Search
  • Follow NativePlanet
Share
» »ಬಸ್ಸಿನಲ್ಲಿ ಲಾಂಗ್‌ ಜರ್ನಿ ಹೊರಟ್ರಾ…ಹಾಗಾದ್ರೆ ಈ ಟಿಪ್ಸ್ ನಿಮಗೆ ಸಹಾಯ ಮಾಡುತ್ತೆ!

ಬಸ್ಸಿನಲ್ಲಿ ಲಾಂಗ್‌ ಜರ್ನಿ ಹೊರಟ್ರಾ…ಹಾಗಾದ್ರೆ ಈ ಟಿಪ್ಸ್ ನಿಮಗೆ ಸಹಾಯ ಮಾಡುತ್ತೆ!

ಕೆಲವು ಕಡೆ ಪ್ರವಾಸ ಹೋಗಬೇಕೆಂದರೆ ಅಥವಾ ಪ್ರಯಾಣ ಬೆಳೆಸುವುದಾದರೆ ರೈಲು ಅಥವಾ ವಿಮಾನ ಸೌಲಭ್ಯ ಇರುವುದಿಲ್ಲ. ಮತ್ತೆ ಕೆಲವೆಡೆ ದೋಣಿ, ಲಾಂಚ್‌ ಮಾತ್ರ ಹೋಗುತ್ತದೆ. ಆದರೆ ಬಸ್ಸುಗಳು ಮಾತ್ರ ಸಾಮಾನ್ಯವಾಗಿ ಎಲ್ಲಾ ಕಡೆ ಓಡಾಡುತ್ತವೆ. ಹಾಗಾಗಿಯೇ ಜನರು ಒಂದು ವೇಳೆ ಟ್ರೈನ್‌ ಮಿಸ್‌ ಆದರೂ, ಸ್ವಂತ ವಾಹನ ಕೈ ಕೊಟ್ಟರೂ ಬಸ್‌ನಲ್ಲಿ ಹೋದರಾಯಿತು ಎಂದು ಲೆಕ್ಕಚಾರ ಹಾಕಿ ನಿಟ್ಟುಸಿರು ಬಿಡುತ್ತಾರೆ. ಹಾಗಾಗಿ ಇಂದು ನಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ಹೇಗೆ ತಯಾರಿ ಮಾಡಿಕೊಳ್ಳಬೇಕು, ಯಾವ ರೀತಿ ಎಚ್ಚರಿಕೆ ವಹಿಸಬೇಕು? ಇತ್ಯಾದಿ ಮಾಹಿತಿಗಳನ್ನು ವಿವರವಾಗಿ ತಿಳಿಯೋಣ...

ಮೊದಲು ಮಾಡಬೇಕಾದ ಕೆಲಸ

ಸಾಮಾನ್ಯವಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಬಸ್ಸಿನಲ್ಲಿ ಒಂದು ಗಂಟೆ ಅಥವಾ ಎರಡು ಗಂಟೆ ಪ್ರಯಾಣವಾದರೂ ಪರವಾಗಿಲ್ಲ. ಆದರೆ ದಿನವಿಡೀ, ಗಂಟೆಗಳ ಕಾಲ ಬಸ್ಸಿನಲ್ಲಿ ಪ್ರಯಾಣಿಸುವವರು ಅನೇಕರಿದ್ದಾರೆ. ವಾರಕ್ಕೆ ಹತ್ತು ದಿನ ಬಸ್ ಟ್ರಿಪ್ ಹೋಗುವವರಿದ್ದಾರೆ. ಅಂತಹ ಪ್ರವಾಸದ ಸಮಯದಲ್ಲಿ ಏನು ಮಾಡಬೇಕೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಅದು ಬಸ್‌ ಅಥವಾ ರೈಲು ಅಥವಾ ವಿಮಾನ ಯಾವುದೇ ಜರ್ನಿ ಇರಬಹುದು. ಸ್ವಲ್ಪ ಮುಂಚಿತವಾಗಿ ಪ್ಲಾನ್‌ ಮಾಡಿ. ನಿಮ್ಮ ರಿಟರ್ನ್ ಟಿಕೆಟ್‌ಗಳನ್ನು ಸರಿಯಾಗಿ ಬುಕ್ ಮಾಡಿ. ಈಗಲ್ಲ, ಅನೇಕ ವರ್ಷಗಳಿಂದಲೂ ಬಸ್ ಟಿಕೆಟ್‌ಗಳನ್ನು ಆನ್‌ಲೈನ್ ಬುಕಿಂಗ್ ಮಾಡುವ ಸೌಲಭ್ಯವಿದೆ. ಮೊದಲೇ ಮುಂಗಡ ಟಿಕೆಟ್ ಬುಕಿಂಗ್ ಮಾಡಿಕೊಂಡರೆ ನಿಮ್ಮ ಪ್ರಯಾಣ ಒತ್ತಡ-ಮುಕ್ತ ಮತ್ತು ಆನಂದದಾಯಕವಾಗಿಸುತ್ತದೆ. ಜೊತೆಗೆ ಸೀಟು ಸಿಗುತ್ತಿಲ್ಲ ಎಂದು ಪರದಾಡಬೇಕಿಲ್ಲ.

ಪಾಲಿಥಿನ್ ಬ್ಯಾಗ್‌ ಕೊಂಡೊಯ್ಯಲು ಮರೆಯದಿರಿ

ದೂರದೂರಿಗೆ ಬಸ್ ಪ್ರಯಾಣ ಮಾಡುವವರು ಸ್ವಲ್ಪ ದೊಡ್ಡ ಪಾಲಿಥಿನ್ ಬ್ಯಾಗ್‌ ಕೊಂಡೊಯ್ಯಲು ಮರೆಯಬೇಡಿ. ಏಕೆಂದರೆ ಬಸ್ ಪ್ರಯಾಣದ ವೇಳೆ ಹಲವರಿಗೆ ವಾಂತಿ ಸಮಸ್ಯೆ ಇರುತ್ತದೆ. ನೀವು ಬಸ್ ಪ್ರಯಾಣದ ಸಮಯದಲ್ಲಿ ವಾಂತಿ ಮಾಡಿದರೆ ಕಿಟಕಿಯಿಂದ ವಾಂತಿ ಮಾಡಲು ಇದನ್ನು ಬಳಸಬಹುದು. ಇದರಿಂದ ಯಾರಿಗೂ ಯಾವುದೇ ತೊಂದರೆಯಾಗುವುದಿಲ್ಲ. ಹಾಗೆಯೇ ಅಕ್ಕ ಪಕ್ಕದವರಿಗೂ ವಾಂತಿ ಬಂದರೂ ಪಾಲಿಥಿನ್ ಬ್ಯಾಗ್ ಕೊಟ್ಟು ಸಹಾಯ ಮಾಡಬಹುದು.

ಬೆಲೆ ಬಾಳುವ ವಸ್ತುಗಳನ್ನು ಒಯ್ಯಬೇಡಿ

ಆದಷ್ಟು ಹೆಚ್ಚು ಚಿನ್ನದ ಆಭರಣಗಳನ್ನು ಧರಿಸುವುದನ್ನು ತಪ್ಪಿಸಿ. ಜೊತೆಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಅಥವಾ ಹಣವನ್ನು ತೆಗೆದುಕೊಂಡು ಹೋಗದಿದ್ದರೆ ಒಳಿತು. ರಾತ್ರಿ ಬಸ್ಸಿನಲ್ಲಿ ಮಲಗಿದಾಗ ಕಳ್ಳತನವಾಗುವ ಸಾಧ್ಯತೆಗಳು ಇರುತ್ತವೆ.

ಈ ತರಹದ ಬ್ಯಾಗ್‌ಗಳು ಸೂಕ್ತ

ಬಸ್ಸುಗಳಲ್ಲಿ ಪ್ರಯಾಣಿಸುವಾಗ ಸಣ್ಣ ಏರ್ ಬ್ಯಾಗ್‌ಗಳನ್ನು ಒಯ್ಯಿರಿ. ಇದನ್ನು ಆಸನದ ಮೇಲಿರುವ ಲಗೇಜ್ ವಿಭಾಗದಲ್ಲಿ ಸುಲಭವಾಗಿ ಸಂಗ್ರಹಿಸಬಹುದು. ಅಷ್ಟೇ ಅಲ್ಲ, ತೆಗೆದುಕೊಂಡು ಹೋಗುವುದು ಕೂಡ ಸುಲಭ. ಆದರೆ ಹೆಚ್ಚಿನವರು ತಮ್ಮೊಂದಿಗೆ ಟ್ರಾಲಿ ಬ್ಯಾಗ್ ಕೊಂಡೊಯ್ಯುತ್ತಾರೆ. ಅಂತಹ ದೊಡ್ಡ ಪೆಟ್ಟಿಗೆಗಳನ್ನು ಬಸ್ಸಿನ ಲಗೇಜ್ ವಿಭಾಗದಲ್ಲಿ ಇರಿಸಲಾಗುವುದಿಲ್ಲ ಜೊತೆಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಹಾಗೆಯೇ ಎಲ್ಲರಿಗೂ ತುಂಬಾ ತೊಂದರೆಯಾಗುತ್ತದೆ.

ಬಟ್ಟೆಗಳ ಕಡೆಯೂ ಗಮನವಿರಲಿ

ಸರಳವಾಗಿ ಉಡುಗೆ ಧರಿಸುವುದು, ಸಿಂಪಲ್‌ ಮೇಕಪ್ ಉತ್ತಮ. ಬಹಳಷ್ಟು ಬಟ್ಟೆಗಳನ್ನು ಹೊತ್ತೊಯ್ಯುವುದು ಸಹ ಕಷ್ಟವಾಗುತ್ತದೆ. ಆದ್ದರಿಂದ ಕಾಲಕ್ಕೆ ಅನುಗುಣವಾಗಿ ಅಂದರೆ ತಣ್ಣನೆಯ ಸ್ಥಳಗಳಿಗೆ ಹೋಗುವಾಗ ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ಒಯ್ಯಬೇಡಿ. ಇದು ತೊಳೆದ ನಂತರವೂ ಒಣಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದೇ ರೀತಿ, ಬಿಸಿಯಾದ ಪ್ರದೇಶಗಳಿಗೆ ಪ್ರಯಾಣಿಸುವಾಗ, ಪಾಲಿಸ್ಟರ್ ಬಟ್ಟೆಗಳನ್ನು ಒಯ್ಯಬೇಡಿ. ಹತ್ತಿ ಬಟ್ಟೆಗಳನ್ನು ಒಯ್ಯಿರಿ.‌

ನೀರು, ಆಹಾರದ ಬಗ್ಗೆ ಜಾಗೃತಿ ಇರಲಿ

ಅದು ರಾತ್ರಿಯ ಪ್ರವಾಸವಾಗಿರಲಿ ಅಥವಾ ದಿನದ ಪ್ರವಾಸವಾಗಿರಲಿ ಮನೆಯಲ್ಲೇ ಸಾಧ್ಯವಾದಷ್ಟು ಊಟವನ್ನು ತಯಾರಿಸಿ ಪ್ಯಾಕ್‌ ಮಾಡಿ. ಅಥವಾ ಬ್ರೆಡ್ ಜಾಮ್, ಬಿಸ್ಕೆಟ್‌, ಚಪಾತಿ, ರೊಟ್ಟಿಯಂತಹ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ. ನೀವಂದುಕೊಳ್ಳಬಹುದು ಹೇಗಿದ್ದರೂ ದಾರಿಯಲ್ಲಿ ತಿನ್ನಲು, ಹತ್ತಿರದ ರೆಸ್ಟೋರೆಂಟ್‌ಗಳಲ್ಲಿ ಬಸ್‌ಗಳು ನಿಲ್ಲುತ್ತವಲ್ಲ ಎಂದು. ಆದರೆ ಅಂತಹ ಸ್ಥಳಗಳಲ್ಲಿ ತಿನ್ನುವುದನ್ನು ತಪ್ಪಿಸಿ. ಆಹಾರವು ಕಳಪೆ ಗುಣಮಟ್ಟದ್ದಾಗಿರುತ್ತದೆ ಮತ್ತು ಬೆಲೆಯೂ ತುಂಬಾ ಹೆಚ್ಚು. ಅಂತಹ ಆಹಾರಗಳು ನಿಮ್ಮ ಹೊಟ್ಟೆಯನ್ನು ಕೆಡಿಸುತ್ತವೆ ಮತ್ತು ನಿಮ್ಮ ಪ್ರಯಾಣವನ್ನು ಹೆಚ್ಚು ಕಷ್ಟವಾಗಿಸುತ್ತದೆ. ಜೊತೆಗೆ ಗುಣಮಟ್ಟದ ನೀರನ್ನು ಖರೀದಿಸಿ ಇಟ್ಟುಕೊಳ್ಳಿ. ಕಳಪೆ ಗುಣಮಟ್ಟದ ನೀರಿನಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತವೆ.

ಇವುಗಳನ್ನೂ ನೆನಪಿನಲ್ಲಿಡಿ...

ಬಸ್ಸಿನ ಬಲಭಾಗದ ಕಿಟಕಿ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರು ರಾತ್ರಿ ತಮ್ಮ ಬಲಗೈಯನ್ನು ಸಂಪೂರ್ಣವಾಗಿ ಒಳಗೆ ಇಟ್ಟುಕೊಂಡು ಪ್ರಯಾಣಿಸಬೇಕು. ಮಲಗಬೇಕೆಂದರೆ ಕಿಟಕಿಯ ಗಾಜು ಮುಕ್ಕಾಲು ಮುಚ್ಚಿ ಮಲಗಿ. ಪವರ್ ಬ್ಯಾಂಕ್ ಅನ್ನು ಒಯ್ಯಿರಿ. ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲು ಸಹಾಯವಾಗುತ್ತದೆ. ನಿಮ್ಮ ಮೊಬೈಲ್ ಫೋನ್ ಕೂಡ ನಿಮ್ಮ ಬಳಿ ಸುರಕ್ಷಿತವಾಗಿರುತ್ತದೆ. ಕೆಲವು ಬಸ್‌ಗಳಲ್ಲಿ ಸಾಮಾನ್ಯವಾಗಿ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಇರುವುದಿಲ್ಲ. ಈ ರೀತಿ ಮುನ್ನೆಚ್ಚರಿಕಾ ಕ್ರಮ ವಹಿಸುವ ಮೂಲಕ ನೀವು ಆಹ್ಲಾದಕರ ಬಸ್ ಪ್ರಯಾಣವನ್ನು ಆನಂದಿಸಬಹುದು. ಹ್ಯಾಪಿ ಜರ್ನಿ...

More News

Read more about: bus travel tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+