Search
  • Follow NativePlanet
Share
» »ಮೂರು ದಿನ ಕೊಡೈಕೆನಾಲ್ , ನೈನಿತಾಲ್ ಸುತ್ತಾಡೋಕೆ ಎಷ್ಟು ಖರ್ಚಾಗುತ್ತೆ ಗೊತ್ತಾ

ಮೂರು ದಿನ ಕೊಡೈಕೆನಾಲ್ , ನೈನಿತಾಲ್ ಸುತ್ತಾಡೋಕೆ ಎಷ್ಟು ಖರ್ಚಾಗುತ್ತೆ ಗೊತ್ತಾ

ಪ್ರವಾಸಕ್ಕೆ ಹೋಗೋ ಮನಸ್ಸು ಎಲ್ಲರಿಗೂ ಇಷ್ಟ ಇರುತ್ತೆ. ಆದರೆ ಬಜೆಟ್‌ನದ್ದೇ ಸಮಸ್ಯೆ. ಎಲ್ಲಾದರೂ ಮೂರು ದಿನಕ್ಕೆ ಪ್ರವಾಸ ಹೋಗಬೇಕೆಂದರೆ ಅಲ್ಲಿನ ವಸತಿ, ಊಟ, ಟ್ರಾನ್ಸ್‌ಪೋರ್ಟ್ ಎಲ್ಲಾ ಸೇರಿ ಹೆಚ್ಚು ಖರ್ಚಾಗುವುದು ಸಹಜ. ಕಡಿಮೆ ಖರ್ಚಿನಲ್ಲಿ ಮೂರು ದಿನಗಳ ಕಾಲ ಪ್ರವಾಸ ಹೋಗಬೇಕೆಂದರೆ ನಿಮಗೆ ಬೆಸ್ಟ್‌ ಸ್ಥಳವಾಗಿದೆ ಅರುಣಾಚಲಪ್ರದೇಶ, ಕೊಡೈಕೆನಾಲ್, ನೈನಿತಾಲ್. ಇದು ಸುತ್ತಾಡಲು ಉತ್ತಮ ಆಯ್ಕೆಯಾಗಿದ್ದು, ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಮೂರು ದಿನಕ್ಕೆ ಈ ಸ್ಥಳಗಳಿಗೆ ಸುತ್ತಾಡಲು ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ನೀವು ತಿಳಿಯಿರಿ.

 ಅರುಣಾಚಲಪ್ರದೇಶ

ಅರುಣಾಚಲಪ್ರದೇಶ

PC: Deepak

ಪ್ರಕೃತಿ ಸೌಂದರ್ಯದಿಂದ ಕೂಡಿರುವ ಅರುಣಾಚಲಪ್ರದೇಶವು ಚಾರಣಿಗರಿಗೆ ಹೆಚ್ಚು ಇಷ್ಟವಾಗುವಂತಹ ಸ್ಥಳವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಸಾಲದು. ಇಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಿಸಿದ್ದು, ಬಹುಸಂಖ್ಯಾತ ಚಾರಣಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಎಲ್ಲಿಂದ ಪ್ರಯಾಣಿಸುವುದು ಸೂಕ್ತ

ಎಲ್ಲಿಂದ ಪ್ರಯಾಣಿಸುವುದು ಸೂಕ್ತ

PC:Jvsacoe

ದೆಹಲಿಯಿಂದ ಅರುಣಾಚಲ ಪ್ರದೇಶಕ್ಕೆ ಪ್ರಯಾಣಿಸುವುದು ಸೂಕ್ತವಾಗಿದೆ. ಇಲ್ಲಿಂದ ಕೇವಲ 445 ಕಿ.ಮೀ ದೂರ.
ಹೋಟೆಲ್ : ಒಬ್ಬೊಬ್ಬರಿಗೆ ಒಂದೊಂದು ದಿನಕ್ಕೆ 1500ರೂ. ಯಿಂದ 2000 ರೂ. ತಗುಲುತ್ತದೆ.
ಊಟ: ಪ್ರತಿಯೊಬ್ಬರಿಗೆ ಒಂದು ದಿನಕ್ಕೆ 1000ರೂ. ವಿಶೇಷವಾಗಿ ಇಲ್ಲಿ ಸೋಲ್ ಕೆಫೆ, ಟೇಸ್ಟ್ ಆಫ್ ಸ್ಪಿರಿಟ್, ದಿ ಹಿಮಾಲಯನ್ ಕೆಫೆ, ಕೆಫೇ ಕುಂಕುಮ್ ಟಾಪ್ ಎಂಬ ರೆಸ್ಟೊರೆಂಟ್‌ಗಳು ಆಹಾರ ಪ್ರೀಯರಿಗೆ ಇಷ್ಟವಾಗುತ್ತದೆ.
ಪ್ರಯಾಣ: ಒಬ್ಬರಿಗೆ ಸುಮಾರು 500ರೂ. ಖರ್ಚಾಗುತ್ತದೆ. ನೀವು ನಿಮ್ಮ ಸ್ನೇಹಿತರ ಜೊತೆಗೆ ಹೋಗುತ್ತಿದ್ದೀರೆಂದಾರೆ ಮಿನಿ ಬಸ್ ಬುಕ್ ಮಾಡಿಕೊಂಡು ಹೋಗುವುದು ಒಳಿತು.

ಮೂರು ದಿನಕ್ಕೆ ತಗುಲುವ ಖರ್ಚು
ವಸತಿ: 4500ರೂ.ಯಿಂದ6000ರೂ.
ಊಟ: 3ಸಾವಿರ
ಟ್ರಾನ್ಸ್‌ ಪೋರ್ಟ್ : 1500ರೂ.
ಒಟ್ಟು: 9000ರೂ.

ಕೊಡೈಕೆನಾಲ್

ಕೊಡೈಕೆನಾಲ್

PC: Bhadani

ನೀವು ಜಲಪಾತಗಳು, ನಿರ್ಮಲವಾದ ಸರೋವರಗಳಗಳನ್ನು ಹಚ್ಚ ಹಸಿರನ್ನು ಒಟ್ಟಿಗೆ ಒಂದೇ ಸ್ಥಳದಲ್ಲಿ ನೋಡಬೇಕೆಂದಿದ್ದರೆ ಅದಕ್ಕೆ ಸೂಕ್ತವಾದ ಸ್ಥಳವೆಂದರೆ ಕೊಡೈಕೆನಾಲ್. ಯಾವಾಗಲು ನಿಮ್ಮನ್ನು ಕೈ ಬೀಸಿ ಕರೆಯುತ್ತಿರುತ್ತದೆ. ಬೇಸಿಗೆಗಾಲದಲ್ಲಿ ಬೆಂಗಳೂರು, ಚೆನ್ನೈನಿಂದ ಅನೇಕ ಜನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಕೊಡೈ ಲೇಕ್, ಪಿಲ್ಲರ್ ರಾಕ್‌ನಂತಹ ಟೂರಿಸ್ಟ್‌ ಸ್ಪಾಟ್‌ಗಳಿವೆ. ಇಲ್ಲಿ ಸೈಕ್ಲಿಂಗ್‌ಗೆ ಕೂಡಾ ಅವಕಾಶ ನೀಡಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: PANKHURI PRIYAM

ಇಲ್ಲಿಗೆ ಮಧುರೈನಿಂದ ಪ್ರಯಾಣಿಸುವುದು ಸೂಕ್ತ ಮಧುರೈನಿಂದ 110 ಕಿ.ಮೀ ದೂರವಿದೆ. ಬೆಂಗಳೂರಿನಿಂದ 400ಕಿ.ಮೀ ದೂರವಿದ್ದರೆ, ಚೆನ್ನೈನಿಂದ 426 ಕಿ.ಮಿ ದೂರದಲ್ಲಿದೆ.

ಹೋಟೆಲ್: ಒಬ್ಬರಿಗೆ ಪ್ರತಿದಿನಕ್ಕೆ 1100ರಿಂದ2000ರೂ.
ಊಟ: ಪ್ರತಿದಿನಕ್ಕೆ 1000ರೂ.
ಟ್ರಾನ್ಸ್‌ಪೋರ್ಟ್: ಒಬ್ಬರಿಗೆ 500ರಿಂದ 1000 ರೂ.

ಮೂರು ದಿನಕ್ಕೆ ತಗುಲುವ ಒಟ್ಟು ಖರ್ಚು
ವಸತಿ: 3300ರೂ. ಯಿಂದ 6000 ರೂ.
ಊಟ: 3000ರೂ.
ಟ್ರಾನ್ಸ್‌ಪೋರ್ಟ್: 1500ರೂ. ಯಿಂದ 3000ರೂ.
ಒಟ್ಟು: 7500ರೂ.ಯಿಂದ 12000ರೂ.

ನೈನಿತಾಲ್

ನೈನಿತಾಲ್

PC: Ekabhishek

ಒಂದೆಡೆ ಆಧ್ಯಾತ್ಮಿಕತೆ ಹಾಗೂ ಇನ್ನೊಂದೆಡೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕೆಂದಿದ್ದಲ್ಲಿ ನೈನಿತಾಲ್‌ಗೆ ಭೇಟಿ ನೀಡಿ. ಶಕ್ತಿಪೀಠಗಳಲ್ಲಿ ಒಂದಾಗಿರುವ ನೈನಾದೇವಿ ದೇವಾಲಯ ಇಲ್ಲಿದೆ.

ಇಲ್ಲಿಗೆ ದೆಹಲಿಯಿಂದ ಪ್ರಯಾಣಿಸುವುದು ಉತ್ತಮ. ದೆಹಲಿಯಿಂದ ಸುಮಾರು 285ಕಿ.ಮೀ ದೂರದಲ್ಲಿದೆ.
ಹೋಟೆಲ್: ಒಬ್ಬೊಬ್ಬರಿಗೆ ಒಂದು ದಿನಕ್ಕೆ 1000ರೂ.ಯಿಂದ 2500ರೂ.
ಊಟ: ದಿನಕ್ಕೆ1000ರೂ.
ಟ್ರಾನ್ಸ್‌ಪೋರ್ಟ್: ದಿನಕ್ಕೆ 500ರೂ.

ಮೂರುದಿನಕ್ಕೆ ತಗುಲುವ ಒಟ್ಟು ಖರ್ಚು

ಮೂರುದಿನಕ್ಕೆ ತಗುಲುವ ಒಟ್ಟು ಖರ್ಚು


ವಸತಿ:
3000-7500ರೂ.
ಊಟ: 3000ರೂ.
ಟ್ರಾನ್ಸ್‌ಪೋರ್ಟ್: 1500ರೂ.
ಒಟ್ಟು: 7500ರಿಂದ 12000

ಕಾನ್ಶಿಟ್

ಕಾನ್ಶಿಟ್

ಜಗತ್ತನೇ ಪಾರಾಗ್ಲೈಡಿಂಗ್‌ಗೆ ಇದು ಅತ್ಯಂತ ಜನಪ್ರಿಯವಾದ ಪ್ರದೇಶವಾಗಿದೆ. ಮಹಾರಾಷ್ಟ್ರದ ಹಿಲ್ ಸ್ಟೇಶನ್, ಕಾನ್ಶಿಟ್ ಅಡ್ವೆಂಚರ್ ಪ್ರವಾಸೋಧ್ಯಮವನ್ನು ಇಷ್ಟಪಡುವಲ್ಲೊಂದು.
ಪೂನದಿಂದ ಇಲ್ಲಿಗೆ ಪ್ರಯಾಣಿಸಿದರೆ ಉತ್ತಮ. ಪೂನದಿಂದ 51 ಕಿ.ಮೀ ದೂರದಲ್ಲಿದೆ ಕಾನ್ಶಿಟ್.
ಹೋಟೆಲ್: ಒಬ್ಬೊಬ್ಬರಿಗೆ ಒಂದು ದಿನಕ್ಕೆ 1000ರೂ.ಯಿಂದ 2500ರೂ.
ಊಟ: ದಿನಕ್ಕೆ 500ರೂ.
ಟ್ರಾನ್ಸ್‌ಪೋರ್ಟ್: ದಿನಕ್ಕೆ 500ರೂ.

ಮೂರು ದಿನಕ್ಕೆ ಒಟ್ಟು
ವಸತಿ: 3000-7500ರೂ.
ಊಟ: 3000ರೂ.
ಟ್ರಾನ್ಸ್‌ಪೋರ್ಟ್: 1500ರೂ.
ಒಟ್ಟು: 7500ರಿಂದ 12000

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+