ಮಹಾಬಲೇಶ್ವರ ಬಸ್ ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿ, ಕೇಟ್ ಪಾಯಿಂಟ್ ಮತ್ತು ಎಲಿಫಂಟ್ ಹೆಡ್ ಪಾಯಿಂಟ್ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರದ ಅತ್ಯಂತ ಸುಂದರವಾದ ದೃಷ್ಟಿಕೋನಗಳಾಗಿವೆ. ಮಹಾಬಲೇಶ್ವರದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಇದು ಕೂಡ ಒಂದು.

3 ಪಾಯಿಂಟ್‌ಗಳು
ಕೇಟ್ಸ್ ಪಾಯಿಂಟ್ ಪ್ರದೇಶವು ಒಟ್ಟು 3 ಪಾಯಿಂಟ್‌ಗಳನ್ನು ಹೊಂದಿದೆ. ಅವುಗಳೆಂದರೆ ಕೇಟ್ಸ್ ಪಾಯಿಂಟ್, ಎಕೋ ಪಾಯಿಂಟ್ ಮತ್ತು ನೀಡಲ್ ಹೋಲ್ ಪಾಯಿಂಟ್ ಅಥವಾ ಎಲಿಫೆಂಟ್ ಹೆಡ್ ಪಾಯಿಂಟ್.

ಕೇಟ್ಸ್ ಪಾಯಿಂಟ್
ಕೇಟ್ಸ್ ಪಾಯಿಂಟ್‌ಗೆ ಆಗಿನ ಬ್ರಿಟಿಷ್ ಗವರ್ನರ್ ಸರ್ ಜಾನ್ ಮಾಲ್ಕೊಮ್ನ ಪುತ್ರಿಯ ಹೆಸರನ್ನಿಡಲಾಗಿದೆ. ಪಾಯಿಂಟ್‌ನ ಮೂಲ ಹೆಸರು ನಕ್ ಖಿಂಡ್ ಮತ್ತು ಇದು 1290 ಮೀಟರ್ ಎತ್ತರದಲ್ಲಿದೆ. ಧೋಮ್ ಅಣೆಕಟ್ಟು ಮತ್ತು ಕಮಲ್‌ಘಡದ ಶಿಖರಗಳು, ಪಾಂಡವಗಢ ಮತ್ತು ಮೆಂನ್ಡೆರಿಯೊಗಳನ್ನು ಕೇಟ್ ಪಾಯಿಂಟ್‌ನಿಂದ ನೋಡಬಹುದಾಗಿದೆ.

ಎಲಿಫಂಟ್ ಹೆಡ್ ಪಾಯಿಂಟ್
ಎಲಿಫಂಟ್ ಹೆಡ್ ಪಾಯಿಂಟ್ ಅಥವಾ ಸೂಜಿ ಹೋಲ್ ಪಾಯಿಂಟ್ ಮಹಾಬಲೇಶ್ವರದಲ್ಲಿ ಕೇಟ್ಸ್ ಪಾಯಿಂಟ್‌ನ ಹತ್ತಿರ ನೆಲೆಗೊಂಡಿದೆ. ಈ ಪಾಯಿಂಟ್ ಮೇಲಿರುವ ಬಂಡೆಗಳು ಆನೆಯ ತಲೆ ಮತ್ತು ಅದರ ಸೊಂಡಿಲನ್ನು ಹೋಲುತ್ತದೆ. ಹಾಗಾಗಿ ಇದು ಎಲಿಫೆಂಟ್ ಹೆಡ್ ಪಾಯಿಂಟ್ ಎಂದು ಹೆಸರನ್ನು ಪಡೆಯಿತು.

ನೀಡಲ್ ಹೋಲ್ ಪಾಯಿಂಟ್
ನೈಸರ್ಗಿಕ ಕಲ್ಲು ರಚನೆಯ ಮಧ್ಯದಲ್ಲಿ ರಂಧ್ರವನ್ನು ನೋಡಬಹುದು. ಹೀಗಾಗಿ ಇದನ್ನು ನೀಡಲ್ ಹೋಲ್ ಎಂದು ಕರೆಯುತ್ತಾರೆ. ಕೇಟ್ಸ್ ಪಾಯಿಂಟ್ ಮತ್ತು ನೀಡಲ್ ಹೋಲ್ ಪಾಯಿಂಟ್ ಅನ್ನು ಸಾಮಾನ್ಯವಾಗಿ ಲೋದ್ವಿಕ್ ಪಾಯಿಂಟ್ ಸಮೀಪದ ಎಲಿಫೆಂಟ್ ಹೆಡ್ ಪಾಯಿಂಟ್ ಜೊತೆ ಕನ್‌ಫ್ಯೂಸ್ ಮಾಡಲಾಗುತ್ತದೆ. ಈ ಪಾಯಿಂಟ್‌ನಿಂದ ಪ್ರವಾಸಿಗರು ಸಹ್ಯಾದ್ರಿ ಪರ್ವತ ಶ್ರೇಣಿಯ ನೋಟವನ್ನು ಪಡೆಯಬಹುದು.

ಪ್ರೇಕ್ಷಣೀಯ ಸ್ಥಳಗಳು
ಎಲಿಫೆಂಟ್ಸ್ ಹೆಡ್ ಪಾಯಿಂಟ್‌ಗೆ ಭೇಟಿ ನೀಡುವಾಗ ಸಮೀಪದ ಪ್ರೇಕ್ಷಣೀಯ ಸ್ಥಳಗಳಾದ ಧೋಮ್ ಡ್ಯಾಮ್, ಸಿಡ್ನಿ ಪಾಯಿಂಟ್, ಪಾರ್ಸಿ ಪಾಯಿಂಟ್, ಕೇಟ್ಸ್ ಪಾಯಿಂಟ್, ಟೇಬಲ್ ಲ್ಯಾಂಡ್, ಮ್ಯಾಪ್ರೋ ಗಾರ್ಡನ್, ಚೀಸ್ ಫ್ಯಾಕ್ಟರಿ, ವೆಲಾಸಿಟಿ ಎಂಟರ್ಟೈನ್ಮೆಂಟ್, ಮೆನ್ವಾಲಿ ಘಾಟ್‌ಗಳನ್ನೂ ಭೇಟಿ ಮಾಡಬಹುದು. ಇವು ಎಲಿಫೆಂಟ್ಸ್ ಹೆಡ್ ಪಾಯಿಂಟ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.

ಯಾವಾಗ ಭೇಟಿ ಸೂಕ್ತ
ಮಹಾಬಲೇಶ್ವರದಲ್ಲಿರುವ ಈ ಎಲಿಫಾಂಟ್ ಹೆಡ್ ಪಾಯಿಂಟ್‌ಗೆ ತೆರಳಲು ಯಾವುದೇ ಟಿಕೇಟ್ ಇರೋದಿಲ್ಲ. ಜೂನ್‌ನಿಂದ ಜನವರಿ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಬೆಳಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ಇಲ್ಲಿಗೆ ಕಾಲ ಕಳೆಯಬಹುದು. ಬೆಳಗ್ಗಿನ ಜಾವ ಹಾಗೂ ಸಂಜೆಯ ಹೊತ್ತಿನಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ.

ಲಿಂಗ್ಮಾಲಾ ಜಲಪಾತ
ಲಿಂಗ್ಮಾಲಾ ಜಲಪಾತವು ಮಹಾಬಲೇಶ್ವರ-ಪುಣೆ ರಸ್ತೆಯಲ್ಲಿದೆ. ಇದು ಒಂದು ವಿಸ್ಮಯಕಾರಿ ಜಲಪಾತವಾಗಿದೆ. ಲಿಂಗ್ಮಾಳದ ಅರಣ್ಯ ಬಂಗಲೆ ಬಳಿ ಇರುವ ಈ ಜಲಪಾತಗಳು ನಿಮಗೆ ವಿಶ್ರಾಂತಿಯನ್ನು ನೀಡುವುದರ ಜೊತೆಗೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.

ಆರ್ಥೂರ್ ಸೀಟ್
1470 ಮೀಟರ್ ಎತ್ತರದಲ್ಲಿ ಆರ್ಥೂರ್ ಸೀಟ್‌ಗೆ ಆರ್ಥೂರ್ ಮಲೆಟ್ ಎಂಬ ವ್ಯಕ್ತಿಯ ಹೆಸರನ್ನು ಇಡಲಾಗಿದೆ. ಆರ್ಥೂರ್ ಮಲೆಟ್ ಇಲ್ಲಿ ಮನೆ ನಿರ್ಮಿಸಿದ ಮೊದಲ ವ್ಯಕ್ತಿ. ಇದು ಮಹಾಬಲೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇದನ್ನು ತಪ್ಪಿಸಿಕೊಳ್ಳಲೇಬಾರದು.

ಕೊನಾಟ್ ಪೀಕ್
ಕೊನಾಟ್ ಪೀಕ್ ಹಳೆಯ ಮಹಾಬಲೇಶ್ವರ ರಸ್ತೆಯು ಮುಂಚಿನ ಕಾಲದಲ್ಲಿ ಮೌಂಟ್ ಒಲಂಪಿಯಾ ಎಂದು ಕರೆಯಲ್ಪಟ್ಟಿದೆ, ಇದು ಮಹಾರಾಷ್ಟ್ರದ ಸುಂದರವಾದ ರಾಜ್ಯದಲ್ಲಿ 1400 ಮೀಟರ್ ಎತ್ತರದಲ್ಲಿರುವ ಎರಡನೇ ಶಿಖರವಾಗಿದೆ.


Click it and Unblock the Notifications

















