ಕರ್ನಾಟಕವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ದೇಶದಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿರುವ ಮೋಡಿಮಾಡುವ ಕಾಡುಗಳು ಮತ್ತು ಭವ್ಯವಾದ ಪರ್ವತಗಳು ತಮ್ಮ ಸೌಂದರ್ಯದಿಂದ ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಈ ಸುಂದರ ಕರ್ನಾಟಕದಲ್ಲಿ ಲೆಕ್ಕವಿಲ್ಲದಷ್ಟು ಜಲಪಾತಗಳಿವೆ. ಈ ಜಲಪಾತಗಳ ಮನಮೋಹಕ ನೋಟ ನೋಡಿದರೆ ಮನಸೋಲದೆ ಇರಲಾರಿರಿ. ಹೇಗಿದ್ದರೂ ಈಗ ಮಳೆಗಾಲ, ಒಂದು ವೇಳೆ ನೀವು ಕೊಡಗಿಗೆ ಭೇಟಿ ನೀಡಿದರೆ ಈ ಜಲಪಾತ ಖಂಡಿತವಾಗಿಯೂ ನಿಮ್ಮ ಪ್ರವಾಸ ಪಟ್ಟಿಯಲ್ಲಿರಬೇಕು. ಅದ್ಯಾವ ಜಲಪಾತ ಅಂತೀರಾ...ಮುಂದೆ ಓದಿ...
ದೇಶ, ವಿದೇಶಗಳಿಂದ ಬರುವ ಪ್ರವಾಸಿಗರು
ಕರ್ನಾಟಕದ ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಇರ್ಪು ಜಲಪಾತವು ರಾಜ್ಯದ ಅತ್ಯಂತ ವಿಶೇಷವಾದ ಜಲಪಾತಗಳಲ್ಲಿ ಒಂದಾಗಿದೆ. ಇದು ಅದ್ಭುತ ಪರಿಸರಕ್ಕೆ ಮತ್ತು ಪೌರಾಣಿಕ ಸ್ಥಳವಾಗಿ ಹೆಸರುವಾಸಿಯಾಗಿದೆ. ಬೆಂಗಳೂರು ನಗರದಿಂದ ಸುಮಾರು 255 ಕಿ.ಮೀ ದೂರದಲ್ಲಿರುವ ಈ ಸ್ಥಳವು ಸುಂದರವಾದ ಸಸ್ಯವರ್ಗದಿಂದ ಕೂಡಿದೆ. ಈ ಜಲಪಾತ ಮತ್ತು ಅದರ ನೈಸರ್ಗಿಕ ಆಕರ್ಷಣೆಯನ್ನು ನೋಡಲು ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.
ಎಲ್ಲಿ ನೋಡಿದರೂ ಹಸಿರು
ಈ ಜಲಪಾತದ ಸೌಂದರ್ಯ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಹೆಚ್ಚಾಗುತ್ತದೆ. ಏಕೆಂದರೆ ಮಳೆಗಾಲದ ನಂತರ ಇಲ್ಲಿಯ ಹಸಿರನ್ನು ನೋಡಲು ಎರಡು ಕಣ್ಣು ಸಾಲದು. ಇದೊಂದು ಸಿಹಿ ಜಲಪಾತವಾಗಿದ್ದು, ಇದನ್ನು ಲಕ್ಷ್ಮಣ ತೀರ್ಥ ಜಲಪಾತ ಎಂದೂ ಕರೆಯುತ್ತಾರೆ. ಪ್ರವಾಸೋದ್ಯಮದ ದೃಷ್ಟಿಕೋನದಿಂದ ಇದು ನಿಮಗೆ ಎಷ್ಟು ವಿಶೇಷವಾಗಿದೆ ಎಂದು ತಿಳಿಯಿರಿ.

ಇರ್ಪು ಜಲಪಾತವು ಪ್ರವಾಸಿಗರಿಗೆ ವಿಶೇಷ. ಏಕೆಂದರೆ ನಗರದ ಒತ್ತಡದ ಜೀವನದಿಂದ ಹೊರಬರುವವರಿಗಿದು ವಿಶ್ರಾಂತಿ ಸ್ಥಳವಾಗಿದೆ. ಇಲ್ಲಿ ನೀವು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಅದ್ಭುತ ಪ್ರವಾಸವನ್ನು ಯೋಜಿಸಬಹುದು. ಟ್ರೆಕ್ಕಿಂಗ್‌ನಂತಹ ರೋಮಾಂಚಕಾರಿ ಚಟುವಟಿಕೆಗಳನ್ನು ಸಹ ಆನಂದಿಸಬಹುದು. ಈ ಜಲಪಾತದಿಂದ ಬ್ರಹ್ಮಗಿರಿ ಶಿಖರಕ್ಕೆ ಹೋಗುವ ಟ್ರೆಕ್ಕಿಂಗ್ ಟ್ರೇಲ್‌ಗಳು ನಿಮ್ಮನ್ನು ತುಂಬಾ ರೋಮಾಂಚನಗೊಳಿಸುತ್ತವೆ. ವಿಶೇಷವಾಗಿ ಮಳೆಗಾಲದ ತಿಂಗಳುಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವೆಂದು ಪರಿಗಣಿಸಲಾಗಿದೆ. ಇರ್ಪು ಜಲಪಾತವು ಒಂದು ಜನಪ್ರಿಯ ಪ್ರವಾಸಿ ತಾಣ ಮತ್ತು ಯಾತ್ರಾ ಸ್ಥಳವಾಗಿದೆ. ಹಾಗಾದರೆ ಈ ಸ್ಥಳದ ಪೌರಾಣಿಕ ಪ್ರಾಮುಖ್ಯತೆಯ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ...
ಪೌರಾಣಿಕ ಕಥೆಯೇನು?
ಇರ್ಪುವನ್ನು ಯಾತ್ರಾಸ್ಥಳ ಎಂದೂ ಕರೆಯುತ್ತಾರೆ. ಇಲ್ಲಿ ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವು (ರಾಮೇಶ್ವರ ದೇವಾಲಯ) ಲಕ್ಷ್ಮಣ ತೀರ್ಥ ನದಿಯ ದಡದಲ್ಲಿದೆ, ಇಲ್ಲಿಗೆ ಪ್ರತಿದಿನ ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಶಿವಭಕ್ತರ ದಂಡೇ ನೆರೆದಿರುತ್ತದೆ. ಈ ಸ್ಥಳಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಯೂ ಇದೆ, ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕಲು ಬ್ರಹ್ಮಗಿರಿ ಬೆಟ್ಟಗಳ ಮೂಲಕ ಹಾದುಹೋದಾಗ, ಶ್ರೀರಾಮನು ನೀರನ್ನು ತರಲು ಲಕ್ಷ್ಮಣನನ್ನು ಕೇಳಿದನು, ನಂತರ ಲಕ್ಷ್ಮಣನು ಬ್ರಹ್ಮಗಿರಿ ಬೆಟ್ಟಗಳ ಮೇಲೆ ಬಾಣವನ್ನು ಹೊಡೆದನು ಅಲ್ಲಿಂದ ಒಂದು ನದಿ ರೂಪುಗೊಂಡಿತು, ಅದನ್ನು ಲಕ್ಷ್ಮಣ ತೀರ್ಥ ಎಂದು ಕರೆಯಲಾಗುತ್ತದೆ. ಶಿವರಾತ್ರಿಯ ಸಮಯದಲ್ಲಿ, ಭಕ್ತರು ತಮ್ಮ ಪಾಪಗಳನ್ನು ತೊಡೆದುಹಾಕಲು ಇಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ಜಲಪಾತಕ್ಕೆ ಹತ್ತಿರದ ಸ್ಥಳಗಳಿವು...
ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
ಇರ್ಪು ಜಲಪಾತಕ್ಕೆ ಭೇಟಿ ನೀಡುವುದರ ಜೊತೆಗೆ, ನೀವು ಹತ್ತಿರದ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಬಹುದು. ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯವು ಸಮೀಪದಲ್ಲಿರುವ ಒಂದು ವಿಶೇಷ ಪ್ರವಾಸಿ ತಾಣವಾಗಿದೆ, ಇಲ್ಲಿ ನೀವು ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದು. ಇಲ್ಲಿ ವಿವಿಧ ವನ್ಯ ಜೀವಿಗಳನ್ನು ನೋಡುವುದರ ಜೊತೆಗೆ ಪಕ್ಷಿ ವೀಕ್ಷಣೆ ಮಾಡುವ ಅವಕಾಶವೂ ಸಿಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ನೀವು ಇಲ್ಲಿಗೆ ಬರಬಹುದು. ಸಾಹಸಮಯ ವಿಹಾರಕ್ಕೆ ಇದು ಸೂಕ್ತ ಆಯ್ಕೆಯಾಗಿದೆ.

ಮುನಿಕಲ್‌ಗೆ ಪ್ರವಾಸ
ಇರ್ಪು ಜಲಪಾತದ ಹೊರತಾಗಿ, ಇಲ್ಲಿಂದ 12 ಕಿಮೀ ದೂರದಲ್ಲಿರುವ ಮುನಿಕಲ್‌ಗೆ ಪ್ರವಾಸವನ್ನು ಆನಂದಿಸಬಹುದು. ಇದು ಪ್ರಾಚೀನ ಗುಹೆಗಳಿಗೆ ಹೆಸರುವಾಸಿಯಾದ ವಿಶೇಷ ಸ್ಥಳವಾಗಿದೆ. ಈ ಗುಹೆಯ ಒಳಗಿನಿಂದ ಯಾವುದೇ ಶಬ್ದ ಹೊರಬರುವುದಿಲ್ಲ ಎನ್ನಲಾಗಿದೆ. ಬಹುಶಃ ಅದಕ್ಕಾಗಿಯೇ ಈ ಸ್ಥಳವು ಸಂತರ ನೆಚ್ಚಿನ ಸ್ಥಳವಾಗಿತ್ತು, ಇಲ್ಲಿ ಅವರು ಧ್ಯಾನ ಮಾಡುತ್ತಿದ್ದರಂತೆ.
ತೆರಳುವುದು ಹೇಗೆ?
ಕೊಡಗು ಜಿಲ್ಲೆಯಲ್ಲಿರುವ ಇರ್ಪು ಜಲಪಾತವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ, ಇಲ್ಲಿ ನೀವು ಮೂರು ಮಾರ್ಗಗಳ ಮೂಲಕವೂ ಭೇಟಿ ನೀಡಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ, ರೈಲು ಮಾರ್ಗಕ್ಕಾಗಿ ನೀವು ಮೈಸೂರು ಜಂಕ್ಷನ್‌ನ ಸಹಾಯವನ್ನು ತೆಗೆದುಕೊಳ್ಳಬಹುದು. ನೀವು ಬಯಸಿದರೆ, ನೀವು ರಸ್ತೆಯ ಮೂಲಕವೂ ಇಲ್ಲಿಗೆ ತಲುಪಬಹುದು. ಕೊಡಗು ರಸ್ತೆಮಾರ್ಗಗಳಿಂದ ರಾಜ್ಯದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಮೈಸೂರಿನಿಂದ ಇಲ್ಲಿಗೆ ಕೇವಲ 120 ಕಿ.ಮೀ. ಈ ಜಲಪಾತವು ಬೆಂಗಳೂರಿನಿಂದ 255 ಕಿ.ಮೀ ದೂರದಲ್ಲಿದೆ.


Click it and Unblock the Notifications

















