ಬಾಗ್‌ ಉದ್ಯಾನವನದ ಮೂಲಕ ಕಾಲಕಳೆಯಬಹುದು.

 ಕಡಿಮೆ ಅನ್ವೇಷಿತ ಸ್ಥಳಗಳು

ಕಡಿಮೆ ಅನ್ವೇಷಿತ ಸ್ಥಳಗಳು

PC: Radha sekar

ಅದರಲ್ಲೂ ಗೊತ್ತಿರುವ ಸ್ಥಳಗಳಿಗೆ ಹೋಗುವುದಕ್ಕಿಂತ ಗೊತ್ತಿಲ್ಲದೇ ಇರುವ ಹೊಸದಾಗಿ ಅನ್ವೇಷಿಸುವ ಸ್ಥಳಗಳಿಗೆ ಭೇಟಿ ನೀಡುವುದು ಉತ್ತಮ. ಒಮ್ಮೆ ನೀವು ತಿಳಿದಿಲ್ಲದಂತಹ ಕಡಿಮೆ ಅನ್ವೇಷಿತ ಸ್ಥಳಗಳು ವಾರಾಂತ್ಯವನ್ನು ಕಳೆಯಲು ಸೂಕ್ತವಾಗಿದೆ. ಏಕಾಂತವಾಗಿ ಕಾಲ ಕಳೆಯಬೇಕೆಂದಿದ್ದರೆ ಕಡಿಮೆ ಅನ್ವೇಷಿತ ಸ್ಥಳಗಳು ನಿಮ್ಮ ಮನಸ್ಸಿಗೆ ರಿಲಾಕ್ಸ್‌ ನೀಡುತ್ತದೆ.

ಕೊಮ್ಮಗಟ್ಟಾ ಸರೋವರ

ಕೊಮ್ಮಗಟ್ಟಾ ಸರೋವರ

PC: Radha sekar

ಬೆಂಗಳೂರು ಅನೇಕ ಸಣ್ಣ ಮತ್ತು ಸುಂದರವಾದ ಸರೋವರಗಳಿಂದ ತುಂಬಿದೆ. ಹೆಬ್ಬಾಳ, ಬೆಳ್ಳಂದೂರ್, ಉಲ್ಸೂರು ಮುಂತಾದ ಕೆರೆಗಳು ಪ್ರಸಿದ್ಧವಾಗಿವೆ. ಇನ್ನು ಬೆಂಗಳೂರಿನ ಸರೋವರಗಳ ಪೈಕಿ ಕೊಮ್ಮಗಟ್ಟಾ ಸರೋವರವೂ ಒಂದಾಗಿದೆ. ಇದು ಕೆಂಗೇರಿಯಲ್ಲಿ ನೈಸ್ ರಸ್ತೆಯ ಪಕ್ಕದಲ್ಲಿಯೇ ಇರುವ ಒಂದು ಸುಂದರವಾದ ಸ್ಥಳವಾಗಿದೆ.

 ಪಕ್ಷಿ ವೀಕ್ಷಣೆಗೆ ಸೂಕ್ತ

ಪಕ್ಷಿ ವೀಕ್ಷಣೆಗೆ ಸೂಕ್ತ

PC: Radha sekar

ಪಕ್ಷಿವೀಕ್ಷಣೆಗೆ ಈ ಸರೋವರವು ಉತ್ತಮ ಸ್ಥಳವಾಗಿದೆ, ಏಕೆಂದರೆ ಇದು ಪೆಲಿಕನ್‌ಗಳು, ಬಾತುಕೋಳಿಗಳು ಇನ್ನಿತರ ಹಲವು ಪಕ್ಷಿಗಳನ್ನು ನೀವಿಲ್ಲಿ ಕಾಣಬಹುದು. ಹಕ್ಕಿಗಳು ಸರೋವರದ ನೀರಿನಲ್ಲಿ ಈಜಾಡುವುದುನ್ನು ಕಾಣಬಹುದು. ಇದು ಬೆಂಗಳೂರಿನ ದೂರದ ಗುಡ್ಡಗಾಡು ಪ್ರದೇಶದಲ್ಲಿ ನೆಲೆಗೊಂಡಿದೆ ಹಾಗಾಗಿ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆಯೂ ಕಡಿಮೆ.

ಸಂಜೆ ಕಾಲಕಳೆಯಬಹುದು

ಸಂಜೆ ಕಾಲಕಳೆಯಬಹುದು

PC: Radha sekar

ಇದೊಂದು ಸುಸಜ್ಜಿತವಾದ ಮತ್ತು ಸುಂದರವಾದ ಸರೋವರವಾಗಿದ್ದು, ಮರಗಳು ಮತ್ತು ಉದ್ಯಾನಗಳಿಂದ ಸುತ್ತುವರೆದಿದೆ. ಈ ಸರೋವರದ ಪರಿಸರದಲ್ಲಿ ಶಾಂತವಾದ ಸಂಜೆಯನ್ನು ಕಳೆಯಬಹುದು, ಮಾನ್ಸೂನ್ ಸಮಯದಲ್ಲಿ ಈ ಸರೋವರಕ್ಕೆ ಭೇಟಿ ನೀಡುವುದು ಉತ್ತಮ. ಮಳೆಗಾಲದಲ್ಲಿ ನೀರು ಹೆಚ್ಚಾಗಿರುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+