Search
  • Follow NativePlanet
Share
» »ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಶೂಟಿಂಗ್ ನಂತರ ಫೇಮಸ್ ಆಯ್ತಂತೆ ಈ ನಗರ

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಶೂಟಿಂಗ್ ನಂತರ ಫೇಮಸ್ ಆಯ್ತಂತೆ ಈ ನಗರ

1993ರಲ್ಲಿ ತೆರೆಕಂಡಿರುವ ರಾಜ್‌ಕುಮಾರ್ ಅಭಿನಯದ ಆಕಸ್ಮಿಕ ಸಿನಿಮಾ ನಿಮಗೆ ಗೊತ್ತೇ ಇರಬಹುದು. ಈಗಿನ ಯುವಕರಿಗೆ ಆ ಸಿನಿಮಾ ಗೊತ್ತಿಲ್ಲದಿದ್ದರೂ ಆ ಸಿನಿಮಾದ ಹಾಡಂತೂ ಗೊತ್ತೇ ಇರುತ್ತದೆ. ನಮ್ಮ ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಎತ್ತಿ ಹಿಡಿದಿರುವಂತಹ ಹಾಡು ಅದಾಗಿದೆ. ಅದುವೇ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು".

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

ಕರ್ನಾಟಕ ರಾಜ್ಯೋತ್ಸವದಂದು "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು " ಹಾಡು ಎಲ್ಲೆಡೆ ಕೇಳ ಸಿಗುತ್ತದೆ. ಇಂತಹ ಅದ್ಭುತ ಹಾಡಿನ ಚಿತ್ರೀಕರಣ ಆಗಿದ್ದು ಎಲ್ಲಿ? ರಾಜ್‌ ಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲಿ ಅನ್ನೋದನ್ನು ನೋಡೋಣ.

ಹುಬ್ಬಳ್ಳಿ ಹೃದಯ ಭಾಗ

ಹುಬ್ಬಳ್ಳಿ ಹೃದಯ ಭಾಗ

ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ವನ್ನು ನೀವು ನೋಡಿರಬಹುದು. ಪ್ರಸಿದ್ಧ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವು ಟ್ರಾಫಿಕ್ ದ್ವೀಪವಾಗಿ ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿದೆ. ಈ ಸಂಚಾರ ಜಂಕ್ಷನ್ನಲ್ಲಿ ಎಂಟು ರಸ್ತೆಗಳು ಸಂಧಿಸುತ್ತದೆ.

ಚೆನ್ನಮ್ಮ ಸರ್ಕಲ್

ಚೆನ್ನಮ್ಮ ಸರ್ಕಲ್

ಕಿತ್ತೂರು ರಾಣಿ ಚೆನ್ನಮ್ಮ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಇಲ್ಲಿನ ಶೌರ್ಯದ ನೆನಪಿಗಾಗಿ ನಿರ್ಮಿಸಲಾಗಿದೆ. ರಾಣಿ ಚೆನ್ನಮ್ಮ ಅವರು ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ರಾಣಿ ಚೆನ್ನಮ್ಮನ ಪ್ರತಿಮೆ

ರಾಣಿ ಚೆನ್ನಮ್ಮನ ಪ್ರತಿಮೆ

ಚೆನ್ನಮ್ಮ ಸರ್ಕಲ್‌ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕುದುರೆ ಮೇಲೆ ಕೂತಿರುವ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಬಹುತೇಕ ಸಿನಿಮಾದ ಹಾಡುಗಳು, ಡ್ಯಾನ್ಸ್‌, ಫೈಟ್‌ ಸೀನ್‌ಗಳು ಇಲ್ಲೇ ಶೂಟಿಂಗ್‌ ಆಗುತ್ತವೆ.

ಹಾಡಿನಿಂದ ಫೇಮಸ್ ಆದ ಹುಬ್ಬಳ್ಳಿ

ಹಾಡಿನಿಂದ ಫೇಮಸ್ ಆದ ಹುಬ್ಬಳ್ಳಿ

"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಹಾಡಿನ ಶೂಟಿಂಗ್ ನಡೆದಿದ್ದು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಹಾಗೂ ಸಿದ್ಧರೂಢ ಮಠದ ಬಳಿ . ಈ ಹಾಡು ಹಿಟ್‌ ಆದ ನಂತರವಂತೂ ಹುಬ್ಬಳ್ಳಿ, ಚೆನ್ನಮ್ಮ ಸರ್ಕಲ್ ಸಾಕಷ್ಟು ಫೇಮಸ್ ಆಯಿತು.

ಹಲವಾರು ಸಿನಿಮಾ ಶೂಟಿಂಗ್ ನಡೆದಿದೆ

ಹಲವಾರು ಸಿನಿಮಾ ಶೂಟಿಂಗ್ ನಡೆದಿದೆ

ಕಳೆದ ಹಲವು ವರ್ಷಗಳಲ್ಲಿ ಹಲವಾರು ಸಿನಿಮಾಗಳು ಇಲ್ಲಿ ಚಿತ್ರೀಕರಣ ನಡೆಸಿವೆ. ಅಂಬರೀಶ್ ಅಭಿನಯದ ಅಣ್ಣಾವ್ರು, ಪುನೀತ್‌ ರಾಜ್‌ ಕುಮಾರ್ ಅಭಿನಯದ ಅಜಯ್, ಶಿವರಾಜ್‌ ಕುಮಾರ್ ನಟಿಸಿರುವ ಶ್ರೀರಾಮ್, ಸುದೀಪ್‌ ನಡಿಸಿರುವ ಹುಬ್ಬಳ್ಳಿ, ದರ್ಶನ್ ನಟಿಸಿರುವ ಅಯ್ಯ, ಪ್ರಜ್ವಲ್ ಅಭಿನಯಿಸಿರುವ ಕೋಟೆ, ಸೂರ್ಯ ಐಪಿಎಸ್, ಮುಂತಾದ ಸಿನಿಮಾಗಳು ಹುಬ್ಬಳ್ಳಿಯಲ್ಲಿ ಚಿತ್ರೀಕರಣ ನಡೆಸಿವೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

ಇಂದಿರಾ ಗ್ಲಾಸ್ ಹೌಸ್ , ಮೂರುಸಾವಿರ ಮಠ, ನವೀಲ್‌ತೀರ್ಥ, ನೃಪತುಂಗ ಬೆಟ್ಟ, ಭವಾನಿಶಂಕರ ದೇವಾಲಯ ಹುಬ್ಬಳ್ಳಿಯಲ್ಲಿರುವ ಇತರ ಪ್ರಮುಖ ಪ್ರೇಕ್ಷಣೀಯ ತಾಣಗಳು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+