Search
  • Follow NativePlanet
Share
» »ವಿದೇಶಿ ಸ್ಥಳಗಳನ್ನು ಮರೆಸುವಂತಹ ಅರುಣಾಚಲ ಪ್ರದೇಶದ ಭಾಲುಕ್ ಪೋಂಗ್

ವಿದೇಶಿ ಸ್ಥಳಗಳನ್ನು ಮರೆಸುವಂತಹ ಅರುಣಾಚಲ ಪ್ರದೇಶದ ಭಾಲುಕ್ ಪೋಂಗ್

By Manjula Balaraj Tantry

ಅರುಣಾಚಲ ಪ್ರದೇಶದಂತಹ ಸ್ಥಳಗಳು ಶಾಂತಿಯುತವಾಗಿದ್ದು 21ನೇ ಶತಮಾನದ ಸದ್ದುಗದ್ದಲಗಳಿಂದ ದೂರವಿದೆ ಮತ್ತು ಪ್ರಕೃತಿಯ ಅನಾವರಣಗೊಂಡ ಸೌಂದರ್ಯತೆಯಿಂದ ಸುತ್ತುವರಿಯಲ್ಪಟ್ಟಿದೆ. ಇಂತಹ ಸ್ಥಳಗಳಲ್ಲಿ ನಿಮಗೆ ತೃಪ್ತಿಯನ್ನು ನೀಡಬಲ್ಲ ಸ್ಥಳವೆಂದರೆ ಸಣ್ಣ ಪಟ್ಟಣವಾದ 'ಭಾಲುಕ್ ಪೋಂಗ್' ಭಾಲುಕ್ ಪೋಂಗ್ ನ ಬಗ್ಗೆ ಸ್ವಲ್ಪ ವಿವರಣೆ ಇಲ್ಲಿದೆ.

1. ಭಾಲುಕ್ ಪೋಂಗ್ ಬಗ್ಗೆ ಒಂದಿಷ್ಟು

1. ಭಾಲುಕ್ ಪೋಂಗ್ ಬಗ್ಗೆ ಒಂದಿಷ್ಟು

PC - Vikramjit Kakati

ಕಾಕಾಟಿ ಹಿಮಾಲಯದ ದಕ್ಷಿಣ ಭಾಗದಲ್ಲಿದೆ, ಭಲುಕ್ಪಾಂಗ್ ಅರುಣಾಚಲ ಪ್ರದೇಶದ ಪಶ್ಚಿಮ ಕೆಮೆಂಗ್ ಜಿಲ್ಲೆಯಲ್ಲಿದೆ. ಇದು ಕಮೆಂಗ್ ನದಿಯೊಂದಿಗೆ ಇರುವುದರಿಂದ ಎರಡೂ ಕಡೆಗಳಲ್ಲಿ ಹಚ್ಚ ಹಸಿರು ಪ್ರದೇಶಗಳಿಂದ ಕೂಡಿದ್ದು ಇದೊಂದು ಅತ್ಯಂತ ಶಾಂತವಾದ ಮತ್ತು ಪ್ರಶಾಂತವಾದ ಸ್ಥಳಗಳಲ್ಲೊಂದಾಗಿದೆ ಮತ್ತು ಇಲ್ಲಿ ಸಮಯವನ್ನು ಕಳೆಯಬಹುದಾಗಿದೆ.

2. ಅಕಾ ಬುಡಕಟ್ಟು ಜನಾಂಗ

2. ಅಕಾ ಬುಡಕಟ್ಟು ಜನಾಂಗ

PC: Digantatalukdar

ಈ ಬೆರಗುಗೊಳಿಸುವ ಪಟ್ಟಣದ ಸ್ಥಳೀಯ ಜನರನ್ನು ಅಕಾ ಬುಡಕಟ್ಟು ಜನಾಂಗದವರಾಗಿದ್ದು ಅವರು ಅತ್ಯಂತ ಸ್ನೇಹ ಪರರಾಗಿದ್ದಾರೆ. ಜನವರಿಯ ಪ್ರತೀ ತಿಂಗಳಿನಲ್ಲಿ ಈ ಬುಡಕಟ್ಟು ಜನರು ವಾರ್ಷಿಕ ಹಬ್ಬವನ್ನು ಆಚರಿಸುತ್ತಾರೆ ಇದು ಇಲ್ಲಿಯ ಅತ್ಯಂತ ಮುಖ್ಯವಾದ ಹಬ್ಬವಾಗಿದ್ದು ಇದನ್ನು ನೈತಿಡೋ ಎಂದು ಕರೆಯಲಾಗುತ್ತದೆ. ನೈತಿಡೋ ಹಬ್ಬವನ್ನು ಅಕಾ ಬುಡಕಟ್ಟು ಜನಾಂಗದವರಿಂದ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಅವರ ಸಂಪ್ರದಾಯ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

3. ನೀವು ಭಾಲುಕ್ ಪೋಂಗ್‌ಗೆ ಏಕೆ ಭೇಟಿ ಕೊಡಬೇಕು ?

3. ನೀವು ಭಾಲುಕ್ ಪೋಂಗ್‌ಗೆ ಏಕೆ ಭೇಟಿ ಕೊಡಬೇಕು ?

PC - Vikramjit Kakati

ನೀವು ಶಾಂತಿ ಪ್ರಿಯರಾಗಿದ್ದು ಸ್ವಲ್ಪ ಸಮಯ ಏಕಾಂತವಾಗಿರಬೇಕೆಂದು ಬಯಸಿದಲ್ಲಿ, ಕಾಕಾಟಿ ಭಾಲುಕ್ ಪೋಂಗ್ ಒಂದು ಭೇಟಿ ಕೊಡಲು ತಪ್ಪಿಸಲೇ ಬಾರದೆನ್ನುವಂತಹ ಸ್ಥಳವಾಗಿದೆ. ಇಲ್ಲಿಯ ಹಿತವಾದ ಪರಿಸರದ ಜೊತೆಗೆ ಸ್ವಚ್ಚವಾದ ನದಿಯು ಪಟ್ಟಣದುದ್ದಕ್ಕೂ ಹರಿದು ಭಾಲುಕ್ಪೋಂಗ್ ನ ಸೌಂದರ್ಯತೆ ಯನ್ನು ಇಮ್ಮಡಿಸುವಲ್ಲಿ ಸಹಕಾರಿಯಾಗಿದೆ.

ಇದರ ಜೊತೆಗೆ, ಭಾಲುಕ್ ಪೋಂಗ್ ಆಧುನಿಕ ಸಂಶೋಧನೆಗಳಿಂದಾಗಿ ತನ್ನ ನೈಜತೆಯನ್ನು ಕಳೆದುಕೊಳ್ಳದೆ ಇನ್ನೂ ಅನ್ವೇಷಣೆಗೊಳಗಾಗದೇ ಉಳಿದಿದೆ. ಇಲ್ಲಿ ನೀವು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬಹುದು ಅವುಗಳಲ್ಲಿ ರಾಫ್ಟಿಂಗ್, ಮೀನುಗಾರಿಕೆ, ಹೈಕಿಂಗ್, ಅಥವಾ ಟ್ರಕ್ಕಿಂಗ್ ಇದಲ್ಲದೆ ಇಲ್ಲಿಗೆ ಹತ್ತಿರವಿರುವ ಸೆಸಾ ಆರ್ಕಿಡ್ ಅಭಯಾರಣ್ಯ ಮತ್ತು ಪಖುಯಿ ವನ್ಯಜೀವಿ ಧಾಮಗಳಿಗೆ ಕೂಡಾ ಭೇಟಿ ನೀಡಬಹುದಾಗಿದೆ.

4. ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ

4. ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ

PC: Bhalukpong

ಭಾಲುಕ್ ಪೋಂಗ್ ಮಧ್ಯಮ ವರ್ಗದ ಹವಾಮಾನವನ್ನು ಅನುಭವಿಸುತ್ತದೆ ಆದುದರಿಂದ ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲೂ ಭೇಟಿ ನೀಡಬಹುದಾಗಿದೆ. ನೀವು ಹಚ್ಚ ಹಸಿರು ವಾತಾವರಣ ಮತ್ತು ಸ್ವರ್ಗಸದೃಶವಾದ ಪ್ರಕೃತಿಯನ್ನು ನೋಡಲು ಬಯಸುವಿರಾದಲ್ಲಿ ಭಾಲುಕ್ ಪೋಂಗ್ ಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ನಿಂದ ಏಪ್ರಿಲ್ ಕೊನೆಯವರೆಗೆ.

5. ಭಾಲುಕ್ ಪೋಂಗ್ ತಲುಪುವುದು ಹೇಗೆ?

5. ಭಾಲುಕ್ ಪೋಂಗ್ ತಲುಪುವುದು ಹೇಗೆ?

PC- Maps

ವಾಯು ಮಾರ್ಗದ ಮೂಲಕ : ನೀವು ತೇಜ್ ಪುರ್ ವಿಮಾನ ನಿಲ್ದಾಣದಿಂದ ನೇರವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ ಇದು ಭಾಲುಕ್ ಪೋಂಗ್ ನಿಂದ ಸುಮಾರು 55 ಕಿ.ಮೀ ಅಂತರದಲ್ಲಿದೆ. ಒಮ್ಮೆ ನೀವು ವಿಮಾನ ನಿಲ್ದಾಣವನ್ನು ತಲುಪಿದ ನಂತರ ಭಾಲುಕ್ ಪೋಂಗ್ ಗೆ ಒಂದು ಬಾಡಿಗೆ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದಾಗಿದೆ.

ರೈಲು ಮಾರ್ಗ: ಭಾಲುಕ್ ಪೋಂಗ್ ನಲ್ಲಿ ರೈಲ್ವೇ ನಿಲ್ದಾಣವಿಲ್ಲದಿರುವುದರಿಂದ 45 ಕಿ.ಮೀ ದೂರದಲ್ಲಿರುವ ರಂಗಪಾರ ರೈಲು ನಿಲ್ದಾಣಕ್ಕೆ ನೀವು ರೈಲು ಮೂಲಕ ಪ್ರಯಾಣಿಸಬಹುದಾಗಿದೆ. ಇಲ್ಲಿಂದ ಭಾಲುಕ್ ಪೋಂಗ್ ಗೆ ನೀವು ಕ್ಯಾಬ್ ಮೂಲಕ ಪ್ರಯಾಣಿಸಬಹುದಾಗಿದೆ.

ರಸ್ತೆ ಮೂಲಕ: ಭಾಲುಕ್ ಪೋಂಗ್ ಹತ್ತಿರದ ನಗರಗಳು ಮತ್ತು ಪಟ್ಟಣಗಳಿಗೆ ರಸ್ತೆ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಇಲ್ಲಿಯ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರುವುದರಿಂದ ಸುಲಭವಾಗಿ ಸಂಪರ್ಕಿಸಬಹುದಾಗಿದೆ.

More News

Read more about: india travel arunachal pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+