Search
  • Follow NativePlanet
Share
» »ನವದೆಹಲಿ ವಿಮಾನ ನಿಲ್ದಾಣದಲ್ಲಿ ಈ 5 ಸೌಕರ್ಯಗಳು ಉಚಿತವಾಗಿ ಸಿಗುತ್ತವೆ..!

ನವದೆಹಲಿ ವಿಮಾನ ನಿಲ್ದಾಣದಲ್ಲಿ ಈ 5 ಸೌಕರ್ಯಗಳು ಉಚಿತವಾಗಿ ಸಿಗುತ್ತವೆ..!

ಪ್ರವಾಸಕ್ಕೆಂದು ಹೊರಟಾಗ ಕೆಲವೊಮ್ಮೆ ನಾವು ವಿಮಾನ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ವಿಮಾನದ ಮೂಲಕ ಪ್ರವಾಸಕ್ಕೆ ಹೊರಡುವವರು ವಿಮಾನ ನಿಲ್ದಾಣದಲ್ಲಿ ಸಿಗುವ ಕೆಲವು ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಹೌದು, ವಿಮಾನ ನಿಲ್ದಾಣವು ನಮ್ಮ ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಅಲ್ಲದೇ ಕೆಲವು ಸೌಲಭ್ಯಕ್ಕಾಗಿ ನೀವು ನಿಮ್ಮ ಜೇಬಿನಿಂದ ಖಂಡಿತ ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದು ನೆನಪಿರಲಿ. ಹಾಗಾದರೆ ನಾವು ಏನೆಲ್ಲಾ ಸೌಲಭ್ಯಗಳನ್ನು ಇಲ್ಲಿ ಬಳಸಬಹುದು?, ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಆ ಸೌಕರ್ಯಗಳು ಯಾವುವು ಎಂದು ನೀವು ಈಗ ಯೋಚಿಸುತ್ತಿರಬೇಕು ಅಲ್ಲವೇ.

ಆದರೆ ವಿಮಾನದಲ್ಲಿ ಹೆಚ್ಚು ಪ್ರಯಾಣ ಮಾಡುವವರಿಗೆ ಈ ಸೌಲಭ್ಯಗಳ ಬಗ್ಗೆ ಸಾಮಾನ್ಯವಾಗಿ ತಿಳಿದಿರುತ್ತದೆಯಾದರೂ, ಈ ಬಗ್ಗೆ ಮಾಹಿತಿ ಇಲ್ಲದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ನೋಡಿ. ಅಂದಹಾಗೆ ಇಲ್ಲಿ ಹೊಸ ದೆಹಲಿ ವಿಮಾನ ನಿಲ್ದಾಣದಲ್ಲಿ ಒದಗಿಸಲಾದ ಸೌಲಭ್ಯಗಳ ಬಗ್ಗೆ ಹೇಳುತ್ತಿದ್ದು, ಕೆಲವೊಂದಕ್ಕೆ ನೀವು ಸೇವಾ ಶುಲ್ಕವನ್ನು ಪಾವತಿಸಬೇಕಾಗಬಹುದು.

ವಿಮಾನಯಾನ ಸಂಸ್ಥೆಯಲ್ಲಿ ಲಾಂಜ್

ವಿಮಾನಯಾನ ಸಂಸ್ಥೆಯಲ್ಲಿ ಲಾಂಜ್

ವಿಮಾನಯಾನ ಸಂಸ್ಥೆಯು ಹಲವಾರು ಲಾಂಜ್ ಸೌಲಭ್ಯಗಳನ್ನು ಒದಗಿಸುತ್ತದೆ. ಇಲ್ಲಿ ನೀವು ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು ಲಾಂಜ್ ಅನ್ನು ಪೂರ್ಣವಾಗಿ ಆನಂದಿಸಬಹುದು. ವಿಮಾನ ನಿಲ್ದಾಣದಲ್ಲಿ ಕೆಲವು ವಿಶ್ರಾಂತಿ ಕೋಣೆಗಳು ಸಹ ಇವೆ, ಅಲ್ಲಿ ಪ್ರಯಾಣಿಕರಿಗೆ ಖಾಸಗಿ ಕೊಠಡಿಗಳು ಮತ್ತು ಶವರ್ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ. ಆದರೆ ಈ ಸೌಲಭ್ಯವನ್ನು ಪಡೆಯಲು ನೀವು ಪಾವತಿಸಬೇಕಾಗಬಹುದು. ನಿಮ್ಮ ಫ್ಲೈಟ್ ತಡವಾಗಿದ್ದರೆ, ನೀವು ಲಾಂಜ್ ಅನ್ನು ಪೂರ್ಣವಾಗಿ ಆನಂದಿಸಬಹುದು. ನೀವು ಲಾಂಜ್ ಗೆ ಸ್ವಲ್ಪ ಮುಂಚಿತವಾಗಿ ಕಾಯ್ದಿರಿಸಬೇಕು.

ಶವರ್ ಸೌಲಭ್ಯವು ಉಂಟು

ಶವರ್ ಸೌಲಭ್ಯವು ಉಂಟು

ಬಹುಶಃ ನಿಮಗೆ ಇದು ತಿಳಿದಿರಲಿಕ್ಕಿಲ್ಲ, ಆದರೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಶವರ್ ಕೊಠಡಿಗಳನ್ನು ಸಹ ಮಾಡಲಾಗಿದೆ. ವಿಮಾನವು ತಡವಾಗಿ ಹೊರಡುವುದಾದರೆ ಅಥವಾ ಬರುವುದಾದರೆ, ನೀವು ಬಹಳ ಹೊತ್ತು ವಿಮಾನ ನಿಲ್ದಾಣದಲ್ಲಿ ಇರಬೇಕಾದ ಸಂದರ್ಭ ಬಂದರೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಶವರ್ ರೂಮ್ ಸೌಲಭ್ಯವೂ ಇದೆ. ಟರ್ಮಿನಲ್ 3 ರಲ್ಲಿ 24-ಗಂಟೆಗಳ ಶವರ್ ಸೌಲಭ್ಯಗಳು ಲಭ್ಯವಿದೆ.

ಉಚಿತ ವೈಫೈ ಸೌಲಭ್ಯ

ಉಚಿತ ವೈಫೈ ಸೌಲಭ್ಯ

ಉಚಿತ ವೈಫೈ ಬಳಸಲು ಯಾರು ಬಯಸುವುದಿಲ್ಲ, ಆದರೆ ಈ ವಿಮಾನ ನಿಲ್ದಾಣದಲ್ಲಿ ನಿಮಗೆ ಅದಕ್ಕೆ ಅವಕಾಶ ಸಿಗುತ್ತದೆ. ನಮ್ಮ ವೈಫೈ ಆಯ್ಕೆಯನ್ನು ಆನ್ ಮಾಡುವ ಮೂಲಕ ನಾವು ಇಂಟರ್ನೆಟ್ ಬಳಸಲು ಪ್ರಾರಂಭಿಸಬಹುದು. ವಿಮಾನ ನಿಲ್ದಾಣವು ಉಚಿತ ವೈಫೈ ಅನ್ನು ನೀಡುವ ಸ್ಥಳವಾಗಿದೆ. ಇಲ್ಲಿ ಕುಳಿತು ಸಿನಿಮಾ, ಹಾಡು, ಏನು ಬೇಕಾದರೂ ನೋಡಬಹುದು, ಕೇಳಬಹುದು.

ಮಲಗುವ ಕೋಣೆಯೂ ಇದೆ

ಮಲಗುವ ಕೋಣೆಯೂ ಇದೆ

ಸಾಮಾನ್ಯವಾಗಿ ವಿಮಾನಕ್ಕಾಗಿ ಕಾಯುತ್ತಿರುವಾಗ ಪ್ರತಿಯೊಬ್ಬರು ತಾಳ್ಮೆ ಕಳೆದುಕೊಳ್ಳುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಜನರು ಅಲ್ಲಿ ಇಲ್ಲಿ ತಿರುಗಾಡುತ್ತಾರೆ ಅಥವಾ ಮಲಗಲು ಸರಿಯಾದ ಸ್ಥಳವನ್ನು ಹುಡುಕುತ್ತಾರೆ. ಆದರೆ ನವ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ನಲ್ಲಿ ಅತ್ಯಂತ ಆರಾಮದಾಯಕವಾದ ಸ್ಥಳವಿದೆ. ಅಲ್ಲಿ ನೀವು ಆರಾಮವಾಗಿ ಕುಳಿತುಕೊಳ್ಳಲು ಶಾಪಿಂಗ್ ಔಟ್‌ಲೆಟ್‌ಗಳು, ಸೋಫಾಗಳು, ಆರ್ಮ್‌ರೆಸ್ಟ್‌ಗಳಂತಹ ಅನೇಕ ಸ್ಥಳಗಳನ್ನು ಕಾಣಬಹುದು. ಮಲಗಲು ನೀವು ಟರ್ಮಿನಲ್ 3 ಅಥವಾ ಮೂರು ಪ್ಲಾಜಾ ಪ್ರೀಮಿಯಂ ಲಾಂಜ್‌ಗಳಲ್ಲಿ ಒಂದಾದ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಅಥವಾ ಇನ್-ಟ್ರಾನ್ಸಿಟ್ ಸ್ಲೀಪಿಂಗ್ ಪಾಡ್‌ಗಳಿಗೆ ಭೇಟಿ ನೀಡಬಹುದು. ಇಲ್ಲಿ ಅನೇಕ ಹೋಟೆಲ್‌ಗಳು ಸಹ ಲಭ್ಯವಿವೆ.

ವಿಮಾನ ನಿಲ್ದಾಣದಿಂದ ಹೊರಗೆ

ವಿಮಾನ ನಿಲ್ದಾಣದಿಂದ ಹೊರಗೆ

ವಿಮಾನ ನಿಲ್ದಾಣದಲ್ಲಿ ಕುಳಿತು ಸಮಯವನ್ನು ಕಳೆಯಲು ಇಚ್ಛಿಸದವರು, ವಿಮಾನ ನಿಲ್ದಾಣದ ಹೊರಗೆ ಬಂದು ನೋಡಬಹುದಾದ ಅನೇಕ ಜಾಗಗಳಿವೆ. ಅಲ್ಲಿ ನೀವು ನಿಮ್ಮ ಸಮಯವನ್ನು ಕಳೆಯಬಹುದು. ಹೊಸ ದೆಹಲಿ ವಿಮಾನ ನಿಲ್ದಾಣದ ಬಳಿಯಂತೂ ಹಲವಾರು ಸ್ಥಳಗಳಿವೆ. ನೀವು ಒಬ್ಬಂಟಿಯಾಗಿರಲಿ ಅಥವಾ ಕುಟುಂಬದೊಂದಿಗೆ ಹೋಗುತ್ತಿರಲಿ ಈ ಜಾಗಗಳಿಗೆ ಆರಾಮಾಗಿ ನೀವು ಭೇಟಿ ನೀಡಬಹುದು. ಟ್ಯಾಕ್ಸಿ ಮೂಲಕ, ನೀವು ಕನ್ನಾಟ್ ಪ್ಲೇಸ್, ಇಂಡಿಯಾ ಗೇಟ್ ಮುಂತಾದ ಸ್ಥಳಗಳನ್ನು ನೋಡಲು ಹೋಗಬಹುದು. ಇನ್ನುಂದು ವಿಷಯ ನೆನಪಿರಲಿ ನೀವು ಯಾವುದೇ ಟಿಕೆಟ್ ಇಲ್ಲದೆ ಆರಾಮವಾಗಿ ಈ ಸ್ಥಳಗಳಲ್ಲಿ ಸುತ್ತಾಡಲು ಸಾಧ್ಯವಾಗುತ್ತದೆ.

ದೆಹಲಿ ತಲುಪುವುದು ಹೇಗೆ?

ದೆಹಲಿ ತಲುಪುವುದು ಹೇಗೆ?

ನವದೆಹಲಿಯು ದೇಶದ ರಾಜಧಾನಿಯಾಗಿರುವುದರಿಂದ, ಭಾರತ ಮತ್ತು ಪ್ರಪಂಚದ ಎಲ್ಲಾ ಪ್ರಮುಖ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ದೆಹಲಿ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಸೇವೆ ಸಲ್ಲಿಸುತ್ತದೆ. ನವದೆಹಲಿಯು ರೈಲು ಮಾರ್ಗವನ್ನೂ ಹೊಂದಿದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಹಾಗೆಯೇ ದೆಹಲಿ ರಾಜ್ಯದ ಬಸ್ಸುಗಳು ನೆರೆಹೊರೆಯ ನಗರಗಳಿಗೆ ಮತ್ತು ಇಲ್ಲಿಂದ ಬೇರೆಡೆ ಹೊರಡುತ್ತವೆ. ಅಂದಹಾಗೆ ಬೆಂಗಳೂರಿನಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವುದಾದರೆ 4 ಗಂಟೆಗಳು ತೆಗೆದುಕೊಳ್ಳುತ್ತದೆ.

ಭೇಟಿ ನೀಡುವ ಸಮಯ: ತಂಪಾದ ಹವಾಮಾನವಿರುವ ಕಾರಣದಿಂದಾಗಿ ಅಕ್ಟೋಬರ್ ನಿಂದ ಮಾರ್ಚ್ ದೆಹಲಿಗೆ ಭೇಟಿ ನೀಡಲು ಉತ್ತಮ ಸಮಯ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+