Search
  • Follow NativePlanet
Share
» »ಇದು ಭಾರತದ ಅತಿದೊಡ್ಡ ರೈಲು ನಿಲ್ದಾಣ, ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ..ಒಮ್ಮೆಯಾದ್ರು ನೀವಿಲ್ಲಿಗೆ ಬರಲೇಬೇಕು!

ಇದು ಭಾರತದ ಅತಿದೊಡ್ಡ ರೈಲು ನಿಲ್ದಾಣ, ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ..ಒಮ್ಮೆಯಾದ್ರು ನೀವಿಲ್ಲಿಗೆ ಬರಲೇಬೇಕು!

Indian Railways: ಹಿರಿಯರಿಗೆ ಮಾತ್ರವಲ್ಲ, ಪುಟಾಣಿಗಳಿಗೂ ಫೇವರಿಟ್‌ ಟ್ರೇನ್‌ ಜರ್ನಿ. ಏಕೆಂದರೆ ರೈಲಿನಲ್ಲಿ ಪ್ರಯಾಣ ಮಾಡುವುದು ಬಹಳ ಕಂಫರ್ಟಬಲ್‌. ಇನ್ನು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ನಮ್ಮ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನ ಸುಮಾರು 1300 ರೈಲುಗಳು ಕಾರ್ಯನಿರ್ವಹಿಸಲಿದ್ದು, ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ಬಡವರಿಂದ ಹಿಡಿದು ಶ್ರೀಮಂತ ವರ್ಗದ ಜನರು ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ. ಹಾಗೆಯೇ ಭಾರತೀಯ ರೈಲ್ವೆ ಕಾಲಕಾಲಕ್ಕೆ ನಿಯಮಗಳನ್ನು ಬದಲಾಯಿಸುತ್ತಲೇ ಇರುತ್ತದೆ. ಆದ್ದರಿಂದ, ಪ್ರಯಾಣಿಕರು ಅಪ್‌ಡೇಟ್‌ ಆಗಿರುವುದು ಬಹಳ ಮುಖ್ಯ.

ಅತಿ ದೊಡ್ಡ ರೈಲು ನಿಲ್ದಾಣ ಯಾವುದು?

ಮೇಲಿನ ಶೀರ್ಷಿಕೆ ಓದಿದ ನಂತರ ನಿಮಗೀಗ ಗಮನ ಅದರ ಬಗ್ಗೆ ಇರುತ್ತದೆ. ಜೊತೆಗೆ ಆ ನಿಲ್ದಾಣದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವ ಕೆಲವರು ಇದ್ದಾರೆ. ಸಾಮಾನ್ಯವಾಗಿ ಭಾರತೀಯ ರೈಲ್ವೆಯ ಬಗ್ಗೆ, ರೈಲುಮಾರ್ಗಗಳನ್ನು ನಿರ್ಮಿಸಿದವರು, ರೈಲ್ವೆ ಹಳಿಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತು ಮನಸ್ಸಿನಲ್ಲಿ ವಿವಿಧ ಪ್ರಶ್ನೆಗಳು ಉದ್ಭವಿಸುತ್ತವೆ. ಅದೇ ರೀತಿ ಭಾರತದ ಅತಿ ದೊಡ್ಡ ರೈಲು ನಿಲ್ದಾಣ ಯಾವುದು ಎಂಬ ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲಿ ಎಂದಾದರೂ ಮೂಡಿರುತ್ತದೆ. ರೈಲು ಜರ್ನಿ ಮಾಡುವವರಿಗಂತೂ ಈ ಪ್ರಶ್ನೆ ಸಾಮಾನ್ಯವಾಗಿ ಮನಸ್ಸಿಗೆ ಬಂದಿರುತ್ತದೆ. ಈ ಪ್ರಶ್ನೆಗೆ ಬಹುತೇಕರು ಬಹುಶಃ ಮುಂಬೈ, ದೆಹಲಿ, ಬೆಂಗಳೂರು ಅಥವಾ ಚೆನ್ನೈನಂತಹ ನಿಲ್ದಾಣಗಳು ಅತಿದೊಡ್ಡ ರೈಲು ನಿಲ್ದಾಣವಾಗಿರಬಹುದು ಅಂದುಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಇವ್ಯಾವು ಅಲ್ಲವೇ ಅಲ್ಲ, ಹಾಗಾದರೆ ಅತಿ ದೊಡ್ಡ ರೈಲು ನಿಲ್ದಾಣವಿರುವುದು ಎಲ್ಲಿ ಅಂತೀರಾ?, ಮುಂದೆ ಓದಿ...

howrahrailwaystation

ಇದೇ ನೋಡಿ ಅತಿದೊಡ್ಡ ರೈಲು ನಿಲ್ದಾಣ

ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ (ಹೌರಾ) ಭಾರತೀಯ ರೈಲ್ವೆಯಲ್ಲಿ ಅತಿದೊಡ್ಡ ರೈಲು ನಿಲ್ದಾಣ ಹೊಂದಿದೆ. ಜೊತೆಗೆ ಇದು ತುಂಬಾ ಕಾರ್ಯನಿರತವಾಗಿರುತ್ತದೆ. ಬೆಳಗಿನ ಜಾವ 4 ಗಂಟೆಯಿಂದಲೇ ಇಲ್ಲಿ ಪ್ರಯಾಣಿಕರ ದಂಡು ಕಂಡು ಬರುತ್ತದೆ. ಇಲ್ಲಿನ ಜನರಿಗೆ ಲೋಕಲ್ ರೈಲು ಎಂದರೆ ಪ್ರಾಣ. ಇಲ್ಲಿ ಕೇವಲ 12, 13 ಅಲ್ಲ ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ, ಅದನ್ನು ಪ್ರಸ್ತುತ ವಿಸ್ತರಿಸಲಾಗುತ್ತಿದೆ. ಇಲ್ಲಿ ರೈಲುಗಳು ಪಶ್ಚಿಮ, ದಕ್ಷಿಣ ಮತ್ತು ಉತ್ತರಕ್ಕೆ ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಚಲಿಸುತ್ತವೆ. ಇದರ ನಂತರ ಸೀಲ್ದಾ ಎರಡನೇ ಅತಿದೊಡ್ಡ ರೈಲು ನಿಲ್ದಾಣವಾಗಿದೆ.

ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುವ ಜಾಗ

ಹೌರಾ ರೈಲು ನಿಲ್ದಾಣದಿಂದ ಪ್ರತಿದಿನ 10.8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಈ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿ ನೀವು ಎಲ್ಇಡಿ ಪರದೆಯಲ್ಲಿ ರೈಲುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ಇದಲ್ಲದೇ ಹಲವು ಟಿಕೆಟ್ ಕೌಂಟರ್ ಗಳನ್ನು ನಿರ್ಮಿಸಲಾಗಿದೆ. ಜನಸಂದಣಿ ತಪ್ಪಿಸಲು ಹೊರಾಂಗಣದಲ್ಲಿಯೂ ಖಾಸಗಿ ಟಿಕೆಟ್ ಕೌಂಟರ್ ತೆರೆಯಲಾಗಿದ್ದು, ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.

howrahrailwaystation1

ಅತ್ಯಂತ ಸುಂದರ ರೈಲು ನಿಲ್ದಾಣ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ತೆರಳಲು ಹೌರಾ ಹತ್ತಿರದ ರೈಲು ನಿಲ್ದಾಣವಾಗಿದೆ. ದೇಶದ ರಾಜಧಾನಿ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಒಟ್ಟು 16 ಪ್ಲಾಟ್‌ಫಾರ್ಮ್‌ಗಳು ಮತ್ತು ಹಳೆ ದೆಹಲಿಯಲ್ಲಿ ಅದಕ್ಕಿಂತ ಕಡಿಮೆ ಪ್ಲಾಟ್‌ಫಾರ್ಮ್‌ಗಳಿದ್ದರೆ, ಹೌರಾ ರೈಲು ನಿಲ್ದಾಣದಲ್ಲಿ ಒಟ್ಟು 23 ಪ್ಲಾಟ್‌ಫಾರ್ಮ್‌ಗಳಿವೆ. ಇದರೊಂದಿಗೆ, ಹೌರಾ ರೈಲು ನಿಲ್ದಾಣವು 26 ಹಳಿಗಳ ರೈಲು ಮಾರ್ಗವನ್ನು ಹೊಂದಿದೆ, ಇದು ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿರುವುದಲ್ಲದೆ, ಅತ್ಯಂತ ಸುಂದರ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದೆ.

ಕ್ರಾಂತಿಕಾರಿಗಳ ಚಟುವಟಿಕೆಗಳ ಮುಖ್ಯ ಕೇಂದ್ರ

ಹೂಗ್ಲಿ ನದಿಯ ಪಶ್ಚಿಮ ದಂಡೆಯ ಮೇಲೆ ಹೌರಾ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದೆ. ಹೌರಾ ರೈಲು ನಿಲ್ದಾಣವು ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣವಾಗಿದೆ. ಇದರ ಕಟ್ಟಡವನ್ನು 1854 ರಲ್ಲಿ ನಿರ್ಮಿಸಲಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹೌರಾ ನಿಲ್ದಾಣವು ಕ್ರಾಂತಿಕಾರಿಗಳ ಚಟುವಟಿಕೆಗಳ ಮುಖ್ಯ ಕೇಂದ್ರವಾಯಿತು.

howrahrailwaystation1

ಅನೇಕ ಕ್ರಾಂತಿಕಾರಿಗಳು ಹೌರಾ ನಿಲ್ದಾಣದಲ್ಲಿ ಸಭೆಗಳನ್ನು ಮತ್ತು ಮುಂದಿನ ಯೋಜನೆಗಳನ್ನು ನಡೆಸುತ್ತಿದ್ದರು. ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಯೋಗೀಶ್ ಚಂದ್ರ ಚಟರ್ಜಿ ಅವರನ್ನು ಕಾಕೋರಿ ಘಟನೆಯ ಮೊದಲು ಹೌರಾ ರೈಲು ನಿಲ್ದಾಣದಲ್ಲಿ ಬಂಧಿಸಲಾಯಿತು. ಭಾರತದಲ್ಲಿ ಮೊದಲ ಬಾರಿಗೆ ರೈಲ್ವೆ ಪ್ರಾರಂಭವಾದಾಗ, ಮೊದಲ ರೈಲು 1853 ರಲ್ಲಿ ಮುಂಬೈನಿಂದ ಚಲಿಸಿತು ಮತ್ತು ಎರಡನೇ ರೈಲು 1854 ರಲ್ಲಿ ಹೌರಾ ಜಂಕ್ಷನ್‌ನಿಂದ ಹೊರಟಿತು.

More News

Read more about: howrah railway west bengal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+