ಸಾಮಾನ್ಯವಾಗಿ ರೈಲು ಪ್ರಯಾಣವನ್ನು ಇಷ್ಟಪಡದ ಮಂದಿ ಕಡಿಮೆಯೇ ಬಿಡಿ. ಕಂಫರ್ಟಬಲ್ ಜರ್ನಿಗೆ, ಲಾಂಗ್ ಜರ್ನಿಗೆ ಪ್ರತಿಯೊಬ್ಬರ ಮೊದಲ ಆದ್ಯತೆ ರೈಲು ಪ್ರಯಾಣ. ಇನ್ನು ನಮ್ಮ ದೇಶದ ಮೂಲೆ ಮೂಲೆಗಳಿಗೂ ರೈಲು ಸಂಪರ್ಕವಿರುವುದರಿಂದ ನಮಗೆ ಓಡಾಡುವುದಕ್ಕೂ ಸಲೀಸು. ಇನ್ನು ರೈಲ್ವೆ ಪ್ರಯಾಣದ ವಿಚಾರಕ್ಕೆ ಬರುವುದಾದರೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಲು ಎರಡು ಮಾರ್ಗಗಳಿವೆ. ಒಂದು ರಿಸರ್ವೇಶನ್ ಮತ್ತು ಇನ್ನೊಂದು ಅನ್ ರಿಸರ್ವಡ್.
ಸಾಮಾನ್ಯವಾಗಿ ರೈಲು ಪ್ರಯಾಣವನ್ನು ಇಷ್ಟಪಡದ ಮಂದಿ ಕಡಿಮೆಯೇ ಬಿಡಿ. ಕಂಫರ್ಟಬಲ್ ಜರ್ನಿಗೆ, ಲಾಂಗ್ ಜರ್ನಿಗೆ ಪ್ರತಿಯೊಬ್ಬರ ಮೊದಲ ಆದ್ಯತೆ ರೈಲು ಪ್ರಯಾಣ. ಇನ್ನು ನಮ್ಮ ದೇಶದ ಮೂಲೆ ಮೂಲೆಗಳಿಗೂ ರೈಲು ಸಂಪರ್ಕವಿರುವುದರಿಂದ ನಮಗೆ ಓಡಾಡುವುದಕ್ಕೂ ಸಲೀಸು. ಇನ್ನು ರೈಲ್ವೆ ಪ್ರಯಾಣದ ವಿಚಾರಕ್ಕೆ ಬರುವುದಾದರೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಲು ಎರಡು ಮಾರ್ಗಗಳಿವೆ. ಒಂದು ರಿಸರ್ವೇಶನ್ ಮತ್ತು ಇನ್ನೊಂದು ಅನ್ ರಿಸರ್ವಡ್.
ರಿಸರ್ವೇಶನ್ ನಲ್ಲಿ ನೀವು ಮುಂಚಿತವಾಗಿ ರೈಲಿನಲ್ಲಿ ಸೀಟನ್ನು ಕಾಯ್ದಿರಿಸಿ ನಿಮಗೆ ನಿಗದಿಪಡಿಸಿದ ಸೀಟಿನಲ್ಲಿ ಪ್ರಯಾಣಿಸಬಹುದು. ಇನ್ನು ಅನ್ ರಿಸರ್ವಡ್ ನಲ್ಲಿ ನೀವು ರೈಲು ನಿಲ್ದಾಣಕ್ಕೆ ಹೋಗಿ ಜನರಲ್ ಟಿಕೆಟ್ ಖರೀದಿಸಿ, ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಎಲ್ಲಿಯಾದರೂ ಸೀಟ್ ಪಡೆಯಬಹುದು. ಆ ನಂತರ ಪ್ರಯಾಣಿಸಬಹುದು. ಪ್ರಯಾಣ ದೀರ್ಘವಾಗಿದ್ದರೆ ಜನರಲ್ ಕೋಚ್‌ನಲ್ಲಿ ದೊಡ್ಡ ಸಮಸ್ಯೆ ಇರುತ್ತದೆ. ಅದಕ್ಕಾಗಿಯೇ ಜನರು ಪ್ರಯಾಣದ ಸಮಯದಲ್ಲಿ ಸ್ವಲ್ಪ ಮುಂಚಿತವಾಗಿಯೇ ರಿಸರ್ವೇಶನ್ ಮಾಡಿಸುತ್ತಾರೆ.

ಟಿಕೆಟ್ ಕನ್ ಫರ್ಮ್ ಆದ್ರೆ ಮಾತ್ರ ಹಣ ಕಡಿತ
ಆದರೆ ನಿಮಗೆ ಗೊತ್ತಾ...ಹಿಂದೆಲ್ಲಾ ರಿಸರ್ವೇಶನ್ ಮಾಡಿಸಲು ಕಷ್ಟಪಡಬೇಕಾಗಿತ್ತು. ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಬುಕಿಂಗ್ ಮಾಡುವಾಗ ಅನೇಕ ಬಾರಿ ನಿಮಗೆ ಕನ್ ಫರ್ಮ್ ಸೀಟ್ ಸಿಗುತ್ತಿರಲಿಲ್ಲ. ಹಾಗಾಗಿ ನೀವು ಮತ್ತೆ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವನ್ನು ಎರಡು ಬಾರಿಯೂ ಕಡಿತಗೊಳಿಸಲಾಗುತ್ತಿತ್ತು. ಹಾಗೆ ನೋಡಿದರೆ ಹಲವರ ಖಾತೆಯಲ್ಲಿ ಎರಡು ಬಾರಿ ಬುಕ್ ಮಾಡುವಷ್ಟು ಹಣ ಇರುವುದಿಲ್ಲ. ಇದಕ್ಕಾಗಿಯೇ IRCTC ಹೊಸ ವೈಶಿಷ್ಟ್ಯವನ್ನು ನೀಡಿದೆ. ಇದರಲ್ಲಿ ನಿಮ್ಮ ಟಿಕೆಟ್ ಕನ್ ಫರ್ಮ್ ಆದಾಗ ಮಾತ್ರ ನಿಮ್ಮ ಹಣವನ್ನು ಕಡಿತಗೊಳಿಸಲಾಗುತ್ತದೆ.
IRCTC ಯ ಆಟೋ ಪೇ ವೈಶಿಷ್ಟ್ಯ
ನಾವು ಕಳೆದ ಕೆಲವು ವರ್ಷಗಳಿಂದ ಗಮನಿಸಿದರೆ, ರೈಲ್ವೆಯು ಪ್ರಯಾಣಿಕರಿಗಾಗಿ ಹಲವಾರು ಸೌಲಭ್ಯಗಳನ್ನು ಸುಧಾರಿಸಿದೆ. ಈಗ ರೈಲಿನಲ್ಲಿ ಬುಕ್ಕಿಂಗ್ ಪ್ರಕ್ರಿಯೆಯೂ ಹೆಚ್ಚು ಸುಲಭವಾಗಿದೆ. ಈ ಹಿಂದೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ ಹಲವು ಬಾರಿ ಟಿಕೆಟ್ ವೇಟಿಂಗ್ ಲಿಸ್ಟ್ ನಲ್ಲಿ ಇರುತ್ತಿತ್ತು. ಹಾಗೆಯೇ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತಿತ್ತು. ಆದರೆ ಈಗ ರೈಲ್ವೆಯಿಂದ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರ ಅಡಿಯಲ್ಲಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದಾಗ ಅಂದರೆ ರಿಸರ್ವೇಶನ್ ಮಾಡುವ ವೇಳೆ ಟಿಕೆಟ್ ಕನ್ಫರ್ಮ್ ಆದಾಗ ಮಾತ್ರ ಅವರ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.

ಇದು iPay ವೈಶಿಷ್ಟ್ಯ
ಈ ಹೊಸ ವೈಶಿಷ್ಟ್ಯದ ಹೆಸರು iPay ಆಟೋ ಪೇ ಆಗಿದೆ. ನೀವು IRCTC ಅಪ್ಲಿಕೇಶನ್ ಅಥವಾ IRCTC ವೆಬ್‌ಸೈಟ್ ಮೂಲಕ iPay ವೈಶಿಷ್ಟ್ಯವನ್ನು ಪಡೆಯಬಹುದು. ಈ ಮೂಲಕ ಟಿಕೆಟ್ ಕಾಯ್ದಿರಿಸಿದರೆ ತಕ್ಷಣವೇ ನಿಮ್ಮ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಬದಲಿಗೆ, ನಿಮ್ಮ ಖಾತೆಯಿಂದ ನಿಮ್ಮ ಟಿಕೆಟ್ ದುಡ್ಡನ್ನು ಬ್ಲಾಕ್/ಹೋಲ್ಡ್ ಮಾಡಿಕೊಳ್ಳಲಾಗುತ್ತದೆ. ಆದರೆ ನಿಮ್ಮ ಟಿಕೆಟ್ ಖಾತ್ರಿಯಾದಾಗ ಮಾತ್ರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ.
IPO ತರಹ ಕಾರ್ಯನಿರ್ವಹಣೆ
ನಾವು ಈ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ ಒಂದು ರೀತಿಯಲ್ಲಿ ಇದು IPO ತರಹ ಕಾರ್ಯನಿರ್ವಹಿಸುತ್ತದೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಎಂದಾದರೂ IPO ಖರೀದಿಸಿದ್ದರೆ, ಆಗ ಇದು ನಿಮಗೆ ಸುಲಭವಾಗಿ ಅರ್ಥವಾಗುತ್ತದೆ. ನೀವು IPO ಗಾಗಿ ಅರ್ಜಿ ಸಲ್ಲಿಸಿದಾಗ ನೀವು IPO ಗಾಗಿ ಅರ್ಜಿ ಸಲ್ಲಿಸಿದ ತಕ್ಷಣ, ಹಣವು ಲಾಕ್ ಆಗುತ್ತದೆ ಮತ್ತು ಷೇರು ಹಂಚಿಕೆಯ ನಂತರವೇ ಖಾತೆಯಿಂದ ಕಡಿತಗೊಳ್ಳುತ್ತದೆ.
ಮರುಪಾವತಿಯೂ ಸುಲಭ
ಈ ವೈಶಿಷ್ಟ್ಯದ ಮೂಲಕ ನೀವು ಟಿಕೆಟ್ ಬುಕ್ ಮಾಡಿದರೆ, ನಿಮ್ಮ ಟಿಕೆಟ್ ರದ್ದುಗೊಂಡರೆ, ಮರುಪಾವತಿ ಪಡೆಯಲು ನೀವು ಕಾಯಬೇಕಾಗಿಲ್ಲ. iPay ನಿಂದ ವಿಧಿಸಲಾದ ಖಾತೆಯ ಹಣದ ಮೇಲಿನ ಹಿಡಿತವನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ. IRCTC ಈ ಸೌಲಭ್ಯವನ್ನು 2021 ರ ಆರಂಭದಲ್ಲಿ ಪ್ರಾರಂಭಿಸಿತು. IRCTC-iPay ಮೂಲಕ ಪಾವತಿ ಮಾಡಲು, ಬಳಕೆದಾರರು ತಮ್ಮ UPI ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ಅಥವಾ ಯಾವುದೇ ಇತರ ಪಾವತಿ ಫಾರ್ಮ್ ಅನ್ನು ಬಳಸಲು ಅನುಮತಿ ಮತ್ತು ವಿವರಗಳನ್ನು ನೀಡಬೇಕು. IRCTC ಯಲ್ಲಿ ಭವಿಷ್ಯದ ವಹಿವಾಟುಗಳಿಗಾಗಿ ಬಳಕೆದಾರರು ಈ ವಿವರಗಳನ್ನು ಬಳಸಲು ಸಾಧ್ಯವಾಗುತ್ತದೆ.

IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕಿಂಗ್ ಮಾಡುವಾಗ, ನೀವು IRCTC iPay ಮೂಲಕ ಬಹುಬೇಗ ಮರುಪಾವತಿಯನ್ನು ಸಹ ಪಡೆಯುತ್ತೀರಿ. IRCTC ಪ್ರಕಾರ, ಆಟೋಪೇ ಅಪ್ಲಿಕೇಶನ್ ಸೌಲಭ್ಯವು ಬಳಕೆದಾರರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಸುಲಭಗೊಳಿಸುತ್ತದೆ ಮತ್ತು ಟಿಕೆಟ್ ರದ್ದತಿಯ ಸಂದರ್ಭದಲ್ಲಿ ಮರುಪಾವತಿ ಪ್ರಕ್ರಿಯೆಯು ಸಹ ಸುಲಭವಾಗಿದೆ. ಇದರಿಂದ ಬಳಕೆದಾರರ ಸಮಯವೂ ಉಳಿತಾಯವಾಗುತ್ತದೆ.
ಯಾರಿಗೆ ಲಾಭ?
ಈ ವೈಶಿಷ್ಟ್ಯವು ಹೆಚ್ಚು ಪ್ರಯೋಜನಕಾರಿಯಾಗಿದೆ. ಹೇಗೆಂದರೆ ಇ-ಟಿಕೆಟ್ ಚಾರ್ಟ್ ಸಿದ್ಧಪಡಿಸಿದ ನಂತರವೂ ಟಿಕೆಟ್ ಕನ್ ಫರ್ಮ್ ಆಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಕೆಲವು ಶುಲ್ಕಗಳನ್ನು ಮಾತ್ರ ಕಡಿತಗೊಳಿಸಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ತಕ್ಷಣವೇ ಬಳಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಬಳಕೆದಾರರು ವೇಯ್ಟ್‌ಲಿಸ್ಟ್ ನಲ್ಲಿರುವ ಟಿಕೆಟ್ ಅನ್ನು ಬುಕ್ ಮಾಡಿದ್ದರೆ, ಟಿಕೆಟ್ ಕನ್ ಫರ್ಮ್ ಆಗದಿದ್ದರೆ ಅವರು ಮೂರ್ನಾಲ್ಕು ದಿನಗಳಲ್ಲಿ ಮರುಪಾವತಿಯನ್ನು ಪಡೆಯುತ್ತಾರೆ. ನೆನಪಿಡಿ ಬಳಕೆದಾರರು iPay ನ ಸ್ವಯಂ ಪಾವತಿ ವೈಶಿಷ್ಟ್ಯವನ್ನು ಬಳಸಿದಾಗ, ಅವರ ಟಿಕೆಟ್ ದೃಢೀಕರಿಸದಿದ್ದರೆ ಮಾತ್ರ ಅವರು ತಕ್ಷಣವೇ ಮರುಪಾವತಿಯನ್ನು ಪಡೆಯುತ್ತಾರೆ.


Click it and Unblock the Notifications

















