Search
  • Follow NativePlanet
Share
» »2020 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಭೇಟಿ ನೀಡಬಹುದಾದ 10 ಅತ್ಯುತ್ತಮವಾದ ಸ್ಥಳಗಳು

2020 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಭೇಟಿ ನೀಡಬಹುದಾದ 10 ಅತ್ಯುತ್ತಮವಾದ ಸ್ಥಳಗಳು

ನೀವು ಇಲ್ಲಿಯವರೆಗೆ ಹಿಮಾಚಲ ಪ್ರದೇಶದ ಸೌಂದರ್ಯತೆ ಹಾಗು ಭವ್ಯತೆಯ ಬಗ್ಗೆ ವಿವರಣೆ ಇರುವ ಹತ್ತಾರು ಲೇಖನಗಳ ಬಗ್ಗೆ ನೀವು ಕೇಳಿರಬಹುದು/ಓದಿರಬಹುದು. ನಿಜಾಂಶವೇನೆಂದರೆ ಈ ರಾಜ್ಯದ ಭವ್ಯತೆಯನ್ನು ಪದಗಳಲ್ಲಿ ಬಣ್ಣಿಸಲಸಾಧ್ಯ. 2020ರಲ್ಲಿ ನಿಮ್ಮ ಮನಸ್ಸನ್ನು ಬದಲಾಯಿಸಿ ಇಲ್ಲಿಗೆ ಭೇಟಿ ಕೊಡುವುದಕ್ಕೆ ಸ್ಪೂರ್ತಿ ಯಾಗಬಹುದಾದ ಪ್ರಯತ್ನ ಇಲ್ಲಿದೆ.

ಹಿಮಾಚಲ ಪ್ರದೇಶವು ಪ್ರಕೃತಿದತ್ತವಾದ ಎಲ್ಲಾ ಸುಂದರವಾದ ಕೊಡುಗೆಗಳನ್ನು ತನ್ನಲ್ಲಿ ಹೊಂದಿದ್ದು, ವಿಶ್ವದಾದ್ಯಂತದ ಪ್ರವಾಸ ಮಾಡಲು ಆಸಕ್ತಿ ಹೊಂದಿರುವರರಿಗೆ ಒಂದು ಅತ್ಯಂತ ಮೆಚ್ಚುಗೆಯ ಮತ್ತು ಕುತೂಹಲಕಾರಿಯಾದ ಸ್ಥಳವೆನಿಸಿದೆ.

ಈ ಪ್ರದೇಶವು ಜೋಡಿಗಳಿಗೆ ಪ್ರಣಯಕ್ಕೆ ಒಂದು ಸ್ವರ್ಗವಾಗಿದ್ದು, ಹಾಗಾಗಿ, ಈ ನೈಸರ್ಗಿಕ ಸ್ಥಳಕ್ಕೆ ಭೇಟಿ ನೀಡುತ್ತಾರೆ, ಅಲ್ಲದೆ ಸಾಹಸ ಪ್ರಿಯರಿಗೆ ಪರ್ವಾತಾರೋಹಣ ಮಾಡಲು ಸೂಕ್ತವಾದ ಸ್ಥಳವಾದರೆ ಇನ್ನು ಕೆಲವರಿಗೆ ಇದು ಪರೀಕ್ಷೆಯ ಸ್ಥಳವಾಗಿ, ಇನ್ನು ಕೆಲವರಿಗೆ ಫ್ಯಾಂಟಸಿಯ ಸ್ಥಳವಾಗಿದೆ . ಆದ್ದರಿಂದ ನೀವೇನನ್ನು ಬಯಸುತ್ತಿದ್ದೀರಿ ಮತ್ತು ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಹಿಮಾಚಲ ಪ್ರದೇಶದಲ್ಲಿ ಕಾಣಬಹುದಾಗಿದೆ. ನಿಮ್ಮ ಆಸಕ್ತಿ ಅಭಿರುಚಿಗಳಿಗೆ ಅನುಗುಣವಾಗಿ ಇಲ್ಲಿಗೆ ಪ್ರವಾಸದಲ್ಲಿರುವಾಗ ಭೇಟಿ ನೀಡಬಹುದಾದ ಪ್ರಮುಖ 10 ಸ್ಥಳಗಳ ಪಟ್ಟಿ ಈ ಕೆಳಗೆ ನೀಡುತ್ತಿದ್ದೇವೆ.

ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಉತ್ತಮ ಸಮಯ

ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅದು ಬೇಸಿಗೆ ಕಾಲದಲ್ಲಿ, ಅಂದರೆ ಫೆಬ್ರವರಿಯಿಂದ ಮೇ ವರೆಗೆ. ಬೇಸಿಗೆಯಲ್ಲಿ ರಾಜ್ಯವು ಸುಗಮ ಮತ್ತು ಸುಂದರವಾದ ಕಾಲೋಚಿತ ವಾತಾವರಣವನ್ನು ಅನುಭವಿಸುತ್ತದೆ, ಆದುದರಿಂದ ಈ ಸಮಯವು ಪ್ರವಾಸಿಗರಿಗೆ ರಜೆಯಲ್ಲಿ ಪ್ರವಾಸ ಹೋಗಲು ಅನುಕೂಲಕರವಾಗಿದೆ.

1. ಕಸೋಲ್

1. ಕಸೋಲ್

ಕಸೋಲ್ ಪಾರ್ವತಿ ನದಿಯ ದಡದಲ್ಲಿರುವ ಒಂದು ಕುಗ್ರಾಮವಾಗಿದೆ. ಮತ್ತು ಇದನ್ನು ಭಾರತದ ಇಸ್ರೇಲ್ ಎಂದು ಕರೆಯಲಾಗುತ್ತದೆ. ಈ ಸುಂದರವಾದ ಸ್ಥಳವು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ತಾಣಗಳಲ್ಲಿ ಒಂದಾಗಿದೆ. ವಿಸ್ತಾರವಾದ ಸುಂದರವಾದ ಕಣಿವೆಗಳು ಹಿಮಚ್ಚಾದಿತ ಪ್ರರ್ವತಗಳು, ಸುಂದರವಾದ ಸಣ್ಣ ಝರಿಗಳು, ಜಲಪಾತಗಳು, ಕಠಿಣವಾದ ಕೆಲವು ಚಾರಣ ಮಾರ್ಗಗಳ ಅದ್ಭುತ ಭೂದೃಶ್ಯವು ಪ್ರಕೃತಿ ಪ್ರಿಯರಿಗೆ ಸ್ವರ್ಗವೆನಿಸುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ ಇಲ್ಲಿ ಕೆಲವು ಕೆಫೆಗಳು, ಮಿತವ್ಯಯಿ ವಸತಿ ಸೌಲಭ್ಯಗಳು ಇಲ್ಲಿ ಭೇಟಿ ನೀಡುವವರನ್ನು ನಿರಾತಂಕವಾಗಿರುವಂತೆ ಮಾಡುತ್ತದೆ ಈ ಸ್ಥಳವು ಬ್ಯಾಕ್ ಪ್ಯಾಕರ್ಸ್ ಮತ್ತು ಹಿಪ್ಪಿಗಳಿಗೆ ಒಂದು ಅತ್ಯುತ್ತಮವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ.

2. ಶಿಮ್ಲಾ

2. ಶಿಮ್ಲಾ

ಎ.ಕೆ.ಎ ಪರ್ವತಗಳ ರಾಣಿ ಎನಿಸಿರುವ (ಕ್ವೀನ್ ಆಫ್ ಹಿಲ್ಸ್) ಎನಿಸಿರುವ ಶಿಮ್ಲಾವು ಒಂದು ಭವ್ಯವಾದ ವಸಾಹತು ಶಾಹಿ ಗಿರಿಧಾಮವಾಗಿದ್ದು, ಪ್ರತೀ ಮೂಲೆ ಮೂಲೆಗಳಲ್ಲಿಯೂ ಸುಂದರವಾದ ನೋಟಗಳಿಂದ ನಿಮ್ಮನ್ನು ಸ್ವಾಗತಿಸುತ್ತವೆ. ಟೌನ್ ಹಾಲ್, ವೈಸರೇಗಲ್ ಲಾಡ್ಜ್ ಗಳು, ಮತ್ತು ಗೈಟಿ ಥಿಯೇಟರ್ ಗಳು ಸೇರಿದಂತೆ ಕೆಲವು ವಸಾಹತುಶಾಹಿ ಯುಗದ ಅತ್ಯುತ್ತಮ ರಚನೆಗಳಿಗೆ ನೆಲೆಯಾಗಿರುವ ಕಾರಣಕ್ಕೆ ಶಿಮ್ಲಾವು ಅನ್ವೇಶಿಸಲು ಅತ್ತ್ಯುತ್ತಮವಾದ ಸ್ಥಳವಾಗಿದೆ.

ಶ್ರೀಮಂತವಾದ ಹಸಿರು ಮತ್ತು ಹಿಮದಿಂದ ಆವೃತ್ತವಾದ ಶ್ರೇಣಿಗಳ ಮಧ್ಯೆ ಹಿಮಾಲಯದ ತಪ್ಪಲಿನಲ್ಲಿರುವ ಈ ನಗರವು ಚಾರಣ ಮತ್ತು ಕೆಲವು ಮುಕ್ತ ಚಟುವಟಿಕೆಗಳಿಗೆ ಸೂಕ್ತವಾದ ಸ್ಥಳವಾಗಿದೆ. ಶಿಮ್ಲಾದಲ್ಲಿ ಚಳಿಗಾಲದ ಸಮಯದಲ್ಲಿ ಇಡೀ ನಗರವು ಹಿಮದಿಂದ ಮುಚ್ಚಲ್ಪಟ್ಟಿದ್ದು, ಈ ಸಮಯದಲ್ಲಿ ಇಲ್ಲಿನ ಸೌಂದರ್ಯತೆಯನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ.

3. ಕಸೌಲಿ

3. ಕಸೌಲಿ

ಸಮುದ್ರ ಮಟ್ಟದಿಂದ 1,900 ಮೀಟರ್ ಎತ್ತರದಲ್ಲಿರುವ ಕಸೌಲಿ ಒಂದು ಸಣ್ಣ ವಸಾಹತುಶಾಹಿ ಪಟ್ಟಣ. ನಗರವು ಜನರ ವಾಸಸ್ಥಳಗಳು, ವ್ಯಾಪಾರ ಮತ್ತು ಜನರ ವಿಷಯದಲ್ಲಿ ವಿರಳವಾಗಿದೆಯಾದರೂ, ಈ ಸ್ಥಳದ ಶುದ್ಧ ಗಾಳಿ, ಶಾಂತ ಮತ್ತು ಪ್ರಶಾಂತ ಸೆಳೆತ ಮತ್ತು ನೈಸರ್ಗಿಕ ಸೌಂದರ್ಯತೆಯು ಪ್ರಯಾಣಿಕರನ್ನು ಸೆಳೆಯುತ್ತದೆ. ನೀವು ಭೇಟಿ ನೀಡಬಹುದಾದ ಸ್ಥಳಗಳಲ್ಲಿ ಕ್ರೈಸ್ಟ್ ಚರ್ಚ್, ಬ್ಯಾಪ್ಟಿಸ್ಟ್ ಚರ್ಚ್, ಮಂಕಿ ಪಾಯಿಂಟ್, ಕಸೌಲಿ ಬ್ರೂವರಿ, ಕಸೌಲಿ ಕ್ಲಬ್ ಮತ್ತು ನಹ್ರಿ ದೇವಾಲಯ ಸೇರಿವೆ.

4. ಧರಂಶಾಲಾ

4. ಧರಂಶಾಲಾ

ಕಾಂಗ್ರಾ ಕಣಿವೆಯ ಮಧ್ಯೆಯಲ್ಲಿರುವ ಧರಂಶಾಲಾ ಹಿಮಾಚಲಪ್ರದೇಶದಲ್ಲಿಯ ಅತ್ಯಂತ ಉತ್ತಮವಾದ ಹವಾಮಾನವನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ದೌಲಾಧರ್ ನ ಹಿಮಚ್ಚಾದಿತ ಶಿಖರಗಳಿಂದ, ಶ್ರೀಮಂತ ಪೈನ್ ಮತ್ತು ದೇವದಾರು ಕಾಡುಪ್ರದೇಶಗಳಿಂದ ಆವೃತವಾಗಿರುವ ಈ ಪಟ್ಟಣವು ಕಲಾತ್ಮಕ ಮತ್ತು ವಾಸ್ತುಶಿಲ್ಪದ ಪ್ರದರ್ಶನಗಳಿಂದ ಕೂಡಿದೆ.

ಜೊತೆಗೆ, ಗಮನಾರ್ಹ ಸಂಖ್ಯೆಯ ತಿನಿಸುಗಳು, ಕೆಫೆಗಳು ಮತ್ತು ಅಂಗಡಿಗಳು ಅದರ ದೊಡ್ಡ ಟಿಬೆಟಿಯನ್ ಮತ್ತು ಬಹುಸಾಂಸ್ಕೃತಿಕ ಭಾರತೀಯ ಸಮುದಾಯಗಳ ಪರಿಚಯ ಮಾಡಿಕೊಡುತ್ತದೆ. ಇದು ಮಾತ್ರವಲ್ಲದೆ ಇದರ ನೆರೆಹೊರೆಗಳಾದ ಮೆಕ್ಲಿಯೋಡ್ ಗಂಜ್, ಸಿಂಧಬಾರಿ, ಧರಂಕೋಟ್, ರಾಮನಗರ ಮತ್ತು ನಡ್ಡಿಗಳು ಪ್ರಯಾಣ ಮಾಡಲು ಯೋಗ್ಯವಾಗಿವೆ. ಅಲ್ಲದೆ, ಸಾಕಷ್ಟು ಚಾರಣ ಹಾದಿಗಳು, ಕ್ಯಾಸ್ಕೇಡ್‌ಗಳು ಮತ್ತು ಸುಂದರವಾದ ಕಣಿವೆಗಳನ್ನು ಹೊಂದಿರುವ ಈ ಪಟ್ಟಣವು ಪ್ರಪಂಚದಾದ್ಯಂತದ ಸಾಹಸಿಗರನ್ನು ಆಕರ್ಷಿಸುತ್ತದೆ.

5. ಸ್ಪಿತಿ ಕಣಿವೆ

5. ಸ್ಪಿತಿ ಕಣಿವೆ

ಶೀತ ಮರುಭೂಮಿ ಪರ್ವತಗಳಲ್ಲಿ ನೆಲೆಸಿರುವ ಹಾಗೂ ಸಮುದ್ರ ಮಟ್ಟದಿಂದ 3,810 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಸ್ಪಿತಿ ಕಣಿವೆ ಬಂಜರು ಹಳ್ಳಿಗಾಡಿನ ಭೂಮಿಯ ಒಂದು ದೊಡ್ಡ ವಿಸ್ತಾರವಾಗಿದೆ. ಇದು ತುಲನಾತ್ಮಕವಾಗಿ ಏಕಾಂತವಾಗಿದ್ದರೂ, ಅನೇಕ ಆಧ್ಯಾತ್ಮಿಕ ಮತ್ತು ಸಾಹಸಿ ಪ್ರಯಾಣಿಕರು ಈ ಪ್ರದೇಶದಾದ್ಯಂತ ಹರಡಿರುವ ಅನೇಕ ಬೌದ್ಧ ಅಭಯಾರಣ್ಯಗಳಲ್ಲಿ ಹಾದುಹೋಗಲು ಮತ್ತು ಕ್ರಮವಾಗಿ ಅತ್ಯಾಕರ್ಷಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸ್ಪಿತಿಗೆ ಹೋಗುತ್ತಿದ್ದಾರೆ.

ಮೌಂಟೇನ್ ಬೈಕಿಂಗ್, ವೈಟ್‌ವಾಟರ್ ರಾಫ್ಟಿಂಗ್, ಚಾರಣ ಮತ್ತು ವನ್ಯಜೀವಿಗಳ ಗುರುತಿಸುವಿಕೆ ಕೆಲವು ಜನಪ್ರಿಯ ಹೊರಾಂಗಣ ಚಟುವಟಿಕೆಗಳಾಗಿವೆ. ಅಲ್ಲದೆ, ಇದು ಕಾಜಾ, ಟ್ಯಾಬೊ, ಕಿಬ್ಬರ್, ಧಂಕರ್, ಲ್ಯಾಂಗ್ಜಾ ಮತ್ತು ಕೋಮಿಕ್‌ನಂತಹ ಹಲವಾರು ಎತ್ತರದ ಕುಗ್ರಾಮಗಳಿಂದ ಆವೃತವಾಗಿದ್ದು ಇಲ್ಲಿಗೂ ಸಹ ನೀವು ನಿಮ್ಮ ಸ್ಪಿತಿ ಪ್ರವಾಸದ ಸಮಯದಲ್ಲಿ ಭೇಟಿ ನೀಡಬಹುದಾಗಿದೆ.

6. ಮನಾಲಿ

6. ಮನಾಲಿ

ಸಮುದ್ರ ಮಟ್ಟದಿಂದ ಸುಮಾರು 2,050 ಮೀಟರ್ ಎತ್ತರದಲ್ಲಿರುವ ಮನಾಲಿ ಕಾಲ್ಪನಿಕ ಲೋಕದ ಪರಿಪೂರ್ಣ ದೃಶ್ಯ ನೀಡುವ ಒಂದು ಸ್ಥಳವಾಗಿದೆ. ನದಿ ಬಿಯಾಸ್ ಕಣಿವೆಯಲ್ಲಿರುವ ಇದು ಪ್ರತಿವರ್ಷ ಸಾವಿರಾರು ವಿಹಾರಗಾರರನ್ನು ಸೆಳೆಯುತ್ತದೆ. ದಟ್ಟವಾದ ಪೈನ್ ಮತ್ತು ದೇವದಾರು ಕಾಡುಗಳು, ಹಿಮದಿಂದ ಆವೃತವಾದ ಪರ್ವತಗಳು, ಸುಂದರವಾದ ಹುಲ್ಲುಗಾವಲುಗಳು, ಕ್ಯಾಸ್ಕೇಡ್ಗಳು ಮತ್ತು ಬಯಲು ಪ್ರದೇಶಗಳನ್ನು ಒಳಗೊಂಡಿರುವ ಸುಂದರವಾದ ಭೂದೃಶ್ಯವು ಪರಿಶೋಧಕರು ಮತ್ತು ಪ್ರಕೃತಿ ಪ್ರಿಯರನ್ನು ಸಮಾನವಾಗಿ ಆಕರ್ಷಿಸುತ್ತದೆ. ಅಲ್ಲದೆ, ಪ್ರಾಚೀನ ದೇವಾಲಯಗಳು ಮತ್ತು ಟಿಬೆಟಿಯನ್ ಮಠಗಳು ಆಧ್ಯಾತ್ಮಿಕ ಅನುಯಾಯಿಗಳನ್ನು ಸ್ವಾಗತಿಸುತ್ತವೆ

7.ಚಿಟ್ಕುಲ್

7.ಚಿಟ್ಕುಲ್

ಚಿಟ್ಕುಲ ಇದು ಇಂಡೋ-ಚೀನಾ ಗಡಿಯ ಸಮೀಪವಿರುವ ಕೊನೆಯ ಆಕ್ರಮಿತ ಸಣ್ಣ ಮತ್ತು ಆಕರ್ಷಕ ಕುಗ್ರಾಮವಾಗಿದೆ . ಹಿಮಾಚಲ ಪ್ರದೇಶದ ಇತರ ಪ್ರವಾಸಿ ತಾಣಗಳಂತೆ ಈ ಪ್ರದೇಶದಲ್ಲಿ ಯಾವುದೇ ಕೆಫೆಗಳು ಅಥವಾ ಅಂಗಡಿಗಳು ಇಲ್ಲಿ ಕಾಣಸಿದಿದ್ದರೂ ಸಹ ಅದರ ಸುಂದರವಾದ ಭೂದೃಶ್ಯ, ವ್ಯಾಪಕವಾದ ಸಸ್ಯವರ್ಗ, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಸೇಬು ಬೆಳೆಯುವ ಪ್ರದೇಶಗಳು ಮತ್ತು ಇಲ್ಲಿಯ ಒಂದು ಆಕರ್ಷಕ ನೈಸರ್ಗಿಕ ಸೆಳೆತವನ್ನು ಒಂದೇ ಸ್ಥಳದಲ್ಲಿ ನೋಡಲು ಬಯಸುವವರಿಗೆ ಸೂಕ್ತ ಸ್ಥಳವಾಗಿದೆ.

ಪ್ರಕೃತಿಯ ಸಾಮರಸ್ಯ ಮತ್ತು ಮೌನವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿಯ ಆಸಕ್ತಿದಾಯಕ ವಿಷಯವೆಂದರೆ ಇಲ್ಲಿರುವ ವಸಾಹತುಶಾಹಿ ಮನೆಗಳು, ಇವು ಸ್ಲೇಟ್ ಅಥವಾ ಮರಗಳಿಂದ ಮುಚ್ಚಿದ ಛಾವಾವಣಿಗಳಿಂದ ಕೂಡಿದೆ ಮತ್ತು ಇಲ್ಲಿ ಸ್ಥಳೀಯ ಹಳ್ಳಿಯ 400 ವರ್ಷಗಳ ಹಳೆಯ ದೇವತೆಯನ್ನು ಹೊಂದಿರುವ ದೇವಾಲಯವನ್ನು ಕಾಣಬಹುದಾಗಿದೆ.

8.ಬಿರ್ ಬಿಲ್ಲಿಂಗ್

8.ಬಿರ್ ಬಿಲ್ಲಿಂಗ್

ಭಾರತದಲ್ಲಿಯ ಅತ್ಯಂತ ಹೆಸರು ವಾಸಿಯಾದ ಪ್ಯಾರಾ ಗೈಡ್ಲಿಂಗ್ ಸ್ಥಳವೆಂದು ಬಿರ್ ಬಿಲ್ಲಿಂಗ್ ಗುರುತಿಸಲ್ಪಟ್ಟಿದೆ. ಆದ್ದರಿಂದ ಇದು 'ಭಾರತದ ಪ್ಯಾರಾಗ್ಲೈಡಿಂಗ್ ಕ್ಯಾಪಿಟಲ್' ಎಂದು ಬಹಳ ಪ್ರಸಿದ್ಧವಾಗಿದೆ. ಈ ಪ್ರದೇಶವು ತನ್ನ ಸಣ್ಣ ಗಾತ್ರದ ಹೊರತಾಗಿಯೂ ವರ್ಷಪೂರ್ತಿ ಅದ್ಭುತ ಭೂದೃಶ್ಯ ಮತ್ತು ಆರೋಗ್ಯಕರ ಹವಾಮಾನವನ್ನು ಹೊಂದಿದೆ. ಹಾಗೂ, ಪ್ರತಿವರ್ಷ ವಿಶ್ವದಾದ್ಯಂತ ಲಕ್ಷಾಂತರ ಬ್ಯಾಕ್‌ ಪ್ಯಾಕರ್‌ಗಳು ಮತ್ತು ರೋಮಾಂಚಕ ಅನುಭವವನ್ನು ಇಷ್ಟ ಪಡುವವರನ್ನು ಆಕರ್ಷಿಸುತ್ತದೆ. ಬಿರ್ ಬಿಲ್ಲಿಂಗ್ ಹಿಮಾಲಯ ಪರ್ವತ ಶ್ರೇಣಿಗಳ ಸೌಂದರ್ಯದ ಸುಂದರ ದೃಶ್ಯಗಳನ್ನು ಇಲ್ಲಿಗೆ ಭೇಟಿ ನೀಡುವವರಿಗೆ ನೀಡುತ್ತದೆ.

9.ಡಾಲ್ಹೌಸಿ

9.ಡಾಲ್ಹೌಸಿ

ಡಾಲ್ಹೌಸಿ ವರ್ಷಪೂರ್ತಿ ರಜೆಯ ಸಮಯದಲ್ಲಿ ಭೇಟಿ ನೀಡಬಹುದಾದ ತಾಣವಾಗಿದ್ದರೆ, ಚಳಿಗಾಲದ ಸಮಯದಲ್ಲಿ ಇದು ಹೆಚ್ಚು ಬೆರಗುಗೊಳಿಸುತ್ತದೆ , ಏಕೆಂದರೆ ಇಡೀ ಬೆಟ್ಟ ಪಟ್ಟಣವು ಬಿಳಿ ಹಾಳೆಯಲ್ಲಿ ಆವರಿಸಿದಂತೆ ಕಾಣುತ್ತದೆ ಅನೇಕ ಗಮನಾರ್ಹ ಶಿಖರಗಳು, ಆಕರ್ಷಕ ಕ್ಯಾಸ್ಕೇಡ್‌ಗಳು, ಕೆರೆಗಳು ಮತ್ತು ಎತ್ತರದ ಪೈನ್ ಮತ್ತು ಓಕ್ ಮರಗಳಿಗೆ ಈ ಸ್ಥಳವು ನೆಲೆಯಾಗಿದೆ, ಚಾರಣ, ಕ್ಯಾನೋಯಿಂಗ್, ರಿವರ್ ರಾಫ್ಟಿಂಗ್, ಕ್ಯಾಂಪಿಂಗ್ ಮತ್ತು ಕಯಾಕಿಂಗ್‌ನಂತಹ ಕೆಲವು ರೋಮಾಂಚಕ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಹಸಿಗಳು ಡಾಲ್ಹೌಸಿಗೆ ಬರಲು ಇಷ್ಟಪಡುತ್ತಾರೆ. ಅಲ್ಲದೆ ಈ ಪ್ರಶಾಂತವಾದ ವಾತವರಣವಿರುವ ಈ ಸ್ಥಳವು ಮಧುಚಂದ್ರ ಮತ್ತು ಶಾಂತಿ ಹುಡುಕುವವರನ್ನು ಸಮಾನವಾಗಿ ಆಕರ್ಷಿಸುತ್ತದೆ.

10.ಖಜ್ಜಿಯಾರ್

10.ಖಜ್ಜಿಯಾರ್

ಖಜ್ಜಿಯಾರ್ ಒಂದು ಸಣ್ಣ ಸ್ವರ್ಗವಾಗಿದ್ದು, ಹುಲ್ಲುಗಾವಲುಗಳು, ದಟ್ಟವಾದ ದೇವದಾರು ಕಾಡುಪ್ರದೇಶಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳ ನಡುವೆ ಇದೆ. 'ಮಿನಿ ಸ್ವಿಟ್ಜರ್ಲೆಂಡ್ ಆಫ್ ಇಂಡಿಯಾ' ಎಂದು ಪ್ರಸಿದ್ಧವಾಗಿರುವ ಈ ಸ್ಥಳವು ಅನೇಕ ಆಕರ್ಷಕ ದೃಶ್ಯಾವಳಿಗಳಿಗೆ ಸಾಕ್ಷಿಯಾಗಬಹುದು, ಕಲಾಟಾಪ್ ವನ್ಯಜೀವಿ ಅಭಯಾರಣ್ಯದಲ್ಲಿನ ಆಕರ್ಷಕ ವನ್ಯಜೀವಿಗಳೊಂದಿಗೆ ಹತ್ತಿರದಲ್ಲಿ ವೀಕ್ಶಿಸಬಹುದಾಗಿದೆ.

ಮತ್ತು, ಖಜ್ಜಿಯರ್ ಸರೋವರದ ಸಮೀಪದಲ್ಲಿ ಹೊರಾಂಗಣ ಚಟುವಟಿಕೆಗಳಾದ ಜೋರ್ಬಿಂಗ್, ಕಾಡುಗಳಲ್ಲಿ ಚಾರಣ, ಪ್ಯಾರಾಗ್ಲೈಡಿಂಗ್ ಮತ್ತು ಕುದುರೆ ಸವಾರಿಗಳಲ್ಲಿ ಪಾಲ್ಗೊಳ್ಳಬಹುದು. ಅಲ್ಲದೆ, ಇಲ್ಲಿ ನೋಡಲೇಬೇಕಾದ ಆಕರ್ಷಣೆಯೆಂದರೆ 13 ನೇ ಶತಮಾನದ ಖಾಜಿ ನಾಗ್ ದೇವಾಲಯ. ಸರ್ಪಗಳ ಅಧಿಪತಿಗೆ (ಖಾಜಿ ನಾಗ್) ಸಮರ್ಪಿಸಲಾಗಿರುವ ಈ ದೇವಾಲಯವು ಸೊಗಸಾದ ವಾಸ್ತುಶಿಲ್ಪವನ್ನು ಹೊಂದಿದ್ದು, ಇದು ಹಿಂದೂ ಮತ್ತು ಮುಸಲ್ಮಾನ ಶೈಲಿಗಳ ಮಿಶ್ರಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X