ನಮ್ಮ ದೇಶದಲ್ಲಿ ಅನೇಕ ಪವಿತ್ರ ಕುಂಡಗಳು, ತೀರ್ಥಗಳು ಇವೆ; ಪ್ರತಿಯೊಂದು ತೀರ್ಥಕ್ಕೂ ವಿಶೇಷ ಶಕ್ತಿ ಇದೆ ಎನ್ನುವುದು ನಿಮಗೆ ಗೊತ್ತೇ ಇದೆ. ಅಂತಹ ವಿಶೇಷ ಕುಂಡಗಳಲ್ಲಿ ನಾವಿಂದು ಒಂದು ಕುಂಡದ ಬಗ್ಗೆ ತಿಳಿಸಲಿದ್ದೇವೆ. ಅದನ್ನು ಕೇಳಿದ್ರೆ ನೀವೂ ನಿಮ್ಮ ಪಾರ್ಟನರ್ ಜೊತೆ ಆ ಕುಂಡಕ್ಕೆ ಹೋಗಿ ಸ್ನಾನ ಮಾಡದೇ ಇರಲಾರರು.

ಗಂಡ ಹೆಂಡಿರ ಜಗಳ
ಸಾಮಾನ್ಯವಾಗಿ ಕಪಲ್‌ಗಳ ನಡುವೆ ಗಂಡ ಹೆಂಡತಿಯರ ನಡುವೆ ಸಣ್ಣ ಪುಟ್ಟ ಜಗಳಗಳಾಗುವುದು ಸಾಮಾನ್ಯ.ಕೆಲವೊಮ್ಮೆ ಜಗಳಗಳು ದೊಡ್ಡ ಮಟ್ಟಿಗೆ ಹೋಗಿ ಬ್ರೇಕ್ ಅಪ್ ಅಗೋದು ಅಥವಾ ಡೈವರ್ಸ್ ಆಗೋದು ಸಹಜ. ಅದಕ್ಕಾಗಿ ಕಲಪ್‌ಗಳು ಯಾವಾಗಲೂ ತಮ್ಮ ಪಾರ್ಟನರ್‌ನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ.

ವಿಶೇಷ ಕುಂಡ
ಇಂದು ನಾವು ಒಂದು ವಿಶೇಷ ಕುಂಡದ ಬಗ್ಗೆ ತಿಳಿಸಲಿದ್ದೇವೆ. ಈ ಕುಂಡದಲ್ಲಿ ಕಪಲ್‌ಗಳು ಸ್ನಾನ ಮಾಡಿದ್ರೆ ದಂಪತಿಗಳ ನಡುವೆ ಇರುವ ಯಾವುದೇ ರೀತಿಯ ಮನಸ್ತಾಪ ದೂರವಾಗುತ್ತಂತೆ. ಹಾಗಾದ್ರೆ ಈ ಕುಂಡ ಭಾರತದಲ್ಲಿ ಎಲ್ಲಿದೆ ಎನ್ನುವುದನ್ನು ತಿಳಿಯೋಣ.

ಎಲ್ಲಿದೆ ಈ ಪವಿತ್ರ ಕುಂಡ
ಈ ಪವಿತ್ರ ಕುಂಡವು ಮಧ್ಯಪ್ರದೇಶದ ಶಿವಪುರಿ ಎನ್ನುವಲ್ಲಿದೆ. ಈ ಕುಂಡವನ್ನು ಬಾಡಿಯಾ ಕುಂಡ ಎನ್ನುತ್ತಾರೆ. ಈ ಕುಂಡದಲ್ಲಿ ಪತಿ ಪತ್ನಿಗಳಿಬ್ಬರೂ ಸ್ನಾನ ಮಾಡಿದ್ರೆ ಅವರ ನಡುವೆ ಎಷ್ಟೇ ದೊಡ್ಡ ಸಮಸ್ಯೆಗಳಿದ್ದರೂ ಅದು ಬಗೆ ಹರಿಯುತ್ತದೆ. ಅವರು ಜೀವನದಲ್ಲಿ ಮುಂದೆಂದೂ ಮನಸ್ತಾಪ ಮಾಡಿಕೊಳ್ಳೊದಿಲ್ಲವಂತೆ.

ಮಳೆಗಾಲದಲ್ಲೇ ಹೋಗಬೇಕು
ಇಲ್ಲಿಗೆ ಹೋಗಬೇಕಾದರೆ ನೀವು ಮಳೆಗಾಲದಲ್ಲೇ ಹೋಗಬೇಕು. ಯಾಕೆಂದರೆ ಬೇಸಿಗೆ ಗಾಲದಲ್ಲಿ ಇಲ್ಲಿ ನೀರು ಇರೋದಿಲ್ಲ. ಮಳೆಗಾಲದಲ್ಲಿ ನೀರು ಹೆಚ್ಚು ಇರುತ್ತದೆ. ಈ ಕುಂಡದಲ್ಲಿ ದಂಪತಿಗಳು ಸ್ನಾನ ಮಾಡಿದ ನಂತರ ಅವರ ನಡುವೆ ಇದ್ದ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಅವರು ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಆ ಕುಂಡದಲ್ಲಿ ಸ್ನಾನ ಮಾಡಿರುವವರ ಅನಿಸಿಕೆ.


Click it and Unblock the Notifications
















