Diwali 2024: ದೀಪಾವಳಿ ಭಾರತದಲ್ಲೇ ಅತಿ ದೊಡ್ಡ ಹಬ್ಬ. ಈ ಹಬ್ಬವನ್ನು ಒಂದೊಂದು ಭಾಗಗಳಲ್ಲಿಯೂ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸುತ್ತಲೂ ದೀಪಗಳು...ಆ ದೀಪಗಳ ಮಿನುಗುವಿಕೆ ದೀಪಾವಳಿ ಹಬ್ಬವನ್ನು ಬಹಳ ವಿಶೇಷವಾಗಿಸುತ್ತದೆ. ದೀಪಗಳ ಈ ಹಬ್ಬವನ್ನು ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಇದನ್ನು ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದ ಇತರ ಅನೇಕ ದೇಶಗಳಲ್ಲಿಯೂ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಭಾರತವಲ್ಲದೆ, ನೇಪಾಳ, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ, ಅಮೆರಿಕ ಮತ್ತು ಜಪಾನ್‌ನಂತಹ ದೇಶಗಳಲ್ಲಿಯೂ ದೀಪಾವಳಿಯನ್ನು ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ. ಹಾಗಾದರೆ ಈ ದೇಶಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಲಾಗುತ್ತದೆ ಎಂದು ತಿಳಿಯೋಣ ಬನ್ನಿ...
ನೇಪಾಳದಲ್ಲಿ ಐದು ದಿನಗಳ ಕಾಲ ಆಚರಣೆ
ನೇಪಾಳದಲ್ಲಿ ದೀಪಾವಳಿಯನ್ನು ತಿಹಾರ್ ಎಂದು ಕರೆಯಲಾಗುತ್ತದೆ. ಇದು ಐದು ದಿನಗಳ ಹಬ್ಬವಾಗಿದ್ದು, ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದೆ. ಮೊದಲ ದಿನ ಹಸುಗಳನ್ನು ಪೂಜಿಸಲಾಗುತ್ತದೆ, ಎರಡನೇ ದಿನ ನಾಯಿಗಳನ್ನು ಪೂಜಿಸಲಾಗುತ್ತದೆ, ಸಿಹಿತಿಂಡಿಗಳನ್ನು ತಯಾರಿಸಿ ದೇವರು ಮತ್ತು ದೇವತೆಗಳನ್ನು ಮೂರನೇ ದಿನ ಪೂಜಿಸಲಾಗುತ್ತದೆ, ನಾಲ್ಕನೇ ದಿನ ಯಮರಾಜನನ್ನು ಪೂಜಿಸಲಾಗುತ್ತದೆ ಮತ್ತು ಐದನೇ ದಿನ ಭಯ್ಯಾ ದೂಜ್ ಆಚರಿಸಲಾಗುತ್ತದೆ. ನೇಪಾಳದಲ್ಲಿ, ದೀಪಾವಳಿ ಹಬ್ಬವನ್ನು ಭಾರತದಂತೆಯೇ ವೈಭವ ಮತ್ತು ಪ್ರದರ್ಶನದೊಂದಿಗೆ ಆಚರಿಸಲಾಗುತ್ತದೆ. ಪರಸ್ಪರ ಉಡುಗೊರೆಗಳನ್ನು ನೀಡಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಸಹ ಪೂಜಿಸಲಾಗುತ್ತದೆ. ಅಂದಹಾಗೆ ನೇಪಾಳದ ಎರಡನೇ ಅತಿ ದೊಡ್ಡ ಹಬ್ಬ ದೀಪಾವಳಿ.
ಮಲೇಷ್ಯಾದಲ್ಲಿ ಮೇಳಗಳ ಆಯೋಜನೆ
ಮಲೇಷ್ಯಾದಲ್ಲಿ ದೀಪಾವಳಿಯನ್ನು ಹರಿ ದೀಪಾವಳಿ ಎಂದು ಕರೆಯಲಾಗುತ್ತದೆ. ಈ ದಿನ ಜನರು ಬೇಗ ಎದ್ದು ಸ್ನಾನ ಮಾಡಿ ದೇವಾನುದೇವತೆಗಳನ್ನು ಪೂಜಿಸುತ್ತಾರೆ. ದೀಪಾವಳಿಯ ದಿನದಂದು ಮಲೇಷ್ಯಾದಲ್ಲಿ ಮೇಳಗಳನ್ನು ಆಯೋಜಿಸಲಾಗುತ್ತದೆ, ಅಲ್ಲಿ ಜನರು ವಿವಿಧ ರೀತಿಯ ಭಕ್ಷ್ಯಗಳನ್ನು ಖರೀದಿಸುತ್ತಾರೆ ಮತ್ತು ಆನಂದಿಸುತ್ತಾರೆ.
ಥೈಲ್ಯಾಂಡ್ ನದಿಯಲ್ಲಿ ಬಾಳೆ ಎಲೆ ದೀಪಗಳು
ಥೈಲ್ಯಾಂಡ್‌ನಲ್ಲಿ ದೀಪಾವಳಿಯನ್ನು ಕ್ರಿಯೋಂಧ್ ಎಂದು ಕರೆಯಲಾಗುತ್ತದೆ. ಈ ದಿನ ಜನರು ಬಾಳೆ ಎಲೆಗಳಿಂದ ದೀಪಗಳನ್ನು ತಯಾರಿಸುತ್ತಾರೆ. ನಂತರ ಈ ದೀಪಗಳನ್ನು ಮತ್ತು ಧೂಪವನ್ನು ರಾತ್ರಿಯಲ್ಲಿ ಬೆಳಗಿಸಲಾಗುತ್ತದೆ. ಇದರ ನಂತರ ದೀಪ ಮತ್ತು ಧೂಪವನ್ನು ಸ್ವಲ್ಪ ಹಣದೊಂದಿಗೆ ನದಿಗೆ ಎಸೆಯಲಾಗುತ್ತದೆ. ಇದು ಬಹಳ ಸುಂದರವಾದ ದೃಶ್ಯವಾಗಿದೆ. ಥೈಲ್ಯಾಂಡ್‌ನಲ್ಲಿ ದೀಪಾವಳಿ ಹಬ್ಬ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯ ಸಂಕೇತವಾಗಿದೆ.

ಶ್ರೀಲಂಕಾದಲ್ಲಿ ಪರಸ್ಪರರ ಮನೆಗೆ ಭೇಟಿ
ಶ್ರೀಲಂಕಾದಲ್ಲಿ ಹಿಂದೂಗಳ ಜನಸಂಖ್ಯೆ ತುಂಬಾ ಹೆಚ್ಚು. ಈ ಕಾರಣಕ್ಕಾಗಿ ಇಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಲಂಕಾದಲ್ಲಿ ದೀಪಾವಳಿ ಹಬ್ಬವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶ್ರೀಲಂಕಾದಲ್ಲಿ ದೀಪಾವಳಿ ಹಬ್ಬವು ರಾಮಾಯಣಕ್ಕೆ ಸಂಬಂಧಿಸಿದೆ. ಈ ದಿನದಂದು ಜನರು ತಮ್ಮ ಮನೆಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ.
ಸಿಂಗಾಪುರದಲ್ಲಿಯೂ ಭಾರತದಂತೆಯೇ ಸಂಭ್ರಮ
ಭಾರತವಲ್ಲದೆ ಯಾವುದೇ ದೇಶದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರೆ ಅದು ಸಿಂಗಾಪುರ. ಭಾರತದಲ್ಲಂತೂ ದೀಪಾವಳಿ ಹಬ್ಬದಂದು ಮನೆಗಳ ಮುಂದೆ ರಂಗೋಲಿ ಹಾಕಿ, ಹೊಸ ಬಟ್ಟೆ ಧರಿಸಲಾಗುತ್ತದೆ. ಲಕ್ಷ್ಮಿ ಹಾಗೂ ಗಣೇಶ ದೇವತೆಯನ್ನು ಪೂಜಿಸಿ, ಮನೆಗಳು ಮತ್ತು ಮಾರುಕಟ್ಟೆಗಳಲ್ಲಿ ಎಲ್ಲೆಡೆ ಬಣ್ಣಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.

ಜಪಾನ್ ದೀಪಾವಳಿ ಸುಂದರ
ಜಪಾನ್‌ನಲ್ಲಿ ದೀಪಾವಳಿಯಂದು ಜನರು ತಮ್ಮ ತೋಟಗಳಲ್ಲಿ ಮರಗಳ ಮೇಲೆ ಕಾಗದದಿಂದ ಮಾಡಿದ ಲ್ಯಾಂಟರ್ನ್‌ಗಳು ಮತ್ತು ಪರದೆಗಳನ್ನು ನೇತುಹಾಕುತ್ತಾರೆ. ಇದರ ನಂತರ ಅವರು ಅದನ್ನು ಆಕಾಶಕ್ಕೆ ಬಿಡುತ್ತಾರೆ. ಈ ದಿನ ಜನರು ನೃತ್ಯ ಮತ್ತು ಹಾಡುತ್ತಾರೆ. ಜಪಾನ್‌ನಲ್ಲಿ ದೀಪಾವಳಿ ಹಬ್ಬ ಬಹಳ ಸುಂದರವಾಗಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ದೀಪಾವಳಿ ವೈಭವ
ಯುನೈಟೆಡ್ ಕಿಂಗ್‌ಡಮ್‌ನ ಅನೇಕ ನಗರಗಳಲ್ಲಿ ವಿಶೇಷವಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ದೀಪಾವಳಿ ವೈಭವವನ್ನು ನೋಡಲು ಎರಡು ಕಣ್ಣು ಸಾಲದು. ಇಲ್ಲಿಯೂ ಭಾರತೀಯ ಜನರು ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತಿದ್ದಾರೆ. ಭಾರತದಂತೆಯೇ ಇಲ್ಲಿಯೂ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.
ಕೆನಡಾದಲ್ಲಿ ಪಂಜಾಬಿ ಜನರು
ಕೆನಡಾದಲ್ಲಿ ಪಂಜಾಬಿ ಜನರ ಜನಸಂಖ್ಯೆ ಹೆಚ್ಚಿದೆ. ಈ ಕಾರಣದಿಂದಾಗಿ ಕೆನಡಾವನ್ನು "ಲಿಟಲ್ ಪಂಜಾಬ್" ಎಂದೂ ಕರೆಯುತ್ತಾರೆ. ಕೆನಡಾದಲ್ಲಿ ದೀಪಾವಳಿ ಹಬ್ಬವನ್ನು ಎಷ್ಟು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಈಗ ನೀವೇ ಊಹಿಸಬಹುದು.

ಅಮೆರಿಕದಲ್ಲಿ ಭಾರತೀಯರ ಸಂಭ್ರಮ
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರು ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ದೀಪಾವಳಿಯ ದಿನದಂದು ಭಾರತೀಯ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇಂಡೋನೇಷ್ಯಾದಲ್ಲಿ ಭಾರತದ ರೀತಿಯೇ ಆಚರಣೆ
ಇಂಡೋನೇಷ್ಯಾದಲ್ಲಿ ಹೆಚ್ಚು ಭಾರತೀಯರು ಇಲ್ಲದಿದ್ದರೂ, ದೀಪಾವಳಿ ಹಬ್ಬವನ್ನು ಇಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಭಾರತದಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಲಾಗುತ್ತದೆಯೋ, ಅದೇ ರೀತಿ ಇಂಡೋನೇಷ್ಯಾದಲ್ಲಿಯೂ ದೀಪಾವಳಿಯನ್ನು ಆಚರಿಸಲಾಗುತ್ತದೆ.
ಮಾರಿಷಸ್‌ನಲ್ಲಿ ಸಾರ್ವಜನಿಕ ರಜೆ
ಮಾರಿಷಸ್ ಜನಸಂಖ್ಯೆಯ 50 ಪ್ರತಿಶತ ಹಿಂದೂಗಳು. ಇದೇ ಕಾರಣಕ್ಕೆ ಇಲ್ಲಿ ದೀಪಾವಳಿಯ ವೈಭವ ಕಾಣುತ್ತದೆ. ದೀಪಾವಳಿಯ ದಿನದಂದು ಇಲ್ಲಿ ಸಾರ್ವಜನಿಕ ರಜೆ ಇರುತ್ತದೆ.


Click it and Unblock the Notifications

















