Search
  • Follow NativePlanet
Share
» »ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜುಲೈ 23ರಿಂದ ಆಗಸ್ಟ್ 22ರ ವರೆಗೆ ಜನಿಸಿದವರು ಸಿಂಹರಾಶಿಯವರಾಗಿರುತ್ತಾರೆ. ಸಿಂಹ ರಾಶಿಯ ವ್ಯಕ್ತಿಗಳು ಧೈರ್ಯಶಾಲಿಗಳು ಹಾಗೂ ಲವಲವಿಕೆಯಿಂದ ಕೂಡಿರುವವರಾಗಿರುತ್ತಾರೆ. ಸಿಂಹರಾಶಿಯವರಿಗೆ ಜೈಪುರ, ಉದಯಪುರ ಬೆಸ್ಟ್ ಸ್ಥಳವಾಗಿದೆ. ಉದಯಪುರ್ ಮತ್ತು ಜೈಪುರದ ರಾಯಲ್ ನಗರಗಳ ಸುತ್ತಲಿನ ಹೊಳಪು ಮತ್ತು ಬಣ್ಣಗಳು ಸಿಂಹರಾಶಿಯವರನ್ನು ಆಕರ್ಷಿಸುತ್ತದೆ. ರಾಜಸ್ಥಾನಿ ನಗರಗಳ ಐಷಾರಾಮಿ ಪರಂಪರೆ ರೆಸಾರ್ಟ್‌ಗಳಲ್ಲಿ ರಾಜನಂತೆ ವಾಸಿಸುವ ಸಮಯವನ್ನು ಅವರು ಪ್ರೀತಿಸುತ್ತಾರೆ.

ಜೈಪುರ

ಜೈಪುರ

PC: Ziaur Rahman

ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ, ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು.

ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.

ಜೈಪುರಕ್ಕೆ ಹೋಗುವುದು ಹೇಗೆ?

ಜೈಪುರಕ್ಕೆ ಹೋಗುವುದು ಹೇಗೆ?

PC:Knowledge Seeker

ಜೈಪುರಕ್ಕೆ ಹೋಗುವುದು ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಭಾರತದ ಬಹುತೇಕ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿ ಸಂಗಾನೇರ್ ವಿಮಾನ ನಿಲ್ದಾಣವಿದೆ. ಇದನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಈ ವಿಮಾನ ನಿಲ್ದಾಣವು ಮುಂಬೈ, ಚಂಡೀಗಢ, ದೆಹಲಿ ಮತ್ತು ಹೈದರಾಬಾದ್‌ಗೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಹೊಂದಿದೆ. ಜೈಪುರ ರೈಲ್ವೇ ನಿಲ್ದಾಣವು ಭಾರತದ ಬಹುತೇಕ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಿಗೆ ಪ್ರವಾಸಿಗರು ರಾಜಸ್ಥಾನ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ನಿಂದ ಬಸ್‌ಗಳನ್ನು ಪಡೆಯಬಹುದು. ನವದೆಹಲಿಯಿಂದ ನೇರವಾಗಿ ಜೈಪುರಕ್ಕೆ ಆರ್‌ಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ.

ಉದಯ್‌ಪುರ್‌

ಉದಯ್‌ಪುರ್‌

PC:ArishG

ಉದಯ್‌ಪುರ್‌ನ್ನು ಬಿಳಿ ಬಣ್ಣದ ನಗರ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಲೆಕ್ಕವೇ ಇಲ್ಲದಷ್ಟು ನದಿಗಳು ಮತ್ತು ಸುಂದರವಾದ ಅಮೃತಶಿಲೆಯಿಂದ ನಿರ್ಮಾಣ ಮಾಡಿದ ಕಟ್ಟಡಗಳಿಗೆ ಪ್ರತೀತಿ. ಇಲ್ಲಿ ಹೆಚ್ಚಾಗಿ ನದಿಗಳು ಇದ್ದ ಕಾರಣದಿಂದ ಈ ಪ್ರದೇಶವನ್ನು "ಪೂರ್ವದ ವೆನಿಸ್" ಎಂದು ಮತ್ತು "ನದಿಗಳ ನಗರ" ಎಂದು ಕೂಡ ಕರೆಯುತ್ತಾರೆ.

ನದಿಗಳ ನಗರ ಉದಯ್‍ಪುರ

ನದಿಗಳ ನಗರ ಉದಯ್‍ಪುರ

PC: Vberger

ರಾಜಸ್ಥಾನದಲ್ಲಿರುವ ಅನೇಕ ನಗರಗಳಲ್ಲಿ ಉದಯ್‍ಪುರ ಕೂಡ ಒಂದು. ಆದರೆ ಉದಯ್‍ಪುರದಲ್ಲಿರುವ ದೊಡ್ಡ-ದೊಡ್ಡ ಕೋಟೆಗಳು, ವರ್ಷದಾದ್ಯಂತ ಜನರನ್ನು ಆಕರ್ಷಿಸುವ ಪ್ರಧಾನವಾದ ಆಕರ್ಷಣೆಗಳು ಇಲ್ಲಿವೆ. ಈ ನಗರಕ್ಕೆ ಪ್ರಾಕೃತಿಕ ಸೌಂದರ್ಯವನ್ನು ಇರುವುದೇ ಅಲ್ಲದೇ ಚಾರಿತ್ರಿಕ ವಿಷಯಗಳನ್ನು ಹಾಗು ಸ್ಥಳಗಳನ್ನು ಕಾಣಲು ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+