ಭಾರತೀಯ ರೈಲ್ವೇ ಈಗ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ವಿವಿಧ ರೀತಿಯ ರೈಲು ಸೌಲಭ್ಯಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ತೇಜಸ್ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್, ಹಮ್‌ಸಫರ್ ಎಕ್ಸ್‌ಪ್ರೆಸ್ ಮತ್ತು ಮಹಾಮಾನ ಎಕ್ಸ್‌ಪ್ರೆಸ್‌ನಂತಹ ಸೂಪರ್‌ಫಾಸ್ಟ್ ರೈಲುಗಳು ಹೆಚ್ಚು ಐಷಾರಾಮಿ ಸೌಲಭ್ಯ ಹೊಂದಿವೆ.
ಸಾಮಾನ್ಯವಾಗಿ ದೂರದ ಪ್ರಯಾಣ ಮಾಡುವ ಜನರು ರೈಲಿನಲ್ಲಿ ಪ್ರಯಾಣಿಸಲು ಹೆಚ್ಚು ಇಷ್ಟಪಡುತ್ತಾರೆ. ಕಂಫರ್ಟಬಲ್ ಕೂಡ ಹೌದು. ರೈಲು ಪ್ರಯಾಣವು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರೂ ಎಲ್ಲಾ ರೀತಿಯ ವರ್ಗದವರ ಬಜೆಟ್‌ಗೆ ಸರಿಹೊಂದುತ್ತದೆ. ಇದನ್ನೆಲ್ಲಾ ಪರಿಗಣಿಸಿ ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ರೀತಿಯ ಸೂಪರ್ ಫಾಸ್ಟ್ ರೈಲುಗಳನ್ನು ಸಹ ನಡೆಸುತ್ತಿದೆ. ಇದರಿಂದಾಗಿ ಅವರಿಗೆ ತ್ವರಿತವಾಗಿ ಪ್ರಯಾಣಿಸಲು ಸುಲಭವಾಗುತ್ತದೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ವಂದೇ ಭಾರತ್ ರೈಲು ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ವಂದೇ ಭಾರತ್ ರೈಲಿನ ಆಗಮನದಿಂದ, ಪ್ರಯಾಣಿಕರು ಇತರ ರೈಲುಗಳಿಗಿಂತ ಹೆಚ್ಚು ವೇಗವಾಗಿ ದೂರ ಪ್ರಯಾಣಿಸಬಹುದು.
ರೈಲು ಪ್ರಯಾಣಿಕರಿಗೆ ತಿಳಿದಿರುವ ಹಾಗೆ ಹಲವು ರೈಲುಗಳಲ್ಲಿ ಸಿಸಿ ಕೋಚ್ ಇರುತ್ತದೆ. ಈ ಬೋಗಿಯಲ್ಲಿ ಅನೇಕ ಸೌಲಭ್ಯಗಳಿವೆ. ಆದರೆ ಕುಳಿತೇ ಪ್ರಯಾಣಿಸಬೇಕು. ಇದೇ ರೀತಿ ವಂದೇ ಭಾರತ್ ರೈಲಿನಲ್ಲಿ ಸಿಸಿ ಕೋಚ್ ಇದ್ದು, ಇಲ್ಲಿಯೂ ಕುಳಿತು ಪ್ರಯಾಣಿಸಲಾಗುತ್ತದೆ. ಅಂದರೆ ಚೇರ್ ಕಾರ್ ಸೌಲಭ್ಯವಿದೆ. ಆದರೆ ಈಗ ಇದನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ವಂದೇ ಭಾರತ್‌ನಲ್ಲಿಯೂ ಈಗ ಸ್ಲೀಪರ್ ಸೌಲಭ್ಯವಿರಲಿದೆ.
ನಾವೀಗ ವಂದೇ ಭಾರತ್ ರೈಲಿಗೆ ಹೋಲಿಸಿದರೆ ಇತರ ರೈಲಿನ ಸಿಸಿ ಕೋಚ್‌ನಲ್ಲಿ ಪ್ರಯಾಣಿಸುವುದು ಪ್ರಯೋಜನಕಾರಿಯೇ ಎಂಬುದರ ಕುರಿತು ನೋಡೋಣ ಬನ್ನಿ...

ವಂದೇ ಭಾರತ್ ರೈಲಿನಲ್ಲಿರುವ ಸೌಲಭ್ಯಗಳು
· ವಂದೇ ಭಾರತ್ ರೈಲಿನ ಬಾಗಿಲುಗಳು ಸ್ವಯಂಚಾಲಿತವಾಗಿರುತ್ತವೆ, ಇದು ನೀವು ಸಮೀಪಿಸಿದ ತಕ್ಷಣ ತೆರೆದುಕೊಳ್ಳುತ್ತವೆ.
· ಈ ರೈಲಿನ ಸ್ನಾನಗೃಹವು ಇತರ ರೈಲುಗಳಿಗಿಂತ ಹೆಚ್ಚು ಸುಂದರ ಮತ್ತು ಸ್ವಚ್ಛವಾಗಿದೆ.
· ವಂದೇ ಭಾರತ್ ರೈಲಿನ ಸೀಟುಗಳು ಆರಾಮದಾಯಕವಾಗಿವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಅದನ್ನು ಬಗ್ಗಿಸಬಹುದು.
· ಆಸನಗಳ ಮುಂದೆ ಟೇಬಲ್ ಇರುತ್ತದೆ. ಇದು ಆಹಾರವನ್ನು ಇಡಲು ಮತ್ತು ತಿನ್ನುವುದಕ್ಕೆ ಸಹಾಯವಾಗುತ್ತದೆ.
· ರೈಲಿನಲ್ಲಿ ಕಿಟಕಿಗಳ ಬಳಿ ಪರದೆಗಳಿವೆ. ಬೇಕಾದರೆ ಅದನ್ನು ನೀವು ಮುಚ್ಚಬಹುದು.
· ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಮೂಲಕ, ನೀವು ಇತರ ರೈಲುಗಳಿಗೆ ಹೋಲಿಸಿದರೆ ಬಹಳ ಬೇಗ ಪ್ರಯಾಣವನ್ನು ಪೂರ್ಣಗೊಳಿಸುತ್ತೀರಿ.
· ವಂದೇ ಭಾರತ್ ರೈಲು ಟಿಕೆಟ್‌ಗಳು ಇತರ ರೈಲುಗಳಿಗಿಂತ ಹೆಚ್ಚು ದುಬಾರಿಯಾಗಿದೆ.
· ನೀವು ವಂದೇ ಭಾರತ್ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು .
ಸಿಸಿ ಕೋಚ್ ಸೌಲಭ್ಯಗಳೇನು?
· ಸಿಸಿ ಎಂದರೆ ಎಸಿ ಚೇರ್ ಕಾರ್ ಎಂದೂ ಅರ್ಥ.
· ವಂದೇ ಭಾರತ್ ರೈಲಿನಲ್ಲಿ ಹೇಗೆ ಮಲಗಿ ಪ್ರಯಾಣಿಸಲು ಸಾಧ್ಯವಿಲ್ಲವೋ ಅದೇ ರೀತಿ ಸಿಸಿ ಕೋಚ್‌ನಲ್ಲಿ ಕುಳಿತು ಪ್ರಯಾಣಿಸಬೇಕು.
· ಆದರೆ ಈ ಕೋಚ್‌ನ ಆಸನಗಳು ವಂದೇ ಭಾರತ್ ರೈಲಿನಷ್ಟು ಆರಾಮದಾಯಕವಲ್ಲ.
· ಈ ಕೋಚ್‌ನ ಟಿಕೆಟ್ ವಂದೇ ಭಾರತ್ ರೈಲಿಗಿಂತ ಅಗ್ಗವಾಗಿದೆ.
· ಸಿಸಿ ಕೋಚ್‌ಗಳಿರುವ ರೈಲುಗಳಲ್ಲಿ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ಮಾತ್ರ ಕುರ್ಚಿಗಳಿರುತ್ತವೆ. ಆದರೆ ವಂದೇ ಭಾರತ್ ರೈಲಿನಲ್ಲಿ ಇಡೀ ರೈಲಿನಲ್ಲಿ ಕುರ್ಚಿ ಕಾಣಬಹುದು.
· ನೀವು ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸಲು ಬಯಸಿದರೆ, ನೀವು ಈ ಕೋಚ್‌ನಲ್ಲಿ ಪ್ರಯಾಣಿಸಬಹುದು.
· ಇದು ವಂದೇ ಭಾರತ್ ರೈಲಿನಂತೆ ಎಸಿ ಕೋಚ್ ಆಗಿದೆ.


Click it and Unblock the Notifications

















