Search
  • Follow NativePlanet
Share
» »ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ನಮ್ಮ ದೇಶದಲ್ಲಿ ಅನೇಕ ಹನುಂತನ ಮಂದಿರಗಳಿವೆ. ಆದರೆ ಇಂದು ನಾವು ಹೇಳ ಹೊರಟಿರುವ ಮಂದಿರದ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಬಂಗಾರದ ಭವ್ಯ ಮಂಟಪದ ನಡುವೆ ಪವನಪುತ್ರ ಹನುಮಾನ್‌ ವಿರಾಜಿತನಾಗಿದ್ದಾನೆ. ಈ ಮಂದಿರವು ಇತರ ಹನುಮಾನ್ ಮಂದಿರಕ್ಕಿಂತ ಭಿನ್ನವಾಗಿದೆ. ಯಾಕೆಂದರೆ ಇಲ್ಲಿ ಹನುಮಾನ್‌ನ ಕಾಲ ಬಳಿ ಶನಿದೇವನಿದ್ದಾನೆ. ಇಲ್ಲಿ ಶನಿದೇವ ಸ್ತ್ರೀಯ ಸ್ವರೂಪದಲ್ಲಿದ್ದಾನೆ.

ಚಿನ್ನದ ಸಿಂಹಾಸನದಲ್ಲಿ ಕುಳಿತಿರುವ ಹನುಮ

ಚಿನ್ನದ ಸಿಂಹಾಸನದಲ್ಲಿ ಕುಳಿತಿರುವ ಹನುಮ

ಗುಜರಾತ್‌ನ ಭಾವನಗರದ ಸಾರಂಗ್‌ಪುರ್‌ನಲ್ಲಿರುವ ಈ ಹನುಮಾನ್‌ ಮಂದಿರವನ್ನು ಕಷ್ಟಭಂಜನ್‌ ಹನುಮಾನ್ ಎನ್ನುತ್ತಾರೆ. ಚಿನ್ನದ ಸಿಂಹಾಸನದಲ್ಲಿ ಕುಳಿತಿದ್ದಾನೆ. ವಜ್ರದ ಮುಕುಟವಿದೆ. ಚಿನ್ನದ ಗಧೆಯೂ ಇಲ್ಲಿದೆ. ಸದ್ಗುರು ಗೋಪಾಲ್ ಸ್ವಾಮಿ ಈ ಮಂದಿರವನ್ನು ನಿರ್ಮಿಸಿದರು ಎನ್ನಲಾಗುತ್ತದೆ.

ಹನುಮನ ಚರಣದ ಬಳಿ ಶನಿದೇವ

ಹನುಮನ ಚರಣದ ಬಳಿ ಶನಿದೇವ

ಸಂಕಟ್‌ಮೋಚನ್‌ ಹನುಮಾನ್‌ನ ಚರಣದ ಬಳಿ ಶನಿದೇವ ಮೂರ್ತಿ ಇದೆ. ಶನಿದೇವ ಹನುಮಾನ್‌ಗೆ ಹೆದರುತ್ತಾರೆ. ಈ ಮಂದಿರದಲ್ಲಿ ತೆಂಗಿನಕಾಯಿ ಹೊಡೆಯಲಾಗುತ್ತದೆ. ಇಲ್ಲಿ ಬಂದು ತೆಂಗಿನಕಾಯಿ ಹೊಡೆದರೆ ನಿಮ್ಮ ಮೇಲೆ ಹನುಮನ ಆಶೀರ್ವಾದ ಯಾವಾಗಲೂ ಇರುತ್ತದೆ.

ಸ್ತ್ರೀಯ ರೂಪದಲ್ಲಿ ಶನಿದೇವ

ಸ್ತ್ರೀಯ ರೂಪದಲ್ಲಿ ಶನಿದೇವ

ಸಾಮಾನ್ಯವಾಗಿ ಶನಿದೇವನಿಗೆ ಎಲ್ಲರೂ ಹೆದರುತ್ತಾರೆ. ಆದರೆ ಇಲ್ಲಿ ಶನಿದೇವ ಭಜರಂಗಬಲಿಗೆ ಹೆದರುತ್ತಾನೆ ಎನ್ನಲಾಗುತ್ತದೆ. ಹನುಮಾನ್‌ ಬ್ರಹ್ಮಚಾರಿಯಾಗಿದ್ದು ಸ್ತ್ರೀಯನ್ನು ಮುಟ್ಟೋದಿಲ್ಲ. ಹಾಗಾಗಿ ಹನುಮಾನ್‌ನಿಂದ ಪಾರಾಗಲು ಶನಿದೇವನು ಸ್ತ್ರೀಯ ರೂಪದಲ್ಲಿ ಹನುಮನ ಚರಣದ ಬಳಿ ಕುಳಿತಿದ್ದಾನೆ.

ಪ್ರೇತಾತ್ಮ ಉಚ್ಛಾಟನೆ

ಪ್ರೇತಾತ್ಮ ಉಚ್ಛಾಟನೆ

ಇಲ್ಲಿಗೆ ಪ್ರತಿನಿತ್ಯ ಭಕ್ತರು ಆಗಮಿಸುತ್ತಾರೆ. ಆದರೆ ಮಂಗಳವಾರ ಹಾಗೂ ಶನಿವಾರ ಈ ಮಂದಿರದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಶನಿದೆಸೆಯಿಂದ ಮುಕ್ತಿ ಪಡೆಯಲು ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಬಂದರೆ ಶನಿದೆಸೆಮುಕ್ತಿಯಾಗುತ್ತದಂತೆ. ಮಂಗಳವಾರ ಹಾಗೂ ಶನಿವಾರ ಈ ಪ್ರೇತಾತ್ಮವನ್ನು ಹೊರಹಾಕುವ ಕಾರ್ಯ ನಡೆಯುತ್ತದೆ.

ಎಲ್ಲಾ ಜಾತಿ ಧರ್ಮದವರು ಬರುತ್ತಾರೆ

ಎಲ್ಲಾ ಜಾತಿ ಧರ್ಮದವರು ಬರುತ್ತಾರೆ

ಭೂತ, ಪ್ರೇತ ಭಾದಿತ ವ್ಯಕ್ತಿಗಳಿಗೆ, ಕೆಟ್ಟ ದೃಷ್ಠಿ ತೆಗೆಯಲು ಇಲ್ಲಿಗೆ ಬರುತ್ತಾರೆ. ಇಲ್ಲಿನ ಪೂಜಾರಿ ಮಂತ್ರ ಹೇಳಿ ನೀರು ಚಿಮುಕಿಸಿದಾಗ ವ್ಯಕ್ತಿಯ ಮೈ ಮೇಲೆ ಇದ್ದ ಆತ್ಮ ಹೊರಬರುತ್ತದೆ ಎನ್ನಲಾಗುತ್ತದೆ. ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಬರುತ್ತಾರೆ.

ಶನಿದೇವನ ಆಶೀರ್ವಾದವೂ ಸಿಗುತ್ತೆ

ಶನಿದೇವನ ಆಶೀರ್ವಾದವೂ ಸಿಗುತ್ತೆ

ಭಜರಂಗ ಬಲಿಯ ರೂಪವು ಶನಿಯ ಪ್ರಕೋಪದಿಂದ ಮುಕ್ತಿ ಮಾಡುತ್ತದೆ ಎನ್ನಲಾಗುತ್ತದೆ. ಹಾಗಾಗಿ ಹೆಚ್ಚಿನವರು ಶನಿದೆಸೆಯಿಂದ ಮುಕ್ತಿ ಪಡೆಯಲು ಇಲ್ಲಿಗೆ ಬರುತ್ತಾರೆ. ಇಲ್ಲಿ ಭಕ್ತರಿಗೆ ಭಜರಂಗ ಬಲಿಯ ಜೊತೆ ಶನಿದೇವನ ಆಶೀರ್ವಾದವೂ ಸಿಗುತ್ತದೆ.

More News

Read more about: india travel temple gujarat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+