Search
  • Follow NativePlanet
Share
» »Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!

Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!

ನೀವೂ ಕೂಡ ಈ ಮಳೆಗಾಲದಲ್ಲಿ ಹುಲಿಗಳನ್ನು ನೋಡಲು ನಿಮ್ಮ ಮಕ್ಕಳು ಮತ್ತು ಕುಟುಂಬದೊಂದಿಗೆ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಬೇಕೆಂದಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ಭಾರತದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಹೇಳಲಿದ್ದು, ನೀವಿಲ್ಲಿ ಬಹಳಷ್ಟು ವಿಷಯಗಳನ್ನು ಎಂಜಾಯ್‌ ಮಾಡಬಹುದು. ಈ ರಾಷ್ಟ್ರೀಯ ಉದ್ಯಾನವನಗಳಲ್ಲಿ ನೀವು ಹುಲಿಗಳನ್ನು ಮಾತ್ರವಲ್ಲದೆ, ಇತರ ಅನೇಕ ಪ್ರಾಣಿಗಳನ್ನು ಸಹ ನೋಡಬಹುದು.

kanhanp

ಕನ್ಹಾ ರಾಷ್ಟ್ರೀಯ ಉದ್ಯಾನವನ

ನಿಮ್ಮ ಕುಟುಂಬದೊಂದಿಗೆ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಲು ನೀವು ಯೋಚಿಸುತ್ತಿದ್ದರೆ, ಮಧ್ಯಪ್ರದೇಶದ ಕನ್ಹ ರಾಷ್ಟ್ರೀಯ ಉದ್ಯಾನವನವು ಬೆಸ್ಟ್.‌ ಇದು ಹುಲಿಗಳಿಗೆ ಅತ್ಯಂತ ಪ್ರಸಿದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ಇಲ್ಲಿ ಹುಲಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ ಮತ್ತು ನೀವು ಇಲ್ಲಿ ಇತರ ಕಾಡು ಪ್ರಾಣಿಗಳನ್ನು ಸಹ ನೋಡುತ್ತೀರಿ. ಜಂಗಲ್ ಸಫಾರಿ ಸಮಯದಲ್ಲಿ, ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ ನೀವು ಎಲ್ಲಾ ಹುಲಿಗಳನ್ನು ಹತ್ತಿರದಿಂದ ಬಹಳ ಸುಲಭವಾಗಿ ನೋಡಬಹುದು. ಈ ರಾಷ್ಟ್ರೀಯ ಉದ್ಯಾನವನವನ್ನು ನೋಡಲು ಜೀಪ್ ಸಫಾರಿ ಅತ್ಯುತ್ತಮ ಮಾರ್ಗವಾಗಿದೆ.

ಹೋಗುವುದು ಹೇಗೆ?

ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವು ಜಬಲ್ಪುರದಲ್ಲಿದೆ. ಇದು ಕನ್ಹಾ ರಾಷ್ಟ್ರೀಯ ಉದ್ಯಾನವನವನ್ನು ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುತ್ತದೆ. ನೀವು ಹತ್ತಿರದ ನಗರವಾದ ಮಾಂಡ್ಲಾದಿಂದ ಕ್ಯಾಬ್‌ಗಳು ಅಥವಾ ಬಸ್‌ಗಳನ್ನು ಸಹ ಪಡೆಯಬಹುದು.

ಪೆಂಚ್ ರಾಷ್ಟ್ರೀಯ ಉದ್ಯಾನವನ

ಇದಲ್ಲದೇ ಮಧ್ಯಪ್ರದೇಶದಲ್ಲಿ ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿ ಪೆಂಚ್ ರಾಷ್ಟ್ರೀಯ ಉದ್ಯಾನವನವೂ ಇದೆ. ಇಲ್ಲಿಯೂ ಹುಲಿಗಳ ಸಂಖ್ಯೆ ತುಂಬಾ ಹೆಚ್ಚಿದ್ದು, ಇಲ್ಲಿನ ಪ್ರಾಕೃತಿಕ ದೃಶ್ಯವು ತುಂಬಾ ಸುಂದರವಾಗಿದೆ. ಹಾಗೆಯೇ ನೀವು ಬಾಂಧವಗಢ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಬಹುದು. ಈ ಉದ್ಯಾನವನವು ಸಹ ಮಧ್ಯಪ್ರದೇಶದಲ್ಲಿದೆ. ಅಲ್ಲಿಯೂ ನೀವು ಅನೇಕ ಹುಲಿಗಳನ್ನು ಒಟ್ಟೊಟ್ಟಿಗೆ ನೋಡಬಹುದು.

ಹೋಗುವುದು ಹೇಗೆ?

ಹತ್ತಿರದ ಹಾಗೂ ಉತ್ತಮ ಸಂಪರ್ಕ ಹೊಂದಿರುವ ವಿಮಾನ ನಿಲ್ದಾಣಗಳು ನಾಗ್ಪುರ (92 ಕಿಮೀ) ಮತ್ತು ಜಬಲ್ಪುರ (200 ಕಿಮೀ)ದಲ್ಲಿವೆ. ನಾಗ್ಪುರದಲ್ಲಿ ರೈಲು ನಿಲ್ದಾಣವಿದೆ. ಈ ರಾಷ್ಟ್ರೀಯ ಉದ್ಯಾನವನವು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ನಾಗ್ಪುರ ಮತ್ತು ಜಬಲ್ಪುರದಿಂದ ಇಲ್ಲಿಗೆ ತಲುಪಲು ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿವೆ.

ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯ

ನೀವು ಉತ್ತರಾಖಂಡ ಅಥವಾ ಉತ್ತರಾಖಂಡದ ಹತ್ತಿರದ ನಿವಾಸಿಗಳಾಗಿದ್ದರೆ ಇಲ್ಲಿ ನೀವು ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು. ಅನೇಕ ಹುಲಿಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ಸಹ ಇಲ್ಲಿ ಸುಲಭವಾಗಿ ಕಾಣಬಹುದು.

ಹೋಗುವುದು ಹೇಗೆ?

ಹತ್ತಿರದ ವಿಮಾನ ನಿಲ್ದಾಣ ಅಮೌಸಿ (ಲಕ್ನೋ) 215 ಕಿ.ಮೀ.ದೂರದಲ್ಲಿದೆ. ರೈಲು ನಿಲ್ದಾಣವು ಕಕ್ರಾಹ, ಮೂರ್ತಿಹಾ, ನಿಶಾಂಗರಾ ಮತ್ತು ಬಿಚಿಯಾದಲ್ಲಿದೆ. ರಸ್ತೆ ಮಾರ್ಗದಲ್ಲಿ ಹೋಗುವುದಾದರೆ ಲಕ್ನೋದಿಂದ 205 ಕಿ.ಮೀ. ದೂರದಲ್ಲಿದೆ.

ranathamborenp1

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ

ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಹುಲಿಗಳಿಗೆ ಸಾಕಷ್ಟು ಪ್ರಸಿದ್ಧವಾಗಿದೆ. ರಾಜಸ್ಥಾನದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನದಲ್ಲಿ ನೀವು ಹುಲಿಗಳು ತೆರೆದ ಮೈದಾನದಲ್ಲಿ ತಿರುಗಾಡುವುದನ್ನು ನೋಡುತ್ತೀರಿ. ಅಷ್ಟೇ ಏಕೆ, ಹುಲಿಯನ್ನು ಬಹಳ ಸುಲಭವಾಗಿ ಹತ್ತಿರದಿಂದ ನೋಡಬಹುದು.

ಹೋಗುವುದು ಹೇಗೆ?

ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಸವಾಯಿ ಮಾಧೋಪುರದಿಂದ ಸುಮಾರು 11 ಕಿಮೀ ದೂರದಲ್ಲಿದೆ. ಇದು ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವು 160 ಕಿಮೀ ದೂರದಲ್ಲಿದೆ. ಅದೇ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ರಣಥಂಬೋರ್ ಜೈಪುರ (160 ಕಿಮೀ), ದೆಹಲಿ (220 ಕಿಮೀ), ಆಗ್ರಾ (300 ಕಿಮೀ) ಮುಂತಾದ ನಗರಗಳಿಗೆ ರಸ್ತೆಯ ಮೂಲಕ ಸಂಪರ್ಕ ಹೊಂದಿದೆ.

sunderbans national park

ಸುಂದರಬನ್ ರಾಷ್ಟ್ರೀಯ ಉದ್ಯಾನವನ

ಇಷ್ಟು ಮಾತ್ರವಲ್ಲದೆ, ಪಶ್ಚಿಮ ಬಂಗಾಳದಲ್ಲಿರುವ ಸುಂದರಬನ್ ರಾಷ್ಟ್ರೀಯ ಉದ್ಯಾನವನವು ವಿಶ್ವದ ಅತಿದೊಡ್ಡ ಡೆಲ್ಟಾ ಆಗಿದೆ. ಇಲ್ಲಿ ನೀವು ಅನೇಕ ಜಾತಿಯ ಹುಲಿಗಳನ್ನು ನೋಡುತ್ತೀರಿ. ಈ ರಾಷ್ಟ್ರೀಯ ಉದ್ಯಾನವನದಲ್ಲಿ, ದೋಣಿ ಸಫಾರಿ ಮಾಡುವ ಮೂಲಕ ನೀವು ಹುಲಿಗಳನ್ನು ಹತ್ತಿರದಿಂದ ನೋಡಬಹುದು.

ಹೋಗುವುದು ಹೇಗೆ?

ಸುಂದರಬನ್ ರಾಷ್ಟ್ರೀಯ ಉದ್ಯಾನವನವನ್ನು ಗೋಧ್ಕಾಲಿ (ಕೋಲ್ಕತ್ತಾದಿಂದ 3 ಗಂಟೆಗಳ ಪ್ರಯಾಣ) ಮೂಲಕ ತಲುಪಬಹುದು. ನಂತರ ಸಜ್ನೆಖಾಲಿಗೆ ದೋಣಿ ಅಥವಾ ಜೆಟ್ಟಿಯನ್ನು ತೆಗೆದುಕೊಳ್ಳಬಹುದು.

periyar national park

ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶ

ಇದಲ್ಲದೆ, ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳನ್ನು ನೋಡಲು ನೀವು ನಿಮ್ಮ ಇಡೀ ಕುಟುಂಬದೊಂದಿಗೆ ಹೋಗಬಹುದು. ಕೇರಳದಲ್ಲಿರುವ ಈ ಉದ್ಯಾನವನವು ವಿಶೇಷವಾಗಿ ಹುಲಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಹುಲಿಯನ್ನು ಎರಡೂ ರೀತಿಯಲ್ಲಿ ನೋಡಬಹುದು. ಒಂದು ಜಂಗಲ್ ಸಫಾರಿ. ಮತ್ತೊಂದು ಬೋಟ್ ಸಫಾರಿ. ಈ ಎರಡನ್ನೂ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನೀವು ಈ ಎಲ್ಲಾ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿ, ಹುಲಿಗಳ ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಬಹುದು.

ಹೋಗುವುದು ಹೇಗೆ?

ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಉದ್ಯಾನವನಕ್ಕೆ ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಮಧುರೈ ಮತ್ತು ಕೊಚ್ಚಿ. ಇದು ಕ್ರಮವಾಗಿ ತೆಕ್ಕಡಿಯಿಂದ 136 ಕಿಲೋಮೀಟರ್ ಮತ್ತು 190 ಕಿಲೋಮೀಟರ್ ದೂರದಲ್ಲಿದೆ. ತೆಕ್ಕಡಿಗೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಬೆಂಗಳೂರು, ಚೆನ್ನೈ, ಸೇಲಂ, ತಿರುಚ್ಚಿ ಮತ್ತು ಇತರ ರಾಜ್ಯಗಳಿಂದ ಸುಲಭವಾಗಿ ಲಭ್ಯವಿವೆ. ತೆಕ್ಕಡಿಯಿಂದ 114 ಕಿಲೋಮೀಟರ್ ದೂರದಲ್ಲಿರುವ ಕೊಟ್ಟಾಯಂನಲ್ಲಿ ರೈಲು ನಿಲ್ದಾಣವಿದೆ. ವಿಮಾನ ನಿಲ್ದಾಣ/ರೈಲ್ವೆ ನಿಲ್ದಾಣದಿಂದ ನೀವು ತೆಕ್ಕಡಿ ಅಥವಾ ಉದ್ಯಾನವನಕ್ಕೆ ನೇರವಾಗಿ ತಲುಪಲು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು.

More News

Read more about: tiger parks india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+