Search
  • Follow NativePlanet
Share
» »ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?

ಇನ್ನೇನು ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆ. ಸ್ವಾತಂತ್ರ್ಯ ದಿನದಂದು ಎಲ್ಲಿ ನೋಡಿದರೂ ರಾಷ್ಟ್ರಧ್ವಜ ಹಾರಾಡುತ್ತಾ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ಸಣ್ಣ ಸಣ್ಣ ಭಾವುಟ ಹಾರಾಡುತ್ತಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ದೊಡ್ಡ ದೊಡ್ಡ ಭಾವುಟ ರಾರಾಜಿಸುತ್ತಿರುತ್ತದೆ.

ಇಷ್ಟೆಲ್ಲಾ ಭಾವುಟಗಳನ್ನು ನೋಡುತ್ತೀರಾ ಆದರೆ ಎಂದಾದರೂ ಈ ಭಾವುಟಗಳೆಲ್ಲಾ ಎಲ್ಲೆ ತಯಾರಾಗುತ್ತವೆ. ಯಾರಿದನ್ನು ತಯಾರಿಸುತ್ತಾರೆ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ? ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಿದ್ದರೆ ಸಾಮಾನ್ಯವಾಗಿ ಯಾರೂ ಬೇಕಾದರೂ ಈ ಭಾವುಟವನ್ನು ತಯಾರಿಸಬಹುದು ಎಂದು ನೀವು ತಿಳಿದಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ

ಈ ರಾಷ್ಟ್ರಧ್ವಜವನ್ನು ಯಾರೂ ಬೇಕಾದರೂ ತಯಾರಿಸಲು ಸಾಧ್ಯವಿಲ್ಲ. ನಾವಿಂದು ನಿಮಗೆ ಈ ಭಾವುಟ ಎಲ್ಲಿ ತಯಾರಾಗುತ್ತದೆ ಎನ್ನುವ ಬಗ್ಗೆ ತಿಳಿಸಲಿದ್ದೇವೆ. ಈ ತ್ರಿವರ್ಣ ಧ್ವಜವು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ತಯಾರಾಗುತ್ತದೆ. ಕರ್ನಾಟಕ ಎಂದು ಬಂದ ತಕ್ಷಣ. ಇದು ಕರ್ನಾಟಕದಲ್ಲೇ ತಯಾರಾಗುವುದು ಎನ್ನುವುದು ಕನ್ನಡಿಗರಿಗೆಲ್ಲಾ ಒಂದು ಹೆಮ್ಮೆಯ ವಿಷಯ.

ಎಲ್ಲಿದೆ ಈ ಸಂಘ?

ಎಲ್ಲಿದೆ ಈ ಸಂಘ?

ಇದು ಹುಬ್ಬಳ್ಳಿಯ ಬೆಂಗೇರಿ ಎನ್ನುವ ಹಳ್ಳಿಯಲ್ಲಿದೆ. ನವಂಬರ್‌ 1.1957ರಲ್ಲಿ ಈ ಸಂಘ ಸ್ಥಾಪನೆಯಾಗಿದ್ದು. ಈ ಘಟಕದ ಏಕೈಕ ಉದ್ದೇಶವೆಂದರೆ ಖಾದಿ ಮತ್ತು ಇತರ ಗ್ರಾಮ ಕೈಗಾರಿಕೆಗಳ ಬೆಳವಣಿಗೆಗೆ ಕಾರಣವಾಗಿದೆ. ಗ್ರಾಮೀಣ ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವುದು ಫೆಡರೇಶನ್‌ನ ಮತ್ತೊಂದು ಗುರಿಯಾಗಿದೆ.

ತ್ರಿವರ್ಣ ಧ್ವಜದ ಏಕೈಕ ಉತ್ಪಾದಕ ಘಟಕ

ತ್ರಿವರ್ಣ ಧ್ವಜದ ಏಕೈಕ ಉತ್ಪಾದಕ ಘಟಕ

ಖಾದಿ ಮತ್ತು ವಿಲೇಜ್ ಇಂಡಸ್ಟ್ರೀಸ್ ಆಯೋವು KKGSS ಅನ್ನು ಇಡೀ ದೇಶಕ್ಕೆ ಭಾರತೀಯ ಧ್ವಜವನ್ನು ಉತ್ಪಾದಿಸುವ ಏಕೈಕ ಉತ್ಪಾದಕ ಮತ್ತು ಸರಬರಾಜು ಕೇಂದ್ರವನ್ನಾಗಿ ಪ್ರಮಾಣೀಕರಿಸಲಾಗಿದೆ. ಈ ಘಟಕದಲ್ಲಿ, ಸುಮಾರು 100 ಪರಿಣಿತ ದರ್ಜಿಗಳು ಮತ್ತು 100 ನೇಕಾರರನ್ನು ಧ್ವಜವನ್ನು ತಯಾರಿಸಲು ನೇಮಕ ಮಾಡಿದ್ದಾರೆ. ಮೂಲದ ಪ್ರಕಾರ ಈ ಘಟಕದ ವಾರ್ಷಿಕ ವೈವಾಟು ಸುಮಾರು ೧೫ ಮಿಲಿಯನ್ ಇದೆ.

ಸುಲಭದ ಕೆಲಸವಲ್ಲ

ಸುಲಭದ ಕೆಲಸವಲ್ಲ

ತ್ರಿವರ್ಣ ಧ್ವಜ ತಯಾರಿಸುವುದೆಂದರೆ ಬಹಳ ಸುಲಭ ಎಂದು ನೀವಂದುಕೊಂಡಿರಬಹುದು. ಆದರೆ ಇದು ಸುಲಭದ ಕೆಲಸವಲ್ಲ. ಧ್ವಜಗಳಲ್ಲಿ ಯಾವುದೇ ದೋಷಗಳು, ಉದಾಹರಣೆಗೆ ಬಣ್ಣ, ಗಾತ್ರ ಮತ್ತು ನೂಲುಗಳಲ್ಲಿ ಯಾವುದಾದರೂ ತಪ್ಪಾದರೆ ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಫ್ಲ್ಯಾಗ್ ಕೋಡ್ 2002 ರ ನಿಬಂಧನೆಗಳ ಪ್ರಕಾರ ದಂಡ ಅಥವಾ ಸೆರೆವಾಸ ಅನುಭವಿಸಬೇಕಾಗುತ್ತದೆ.

ಇನ್ನಿತರ ಉತ್ಪನ್ನಗಳು

ಇನ್ನಿತರ ಉತ್ಪನ್ನಗಳು

KKGSS ಯ ಮುಖ್ಯ ಉತ್ಪನ್ನವೆಂದರೆ ಭಾರತೀಯ ಧ್ವಜ. ಇದಲ್ಲದೆ, ಇದು ಖಾದಿ ಬಟ್ಟೆಗಳು, ಖಾದಿ ಕಾರ್ಪೆಟ್‌ಗಳು, ಖಾದಿ ಚೀಲಗಳು, ಖಾದಿ ಕ್ಯಾಪ್‌ಗಳು, ಖಾದಿ ಬೆಡ್‌ಶೀಟ್‌ಗಳು, ಸೋಪ್‌ಗಳು, ಕೈಯಿಂದ ಮಾಡಿದ ಕಾಗದ ಮತ್ತು ಸಂಸ್ಕರಿಸಿದ ಜೇನುತುಪ್ಪವನ್ನು ತಯಾರಿಸುತ್ತದೆ. ಕಾನೂನಿನ ಪ್ರಕಾರ ತ್ರಿವರ್ಣ ಧ್ವಜವನ್ನು ಯಾವಾಗಲೂ ಖಾದಿ ಬಟ್ಟೆಯಿಂದಲೇ ತಯಾರಿಸಬೇಕು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+