ದುರ್ಗಾ, ಪಾರ್ವತಿ, ಲಕ್ಷ್ಮಿ ಹಾಗೂ ಸರಸ್ವತಿಯರು ಹಿಂದುಗಳಲ್ಲಿ ಹೆಚ್ಚಿನ ಸ್ಥಾನ ಮಾನಗಳಿಸಿದ ಪ್ರಮುಖ ದೇವಿಯರು. ಸರಸ್ವತಿಯೂ ಸಹ ಶಕ್ತಿ ಸ್ವರೂಪಿಣಿಯ ವಿಭಾಗದಲ್ಲಿ ಬರುತ್ತಾಳಾದರೂ ಮುಖ್ಯವಾಗಿ ಪಾರ್ವತಿ, ದುರ್ಗಾ ಹಾಗೂ ಲಕ್ಷ್ಮಿಯರನ್ನೆ ಮುಖ್ಯವಾಗಿ ಶಕ್ತಿ ಸ್ವರೂಪಿಣಿಯರೆಂದು ಸಾಮಾನ್ಯವಾಗಿ ಪೂಜಿಸುತ್ತೇವೆ ಹಾಗೂ ಆರಾಧಿಸುತ್ತೇವೆ.
ಹಾಗಾದರೆ, ಸರಸ್ವತಿ ದೇವಿ ಏನನ್ನು ಪ್ರತಿನಿಧಿಸುತ್ತಾಳೆ ಎಂಬ ಗೊಂದಲ ಕೆಲವರಿಗೆ ಉಂಟಾಗಬಹುದು. ಅದಕ್ಕೆ ಉತ್ತರ ಮನುಷ್ಯನ ಜ್ಞಾನವನ್ನು ಹೆಚ್ಚಿಸುತ್ತ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾದ ವಿದ್ಯೆಗೆ ಅಧಿ ದೇವಿಯಾಗಿದ್ದಾಳೆ ಸರಸ್ವತಿ ದೇವಿ. ವಿದ್ಯೆಯನ್ನು ಒಲಿಸಿಕೊಳ್ಳಬೇಕೆನ್ನುವವರು ಸರಸ್ವತಿ ದೇವಿಯನ್ನು ಬಲು ಭಕ್ತಿ-ಶೃದ್ಧೆಯಿಂದ ಆರಾಧಿಸುತ್ತಾರೆ.
ಮಡದಿಯ ಹಾಗೆಯೆ ಗಂಡ, ಬ್ರಹ್ಮನ ಅಪರೂಪದ ದೇವಾಲಯಗಳು
ಸರಸ್ವತಿ ದೇವಿಗೆ ಸಂಬಂಧಿಸಿದಂತೆ ಅವಳಿಗೆ ಮುಡಿಪಾದ ದೇವಾಲಯಗಳು ಭಾರತದಾದ್ಯಂತ ಕಂಡುಬರುತ್ತಾವಾದರೂ ಅವುಗಳ ಸಂಖ್ಯೆ ಮಿಕ್ಕ ದೇವಿಯರ ದೇವಾಲಯಗಳಿಗೆ ಹೋಲಿಸಿದರೆ ಅತ್ಯಂತೆ ಕಡಿಮೆ ಎಂದು ಹೇಳಬಹುದು. ಹಾಗಾಗಿ ಸರಸ್ವತಿಯ ದೇವಾಲಯ ಒಂದು ವಿಶಿಷ್ಟ ಧಾರ್ಮಿಕ ಆಕರ್ಷಣೆಯಾಗಿ ಜನರ ಗಮನಸೆಳೆಯುತ್ತದೆ.
ಪ್ರಸ್ತುತ ಲೇಖನದಲ್ಲಿ ಕೆಲವು ವಿಶಿಷ್ಟವಾದ ಸರಸ್ವತಿ ದೇವಿಗೆಂದೆ ಮುಡಿಪಾದ ದೇಶದ ವಿವಿಧ ಭಾಗಗಳಲ್ಲಿರುವ ಕೆಲವು ಸರಸ್ವತಿ ದೇವಾಲಯಗಳ ಕುರಿತು ಮಾಹಿತಿ ನೀಡುತ್ತದೆ. ಅಪರೂಪವಾದ ಇಂತಹ ದೇವಾಲಯಗಳಿಗೆ ನಿಮಗೂ ಭೇಟಿ ನೀಡಲು ಆಸೆ ಇದ್ದಲ್ಲಿ ಅವಕಾಶ ದೊರೆತಾಗ ಒಮ್ಮೆ ಹೋಗಿ ಬನ್ನಿ.

ಸುಂದರ ಸರಸ್ವತಿ ದೇವಾಲಯಗಳು:
ಅವಂಕೊಂಡ ಸರಸ್ವತಿ ದೇವಾಲಯ : ಇದು ಕೇರಳ ರಾಜ್ಯದಲ್ಲಿರುವ ಸರಸ್ವತಿಗೆ ಮುಡಿಪಾದ ಸುಂದರ ದೇವಾಲಯವಾಗಿದೆ. ಸರಸ್ವತಿಯ ಕುರಿತು ಮೊದಲ ಉಲ್ಲೇಖವು ಋಗ್ವೇದದಲ್ಲಿ ಕಂಡುಬರುತ್ತದೆ. ಜ್ಞಾನದಾತೆಯಾದ ಸರಸ್ವತಿ ದೇವಿಗೆ ಹಿಂದುಗಳಲ್ಲದೆ ಕೆಲವು ಜೈನ ಹಾಗೂ ಬೌದ್ಧ ಸಮುದಾಯದವರು ನಡೆದುಕೊಳ್ಳುತ್ತಾರೆಂಬುವುದು ವಿಶೇಷ.
ಚಿತ್ರಕೃಪೆ: Ranjith Siji

ಸುಂದರ ಸರಸ್ವತಿ ದೇವಾಲಯಗಳು:
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು ಕೊಚ್ಚಿ ಅಂತಾರಾಷ್ಟ್ರೀಯ ನಿಲ್ದಾಣದ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಅಲುವಾದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಈ ದೇವಾಲಯ ಕಾಲಡಿಗೆ ಹೋಗುವ ಮಾರ್ಗದಲ್ಲಿ ದೊರೆಯುತ್ತದೆ.
ಚಿತ್ರಕೃಪೆ: Ranjith Siji

ಸುಂದರ ಸರಸ್ವತಿ ದೇವಾಲಯಗಳು:
ಕೆಲವು ಗ್ರಂಥ ಹಾಗೂ ಪುರಾಣಗಳಲ್ಲಿ ಸರಸ್ವತಿ ದೇವಿಯನ್ನು ವೇದಗಳ ಮಾತೆ ಎಂತಲೂ ಸಂಬೋಧಿಸಲಾಗಿದೆ. ತೈತ್ತಿರೀಯ ಬ್ರಾಹ್ಮಣ ಗ್ರಂಥದಲ್ಲಿ ಸರಸ್ವತಿಯನ್ನು ಇಂಪಾದ ಸಂಗೀತ ದೇವತೆ ಎಂದು ವಿಶ್ಲೇಷಿಸಲಾಗಿದೆ. ಹಾಗಾಗಿಯೆ ಅವಳ ಕೈಯಲ್ಲಿ ಮಧುರ ನಾದ ಹೊಮ್ಮಿಸುವ ವೀಣೆಯಿರುವುದನ್ನು ಕಾಣಬಹುದು. ಆಕರ್ಷಕ ದೀಪ ಸ್ತಂಭ.
ಚಿತ್ರಕೃಪೆ: Ranjith Siji

ಸುಂದರ ಸರಸ್ವತಿ ದೇವಾಲಯಗಳು:
ಅವಂಕೊಂಡದ ಈ ಸರಸ್ವತಿ ದೇವಾಲಯವು ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸುವ ಶಾಸ್ತ್ರಕ್ಕೆ ಬಲು ಪ್ರಸಿದ್ಧವಾಗಿದೆ. ಕೆಲವರು ವಸಂತ ಪಂಚಮಿಯನ್ನು ಸರಸ್ವತಿ ದೇವಿಗೆಂದೆ ಆಚರಿಸುತ್ತಾರೆ ಹಾಗೂ ಈ ಸಂದರ್ಭದಲ್ಲಿ ಮಕ್ಕಳನ್ನು ಸರಸ್ವತಿ ದೇವಾಲಯಕ್ಕೆ ಕರೆದುಕೊಂಡು ಹೋಗಿ ಅಕ್ಷರಾಭ್ಯಾಸದ ಶಾಸ್ತ್ರ ಪೂರೈಸುತ್ತಾರೆ. ಈ ದೇವಾಲಯವೂ ಸಹ ಈ ಆಚರಣೆಗೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Ranjith Siji

ಸುಂದರ ಸರಸ್ವತಿ ದೇವಾಲಯಗಳು:
ಕೇರಳದ 108 ದುರ್ಗಾಲಯಗಳ ಪೈಕಿ ಇದೂ ಸಹ ಒಂದಾಗಿತ್ತಾದರೂ ಸಮಯ ಕಳೆದಂತೆ ಈ ದೇವಾಲಯವು ಸರಸ್ವತಿ ದೇವಿಗೆ ಮುಡಿಪಾದ ದೇವಾಲಯವಗಿ ಹೆಚ್ಚಿನ ಮಹತ್ವಗಳಿಸಿತು. ಸಾಮಾನ್ಯವಾಗಿ ಕೇರಲದ ಎಲ್ಲ ದೇವಾಲಯಗಳಿಗೆ ಇರುವ ಹಾಗೆ ಈ ದೇವಾಲಯವೂ ಸಹ ಕಲ್ಯಾಣಿಯೊಂದನ್ನು ಹೊಂದಿದೆ. ಸ್ವಚ್ಛತೆಯಿಂದ ಕೂಡಿರುವ ಈ ಕಲ್ಯಾಣಿಯ ನೀರನ್ನು ದೇವಾಲಯಕ್ಕಾಗಿ ಬಳಸಲಾಗುತ್ತದೆ.
ಚಿತ್ರಕೃಪೆ: Ranjith Siji

ಸುಂದರ ಸರಸ್ವತಿ ದೇವಾಲಯಗಳು:
ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯಲ್ಲಿರುವ ಬಾಸರ ಎಂಬ ಪಟ್ಟಣದಲ್ಲಿ ಸರಸ್ವತಿ ದೇವಿಯ ಈ ದೇವಾಲಯವಿದೆ. ಇದನ್ನು ಜ್ಞಾನ ಸರಸ್ವತಿ ದೇವಾಲಯ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ.
ಚಿತ್ರಕೃಪೆ: RameshSharma

ಸುಂದರ ಸರಸ್ವತಿ ದೇವಾಲಯಗಳು:
ಸ್ಥಳ ಪುರಾಣದಂತೆ ಹಿಂದೆ ವ್ಯಾಸ ಮುನಿಗಳು ತಮ್ಮ ಶಿಷ್ಯರೊಂದಿಗೆ ಕುರುಕ್ಷೇತ್ರ ಯುದ್ಧದ ನಂತರ ಶಾಂತಿ ಅರಸಿ ಈ ಕ್ಷೇತ್ರಕ್ಕೆ ಬಂದು ಇಲ್ಲಿನ ಪ್ರಶಾಂತ ಪರಿಸರಕ್ಕೆ ಮನಸೋತು ಇಲ್ಲಿಯೆ ತಂಗಿದ್ದರು. ಅವರು ದಿನದ ಬಹು ಹೊತ್ತು ಪ್ರಾರ್ಥನೆಯಲ್ಲೆ ಕಳೆಯುತ್ತಿದ್ದರಿಂದ ಈ ಸ್ಥಳಕ್ಕೆ ವಾಸರ ಎಂಬ ಹೆಸರಿತ್ತು. ಅದೆ ನಂತರ ಬಾಸರ ಎಂದಾಯಿತು.
ಚಿತ್ರಕೃಪೆ: wikimedia

ಸುಂದರ ಸರಸ್ವತಿ ದೇವಾಲಯಗಳು:
ಇಂದಿನ ಕರ್ನಾಟಕ ಪ್ರಾಂತ್ಯದ ನಂದಗಿರಿ ರಾಜ್ಯವನ್ನಾಳುತ್ತಿದ್ದ ಬಿಜಿಯಾಲುಡು ಎಂಬ ರಾಜ ಬಾಸರದಲ್ಲಿರುವ ಸರಸ್ವತಿ ದೇವಿ ದೇವಾಲಯದ ನಿರ್ಮಾತೃ ಎಂದು ಇತಿಹಾಸ ಹೇಳುತ್ತದೆ. ಮಂಜಿರಾ ಹಾಗೂ ಗೋದಾವರಿ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಿಸಲಾದ ಮೂರು ದೇವಾಲಯಗಳಲ್ಲಿ ಇದೂ ಒಂದು.

ಸುಂದರ ಸರಸ್ವತಿ ದೇವಾಲಯಗಳು:
ದಕ್ಷಿಣ ಮೂಕಾಂಬಿಕಾ ದೇವಾಲಯ : ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಪರವೂರಿನಲ್ಲಿ ಸರಸ್ವತಿಯ ಈ ಜನಪ್ರೀಯ ದೇವಾಲಯವಿದೆ. ಹಿಂದೆ ಈ ಪ್ರದೇಶದ ರಾಜನು ಮೂಕಾಂಬಿಕೆಯ ಪರಮ ಭಕ್ತನಾಗಿದ್ದು ಪ್ರತಿ ವರ್ಷ ಕರ್ನಾಟಕದ ಕೊಲ್ಲೂರಿಗೆ ಭೇಟಿ ನೀಡುತ್ತಿದ್ದನು. ಆತನಿಗೆ ವಯಸ್ಸಾದಂತೆ ಪ್ರಯಾಣಿಸುವುದು ಕಷ್ಟವಾಗಿ ಮೂಕಾಂಬಿಕೆಯ ದರ್ಶನ ಸಿಗದೆ ದುಖಿತನಾದನು. ಈ ಸಂದರ್ಭದಲ್ಲಿ ದೇವಿಯು ಅವನ ಕನಸಿನಲ್ಲಿ ಬಂದು ತನ್ನ ವಿಗ್ರಹ ಪ್ರತಿಷ್ಠಾಪಿಸುವಂತೆ ಸೂಚಿಸಿದಳು. ಹೀಗಾಗಿ ಇದು ದಕ್ಷಿಣ ಮೂಕಾಂಬಿಕೆ ಎಂದು ಕರೆಯಲ್ಪಡುತ್ತದೆ.
ಚಿತ್ರಕೃಪೆ: Nidhin Chandrasekhar

ಸುಂದರ ಸರಸ್ವತಿ ದೇವಾಲಯಗಳು:
ಪನಚಿಕ್ಕಾಡು ಸರಸ್ವತಿ ದೇವಾಲಯ : ಇದನ್ನೂ ಸಹ ದಕ್ಷಿಣ ಮೂಕಾಂಬಿಕೆಯ ಸನ್ನಿಧಿ ಎಂತಲೆ ಕರೆಯುತ್ತಾರೆ ಹಾಗೂ ಇದು ಇರುವುದೂ ಸಹ ಕೇರಳ ರಾಜ್ಯದಲ್ಲೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಪನಚಿಕ್ಕಾಡು ಎಂಬ ಪಟ್ಟಣದಲ್ಲಿ ಸರಸ್ವತಿ ದೇವಿಯ ಈ ಸುಂದರವಾದ ದೇವಾಲಯವಿದೆ.
ಚಿತ್ರಕೃಪೆ: arunpnair

ಸುಂದರ ಸರಸ್ವತಿ ದೇವಾಲಯಗಳು:
ವಿಶೇಷ ಎಂದರೆ ಇಲ್ಲಿ ಸರಸ್ವತಿ ದೇವಿಯು ಚಿಕ್ಕ ನೀರಿನ ಮೂಲದ ಮಧ್ಯವೊಂದರಲ್ಲಿ ನೆಲೆಸಿದ್ದಾಳೆ ಹಾಗೂ ಅದಕ್ಕೆ ಯಾವುದೆ ರೀತಿಯ ಛಾವಣಿಯಾಗಲಿ ಗೋಪುರವಾಗಲಿ ಇಲ್ಲ. ಮೂರ್ತಿಯ ಸುತ್ತಲೂ ಬೆಳೆದಿರುವ ಬಳ್ಳಿಗಳೆ ಆಕೆಗೆ ಆಶ್ರಯ. ಹಾಗಾಗಿ ಆ ಬಳ್ಳಿಯ ಎಲೆಗಳನ್ನು ಸರಸ್ವತಿ ಎಲೆಗಳೆಂದು ಕರೆಯುತ್ತಾರೆ.
ಚಿತ್ರಕೃಪೆ: Manojk

ಸುಂದರ ಸರಸ್ವತಿ ದೇವಾಲಯಗಳು:
ಮೂಲತಃ ಇದು ವಿಷ್ಣು ದೇವಾಲಯವಾಗಿದ್ದರೂ ಸರಸ್ವತಿಯ ಉಪಸ್ಥ್ತಿಯಿಂದ ಹೆಚ್ಚಿನ ಮಹತ್ವ ಪಡೆದು ಸರಸ್ವತಿ ದೇವಾಲಯ ಎಂತಲೆ ಜನಜನಿತವಾಗಿದೆ. ಬಹು ಹಿಂದೆ ಇಲ್ಲಿನ ನಂಬೂದಿರಿ ಬ್ರಾಹ್ಮಣನಾದ ಕಿಳಪುರಂ ಇಲ್ಲಂ ಎಂಬಾತನಿಗೆ ಗಂಡು ಸಂತಾನವಿರಲಿಲ್ಲ. ಸಾಕಷ್ಟು ವಯಸ್ಸಾಗಿದ್ದರಿಂದ ಕಾಶಿಗೆ ತೆರಳಿ ಪ್ರಾರ್ಥಿಸಿ ಬರುತ್ತ ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಮಾಡಿ ಅಲ್ಲಿನ ಪರಿಸರಕ್ಕೆ ಮಾರು ಹೋಗಿ ಒಂದು ವರ್ಷಗಳ ಕಾಲ ಕಳೆದ.
ಚಿತ್ರಕೃಪೆ: Manojk

ಸುಂದರ ಸರಸ್ವತಿ ದೇವಾಲಯಗಳು:
ಹೀಗಿರುವಾಗ ಒಮ್ಮೆ ಸ್ತ್ರೀಯೊಬ್ಬಳು ಅವನ ಕನಸಿನಲ್ಲಿ ಬಂದು ಆತನಿಗೆ ಗಂಡು ಸಂತಾನದ ಭಾಗ್ಯವಿಲ್ಲವೆಂದೂ ಆ ಕಾರಣ ಅವನ ಊರಿನ ಕರುನಾಟ್ಟು ಕುಟುಂಬದ ಮಹಿಳೆಯೊಬ್ಬಳು ಎರಡು ಸಂತಾನದ ಭಾಗ್ಯ ಹೊಂದಿದ್ದು ಅದರಲ್ಲಿ ಒಂದು ಗಂಡು ಸಂತಾನವನ್ನು ದತ್ತು ತೆಗೆದುಕೊ ಅಂತಹೇಳಿದಳು. ದೇವಾಲಯಕ್ಕೆ ಸಾಕಷ್ಟು ಜನ ಭಕ್ತರು ಭೇಟಿ ನೀಡುತ್ತಾರೆ.
ಚಿತ್ರಕೃಪೆ: Manojk

ಸುಂದರ ಸರಸ್ವತಿ ದೇವಾಲಯಗಳು:
ಇದಕ್ಕೊಪಿದ ಆ ಬ್ರಾಹ್ಮಣ ಪನಚಿಕ್ಕಾಡುಗೆ ಬಂದು ಕೊಳದಲ್ಲಿ ಸ್ನಾನ ಮಾಡಲೆಂದು ತನ್ನ ಎಲೆಗಳಿಂದ ಮಾಡಲಾದ ಕೊಡೆಯನ್ನು ಅಲ್ಲಿಯ ಭೂಮಿಯ ಮೇಲೆ ಬಿಟ್ಟು ಸ್ನಾನ ಮಾಡಿದ. ನಂತರ ಆ ಕೊಡೆಯನ್ನು ಎತ್ತಲು ಹೋದಾಗ ಅದನ್ನೆತ್ತಲಾಗಲಿಲ್ಲ. ಇದರಿಂದ ಬ್ರಾಹ್ಮಣ ಅಚ್ಚರಿಗೊಂಡ ಹಾಗೂ ಆ ಕ್ಷಣದಲ್ಲೆ ಆಕಾರವೊಂದು ಪ್ರತ್ಯಕ್ಷವಾಗಿ ಆ ಕೊಡೆಯಲ್ಲಿ ದೇವಿಯ ಆವಾಹನವಾಗಿದ್ದು ಆಕೆಯನ್ನು ಈ ಪ್ರದೇಶವೊಂದರಲ್ಲಿ ಅವಿತುಹೋಗಿರುವ ವಿಗ್ರಹದಲ್ಲೆ ಬರಮಾಡಿಕೊಳ್ಳಬೇಕೆಂದು ಹೇಳಿ ಮಾಯವಾಯಿತು.
ಚಿತ್ರಕೃಪೆ: Sailesh

ಸುಂದರ ಸರಸ್ವತಿ ದೇವಾಲಯಗಳು:
ಅಷ್ಟಕ್ಕೂ ಆ ವಿಗ್ರಹ ಯಕ್ಷಿಯೊಬ್ಬಳ ಸುಅಪ್ರ್ದಿಯಲ್ಲಿದ್ದು ಆಕೆಯ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿ ವಿಗ್ರಹ ಪಡೆಯಬೇಕೆಂದು ಎಚ್ಚರಿಸಿತ್ತು. ಅದರಂತೆ ಆ ಬ್ರಾಹ್ಮಣನಿಗೆ ವಿಗ್ರಹ ದೊರಕಿ ಯಕ್ಷಿಯನ್ನು ಸಂತುಷ್ಟಗೊಳಿಸಿ ವಿಗ್ರಹ ಪಡೆದು ನೀರಿನ ಮೂಲವೊಂದರ ಮೇಲೆ ಅದನ್ನು ಪ್ರತಿಷ್ಠಾಪಿಸಿದನು. ಹಾಗಾಗಿ ಅಲ್ಲಿ ನೀರು ಸದಾ ಹರಿಯುತ್ತಿರುತ್ತದೆ, ಬಿರು ಬೇಸಿಗೆಯಲ್ಲೂ ಕೂಡ. ಹೀಗೆ ನೀರಿನಲ್ಲಿ ನೆಲೆಸಿರುವ ದೇವಿಯು ಸರಸ್ವತಿಯ ಅವತಾರವಾಗಿ ಸರಸ್ವತಿಯ ದೇವಾಲಯ ಎಂದು ಪ್ರಸಿದ್ಧಿಗಳಿಸಿತು.
ಚಿತ್ರಕೃಪೆ: Manojk

ಸುಂದರ ಸರಸ್ವತಿ ದೇವಾಲಯಗಳು:
ಅನಂತಸಾಗರ ಸರಸ್ವತಿ ದೇವಾಲಯ : ತೆಲಂಗಾಣ ರಾಜ್ಯದ ಮೇಡಕ್ ಜಿಲ್ಲೆಯ ಸಿದ್ಧಿಪೇಟೆ ವಿಭಾಗದ ಚಿನ್ನ ಕೊಡೂರು ತಾಲೂಕಿನಲ್ಲಿರುವ ಅನಂತಸಾಗರ ಎಂಬಲ್ಲಿರುವ ಪ್ರಖ್ಯಾತ ಸರಸ್ವತಿ ದೇವಿಯ ದೇವಾಲಯ ಇದಾಗಿದೆ. ಇದನ್ನು ಸರಸ್ವತಿ ಕ್ಷೇತ್ರ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Dr Murali Mohan Gurram

ಸುಂದರ ಸರಸ್ವತಿ ದೇವಾಲಯಗಳು:
ಹೈದರಾಬಾದ್ ನಗರದಿಂದ 122 ಕಿ.ಮೀ ಹಾಗೂ ಮೇಡಕ್ ನಗರದಿಂದ 63 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಸರಸ್ವತಿ ಕ್ಷೇತ್ರವು 1980 ರಲ್ಲಿ ನಿರ್ಮಿಸಲ್ಪಟ್ಟಿದೆ. ಆದುದರಿಂದ ಇದೊಂದು ಹೊಸ ದೇವಾಲಯವೆಂದೆ ಹೇಳಬಹುದು.
ಚಿತ್ರಕೃಪೆ: Dr Murali Mohan Gurram

ಸುಂದರ ಸರಸ್ವತಿ ದೇವಾಲಯಗಳು:
ಅನಂತಸಾಗರ ಹಳ್ಳಿಯ ಶಿವೇರು ಪರ್ವತಗಳ ಮಧ್ಯೆ ನೆಲೆಸಿರುವ ಈ ಸರಸ್ವತಿ ದೇವಾಲಯವು ಹುದ್ದೆಯಲ್ಲಿ ಶಿಕ್ಷಕರಾದ ಅಷ್ಟಕಲಾ ನರಸಿಂಹ ರಾಮ ಶರ್ಮಾ ಎಂಬುವರಿಂದ ನಿರ್ಮಿಸಲ್ಪಟ್ಟಿದೆ. ಇವರು ಕೇವಲ ಶಿಕ್ಷಕರಲ್ಲದೆ ವಾಸ್ತುಶಾಸ್ತ್ರಜ್ಞರು, ಜ್ಯೋತಿಷಿಗಳು ಹಾಗೂ ಅಂತರ್ಜಲ ಶೋಧಿಸುವ ಪರಿಣಿತರು ಆಗಿದ್ದರು. ಹಾಗಾಗಿ ತಾವು ಗಳಿಸಿದ ಹಣದಿಂದಲೆ ಈ ದೇವಾಲಯ ನಿರ್ಮಾಣ ಮಾಡಿದರು. ವಿಶೇಷ ಎಂದರೆ ಇಲ್ಲಿ ಸರಸ್ವತಿಯು ನಿಂತಿರುವ ಭಂಗಿಯಲ್ಲಿ ನೆಲೆಸಿರುವುದು.
ಚಿತ್ರಕೃಪೆ: Dr Murali Mohan Gurram

ಸುಂದರ ಸರಸ್ವತಿ ದೇವಾಲಯಗಳು:
ಮಾಘ ಮಾಸದ ಐದನೇಯ ದಿನ ಅಥವಾ ವಸಂತ ಪಂಚಮಿಯಂದು ಇಲ್ಲಿ ಸರಸ್ವತಿ ಪೂಜೆಯು ಅತಿ ಸಡಗರದಿಂದ ಆಚರಿಸಲ್ಪಡುತ್ತದೆ. ಅಲ್ಲದೆ ನವರಾತ್ರಿಯ ಸಂದರ್ಭದಲ್ಲಿಯೂ ಸಹ ಒಂಭತ್ತನೇಯ ದಿನ ಸರಸ್ವತಿ ದೇವಿಗೆ ಮುಡಿಪಾಗಿ ಆಚರಣೆಗಳನ್ನು ಇಲ್ಲಿ ಆಚರಿಸಲಾಗುತ್ತದೆ.
ಚಿತ್ರಕೃಪೆ: Dr Murali Mohan Gurram

ಸುಂದರ ಸರಸ್ವತಿ ದೇವಾಲಯಗಳು:
ಸರಸ್ವತಿ ದೇವಾಲಯ : ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಂದ 60 ಕಿ.ಮೀ ದೂರದಲ್ಲಿರುವ ಗದಗ್ ಪಟ್ಟಣದಲ್ಲಿ ಅತಿ ಪುರಾತನವಾದ ಸರಸ್ವತಿ ದೇವಾಲಯವಿದೆ. ಇದು ಮೂಲತಃ ಶಿವನಿಗೆ ಮುಡಿಪಾದ ತ್ರಿಕೂಟೇಶ್ವರನ ದೇವಾಲಯವಾಗಿದ್ದು ಅದರಲ್ಲಿ ಸರಸ್ವತಿ ದೇವಿಗೂ ಮುಡಿಪಾದ ಸುಂದರ ಕೆತ್ತನೆಯುಳ್ಳ ದೇಗುಲವಿದೆ. ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಈ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡುತ್ತಲಿರುತ್ತಾರೆ.
ಚಿತ್ರಕೃಪೆ: Dineshkannambadi


Click it and Unblock the Notifications
















