Search
  • Follow NativePlanet
Share
» »IRCTCಯ ಈ ಪ್ರವಾಸ ಪ್ಯಾಕೇಜ್‌ ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ…ಎಲ್ಲೆಲ್ಲಿ ಹೋಗಬಹುದು, ಇಲ್ಲಿದೆ ನೋಡಿ ಮಾಹಿತಿ

IRCTCಯ ಈ ಪ್ರವಾಸ ಪ್ಯಾಕೇಜ್‌ ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ…ಎಲ್ಲೆಲ್ಲಿ ಹೋಗಬಹುದು, ಇಲ್ಲಿದೆ ನೋಡಿ ಮಾಹಿತಿ

ಮಳೆಗಾಲದ ನಂತರದ ತಿಂಗಳು ಮಾತ್ರ ನೀವು ಮಾನ್ಸೂನ್ ತಾಜಾತನವನ್ನು ಚೆನ್ನಾಗಿ ಅಸ್ವಾದಿಸಬಹುದು. ಈ ಸಮಯದಲ್ಲಿ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ವಿಮಾನಗಳ ಬೆಲೆಗಳು ತುಂಬಾ ಅಗ್ಗವಾಗಿರುತ್ತವೆ. ಹಾಗಾಗಿ ಇದು ಪ್ರವಾಸವನ್ನು ಯೋಜಿಸಲು ಉತ್ತಮ ಸಮಯ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಪ್ರವಾಸಕ್ಕೆ ತೆರಳಲು ರೆಡಿಯಾಗುತ್ತಿದ್ದರೆ ಈ ಲೇಖನದಲ್ಲಿ ನಾವು ಭಾರತೀಯ ರೈಲ್ವೆಯ ಕೆಲವು ಟೂರ್ ಪ್ಯಾಕೇಜ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅಂಡಮಾನ್‌ ಪ್ಯಾಕೇಜ್‌ ಮಾತ್ರ ಬೆಂಗಳೂರಿನಿಂದ ಪ್ರಾರಂಭವಾಗಲಿದೆ.

ಎಲ್ಲೆಲ್ಲಿ ಹೋಗಬಹುದು?

ಹ್ಯಾವ್‌ಲಾಕ್: ಅಂಡಮಾನ್‌ಗೆ ಬಂದ ನಂತರ ಪ್ರವಾಸಿಗರು ಹೆಚ್ಚು ನೋಡಲು ಬಯಸುವುದು ಹ್ಯಾವ್‌ಲಾಕ್ ದ್ವೀಪ. ಈ ದ್ವೀಪದ ಭೌಗೋಳಿಕ ಸ್ಥಳ, ಅದರ ಆಕರ್ಷಣೆಗಳು ಮತ್ತು ಇಲ್ಲಿ ಲಭ್ಯವಿರುವ ಸೌಲಭ್ಯಗಳು ಇದನ್ನು ಅದ್ಭುತ ಸ್ಥಳವನ್ನಾಗಿ ಮಾಡಿದೆ. ಸರಿಸುಮಾರು 113 ಚದರ ಕಿಮೀ ಪ್ರದೇಶದಲ್ಲಿ ಹರಡಿರುವ ಈ ದ್ವೀಪವು ಪೋರ್ಟ್ ಬ್ಲೇರ್‌ನಿಂದ ಈಶಾನ್ಯಕ್ಕೆ 39 ಕಿಮೀ ದೂರದಲ್ಲಿದೆ.

havelock island

ಹ್ಯಾವ್‌ಲಾಕ್ ಅಂಡಮಾನ್‌ನ ಅತ್ಯಂತ ವಿಶೇಷವಾದ ಬೀಚ್ ವಿಹಾರ ತಾಣವಾಗಿದೆ. ಅದಕ್ಕಾಗಿಯೇ ಪ್ರವಾಸಿಗರು ದೇಶ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆರಾಮದಾಯಕ ಅನುಭವಕ್ಕಾಗಿ ಇಲ್ಲಿಗೆ ಬರುತ್ತಾರೆ. ಬಿಳಿ ಮರಳಿನ ಕಡಲತೀರಗಳು ಮತ್ತು ಸುತ್ತಮುತ್ತಲಿನ ಹಸಿರು ಈ ಸ್ಥಳವನ್ನು ಭಾರತದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿಸಿದೆ.

ನೀಲ್ ನಾರ್ತ್ ವೇ ಐಲ್ಯಾಂಡ್: ಅಂಡಮಾನ್ ದ್ವೀಪಸಮೂಹದಲ್ಲಿರುವ ಅನೇಕ ಸುಂದರ ದ್ವೀಪಗಳಲ್ಲಿ ನೀಲ್ ದ್ವೀಪವೂ ಒಂದು. ಡಿಸೆಂಬರ್ 30, 2018 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮರುನಾಮಕರಣ ಮಾಡಿದ ನಂತರ ಇದನ್ನು ಈಗ ಶಹೀದ್ ದ್ವೀಪ ಎಂದು ಕರೆಯಲಾಗುತ್ತದೆ. ಈ ದ್ವೀಪವು ಪೋರ್ಟ್ ಬ್ಲೇರ್‌ನಿಂದ ಸಮುದ್ರದ ಮೂಲಕ ಸುಮಾರು 37 ಕಿಮೀ ದೂರದಲ್ಲಿದೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ನೀಲ್ ದ್ವೀಪವು ಅದರ ವಿಶಿಷ್ಟ ಜೀವವೈವಿಧ್ಯ ಮತ್ತು ದಟ್ಟವಾದ ಉಷ್ಣವಲಯದ ಕಾಡುಗಳು ಮತ್ತು ಬಿಳಿ ಮರಳಿನ ಕಡಲತೀರಗಳು, ಸಮೃದ್ಧ ಹಸಿರಿಗೆ ಹೆಸರುವಾಸಿಯಾಗಿದೆ. ಹೆಚ್ಚಿನ ಭಾಗವು ಅರಣ್ಯದಿಂದ ಆವೃತವಾಗಿದೆ.

portblair

ಪೋರ್ಟ್ ಬ್ಲೇರ್: ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾಗಿದೆ. ನೀವು ಭೇಟಿ ನೀಡಲು ಅನೇಕ ಸ್ಥಳಗಳ ಹೊರತಾಗಿ, ನಿಮ್ಮ ರಜಾದಿನವನ್ನು ಆನಂದಿಸಲು ಇಲ್ಲಿ ಇನ್ನೂ ಅನೇಕ ವಿಷಯಗಳಿವೆ. ಸೆಲ್ಯುಲಾರ್ ಜೈಲ್, ಲೈಟ್ ಅಂಡ್ ಸೌಂಡ್ ಶೋ, ಸ್ಟ್ರೀಟ್‌ ಮಾರ್ಕೇಟ್‌, ಗಾಂಧಿ ಪಾರ್ಕ್‌, ಅಬರ್ಡೀನ್ ಬಜಾರ್‌ ಇಲ್ಲಿ ನೋಡಲೇಬೇಕಾದ ತಾಣಗಳಾಗಿವೆ. ಅಂದಹಾಗೆ ವಿವಿಧ ಬಣ್ಣಗಳು ಮತ್ತು ಆಕರ್ಷಕ ವಿನ್ಯಾಸಗಳನ್ನು ಹೊಂದಿರುವ ಸೆರಾಂಗ್‌ಗಳು, ಟೋಪಿಗಳು ಅಂಡಮಾನ್‌ನ ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿವೆ.

ರಾಸ್ ಐಲ್ಯಾಂಡ್‌: ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಕರೆಯಲ್ಪಡುವ ಅಂಡಮಾನ್ ದ್ವೀಪವಾದ ರಾಸ್ ದ್ವೀಪವು ಸಾಮ್ರಾಜ್ಯಶಾಹಿ ಇತಿಹಾಸದ ಕರಾಳ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ರಾಸ್ ದ್ವೀಪವು ಐಷಾರಾಮಿ ಬಂಗಲೆಗಳು, ಬೃಹತ್ ಚರ್ಚ್, ಬಾಲ್ ರೂಂ ಮತ್ತು ಸ್ಮಶಾನದ ಅವಶೇಷಗಳನ್ನು ಹೊಂದಿದೆ.

neilisland

ಪ್ಯಾಕೇಜ್‌ನ ವಿಶೇಷತೆಗಳು

1. ಈ ಪ್ಯಾಕೇಜ್ 5 ರಾತ್ರಿಗಳು ಮತ್ತು 6 ದಿನಗಳ ಕಾಲ ಇರುತ್ತದೆ.

2. ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಸಿಗುತ್ತದೆ.

3. ನೀವು ಇಬ್ಬರೊಂದಿಗೆ ಪ್ರಯಾಣಿಸಿದರೆ, ಈ ಪ್ಯಾಕೇಜ್‌ಗೆ ನೀವು 43,950ರೂ. ಪಾವತಿಸಬೇಕಾಗುತ್ತದೆ.

4. ಮಕ್ಕಳಿಗೆ ಪ್ಯಾಕೇಜ್ ಶುಲ್ಕ 34,750 ರೂ.

5. ಈ ಪ್ಯಾಕೇಜ್ ಹೋಟೆಲ್, ಆಹಾರ ಮತ್ತು ಪ್ರಯಾಣಕ್ಕಾಗಿ ಬಸ್ ಮತ್ತು ರೈಲು ಟಿಕೆಟ್‌ಗಳ ವೆಚ್ಚವನ್ನು ಒಳಗೊಂಡಿದೆ.

6. ಈ ಪ್ರವಾಸ ಪ್ಯಾಕೇಜ್ ಬೆಂಗಳೂರಿನಿಂದ ಆರಂಭವಾಗಲಿದೆ.

ದೆಹಲಿ ಪ್ರವಾಸ ಪ್ಯಾಕೇಜ್‌

ದೆಹಲಿಯಿಂದ ಪ್ರಾರಂಭವಾಗುವ ಈ ಪ್ರವಾಸದ ಪ್ಯಾಕೇಜ್ ಬಗ್ಗೆ ನಾವು ಮಾತನಾಡುವುದಾದರೆ ನಿಮಗೆ ತಿರುಪತಿಗೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಈ ಪ್ಯಾಕೇಜ್‌ಗಾಗಿ ಟಿಕೆಟ್‌ಗಳನ್ನು ಸೆಪ್ಟೆಂಬರ್ 28 ರಂದು ಬುಕ್ ಮಾಡಬಹುದು. ಪ್ಯಾಕೇಜ್ 1 ರಾತ್ರಿ ಮತ್ತು 2 ದಿನಗಳ ಕಾಲ ಇರುತ್ತದೆ. ನೀವು ವಿಮಾನದಲ್ಲಿ ಪ್ರಯಾಣಿಸಲು ಅವಕಾಶವನ್ನು ಪಡೆಯುತ್ತೀರಿ. ಪ್ರತಿ ವ್ಯಕ್ತಿಗೆ ಪ್ಯಾಕೇಜ್ ಶುಲ್ಕ 18,900 ರೂ.ಇರುತ್ತದೆ. ನೀವು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಿಂದ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಹೈದರಾಬಾದ್‌ ಪ್ರವಾಸ ಪ್ಯಾಕೇಜ್

ಈ ಪ್ರವಾಸದ ಪ್ಯಾಕೇಜ್‌ನಲ್ಲಿ ನೀವು ಜೈಪುರ, ಜೋಧ್‌ಪುರ, ಪುಷ್ಕರ್ ಮತ್ತು ಉದಯಪುರಕ್ಕೆ ಭೇಟಿ ನೀಡುವ ಅವಕಾಶವನ್ನು ಪಡೆಯುತ್ತೀರಿ. ನೀವು ಹೈದರಾಬಾದ್‌ನಿಂದ ಪ್ಯಾಕೇಜ್‌ಗಾಗಿ ಬುಕ್ ಮಾಡಬಹುದು. ಈ ಪ್ರವಾಸ ಪ್ಯಾಕೇಜ್ 5 ರಾತ್ರಿಗಳು ಮತ್ತು 6 ದಿನಗಳ ಕಾಲ ಇರುತ್ತದೆ. ಪ್ಯಾಕೇಜ್‌ಗಾಗಿ ನೀವು ಸೆಪ್ಟೆಂಬರ್ 23 ರಿಂದ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಭಾರತೀಯ ರೈಲ್ವೆಯ ಈ ಪ್ರವಾಸ ಪ್ಯಾಕೇಜ್‌ನೊಂದಿಗೆ ನೀವು ರೈಲಿನಲ್ಲಿ ಪ್ರಯಾಣಿಸಬಹುದು. ಶುಲ್ಕದ ಬಗ್ಗೆ ಮಾತನಾಡುವುದಾದರೆ ಪ್ರತಿ ವ್ಯಕ್ತಿಗೆ ಪ್ಯಾಕೇಜ್ ಶುಲ್ಕ 32,900 ರೂ. ಆದರೆ, ಮಕ್ಕಳ ಶುಲ್ಕ 28,650 ರೂ.

More News

Read more about: irctc andaman bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+