Search
  • Follow NativePlanet
Share
» »ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !

ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !

ಕನಸು ಪ್ರತಿಯೊಬ್ಬರಿಗೂ ಬೀಳುತ್ತದೆ. ಕನಸುಗಳಲ್ಲಿ ಎರಡು ವಿಧಗಳಿವೆ ಒಂದು ಒಳ್ಳೆ ಕನಸು ಇನ್ನೊಂದು ಕೆಟ್ಟ ಕನಸು. ಒಳ್ಳೆಯ ಕನಸು ನಮಗೆ ಸಂತೋಷವನ್ನು ನೀಡುತ್ತದೆ. ಹಾಗೆಯೇ ಕೆಟ್ಟ ಕನಸು ನಮ್ಮ ಮನಸಿನಲ್ಲಿ ಒಂದು ರೀತಿಯ ಭಯವನ್ನು ಸೃಷ್ಠಿಮಾಡುತ್ತದೆ. ಕೆಟ್ಟ ಕೆಟ್ಟ ಆಲೋಚನೆಗಳನ್ನು ಉಂಟು ಮಾಡುತ್ತದೆ. ಕೆಲವರಿಗೆ ಕನಸಿನಲ್ಲಿ ದೇವರು ಕಾಣಿಸುತ್ತಾರೆ. ಇನ್ನೂ ಕೆಲವರಿಗೆ ಹಾವು ಕಾಣೋದು. ದೆವ್ವಗಳ ಕನಸು ಹೀಗೆ ನಾನಾ ರೀತಿಯ ಕನಸು ಬೀಳುತ್ತದೆ. ಸಾಮಾನ್ಯವಾಗಿ ಕೆಟ್ಟ ಕನಸುಗಳೇ ಹೆಚ್ಚು ಬೀಳುವುದು.

ಕೆಟ್ಟ ಕನಸಿಗೆ ಮುಕ್ತಿ

ಕೆಟ್ಟ ಕನಸಿಗೆ ಮುಕ್ತಿ

PC : Henry Fuseli

ಪದೇ ಪದೇ ಕೆಟ್ಟ ಕನಸುಗಳು ಬೀಳುತ್ತಾ ನಿಮ್ಮ ಮನ:ಶಾಂತಿಯನ್ನು ಕದಡುತ್ತಿದೆ ಎಂದಾದಲ್ಲಿ ಸುಮ್ಮನೇ ಕೂರುವುದು ಸರಿಯಲ್ಲ. ಕೆಲವೊಮ್ಮೆ ಆ ಕೆಟ್ಟ ಕನಸುಗಳೇ ನನಸಾಗಿ ಹೋಗುತ್ತದೆ. ಅದಕ್ಕೆ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕು.

ಹಾವುಗಳ ಕನಸು ಬೀಳುವವರು ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ

ಹಾವುಗಳ ಕನಸು ಬೀಳುವವರು ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ

PC : Aruna


ಕೇರಳದಲ್ಲಿರುವ ನೆಟ್ಟೂರು ಭಗವತಿ ಅಮ್ಮನ ದೇವಾಲಯಕ್ಕೆ ಭೇಟಿ ನೀಡಿದರೆ ಕೆಟ್ಟ ಕನಸಿನಿಂದ ಮುಕ್ತಿ ಕಾಣಬಹುದು ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಯಾರಿಗೆಲ್ಲಾ ಪದೇ ಪದೇ ಕೆಟ್ಟ ಕನಸುಗಳು ಬೀಳುತ್ತವೆಯೋ, ಹಾವುಗಳ ಕನಸು ಬೀಳುತ್ತವವರು, ನಾಗದೋಷವಿರುವವರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದಂತೆ.

ಐದು ತಲೆಯ ಹಾವಿನ ವಿಗ್ರಹ

ಐದು ತಲೆಯ ಹಾವಿನ ವಿಗ್ರಹ

PC : Aruna

ಈ ದೇವಾಲಯದಲ್ಲಿರುವ ಐದು ತಲೆಯ ಹಾವಿನ ಮೂರ್ತಿ ಈ ದೇವಾಲಯದ ಲಕ್ಷಣವಾಗಿದೆ. ಇಲ್ಲಿಗೆ ಬರುವ ಭಕ್ತರು ಇಲ್ಲಿ ಬಂದು ಪುಪ್ಪಾಂಜಲಿ ಸೇವೆ ಸಲ್ಲಿಸುತ್ತಾರೆ. ಶಿವ, ಗಣೇಶ ಹಾಗೂ ನವವಕನ್ನಿಕೆಯರ ವಿಗ್ರಗವೂ ಈ ದೇವಾಲಯದಲ್ಲಿದೆ.

ಹೋಗುವುದು ಹೇಗೆ?

ಹೋಗುವುದು ಹೇಗೆ?

PC : Ssriram mt

ಚೆನ್ನೈನಿಂದ 690 ಕಿ.ಮೀ ಮತ್ತು ಕೊಯಮತ್ತೂರಿನಿಂದ ಸುಮಾರು 264 ಕಿ.ಮೀ ದೂರದಲ್ಲಿರುವ ಕೇರಳದ ಅಲಪುಳ ಬಳಿ ಭಗವತಿ ಅಮ್ಮನ್ ದೇವಾಲಯವಿದೆ. ಕೊಯಮತ್ತೂನಿಂದ ಬರುವವರು ಈ ಸ್ಥಳವನ್ನು ಪಾಲಕ್ಕಾಡ್, ತ್ರಿಶೂರ್, ಕೊಚ್ಚಿ, ಅಲಪ್ಪುಳ ಅಥವಾ ಕೊಟ್ಟಾಯಂ ಮೂಲಕ ತಲುಪಬಹುದು.

ಕೇರಳದ ಸುತ್ತಮುತ್ತ ನೋಡಬಹುದಾದ ಸ್ಥಳಗಳು

ಕೇರಳದ ಸುತ್ತಮುತ್ತ ನೋಡಬಹುದಾದ ಸ್ಥಳಗಳು

PC : wikipedia

ವರ್ಕಲ, ಪ್ಯಾಕ್, ಕೊವಲಂ, ಅಲೆಪ್ಪಿ ಬೋಟ್ ಹೌಸ್, ಹಸಿರು ವ್ಯಾಪಕ ಮುನ್ನಾರ್‌, ಕಡಲ ತೀರಗಳು ಕೇರಳದ ಇತರ ಆಕರ್ಷಣೀಯ ತಾಣಗಳಾಗಿವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+