Search
  • Follow NativePlanet
Share
» »ಪ್ರವಾಸಿ ತಾಣವಾಗಿರುವ ಇಲ್ಲಿ 1421 ಯೋಧರ ಸಮಾಧಿಗಳಿವೆ

ಪ್ರವಾಸಿ ತಾಣವಾಗಿರುವ ಇಲ್ಲಿ 1421 ಯೋಧರ ಸಮಾಧಿಗಳಿವೆ

ಕೊಹಿಮಾ ನಾಗಲ್ಯಾಂಡ್‌ನ ರಾಜಧಾನಿಯಾಗಿದೆ. ಇದು ಒಂದು ಸುಂದರ ಪ್ರವಾಸಿತಾಣವೂ ಆಗಿದೆ. ಇಲ್ಲಿ ಹೆಚ್ಚಾಗಿ ಆದಿವಾಸಿಗಳು ನೆಲೆಸುತ್ತಾರೆ. ಇಲ್ಲಿನ ಆದಿವಾಸಿಗಳ ಸಂಸ್ಕೃತಿ ಬಹಳ ಕಲರ್‌ಫುಲ್ ಆಗಿದೆ. ಹಾಗಾಗಿ ಇದು ಪ್ರವಾಸಿಗರಿಗೆ ಬಹಳ ಇಷ್ಟವಾಗುತ್ತದೆ. ಇವಿಷ್ಟೇ ಅಲ್ಲದೇ ಪ್ರವಾಸಿಗರು ಇಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿಗೆ ಭೇಟಿನೀಡಬಹುದು. ಅವುಗಳಲ್ಲಿ ರಾಜ್ಯ ಸಂಗ್ರಹಾಲಯ, ಎಂಪೋರಿಯಂ, ಹೆರಿಟೇಜ್ ಕಾಂಪ್ಲೇಕ್ಸ್, ಕೊಹಿಮಾ ಹಳ್ಳಿ ಕೂಡಾ ಸೇರಿದೆ.

ಸಂಗ್ರಹಾಲಯ

ಸಂಗ್ರಹಾಲಯ

PC: PP Yoonus

ನಾಗ ಆದಿವಾಸಿಗಳ ಸಂಸ್ಕೃತಿಗೆ ಸಂಬಂಧಿಸಿದಂತೆ ಯಾವುದೇ ಡಾಕ್ಯುಮೆಂಟ್‌ಗಳಿಲ್ಲ. ನಾಗಲ್ಯಾಂಡ್‌ ಸರ್ಕಾರವು ಬಯಾವಿ ಬೆಟ್ಟದ ಮೇಲೆ ಸಂಗ್ರಹಾಲಯವನ್ನು ನಿರ್ಮಿಸಿದೆ. ಇದರಲ್ಲಿ ನಾಗಲ್ಯಾಂಡ್‌ನ ಸಂಸ್ಕೃತಿ, ಅವರ ವಸ್ತುಗಳು, ಇತಿಹಾಸಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿಯಬಹುದಾಗಿದೆ. ಕಲಾ ಪ್ರೇಮಿಗಳಿಗಾಗಿ ಈ ಸಂಗ್ರಹಾಲಯದಲ್ಲಿ ಆರ್ಟ್ ಗ್ಯಾಲರಿ ಕೂಡಾ ನಿರ್ಮಿಸಲಾಗಿದೆ.

ಹೆರಿಟೇಜ್ ಕಾಂಪ್ಲೆಕ್ಸ್‌

ಹೆರಿಟೇಜ್ ಕಾಂಪ್ಲೆಕ್ಸ್‌

PC: PP Yoonus

ನಾಗಲ್ಯಾಂಡ್ ಸರ್ಕಾರ 1 ಡಿಸೆಂಬರ್ 2003 ರಲ್ಲಿ ಈ ಹೆರಿಟೆಜ್ ಕಾಂಪ್ಲೆಕ್ಸ್‌ನ್ನು ಉದ್ಘಾಟನೆ ಮಾಡಿತು. ಇಲ್ಲಿ ಸಣ್ಣ ನಾಗಲ್ಯಾಂಡ್‌ನ್ನೇ ಕಾಣಬಹುದು. ಇಲ್ಲಿ ದ್ವಿತೀಯ ಮಹಾಯುದ್ಧಕ್ಕೆ ಸಂಬಂಧಿಸಿದ ಸಂಗ್ರಹಾಲಯ, ಕೊಳ್ಳಲು ಅಂಗಡಿ ಮುಗ್ಗಟ್ಟುಗಳು, ರೆಸ್ಟೋರೆಂಟ್‌ಗಳು, ಥಿಯೇಟರ್‌ಗಳು ಇವೆ.

ಯೋಧರ ಸಮಾಧಿ

ಯೋಧರ ಸಮಾಧಿ

PC: PP Yoonus

ದ್ವಿತೀಯ ಮಹಾಯುದ್ಧದ ಸಂದರ್ಭ ಜಪಾನಿಯರು ನಾಗಲ್ಯಾಂಡ್‌ನ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆಯಲ್ಲಿ ಅನೇಕ ಸೈನಿಕರು, ಅಧಿಕಾರಿಗಳು ಹುತಾತ್ಮರಾದರು. ಹುತಾತ್ಮರಾದ ಯೋಧರ ಮೃತದೇಹವನ್ನು ಗ್ಯಾರಿಸನ್ ಬೆಟ್ಟದ ಮೇಲೆ ಹೂಳಲಾಗಿತ್ತು. ಇಲ್ಲಿ ಸೈನಿಕರಿಗೆ ಸಮರ್ಪಿತವಾಗಿರುವ ಸುಮಾರು 1421 ಸಮಾಧಿಗಳಿವೆ. ಇಲ್ಲಿನ ಸಮೀಪದ ನಿವಾಸಿಗಳು ಮೃತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಪ್ರತಿವರ್ಷ ಅಲ್ಲಿಗೆ ಹೋಗುತ್ತಾರೆ. ಸ್ಥಳೀಯರ ಜೊತೆಗೆ ಪ್ರವಾಸಿಗರ ನಡುವೆಯೂ ಈ ಸಮಾಧಿಗಳು ಜನಪ್ರಿಯವಾಗಿವೆ. ಕೊಹಿಮಾ ಸುತ್ತಾಡಲು ಬರುವ ಪ್ರವಾಸಿಗರು ಈ ಸಮಾಧಿಯನ್ನು ನೋಡಲು ಬರುತ್ತಾರೆ.

ಕೊಹಿಮಾ ಚರ್ಚ್‌

ಕೊಹಿಮಾ ಚರ್ಚ್‌

PC: PP Yoonus

ಕೊಹಿಮಾದಲ್ಲಿ ಪ್ರವಾಸಿಗರು ದೊಡ್ಡ ಚರ್ಚ್‌ನ್ನು ನೋಡಬಹುದು. ಇದು ಅತ್ಯಂತ ದೊಡ್ಡದಾಗಿದ್ದು, ಸುಮಾರು 3000 ಜನರು ಕುಳಿತುಕೊಳ್ಳಬಹುದಾಗಿದೆ. ಈ ಚರ್ಚ್‌ ಬಹಳ ಶಾಂತಿಯುತವಾಗಿದ್ದು, ಇಲ್ಲಿ ಪ್ರಾರ್ಥನೆ ಮಾಡಿದ್ರೆ ಮನಸ್ಸಿಗೆ ಶಾಂತಿ ದೊರೆತಂತಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಾಯುಮಾರ್ಗ: ನಾಗಲ್ಯಾಂಡ್‌ನ ದಿಮಾಪುರ್‌ ವಿಮಾನ ಕ್ಷೇತ್ರದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇಲ್ಲಿಮದ ಕೊಹಿಮಾದವರೆಗೆ ಹೋಗುವುದು ಬಹಳ ಸುಲಭ.
ರೈಲು ಮಾರ್ಗ: ವಿಮಾನ ನಿಲ್ದಾಣವನ್ನು ಹೊರತುಪಡಿಸಿ ದಿಮಾಪುರ್‌ನಲ್ಲಿ ರೈಲು ನಿಲ್ದಾನವನ್ನೂ ನಿರ್ಮಿಸಲಾಗಿದೆ. ದಿಮಾಪುರದಿಂದ ಕೊಹಿಮಾ 74 ಕಿ.ಮಿ ದೂರದಲ್ಲಿದೆ.
ರಸ್ತೆ ಮಾರ್ಗ: ಕೊಹಿಮಾ ಬಸ್ ನಿಲ್ದಾಣದಿಂದ ನಾಗಲ್ಯಾಂಡ್‌ನ ವಿಭಿನ್ನ ಸ್ಥಳಗಳಲಿಗೆ ಬಸ್‌ನ ವ್ಯವಸ್ಥೆ ಇದೆ. ಬಸ್‌ ಹೊರತುಪಡಿಸಿ ನಿಮ್ಮ ಖಾಸಗಿ ವಾಹನದ ಮೂಲಕವೂ ನೀವು ಕೊಹಿಮಾ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+