Search
  • Follow NativePlanet
Share
» »ದಸರಾ ಸಮಯದಲ್ಲಿ ಭಾರತದ ಈ ಸ್ಥಳದಲ್ಲಿ ವಿಶ್ವದಲ್ಲೇ ಅತೀ ಎತ್ತರದ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ !!

ದಸರಾ ಸಮಯದಲ್ಲಿ ಭಾರತದ ಈ ಸ್ಥಳದಲ್ಲಿ ವಿಶ್ವದಲ್ಲೇ ಅತೀ ಎತ್ತರದ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ !!

ವಿಶ್ವದಲ್ಲಿಯೇ ಅತಿ ಎತ್ತರವಾದ ರಾವಣನ ಪ್ರತಿಕೃತಿಗೆ ಈ ದಸರಾದಲ್ಲಿ ಹರಿಯಾಣವು ಸಾಕ್ಷಿಯಾಗಲಿದೆ

ದಸರಾ ಹಬ್ಬವು ಸಮೀಪಿಸುತ್ತಿದ್ದಂತೆ ಪ್ರತಿಯೊಬ್ಬರೂ ಈ ಅದ್ಬುತವಾದ ಹಬ್ಬವನ್ನು ಬಹಳ ಉಲ್ಲಾಸ ಮತ್ತು ಉತ್ಸಾಹದಿಂದ ಆಚರಿಸುವ ಸಲುವಾಗಿ ನಿರತರಾಗಿರುವುದನ್ನು ಕಾಣಬಹುದಾಗಿದೆ. ದಶೆರಾ ಹಬ್ಬವನ್ನು ವಿಜಯದಶಮಿ ಎಂದೂ ಕರೆಯಲಾಗುತ್ತದೆ ಇದನ್ನು ಸಾಮಾನ್ಯವಾಗಿ ಅಸುರ ರಾಜ ರಾವಣನನ್ನು ರಾಮನು ಕೊಂದ ದಿನವನ್ನು ಸ್ಮರಿಸುವುದಕ್ಕಾಗಿ ಹಾಗೂ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಅಂದಿನಿಂದ ಈ ಹಬ್ಬವನ್ನು ಕೆಟ್ಟತನದ ಮೇಲೆ ಒಳ್ಳೆ ತನದ ವಿಜಯದ ಸಂಕೇತವೆಂಬಂತೆ ಆಚರಿಸುತ್ತಾ ಬರಲಾಗಿದೆ. ದಸರಾ ಆಚರಣೆಯ ಸಮಯದಲ್ಲಿ ದೇಶದಾದ್ಯಂತ ದೊಡ್ಡ ಪಟ್ಟಣದಿಂದ ಸಣ್ಣ ಹಳ್ಳಿಗಳವರೆಗೆ ಎಲ್ಲಾ ಕಡೆಯೂ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ರಾವಣನ ಅತ್ಯಂತ ದೊಡ್ಡ ಪ್ರತಿಕೃತಿಯನ್ನು ದೇಶದ ಯಾವ ಸ್ಥಳದಲ್ಲಿ ದಹಿಸಲಾಗುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ?

ಇಲ್ಲ ಎಂದಾದಲ್ಲಿ ನಾವು ನಿಮಗೆ ಅದರ ಬಗ್ಗೆ ಮಾಹಿತಿ ನಾವು ಈ ಲೇಖನ ಮೂಲಕ ನೀಡುತ್ತಿದ್ದೇವೆ. ಹರಿಯಾಣ ರಾಜ್ಯದ ಬರಾರ ಈ ಸ್ಥಳದ ಬಗ್ಗೆಯೇ ನಾವು ಮಾತಾಡುತ್ತಿರುವುದು ಹೌದು ಈ ಸ್ಥಳದಲ್ಲಿಯೇ ಜಗತ್ತಿನ ಅತ್ಯಂತ ಎತ್ತರದ ರಾವಣನ ಪ್ರತಿಕೃತಿಯನ್ನು ಪ್ರತೀವರ್ಷ ದಸರಾ ಹಬ್ಬದ ಸಮಯದಲ್ಲಿ ದಹಿಸಲಾಗುವುದು. ಈ ಆಚರಣೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಓದಿ ತಿಳಿಯಿರಿ.

ravana-burns-1539867957-1663070696.jpg -Properties

ಬರಾರ ಪಟ್ಟಣದ ಬಗ್ಗೆ ಸಣ್ಣ ಮಾಹಿತಿ

ಹರಿಯಾಣ ರಾಜ್ಯದ ಅಂಬಾಲ ಜಿಲ್ಲೆಯಲ್ಲಿರುವುದು ಬರಾರಾ ಎಂಬ ಸಣ್ಣ ಪಟ್ಟಣ. ಈ ಪಟ್ಟಣವು ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ರಾವಣನ ಪ್ರತಿಕೃತಿ ತಯಾರಿಸುವುದಕ್ಕೆ ಪ್ರಾರಂಭಿಸಿದ ನಂತರದಿಂದ ಪ್ರಚಾರಕ್ಕೆ ಬಂತು. ದಸರಾ ಹಬ್ಬದ ಆಚರಣೆಯು ಉತ್ತುಂಗದಲ್ಲಿರುವ ದೇಶದ ಕೆಲವೇ ಕೆಲವು ಪಟ್ಟಣಗಳ ಪಟ್ಟಿಯಲ್ಲಿ ಈ ಸಣ್ಣ ಪಟ್ಟಣವೂ ಸೇರಿದೆ.

ಆದುದರಿಂದ ರಾಜ್ಯದಾದ್ಯಂತ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಮತ್ತು ಹಿಂದೂ ಭಕ್ತರು ಈ ಬರಾರ ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಬಾರಾರಾ ಕಲ್ಲಂಗಡಿಗಾಗಿ ಜನಪ್ರಿಯವಾಗಿದೆ, ಇದನ್ನು "ಬರಾರಾ ದಿ ಖಾಂದಾ" ಎಂದು ಕರೆಯಲಾಗುತ್ತದೆ.

21-1445419850-anotheridolofgode-1662531289-1663070686.jpg -Properties

ಬರಾರಾದ ದಶೆರಾ ಮತ್ತು ಅಲ್ಲಿ ತಯಾರಿಸಲಾಗುವ ರಾವಣನ ಪ್ರತಿಕೃತಿಯ ಬಗ್ಗೆ ಸಣ್ಣ ಮಾಹಿತಿ

ದಸರಾ ಹಬ್ಬವನ್ನು ವೀಕ್ಷಿಸುವುದಕ್ಕಾಗಿ ಅಥವಾ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಯಾವುದಾದರೂ ಅತ್ಯುತ್ತಮ ಸ್ಥಳಗಳ ಹುಡುಕಾಟದಲ್ಲಿದ್ದರೆ, ಬರಾರಾಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದಿರದು. ಇಲ್ಲಿ ನೀವು ಉತ್ಸಾಹಿ ಜನರು ಮತ್ತು ಸ್ನೇಹಭರಿತ ವಾತಾವರಣ ಮತ್ತು ಇಲ್ಲಿ ದೀಪಾವಳಿಯಿಂದ ಹಿಡಿದು ಎಲ್ಲಾ ಹಬ್ಬಗಳನ್ನು ಅತ್ಯಂತ ಸಡಗರದಿಂದ ಆಚರಿಸುವುದನ್ನು ಕಾಣಬಹುದಾಗಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಈ ನಾಡಿನಲ್ಲಿ 200 ಅಡಿಗಿಂತ ಹೆಚ್ಚು ಅಳತೆಯ ರಾವಣನ ಪ್ರತಿಕೃತಿಯನ್ನು ನೀವು ವೀಕ್ಷಿಸಬಹುದಾಗಿದ್ದು, 2016 ರಲ್ಲಿ, ಸುಮಾರು 210 ಅಡಿಗಳಷ್ಟು ಪ್ರತಿಕೃತಿಯನ್ನು ಸುಡಲಾಯಿತು. ಬರಾರದ ದಸರಾ ಜಾತ್ರೆಯು ಹಬ್ಬದ ಸಮಯದಲ್ಲಿ ಈ ಪಟ್ಟಣದಲ್ಲಿ ಅಸ್ತಿತ್ವದಲ್ಲಿರುವ ಮೋಡಿ ಮತ್ತು ಜೀವಂತಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

kota-dussehra-mela-1570520618-16625315231-1663070677.jpg -Properties

ನೀವು ಬರಾರಾಗೆ ಭೇಟಿ ನೀಡಲೇಬೇಕು ಏಕೆ?

ದೇಶದ ವಿವಿಧ ಸ್ಥಳಗಳಲ್ಲಿ ದಸರಾ ಹಬ್ಬದ ವೈವಿಧ್ಯತೆಗಳನ್ನು ಸಂಪೂರ್ಣವಾಗಿ ವೀಕ್ಷಿಸ ಬಯಸುವವರು ಮತ್ತು ಈ ಹಬ್ಬದ ಸೌಂದರ್ಯತೆಯನ್ನು ಪರಿಪೂರ್ಣವಾಗಿ ಅನ್ವೇಷಣೆ ಮಾಡಬಯಸುವ ಪ್ರತಿಯೊಬ್ಬರಿಗೂ ಬರಾರಾ ಭೇಟಿ ನೀಡಲೇಬೇಕೆನ್ನುವಂತಹ ಸ್ಥಳವಾಗಿದೆ. ಇಲ್ಲಿ ರಾವಣನ ಅತ್ಯಂತ ಎತ್ತರದ ಪ್ರತಿಕೃತಿಯನ್ನು ನೋಡುವುದರ ಹೊರತಾಗಿ, ಇಲ್ಲಿಯ ಪ್ರಾಚೀನ ಕಾಲದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನೂ ತಿಳಿದುಕೊಳ್ಳಬಹುದಾಗಿದೆ. ಈ ಸ್ಥಳವು ಹರಿಯಾಣದ ನಮಗೆ ತಿಳಿಯದೇ ಇರುವ ಭಾಗದ ಪರಿಚಯ ಮಾಡಿಕೊಡುತ್ತದೆ.

ಬರಾರಾಗೆ ತಲುಪುವುದು ಹೇಗೆ?

ವಿಮಾನದ ಮೂಲಕ: ಬರಾರಾಕ್ಕೆ ಸಮೀಪದ ವಿಮಾನ ನಿಲ್ದಾಣವು ಚಂಡೀಗಢದಲ್ಲಿ ಸುಮಾರು 87 ಕಿ.ಮೀ ದೂರದಲ್ಲಿದೆ. ಒಮ್ಮೆ ನೀವು ಚಂಡೀಗಢವನ್ನು ತಲುಪಿದ ನಂತರ, ಬರಾರಾ ತಲುಪಲು ನೀವು ನೇರ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಬಹುದು.

ರೈಲುಮಾರ್ಗದ ಮೂಲಕ: ಅಂಬಾಲಾ ಇತರ ಪಟ್ಟಣಗಳು ​​ಮತ್ತು ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಬರಾರಾಕ್ಕೆ ಹತ್ತಿರದ ನಗರವಾಗಿದೆ. ನಿಲ್ದಾಣದಿಂದ, ನೀವು ಬರಾರಾ ತಲುಪಲು ಕ್ಯಾಬ್ ಅಥವಾ ಬಸ್ ಹಿಡಿಯಬಹುದು. ಅಂಬಾಲಾ ಮತ್ತು ಬರಾರ ನಡುವಿನ ಅಂತರವು 40 ಕಿ.ಮೀ.

ರಸ್ತೆಯ ಮೂಲಕ: ಅಂಬಾಲಾ ಜಿಲ್ಲೆಯ ಜನಪ್ರಿಯ ಸ್ಥಳ ಮತ್ತು ಮಹತ್ವದ ಪಟ್ಟಣವಾಗಿರುವ ಬರಾರಾ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+