Search
  • Follow NativePlanet
Share
» »ದಕ್ಷಿಣದ ಗುಪ್ತ ರತ್ನ ಬೋರಾ ಗುಹೆಗಳ ಬಗ್ಗೆ ಈ ಸಂಗತಿಗಳು ನಿಮಗೆ ಗೊತ್ತೇ….    

ದಕ್ಷಿಣದ ಗುಪ್ತ ರತ್ನ ಬೋರಾ ಗುಹೆಗಳ ಬಗ್ಗೆ ಈ ಸಂಗತಿಗಳು ನಿಮಗೆ ಗೊತ್ತೇ….    

'ದಕ್ಷಿಣದ ಗುಪ್ತ ರತ್ನ' ಎಂದೇ ಜನಪ್ರಿಯವಾಗಿರುವ ಬೋರಾ ಗುಹೆಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅನಂತಗಿರಿ ಬೆಟ್ಟಗಳ ಬಳಿ ಇದೆ. ಬೋರಾ ಗುಹೆಗಳು ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡಿದ್ದು, ಭಾರತದ ಅತ್ಯಂತ ದೊಡ್ಡ ಗುಹೆಗಳ ಪೈಕಿ ಇದು ಒಂದಾಗಿದೆ. ಈ ಗುಹೆಗಳನ್ನು ಅಪರೂಪದ ಭೌಗೋಳಿಕ ರಚನೆಗಳೆಂದು ಪರಿಗಣಿಸಲಾಗಿದೆ. ಪ್ರಕೃತಿಯ ಅದ್ಭುತ ಸೃಷ್ಟಿಯಾಗಿರುವ ಗುಹೆಗಳು ಗೋಸ್ಥಾನಿ ನದಿಯ ನೀರು ಸುಣ್ಣದ ಪ್ರದೇಶದ ಮೂಲಕ ಹರಿಯುವಾಗ ರೂಪುಗೊಂಡವು.

ಸ್ಥಳೀಯರು ಈ ಗುಹೆಗಳನ್ನು ಬೊರ್ರಾ ಗುಹಾಲು ಎಂದೂ ಕರೆಯುತ್ತಾರೆ. ವಿಶಾಖಪಟ್ಟಣಂನ ಈ ಪ್ರವಾಸಿ ಆಕರ್ಷಣೆ 1400 ಮೀ ಎತ್ತರದಲ್ಲಿದ್ದು, 2 ಚ.ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಹಾಗಾಗಿ ವಿಶಾಖಪಟ್ಟಣಂಗೆ ಭೇಟಿ ನೀಡುವವರು ಬೋರಾ ಗುಹೆಗಳಿಗೆ ಭೇಟಿ ನೀಡುವುದನ್ನು ಮರೆಯದಿರಿ.

ಗೋಪಾಲಕನ ಕಥೆ

ಗೋಪಾಲಕನ ಕಥೆ

ಬೊರ್ರಾ ಗುಹೆಗಳ ಇತಿಹಾಸವು ಅರಕು ಕಣಿವೆಯ ಇತಿಹಾಸದಷ್ಟು ಹಳೆಯದು. ಗುಹೆಗಳು ಲಕ್ಷಾಂತರ ವರ್ಷಗಳ ದೀರ್ಘಕಾಲಿಕ ನೀರಿನ ಹರಿವಿನ ಪರಿಣಾಮವಾಗಿ ರೂಪುಗೊಂಡಿದೆ ಎಂದು ನಂಬಲಾಗಿದೆ. ಈ ನೈಸರ್ಗಿಕ ಗುಹೆಗಳನ್ನು 1807 ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಲಿಯಂ ಕಿಂಗ್ ಜಾರ್ಜ್ ಕಂಡುಹಿಡಿದರು.

ಆದರೆ ಸ್ಥಳೀಯರ ಪ್ರಕಾರ, ಒಮ್ಮೆ ಗೋಪಾಲಕನು ಹಸುವನ್ನು ಕಳೆದುಕೊಂಡನು. ಕಳೆದುಹೋದ ಹಸುವನ್ನು ಹುಡುಕಿಕೊಂಡು ಹೊರಟವನು ಆಕಸ್ಮಿಕವಾಗಿ ಈ ಗುಹೆಗಳನ್ನು ನೋಡಿದನು. ಗುಹೆಯೊಳಗೆ ಅವನು ತನ್ನ ಹಸುವಿನ ಜೊತೆಗೆ ಶಿವಲಿಂಗವನ್ನು ಕಂಡುಕೊಂಡನು. ಶಿವನು ತನ್ನ ಹಸುವನ್ನು ರಕ್ಷಿಸಿದನೆಂದು ಅವನು ನಂಬಿದನು. ನಂತರ, ಗ್ರಾಮಸ್ಥರು ಗುಹೆಗಳ ಹೊರಗೆ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು. ಇಲ್ಲಿಗೆ ಬರುವ ಜನರು ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ.

ಗುಹೆಯೊಳಗೆ ಬೆಳಕಿನ ದೀಪಗಳ ಅಳವಡಿಕೆ

ಗುಹೆಯೊಳಗೆ ಬೆಳಕಿನ ದೀಪಗಳ ಅಳವಡಿಕೆ

ಈ ಗುಹೆಗೆ ಸಂಬಂಧಿಸಿದ ಬಹು ದಂತಕಥೆಗಳು ಇಂಗ್ಲಿಷ್, ಬೆಂಗಾಲಿ, ತೆಲುಗು, ಹಿಂದಿ ಮತ್ತು ಒರಿಯಾದಲ್ಲಿ 5 ಭಾಷೆಗಳಲ್ಲಿ ಲಭ್ಯವಿರುವುದರಿಂದ ಗುಹೆಗಳ ಕೆಳಗೆ ಸುತ್ತುವುದು ಆಕರ್ಷಕ ಪ್ರಯಾಣವೆನಿಸುತ್ತದೆ. ಗುಹೆಗಳ ಒಳಗೆ ಹಾದು ಹೋಗುವಾಗ ಕೃತಕ ದೀಪಗಳು ಇವೆ. ಆಂಧ್ರಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆಯು 26 ಮರ್ಕ್ಯೂರಿ, ಸೋಡಿಯಂ ವೇಪರ್ ಮತ್ತು ಹ್ಯಾಲೊಜೆನ್ ವಿದ್ಯುತ್ ದೀಪಗಳನ್ನು ಅಳವಡಿಸಿದೆ.

ಇದರಿಂದ ಗುಹೆಯೊಳಗಿನ ರಚನೆಗಳನ್ನು ಚೆನ್ನಾಗಿ ವೀಕ್ಷಿಸಬಹುದು. ಬೋರಾ ಗುಹೆಗಳನ್ನು ದೇಶದಲ್ಲೇ ಅತ್ಯಂತ ದೊಡ್ಡ ಗುಹೆಗಳು ಮತ್ತು ಭಾರತದ ಆಳವಾದ ಗುಹೆಗಳು ಎಂದು ಪರಿಗಣಿಸಲಾಗಿದೆ. ಪ್ರಾಣಿ ಪ್ರಿಯರು ಗುಹೆಯೊಳಗೆ ಬಾವಲಿಗಳು ಮತ್ತು ಅಲ್ಲಲ್ಲಿ ಅಡಗಿರುವ ಗೋಲ್ಡನ್ ಗೆಕ್ಕೋಗಳನ್ನು ಕಾಣಬಹುದು.

ದಿನಕ್ಕೆ 10,000 ಪ್ರವಾಸಿಗರು ಬರುತ್ತಾರೆ

ದಿನಕ್ಕೆ 10,000 ಪ್ರವಾಸಿಗರು ಬರುತ್ತಾರೆ

ಗುಹೆಗಳಲ್ಲಿನ ಸ್ಟ್ಯಾಲಕ್ಟೈಟ್‌'ಗಳು ಮತ್ತು ಸ್ಟಾಲಗ್‌'ಮೈಟ್‌'ಗಳು ವಿವಿಧ ಆಸಕ್ತಿದಾಯಕ ಆಕಾರಗಳನ್ನು ಹೊಂದಿವೆ. ಶಿವ-ಪಾರ್ವತಿ, ತಾಯಿ ಮತ್ತು ಮಗು, ಸಂತನ ಗಡ್ಡ, ಮೊಸಳೆ ಮತ್ತು ಮಾನವ ಮೆದುಳಿನ ಆಕಾರ ಹೋಲುವ ಸ್ಟಾಲಗ್‌ಮೈಟ್ ರಚನೆಗಳಿವೆ. ಇದು ಮಧ್ಯ ಶಿಲಾಯುಗದ ಸಂಸ್ಕೃತಿಯ ಏಕೈಕ ಸಾಕ್ಷಿ. ಪುರಾತತ್ವ ಮತ್ತು ಐತಿಹಾಸಿಕ ಅಧ್ಯಯನಗಳನ್ನು ಇಲ್ಲಿ ವ್ಯಾಪಕವಾಗಿ ನಡೆಸಲಾಗಿದೆ. ಮಾನವಶಾಸ್ತ್ರಜ್ಞರು ಬೊರ್ರಾ ಗುಹೆಗಳಲ್ಲಿ ಮಾನವ ವಾಸಸ್ಥಾನವನ್ನು ಸೂಚಿಸುವ 30000 ರಿಂದ 50000 ವರ್ಷಗಳಷ್ಟು ಹಿಂದಿನ ಮಧ್ಯಶಿಲಾಯುಗದ ಕಲ್ಲಿನ ಉಪಕರಣಗಳನ್ನು ಕಂಡುಕೊಂಡಿದ್ದಾರೆ.

ಗುಹೆಯ ಕೇಂದ್ರ ದ್ವಾರವು ಸಮುದ್ರದಿಂದ ಸುಮಾರು 705 ಮೀ.ಎತ್ತರದಲ್ಲಿ ಕಂಡುಬರಲಿದ್ದು, ಕಂದುಬಣ್ಣದಲ್ಲಿದೆ. ಈ ನೈಸರ್ಗಿಕ ಗುಹೆ ನೋಡಲು ಪ್ರತಿದಿನ 10,000 ಪ್ರವಾಸಿಗರು ಸೇರುತ್ತಾರೆ. ಇಲ್ಲಿಗೆ ಬಂದಾಗ, ಪ್ರಸಿದ್ಧ ಅರಕು ಕಣಿವೆ ಬಹಳ ದೂರದಲ್ಲಿಲ್ಲ. ಆದ್ದರಿಂದ ನೀವೂ ಇಲ್ಲಿಯೂ ಒಂದು ಸುತ್ತು ಹಾಕಬಹುದು.

ಬೋರಾ ಗುಹೆಗಳ ಸಮೀಪದಲ್ಲಿರುವ ಸ್ಥಳಗಳು

ಬೋರಾ ಗುಹೆಗಳ ಸಮೀಪದಲ್ಲಿರುವ ಸ್ಥಳಗಳು

ಬೋರಾ ಗುಹೆಗಳು ವಾರಾಂತ್ಯದಲ್ಲಿ ಟ್ರೆಕ್ಕಿಂಗ್ ತೆರಳಲು ಪರಿಪೂರ್ಣ ತಾಣವಾಗಿದೆ. ಟ್ರೆಕ್ಕಿಂಗ್ ಆರಂಭಿಕರು ಇಲ್ಲಿ ಸುಲಭವಾಗಿ ಚಾರಣ ಮಾಡಬಹುದು. ಗುಹೆಗಳ ಒಳಗೆ ಪ್ರಯಾಣವು ಸುಮಾರು 3-4 ಗಂಟೆಗಳನ್ನು ತೆಗೆದುಕೊಳ್ಳಬಹುದು. ಆದರೆ ಬೋರಾ ಗುಹೆಗಳನ್ನು ನೋಡಿದ ಮೇಲೆ ಖಂಡಿತವಾಗಿಯೂ ನಿಮ್ಮ ಕಠಿಣ ಪರಿಶ್ರಮ ಸಾರ್ಥಕವಾಗುತ್ತದೆ.

ಬೋರಾ ಗುಹೆಗಳ ಬಳಿ ಬಂದವರು ಅರಕು ಟ್ರೈಬಲ್ ಮ್ಯೂಸಿಯಂ ನೋಡಬಹುದು. ಪದಂಪುರ ಉದ್ಯಾನಗಳು ಮತ್ತು ಕಟಿಕಾ ಜಲಪಾತಗಳು ಬೋರಾ ಗುಹೆಗಳ ಸಮೀಪದಲ್ಲಿರುವ ಇತರ ತಾಣಗಳಾಗಿವೆ. ಸಮೀಪದ ಪ್ಲಾಂಟೇಶನ್'ಗಳಲ್ಲಿ ನೀವು ಬಿಸಿ ಬಿಸಿ ಕಾಫಿಯನ್ನು ಸಹ ಆನಂದಿಸಬಹುದು.

ಭೇಟಿ ನೀಡಲು ಉತ್ತಮ ಸಮಯ

ಭೇಟಿ ನೀಡಲು ಉತ್ತಮ ಸಮಯ

ಬೇಸಿಗೆಯ ಉತ್ತುಂಗದಲ್ಲಿಯೂ ಗುಹೆಯೊಳಗೆ ತುಂಬಾ ಚಳಿ ಇರುತ್ತದೆ. ವರ್ಷವಿಡೀ ತಂಪಾಗಿರುವ ಗುಹೆಯ ಕಡೆ ಪ್ರವಾಸವನ್ನು ಕೈಗೊಳ್ಳಲು ಉತ್ತಮ ಸಮಯವೆಂದರೆ ಚಳಿಗಾಲದ ಸಮಯ. ಅಂದರೆ ಅಕ್ಟೋಬರ್ ಮತ್ತು ಮಾರ್ಚ್ ನಡುವೆ. ಈ ಅವಧಿಯಲ್ಲಿ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ.

ವಿಶಾಖ ಉತ್ಸವದಂತಹ ಪ್ರಮುಖ ಧಾರ್ಮಿಕ ಹಬ್ಬಗಳನ್ನು ಅಕ್ಟೋಬರ್ - ಡಿಸೆಂಬರ್ ಸಮಯದಲ್ಲಿ ಆಚರಿಸಲಾಗುತ್ತದೆ. ಬೇಸಿಗೆ ಮತ್ತು ಮಳೆಗಾಲ ವಿಶಾಖಪಟ್ಟಣಂಗೆ ಭೇಟಿ ನೀಡಲು ಸೂಕ್ತ ಸಮಯವಲ್ಲ.

ಗುಹೆ ನೋಡಲು ಹೀಗೆ ಬನ್ನಿ..

ಗುಹೆ ನೋಡಲು ಹೀಗೆ ಬನ್ನಿ..

ಬೋರಾ ಗುಹೆಗಳು ಅರಕುದಿಂದ 36 ಕಿಮೀ, ವಿಶಾಖಪಟ್ಟಣಂನಿಂದ 88 ಕಿಮೀ ಮತ್ತು ಹೈದರಾಬಾದ್‌ನಿಂದ 662 ಕಿಮೀ ದೂರದಲ್ಲಿದೆ. ವಿಶಾಖಪಟ್ಟಣ ಪ್ರಮುಖ ಬಂದರು ನಗರ ಆಗಿರುವುದರಿಂದ, ಇದು ರೈಲು ಮತ್ತು ರಸ್ತೆಗಳ ಮೂಲಕ ಎಲ್ಲಾ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ವಿಶಾಖಪಟ್ಟಣಂನಲ್ಲಿ ವಿಮಾನ ನಿಲ್ದಾಣ ಸಹ ಇದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತದೆ. ನೀವು ಇಲ್ಲಿಂದ ಬೋರಾ ಗುಹೆಗಳಿಗೆ ಸುಲಭವಾಗಿ ಪ್ರಯಾಣಿಸಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+