Search
  • Follow NativePlanet
Share
» »ಬಾಹುಬಲಿಯ ಮಾಹಿಷ್ಮತಿ ಸಾಮ್ರಾಜ್ಯವನ್ನು ಕಣ್ಣಾರೆ ನೋಡ್ಬೇಕಾ....ಹಾಗಾದ್ರೆ ಇಲ್ಲಿಗೆ ಹೋಗಿ

ಬಾಹುಬಲಿಯ ಮಾಹಿಷ್ಮತಿ ಸಾಮ್ರಾಜ್ಯವನ್ನು ಕಣ್ಣಾರೆ ನೋಡ್ಬೇಕಾ....ಹಾಗಾದ್ರೆ ಇಲ್ಲಿಗೆ ಹೋಗಿ

ಬಾಹುಬಲಿ ಸಿನಿಮಾ ಬಿಡುಗಡೆಯಾಗಿ ತುಂಬಾನೇ ದಿನಗಳು ಕಳೆದರೂ ಬಾಹುಬಲಿ ಸಿನಿಮಾದ ಕಥೆ ಅಲ್ಲಿನ ಲೊಕೇಶನ್ , ಪಾತ್ರಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ಬಾಹುಬಲಿ ಸಿನಿಮಾ ನೋಡಿರುವವರಿಗೆ ಮಾಹಿಷ್ಮತಿ ಸಾಮ್ರಾಜ್ಯ ಗೊತ್ತೇ ಇದೆ. ಆ ಸಿನಿಮಾವನ್ನು ನೋಡಿ ಎಷ್ಟೋ ಮಂದಿಗೆ ಅಲ್ಲಿಗೆ ಹೋಗಬೇಕು ಆ ಸ್ಥಳವನ್ನು ಕಣ್ಣಾರೆ ನೋಡಬೇಕೆಂಬ ಆಸೆ ಹುಟ್ಟಿರೋದು ಮಾತ್ರ ಸುಳ್ಳಲ್ಲ . ನಿಮಗೂ ಈ ಮಾಹಿಷ್ಮತಿ ಸಾಮ್ರಾಜ್ಯ ನಿಜವಾಗಿ ಹೇಗೆ ಕಾಣಿಸುತ್ತಿದೆ ಅನ್ನೋದನ್ನು ನೋಡಬೇಕಾದ್ರೆ ಇಲ್ಲಿಗೆ ಹೋಗೋದನ್ನು ಮಾತ್ರ ಮರೆಯಬೇಡಿ. 200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?

 ಎಲ್ಲಿದೆ ಈ ಮಾಹಿಷ್ಮತಿ ಸಾಮ್ರಾಜ್ಯ?

ಎಲ್ಲಿದೆ ಈ ಮಾಹಿಷ್ಮತಿ ಸಾಮ್ರಾಜ್ಯ?

PC: youtube

ಬಾಹುಬಲಿ ಸಿನಿಮಾ ಶೂಟಿಂಗ್ ಆಗಿರೋದು ಹೈದರಾಬಾದ್‌ನ ರಾಮೋಜಿ ಫಿಲಂಸಿಟಿಯಲ್ಲಿ. ಮಾಹಿಷ್ಮತಿ ಸಾಮ್ರಾಜ್ಯವನ್ನು ನಿರ್ಮಿಸಿರುವುದೂ ಇಲ್ಲೆ. ಇದೇ ಸೆಟ್‌ನಲ್ಲಿ ಬಾಹುಬಲಿ ಭಾಗ 1 ಹಾಗೂ ಬಾಹುಬಲಿ ಭಾಗ 2 ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಮಾಹಿಷ್ಮತಿ ಸಾಮ್ರಾಜ್ಯದ ಅದ್ಭುತ ಸೆಟ್ ಗಾಗಿ ಸಿನಿಮಾ ತಂಡ ಸುಮಾರು 60 ಕೋಟಿ ರೂ. ಖರ್ಚು ಮಾಡಿತ್ತು.ಭೀಮನಿಂದಲೂ ಎತ್ತಲಾಗಲಿಲ್ಲವಂತೆ ಈ ಮೂರ್ತಿ ...

ಈ ಅದ್ಭುತ ಸೆಟ್ ಹೇಗಿದೆ ಗೊತ್ತಾ?

ಈ ಅದ್ಭುತ ಸೆಟ್ ಹೇಗಿದೆ ಗೊತ್ತಾ?

PC: youtube

ರಾಮೋಜಿ ಫಿಲಂ ಸಿಟಿಯಲ್ಲಿ ಹಾಕಲಾಗಿರುವ ಮಾಹಿಷ್ಮತಿ ಸಾಮ್ರಾಜ್ಯದ ಸೆಟ್ ನೋಡಲು ಸುಂದರವಾಗಿದ್ದು, ನಿಜಕ್ಕೂ ಅದ್ಭುತವಾಗಿದೆ. ಸೆಟ್‌ಗಳನ್ನು ಹಾಕಿ ಯಾವ ರೀತಿ ಒಂದು ಸಾಮ್ರಾಜ್ಯವನ್ನೇ ನಿರ್ಮಿಸಲಾಗಿದೆ ಎನ್ನುವುದು ನಿಜಕ್ಕೂ ಕುತೂಹಲಕಾರಿಯಾಗಿದೆ.

ಪ್ರವಾಸೀ ಕೇಂದ್ರವಾಗಿರುವ ಮಾಹಿಷ್ಮತಿ

ಪ್ರವಾಸೀ ಕೇಂದ್ರವಾಗಿರುವ ಮಾಹಿಷ್ಮತಿ

PC: youtube

ರಾಮೋಜಿ ಫಿಲಂ ಸಿಟಿಯಲ್ಲಿರುವ ಮಾಹಿಷ್ಮತಿ ಸಾಮ್ರಾಜ್ಯ ಇದೀಗ ಪ್ರವಾಸೀ ಕೇಂದ್ರವಾಗಿದೆ. ಇದನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಶುಲ್ಕವನ್ನೂ ನಿಗದಿಪಡಿಸಲಾಗಿದೆ. 1250 ರೂ. ಗಳ ಸಾಮಾನ್ಯ ಎಂಟ್ರಿ ಮತ್ತು 2349 ರೂ.ಗಳ ವಿಶೇಷ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.

ವೆಬ್‌ಸೈಟ್‌ ಮೂಲಕ ಟಿಕೇಟ್ ಬುಕ್ ಮಾಡಬಹುದು

ವೆಬ್‌ಸೈಟ್‌ ಮೂಲಕ ಟಿಕೇಟ್ ಬುಕ್ ಮಾಡಬಹುದು

PC: youtube

ಈ ಸಾಮ್ರಾಜ್ಯವನ್ನು ನೋಡಬೇಕಾದರೆ ಇದರ ಟಿಕೆಟ್ ಗಳನ್ನು ರಾಮೋಜಿ ಫಿಲಂ ಸಿಟಿಯ ಅಧಿಕೃತ ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡಬಹುದು.ಅಥವಾ ರಾಮೋಜಿ ಫಿಲಂ ಸಿಟಿಯಲ್ಲೇ ನೇರವಾಗಿ ಪಡೆಯಬಹುದಾಗಿದೆ. ಸಾಮಾನ್ಯ ಪ್ರವೇಶ ಶುಲ್ಕ ಕೊಟ್ಟರೆ ಬೆಳಿಗ್ಗೆ 9 ರಿಂದ 11.30 ರವರೆಗೆ ಬಾಹುಬಲಿ ಸೆಟ್ ನ್ನು ನೋಡಬಹುದು.ವಿಶೇಷ ಶುಲ್ಕದಲ್ಲಿ 9 ಗಂಟೆಯಿಂದ 2 ಗಂಟೆಯವರೆಗೆ ಸೆಟ್ ವೀಕ್ಷಣೆ ಮಾಡುವ ಅವಕಾಶ ಪ್ರವಾಸಿಗರಿಗೆ ಒದಗಲಿದೆ.

More News

Read more about: india travel hyderabad film shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+