ಐದರಿಂದ ಆರು ದಿನಗಳ ಕಾಲ ಅಂದರೆ ಒಂದು ವಾರ ನೀವು ಟೂರ್ ಪ್ಲಾನ್ ಮಾಡುವುದಾದರೆ, ಸುಂದರವಾದ ತಾಣಗಳನ್ನು ನೋಡಲು ಹಾತೊರೆಯುತ್ತಿದ್ದರೆ ಪಶ್ಚಿಮ ಬಂಗಾಳವೂ ನಿಮಗೆ ಉತ್ತಮ ಸ್ಥಳ. ಏಕೆಂದರೆ ಇಲ್ಲಿ ಭೇಟಿ ನೀಡಲು ಅನೇಕ ಸ್ಥಳಗಳಿದ್ದರೂ ವಿಶೇಷವಾಗಿ ಡೋರ್ಸ್ ಮತ್ತು ಕಾಲಿಂಪಾಂಗ್ ಇವುಗಳಿಗಿಂತ ವಿಭಿನ್ನವಾಗಿವೆ. ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ರಜೆಯನ್ನು ಅದ್ಭುತವಾಗಿ ಕಳೆಯಬಹುದು. ಅಂದಹಾಗೆ ಐಆರ್‌ಸಿಟಿಸಿ ಈ ಸ್ಥಳಗಳಿಗೆ ತೆರಳಲು ವಿಶೇಷ ಪ್ಯಾಕೇಜ್ ತಂದಿದ್ದು, ಟ್ವೀಟ್ ಮೂಲಕ ಮಾಹಿತಿ ನೀಡಿದೆ. ನೀವಿದನ್ನು ವೆಬ್‌ಸೈಟ್ ಮೂಲಕವೂ ಪರಿಶೀಲನೆ ಮಾಡಬಹುದು.
ಮಳೆಗಾಲದಲ್ಲಿ ಇಮ್ಮಡಿಗೊಳ್ಳುವ ಸೌಂದರ್ಯ
ಡೋರ್ಸ್ ಮತ್ತು ಕಾಲಿಂಪಾಂಗ್ ನೋಡಲು ಸ್ವರ್ಗದಂತೆ ಭಾಸವಾಗುತ್ತವೆ. ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಒಂದು ವೇಳೆ ನೀವು ಕೂಡ ಈ ಋತುವಿನಲ್ಲಿ ತೆರಳಲು ಸ್ಥಳಗಳನ್ನು ಹುಡುಕುತ್ತಿದ್ದರೆ, ಡೋರ್ಸ್ ಮತ್ತು ಕಾಲಿಂಪಾಂಗ್ ಉತ್ತಮ ಆಯ್ಕೆಯಾಗಿದೆ. ಐದು ದಿನಗಳ ಈ ಪ್ರವಾಸದಲ್ಲಿ ವಸತಿಯಿಂದ ಹಿಡಿದು ಆಹಾರದವರೆಗೆ ಬಹುತೇಕ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿವೆ. ಪ್ಯಾಕೇಜ್‌ಗೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಇಲ್ಲಿ ತಿಳಿಯಿರಿ.
ಪ್ಯಾಕೇಜ್ ಹೆಸರು- ವೈಲ್ಡ್ ಡೋರ್ಸ್ ವಿತ್ ಕಾಲಿಂಪಾಂಗ್
ಪ್ಯಾಕೇಜ್ ಅವಧಿ- 5 ರಾತ್ರಿ ಮತ್ತು 6 ದಿನಗಳು
ಟ್ರಾವೆಲ್ ಮೋಡ್ - ರೈಲು
ಏನೆಲ್ಲಾ ನೋಡಬಹುದು?
ಗೊರುಮರ: ಗೊರುಮರ ರಾಷ್ಟ್ರೀಯ ಉದ್ಯಾನವನವು ಜಲ್ಪೈಗುರಿಯ ಡೋರ್ಸ್ ಪ್ರದೇಶದಲ್ಲಿದೆ. ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ಈ ರಾಷ್ಟ್ರೀಯ ಉದ್ಯಾನವನವು ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದ ಸಮೃದ್ಧ ಅರಣ್ಯ ಪ್ರದೇಶವಾಗಿದೆ. ಇದು ಲಾಟ್ಗುರಿಯಿಂದ 15 ಕಿಮೀ, ಚಾಲ್ಸಾದಿಂದ 10 ಕಿಮೀ ಮತ್ತು ಜಲ್ಪೈಗುರಿ ನಗರದಿಂದ 52 ಕಿಮೀ ದೂರದಲ್ಲಿದೆ. ಕಾಡು ಪ್ರಾಣಿಗಳ ಪೈಕಿ ಆನೆ, ಚಿರತೆ, ಹಾರ್ನ್ ಬಿಲ್, ಕಾಡುಹಂದಿ, ಘೇಂಡಾಮೃಗ ಇತ್ಯಾದಿಗಳನ್ನು ಇಲ್ಲಿ ನೋಡಬಹುದು. ಅಲ್ಲದೆ 193 ಜಾತಿಯ ಪಕ್ಷಿಗಳು, 7 ಜಾತಿಯ ಆಮೆಗಳು, 22 ಜಾತಿಯ ಸರೀಸೃಪಗಳು ಮತ್ತು 22 ಜಾತಿಯ ಮೀನುಗಳನ್ನು ನೀವು ನೋಡಬಹುದು.

ಕಾಲಿಂಪಾಂಗ್: ಕಡಿಮೆ ಜನಸಂದಣಿ ಇರುವ ಗಿರಿಧಾಮವನ್ನು ಅನ್ವೇಷಿಸಲು ಬಯಸಿದರೆ, ನೀವು ಕಾಲಿಂಪಾಂಗ್‌ಗೆ ಭೇಟಿ ನೀಡಲು ಯೋಜಿಸಬಹುದು. ಕಾಲಿಂಪಾಂಗ್ ಪಶ್ಚಿಮ ಬಂಗಾಳದ ಗಿರಿಧಾಮವಾಗಿದ್ದು, ಬೌದ್ಧ ಮಠಗಳು ಮತ್ತು ಟಿಬೆಟಿಯನ್ ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಭೂತಾನ್ ರಾಜರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಪ್ರಾಚೀನ ಬೌದ್ಧ ಮಠಗಳು, ಶತಮಾನಗಳಷ್ಟು ಹಳೆಯದಾದ ಚರ್ಚ್‌ಗಳು ಮತ್ತು ಧಾರ್ಮಿಕ ದೇವಾಲಯಗಳು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿವೆ. 1250 ಮೀಟರ್ ಎತ್ತರದಲ್ಲಿರುವ ಕಾಲಿಂಪಾಂಗ್ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ, ಇಡೀ ಪೂರ್ವ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಂದ ನೀವು ಕಣಿವೆಗಳು, ನದಿಗಳು ಮತ್ತು ಹಳ್ಳಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಲತಗುರಿ: ಡೋರ್ಸ್‌ನ ಸುಂದರವಾದ ಗುಡ್ಡಗಾಡು ಪ್ರದೇಶದಲ್ಲಿ ನೆಲೆಗೊಂಡಿರುವ ಲತಗುರಿಯು ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರಸಿದ್ಧ ವನ್ಯಜೀವಿ ತಾಣಗಳನ್ನು ಅನ್ವೇಷಿಸಲು ಸೂಕ್ತವಾದ ಸ್ಥಳವಾಗಿದೆ. ಆನೆಗಳು, ಕಾಡೆಮ್ಮೆಗಳು, ಹುಲಿಗಳು, ಚಿರತೆಗಳು ಹೀಗೆ ಎಲ್ಲಾ ರೀತಿಯ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಇಲ್ಲಿವೆ. ಇದು ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದೆ. ಪ್ರವಾಸಿಗರು ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಾದ ಚೋರ್ ಚುನ್ನಿ, ಧಮ್ ಗಾನ್ ಮತ್ತು ಹಲವಾರು ಇತರ ಸ್ಥಳೀಯ ಹಬ್ಬಗಳನ್ನು ಆನಂದಿಸಬಹುದು. ಇವೆಲ್ಲವುಗಳ ಜೊತೆಗೆ, ಸುಂದರವಾದ ಚಹಾ ತೋಟಗಳು ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳಗಳಾಗಿವೆ.
ಈ ಸೌಲಭ್ಯ ಸಿಗಲಿದೆ
1. ಪ್ಯಾಕೇಜ್‌ನಲ್ಲಿ ಪ್ರಯಾಣಕ್ಕಾಗಿ ನೀವು ದೃಢೀಕೃತ ಟಿಕೆಟ್ ಅನ್ನು ಪಡೆಯುತ್ತೀರಿ.
2. ತಂಗಲು ಹೋಟೆಲ್ ಸೌಲಭ್ಯಗಳು ಲಭ್ಯವಿರುತ್ತವೆ .
3. ಆಹಾರ ಸೌಲಭ್ಯಗಳು ಲಭ್ಯವಿರುತ್ತವೆ.

ಪ್ರಯಾಣ ಶುಲ್ಕ
1 . ಈ ಪ್ರವಾಸಕ್ಕೆ ಇಬ್ಬರೊಂದಿಗೆ ತೆರಳಿದರೆ 31,350 ರೂ.
2 . ಮೂರು ಜನರೊಂದಿಗೆ ಹೋದರೆ ಒಬ್ಬರಿಗೆ 28,250 ರೂ.
3 . ನೀವು ಮಕ್ಕಳಿಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಸಿಗೆಯೊಂದಿಗೆ (5-11 ವರ್ಷಗಳು) 21,950 ರೂ. ಪಾವತಿಸಬೇಕಾಗುತ್ತದೆ.
ಟ್ವೀಟ್ ಮೂಲಕ ಮಾಹಿತಿ ನೀಡಿದ ಐಆರ್‌ಸಿಟಿಸಿ
ಈ ಪ್ರವಾಸದ ಪ್ಯಾಕೇಜ್ ಕುರಿತು ಮಾಹಿತಿಯನ್ನು ನೀಡುವ ಟ್ವೀಟ್ ಅನ್ನು ಹಂಚಿಕೊಂಡಿರುವ ಐಆರ್‌ಸಿಟಿಸಿ ಡೋರ್ಸ್ ಮತ್ತು ಕಾಲಿಂಪಾಂಗ್‌ನ ಸೌಂದರ್ಯ ನೋಡಲು ಬಯಸಿದರೆ ನೀವು ಐಆರ್‌ಸಿಟಿಸಿಯ ಈ ಅದ್ಭುತ ಪ್ರವಾಸದ ಪ್ಯಾಕೇಜ್‌ನ ಲಾಭವನ್ನು ಪಡೆಯಬಹುದು ಎಂದು ಹೇಳಿದೆ.
ಈ ರೀತಿ ಬುಕ್ ಮಾಡಬಹುದು
ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಈ ಪ್ರವಾಸದ ಪ್ಯಾಕೇಜ್‌ಗಾಗಿ ಬುಕ್ ಮಾಡಬಹುದು. ಇದಲ್ಲದೆ, ಐಆರ್‌ಸಿಟಿಸಿ ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು. ಪ್ಯಾಕೇಜ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


Click it and Unblock the Notifications

















