Search
  • Follow NativePlanet
Share
» »ಬೆಂಗ್ಳೂರಿನ ಹುಡುಗೀರೆ, ಈ ದೇವಸ್ಥಾನಕ್ಕೆ ಹೋಗೋವಾಗ ಕೂದಲು ಬಿಟ್ಟು ಹೋಗುವಂತಿಲ್ಲ

ಬೆಂಗ್ಳೂರಿನ ಹುಡುಗೀರೆ, ಈ ದೇವಸ್ಥಾನಕ್ಕೆ ಹೋಗೋವಾಗ ಕೂದಲು ಬಿಟ್ಟು ಹೋಗುವಂತಿಲ್ಲ

ಇತ್ತೀಚೆಗೆ ಬೆಂಗಳೂರಿನಲ್ಲಿನ ದೇವಸ್ಥಾನವೊಂದರಲ್ಲಿ ಭಕ್ತರಿಗೆ ಕೆಲವು ಡ್ರೆಸ್ ಕೋಡ್‌ನ್ನು ಜಾರಿಗೊಳಿಸಿದ್ದಾರೆ. ಅದರಲ್ಲಿ ಮಹಿಳೆಯರಿಗೂ ಕೆಲವು ಷರತ್ತು ಜಾರಿಗೊಳಿಸಿದ್ದಾರೆ. ಅದೇನೆಂದರೆ ಕೂದಲು ಬಿಟ್ಟುಕೊಂಡು ದೇವಸ್ಥಾನದ ಒಳಗೆ ಹೋಗುವಂತಿಲ್ಲ.

ಯಾವ ದೇವಸ್ಥಾನ?

ಯಾವ ದೇವಸ್ಥಾನ?

ಈ ನಿಯಮವನ್ನು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಜಾರಿಗೆತಂದಿದೆ. ಮಂದಿರದ ಹೊರಾಂಗಣದಲ್ಲಿ ಡ್ರೆಸ್‌ ಕೋಡ್‌ಗೆ ಸಂಬಂಧಿಸಿ ಒಂದು ನೋಟಿಸ್ ಅಳವಡಿಸಲಾಗಿದೆ. ಈ ಮೂಲಕ ಸಂಸ್ಕೃತಿಯನ್ನು ಉಳಿಸುವುದು ಬಹಳ ಮುಖ್ಯವಾಗಿದೆ ಎನ್ನುತ್ತದೆ ಆಡಳಿತ ಮಂಡಳಿ.

ಯಾವ ಡ್ರೆಸ್‌ ಕೋಡ್ ?

ಯಾವ ಡ್ರೆಸ್‌ ಕೋಡ್ ?

  • ಮಹಿಳೆಯರಿಗೆ ಸ್ಲೀವ್ ಲೆಸ್ ಟಾಪ್, ಜೀನ್ಸ್, ಮಿನಿ ಸ್ಕರ್ಟ್ ಹಾಕಿ ಪ್ರವೇಶವಿಲ್ಲ.
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಉದ್ದನೆಯ ಡ್ರಸ್ ಹಾಕಿದ್ರಷ್ಟೇ ದೇವಸ್ಥಾನದ ಒಳಗೆ ಪ್ರವೇಶ.
  • ಮಹಿಳೆಯರು, ಯುವತಿಯರು ಕೂದಲನ್ನು ಬಿಟ್ಟುಕೊಂಡು ಬರುವಂತಿಲ್ಲ, ಕೂದಲಿಗೆ ರಬ್ಬರ್ ಹಾಕಿದ್ದರೆ, ಜಡೆ ಹಾಕಿದ್ದರಷ್ಟೇ ಪ್ರವೇಶ.
  • ಸೀರೆ, ಚೂಡಿದಾರ ಅಥವಾ ಕುರ್ತಾದ ಮೇಲೆ ಶಾಲು ಹಾಕಿದ್ರಷ್ಟೇ ಒಳಗೆ ಹೋಗಬಹುದು.
  • ಪುರುಷರೂ ಜೀನ್ಸ್ ಹಾಕಿ ಮಂದಿರ ಪ್ರವೇಶಿಸುವಂತಿಲ್ಲ.
  • ಎಲ್ಲೆಲ್ಲಾ ಇದೆ ಡ್ರೆಸ್ ಕೋಡ್

    ಎಲ್ಲೆಲ್ಲಾ ಇದೆ ಡ್ರೆಸ್ ಕೋಡ್

    ಡ್ರೆಸ್ ಕೋಡ್‌ನ್ನು ಜಾರಿಗೆ ತಂದಿರುವ ದೇವಸ್ಥಾನಗಳಲ್ಲಿ ಇದೇನು ಮೊದಲನೆಯದಲ್ಲ. ಅನೇಕ ರಾಜ್ಯಗಳಲ್ಲಿ ಒಂದಲ್ಲಾ ಒಂದು ದೇವಸ್ಥಾನದ ಆಡಳಿತ ಮಂಡಳಿ ಈ ಕಾಯ್ದೆಯನ್ನು ಜಾರಿಗೆ ತಂದಿರುತ್ತವೆ. ಅವುಗಳು ಯಾವ್ಯಾವು ಅನ್ನೋದನ್ನು ನೋಡೋಣ....

    ಗುರುವಾಯೂರು

    ಗುರುವಾಯೂರು

    PC: Kish

    ಕೇರಳದ ಗುರುವಾಯೂರು ಕೃಷ್ಣ ಮಂದಿರದಲ್ಲಿ ಪುರುಷರು ಲುಂಗಿ ಧರಿಸುವುದು ಕಡ್ಡಾಯ. ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸಬೇಕು.

    ಕಾಶೀ ವಿಶ್ವನಾಥ ಮಂದಿರ

    ಕಾಶೀ ವಿಶ್ವನಾಥ ಮಂದಿರ

    ಕಾಶೀ ವಿಶ್ವನಾಥ ಮಂದಿರದಲ್ಲಿ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿ ಪುರುಷರು ಚರ್ಮದ ಯಾವುದೇ ವಸ್ತುವನ್ನು ಧರಿಸಿಕೊಂಡು ಒಳಪ್ರವೇಶಿಸುವಂತಿಲ್ಲ. ಹಾಗೆಯೇ ಮಹಿಳೆಯರು ಪೂರ್ಣ ರೀತಿಯಲ್ಲಿ ಮೈ ಮುಚ್ಚುವಂತ ಬಟ್ಟೆ ಧರಿಸಬೇಕು.

    ದುದೇಶ್ವರ ಮಂದಿರ

    ದುದೇಶ್ವರ ಮಂದಿರ

    ಮಹಾರಾಷ್ಟ್ರದಲ್ಲಿರುವ ಈ ಮಂದಿರವು 12 ಜ್ಯೋತೀರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಒಳ ಪ್ರವೇಶಿಸಬೇಕಾದರೆ ಚರ್ಮದ ಎಲ್ಲಾ ವಸ್ತುಗಳನ್ನು ಹೊರಗಿಡಬೇಕು. ಬೆಲ್ಟ್, ಪರ್ಸ್ ಇತ್ಯಾದಿ.

    ಮಹಾಕಾಲ ಮಂದಿರ

    ಮಹಾಕಾಲ ಮಂದಿರ

    ಈ ಮಂದಿರದಲ್ಲಿ ಅಂತದ್ದೇನು ಡ್ರೆಸ್ ಕೋಡ್ ಇಲ್ಲ. ಆದರೆ ಬೆಳಗ್ಗೆ ನಡೆಯುವ ಬ್ರಹ್ಮ ಆರತಿಯಲ್ಲಿ ಪಾಲ್ಗೊಳ್ಳಬೇಕಾದರೆ ಪುರುಷರು ದೋತಿ, ಲುಂಗಿ ಹಾಗೂ ಮಹಿಳೆಯರು ಸೀರೆ ಧರಿಸುವುದು ಅನಿವಾರ್ಯ.

More News

Read more about: india temple travel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+