Search
  • Follow NativePlanet
Share
» »ಜಮ್ಮು ಕಾಶ್ಮೀರದಲ್ಲಿರುವ ಬಡ್ಗಮ್‌ನ ನಿಸರ್ಗ ಸೌಂದರ್ಯ ಅದ್ಭುತ

ಜಮ್ಮು ಕಾಶ್ಮೀರದಲ್ಲಿರುವ ಬಡ್ಗಮ್‌ನ ನಿಸರ್ಗ ಸೌಂದರ್ಯ ಅದ್ಭುತ

ಬಡ್ಗಮ್‌ನಲ್ಲಿ ಪ್ರವಾಸಿಗರನ್ನ ಪ್ರಮುಖವಾಗಿ ಆಕರ್ಷಿಸುವುದು ನಿಸರ್ಗ ಸೌಂದರ್ಯ. ಪರ್ವತಗಳಿಂದ ಸಮತಟ್ಟು ಪ್ರದೇಶಗಳವರೆಗೆ ಇಲ್ಲಿನ ಪರಿಸರ ವೈವಿಧ್ಯತೆಯನ್ನು ಹೊಂದಿದೆ.

ಜಮ್ಮು ಕಾಶ್ಮೀರದಲ್ಲಿ ತೀರಾ ಇತ್ತೀಚೆಗೆ ರಚನೆಯಾದ ಜಿಲ್ಲೆ ಎಂದರೆ ಅದು ಬಡ್ಗಮ್. ಇದು ಸಮುದ್ರಮಟ್ಟದಿಂದ ಸುಮಾರು 5,281 ಅಡಿ ಎತ್ತರದಲ್ಲಿ ಇದೆ. ಕಾರ್ಗಿಲ್ ನಂತರ ಕಾಶ್ಮೀರ ಕಣಿವೆಯ ಎರಡನೇ ಜಿಲ್ಲೆ ಬುಡ್ಗಮ್, ಅಲ್ಲಿ ಶಿಯಾ ಜನಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ.

ಮೊಘಲರ ಪ್ರಮುಖ ತಂಗುದಾಣವಾಗಿತ್ತು

ಮೊಘಲರ ಪ್ರಮುಖ ತಂಗುದಾಣವಾಗಿತ್ತು

PC: Ankur P
ಬಡ್ಗಮ್‌ನಲ್ಲಿ ಪ್ರವಾಸಿಗರನ್ನ ಪ್ರಮುಖವಾಗಿ ಆಕರ್ಷಿಸುವುದು ನಿಸರ್ಗ ಸೌಂದರ್ಯ. ಪರ್ವತಗಳಿಂದ ಸಮತಟ್ಟು ಪ್ರದೇಶಗಳವರೆಗೆ ಇಲ್ಲಿನ ಪರಿಸರ ವೈವಿಧ್ಯತೆಯನ್ನು ಹೊಂದಿದೆ. ದಕ್ಷಿಣ ಪ್ರದೇಶಗಳಲ್ಲಿ ಗುಡ್ಡಗಳಿದ್ದರೆ, ಉತ್ತರ ಮತ್ತು ಪೂರ್ವದ ಕಡೆಗೆ ಸಮತಟ್ಟಾದ ನೆಲವನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಮೊಘಲರಿಗೆ ಬಡ್ಗಮ್ ಪ್ರಮುಖ ತಂಗುದಾಣವಾಗಿತ್ತು. ಕಾಶ್ಮೀರಕ್ಕೆ ಹೋಗುವ ದಾರಿ ಮಧ್ಯೆ ಈ ತಾಣ ಸಿಗುವುದರಿಂದ ಮೊಘಲರು ಇಲ್ಲಿ ದಣಿವಾರಿಸಿಕೊಳ್ಳಲು ಉಳಿದುಕೊಳ್ಳುತ್ತಿದ್ದರು. ಖಾಗ್‌ ಪ್ರದೇಶದಲ್ಲಿ ಬಡ್ಗಮ್‌ನ ಗಡಿಯಾಗಿರುವ ಪೂಂ‌ಚ್‌ ಗಲಿ ಮೂಲಕ ಪ್ರವಾಸಿಗರು ಈ ಕಣಿವೆಯನ್ನು ಪ್ರವೇಶಿಸಬಹುದು.

ಪ್ರಮುಖ ಪ್ರವಾಸಿ ತಾಣಗಳು

ಪ್ರಮುಖ ಪ್ರವಾಸಿ ತಾಣಗಳು

PC: Ankur P
ಯೂಸ್ಮಾರ್ಗ್‌, ದೂದ್‌ಪಥರ್, ತಾಶ್ ಮೈದಾನ್‌, ನಿಲಾಂಗ್‌ ಮತ್ತು ತಾತಾ ಕುಟ್ಟಿ ಬೆಟ್ಟ. ವಿಶಾಲ ಹುಲ್ಲುಗಾವಲು ಪ್ರದೇಶವನ್ನು ಹೊಂದಿರುವ ಯೂಸ್ಮಾರ್ಗ್‌ ಪಿಕ್‌ನಿಕ್‌ಗೆಂದೇ ಹೇಳಿಮಾಡಿಸಿದ ಸುಂದರವಾದ ತಾಣ. ದಟ್ಟ ಅರಣ್ಯ, ಗುಡ್ಡಗಳು ಮತ್ತು ತೊರೆಗಳನ್ನು ಹೊಂದಿರುವ ದೂದ್‌ಪಥರ‍್ ಇನ್ನೊಂದು ಚಿತ್ರವತ್ತಾದ ತಾಣ.

ಪ್ರಮುಖ ಜಲಪಾತಗಳು ಮತ್ತು ಐತಿಹಾಸಿಕ ತಾಣಗಳು

ಪ್ರಮುಖ ಜಲಪಾತಗಳು ಮತ್ತು ಐತಿಹಾಸಿಕ ತಾಣಗಳು

PC: Ankur P
ಇಲ್ಲಿನ ಕೆಲವು ಪ್ರಮುಖ ಜಲಪಾತಗಳೆಂದರೆ ನಿಲ್‌ನಾಗ್‌, ಸುಖನಾಗ್‌, ಪುಷ್ಕರ‍್ ನಾಗ್, ಗಂಧಕ್ ನಾಗ್‌, ಲಯೇನ್ ಕೋಲ್‌, ಆಜಿಹ್‌ ಕೋಲ್‌ ಮತ್ತು ಮಾಲಾ ಕೋಲ್. ಇಲ್ಲಿನ ಬಡ್ಗಮ್ ಇಮಾಮ್‌ಬಾರಾ, ಶೇಖ್‌ ನೂರ‍್ ಉದ್‌ ದಿನ್‌ ಸ್ತೂಪ, ಶಾಮ್‌ ದೇಡ್‌ ಸ್ತೂಪ, ಬಾಬಾ ಲತೀಫ್‌ ಉದ್‌ ದಿನ್‌ ಸ್ತೂಪ ಮತ್ತು ಹಜರತ್‌ ಗಂಗಾ ಬಾಬಾ ರಿಷಿ ಸ್ತೂಪಗಳು ಇಲ್ಲಿನ ಕೆಲವು ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳು.

 ಹವಾಮಾನ ಹೇಗಿರುತ್ತದೆ

ಹವಾಮಾನ ಹೇಗಿರುತ್ತದೆ

PC: Ankur P
ವರ್ಷಂಪ್ರತಿ ಉತ್ತಮ ವಾತಾವರಣವನ್ನು ಬಡ್ಗಮ್ ಹೊಂದಿರುತ್ತದೆ. ಮಧ್ಯಮ ಪ್ರಮಾಣದ ತಾಪಮಾನವನ್ನು ಹೊಂದಿರುವ ಬೇಸಿಗೆಗಾಲ ಮತ್ತು ಅತಿಯಾದ ಮಂಜು ಸುರಿಯುವ ಚಳಿಗಾಲದ ವಾತಾವರಣ ಇಲ್ಲಿರುತ್ತದೆ. ಇನ್ನು ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದ ಮಳೆ ಇಲ್ಲಿ ಸುರಿಯುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Ankur P
ಬಡ್ಗಮ್‌ಗೆ ಪ್ರವಾಸ ಮಾಡಲು ಸಾಮಾನ್ಯ ಸಾರಿಗೆಗಳ ಜೊತೆಗೆ ವಿಮಾನಗಳು, ರೈಲುಗಳ ಮೂಲಕವೂ ಹೋಗಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಶ್ರೀನಗರ ಏರ್‌ಪೋರ್ಟ್‌. ಮುಂಬೈ, ಚಂಡೀಗಢ, ದೆಹಲಿ ಮತ್ತು ಶಿಮ್ಲಾದಂತ ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ. ಶ್ರೀನಗರದಿಂದ ದೆಹಲಿ ವಿಮಾನ ನಿಲ್ದಾಣವು 876 ಕಿ.ಮೀ ದೂರದಲ್ಲಿದ್ದು ವಿದೇಶಿ ಪ್ರಯಾಣಿಕರು ದೆಹಲಿಗೆ ಬಂದು ಅಲ್ಲಿಂದ ಶ್ರೀನಗರದ ಮೂಲಕ ಬಡ್ಗಮ್‌ಗೆ ಪ್ರಯಾಣ ನಡೆಸಬಹುದು.
ಬುಡ್ಗಾಮ್‌ಗೆ ಸಮೀಪದ ರೈಲು ನಿಲ್ದಾಣ ಜಮ್ಮು ತಾವಿ ರೈಲ್ವೆ ನಿಲ್ದಾಣವಾಗಿದ್ದು, ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ತ್ರಿವೇಂಡ್ರಮ್‌ ಮತ್ತು ಚೆನ್ನೈಗಳಿಗೆ ನೇರ ಸಂಪರ್ಕವನ್ನು ಹೊಂದಿದೆ. ಬಡ್ಗಮ್‌ಗೆ ಶ್ರೀನಗರದಿಂದ ನೇರ ಬಸ್‌ ಸೌಲಭ್ಯವಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+